- Home
- Entertainment
- TV Talk
- ಕಿಚ್ಚನ ತಿವಿತವೊ, ಗಿಲ್ಲಿಯ ಗೆಲುವೊ? 'ಹೇಳೋದೆಲ್ಲಾ ಸುಳ್ಳು' ಎಂದು ಕೊನೆಗೂ ಒಪ್ಪಿಕೊಂಡ ಡಾಗ್ ಸತೀಶ್!
ಕಿಚ್ಚನ ತಿವಿತವೊ, ಗಿಲ್ಲಿಯ ಗೆಲುವೊ? 'ಹೇಳೋದೆಲ್ಲಾ ಸುಳ್ಳು' ಎಂದು ಕೊನೆಗೂ ಒಪ್ಪಿಕೊಂಡ ಡಾಗ್ ಸತೀಶ್!
ಬಿಗ್ ಬಾಸ್ ಖ್ಯಾತಿಯ ಡಾಗ್ ಸತೀಶ್, ಅನುಬಂಧ ವೇದಿಕೆಯಲ್ಲಿ ತಮ್ಮ ದುಬಾರಿ ಉಡುಪು ಮತ್ತು ವೈಯಕ್ತಿಕ ಜೀವನದ ಬಗ್ಗೆ ಎಂದಿನಂತೆ ಬಡಾಯಿ ಕೊಚ್ಚಿಕೊಂಡಿದ್ದಾರೆ. ಆದರೆ, ಅಂತಿಮವಾಗಿ ವೇದಿಕೆಯಲ್ಲೇ ತಾನು ಹೇಳುವುದೆಲ್ಲಾ ಸುಳ್ಳು ಎಂದು ಒಪ್ಪಿಕೊಂಡಿದ್ದಾರೆ.

ಬಾಯಿ ಬಿಟ್ಟರೆ ಕೋಟಿ
ಬಿಗ್ಬಾಸ್ನಿಂದ ಖ್ಯಾತಿ ಪಡೆದಿರುವ ಡಾಗ್ ಸತೀಶ್, ಬಾಯಿ ಬಿಟ್ಟರೆ ಕೋಟಿಯಲ್ಲಿ ಮಾತನಾಡುವವರು. ಇವರೊಬ್ಬ ಪುಂಗಿದಾಸ ಎಂದು ಹೇಳಿಕೊಂಡೇ ಅದೆಷ್ಟೋ ಯುಟ್ಯೂಬ್ ಚಾನೆಲ್ನವರು ಇವರನ್ನು ಕರೆಸಿ ಟಿಆರ್ಪಿ ಏರಿಸಿಕೊಂಡರು. ಗೊತ್ತೇ ಇರಲ್ಲ, ಹೆಸರೇ ಇಲ್ಲದ ಕೆಲವು ಇನ್ಸ್ಟಾಗ್ರಾಮ್ನಲ್ಲಿಯೂ ಇವರ ಹವಾ ಜೋರಾಗಿಯೇ ನಡೆದಿತ್ತು.
ಕಿಚ್ಚನ ಕ್ಲಾಸ್
ಬಿಗ್ಬಾಸ್ ಅನ್ನು ರಾತ್ರೋರಾತ್ರಿ ಇಂಟರ್ನ್ಯಾಷನಲ್ ಲೆವೆಲ್ಗೆ ಕರೆದುಕೊಂಡು ಹೋಗಬಲ್ಲೆ ಎಂದೆಲ್ಲಾ ಹೇಳುತ್ತಿದ್ದ ಡಾಗ್ ಸತೀಶ್ ಅವರ ಮರ್ಯಾದೆಯನ್ನು ಬಿಗ್ಬಾಸ್ ಫಿನಾಲೆಯಲ್ಲಿ ಸಂಪೂರ್ಣವಾಗಿ ತೆಗೆದಿದ್ದರು ಕಿಚ್ಚ ಸುದೀಪ್. ಡಾಗ್ ಸತೀಶ್ ಅವರನ್ನು ಮಾತಿನಲ್ಲಿಯೇ ಕಟ್ಟಿ ಹಾಕಿ, ನೀವು ಕುಡಿದು ಬಂದಿದ್ದೀರೋ, ನಾನು ಕುಡಿದಿದ್ದೇನೋ ಗೊತ್ತಾಗ್ತಿಲ್ಲ ಎಂದು ಹೇಳುವ ಮೂಲಕ ಎಲ್ಲರ ಎದುರೇ ಡಾಗ್ ಸತೀಶ್ ಬಾಯಿ ಮುಚ್ಚಿಸಿದ್ದರು.
10 ಲಕ್ಷದ ಪ್ಯಾಂಟ್
ಇದೀಗ ಕಲರ್ಸ್ ಕನ್ನಡದ ಅನುಬಂಧ ವೇದಿಕೆಯಲ್ಲಿ ಭರ್ಜರಿ ಚಿನ್ನಾಭರಣ ತೊಟ್ಟು ಬಂದಿರೋ ಡಾಗ್ ಸತೀಶ್ ಅಲ್ಲಿಯೂ ತಮ್ಮ ಷರ್ಟ್ ಎರಡು ಲಕ್ಷ, ಪ್ಯಾಂಟ್ 10 ಲಕ್ಷ ಎನ್ನುತ್ತಲೇ ಅದರ ಟ್ಯಾಗ್ ಕೂಡ ತೋರಿಸಿದ್ದಾರೆ.
ಎಂಟು ಮಂದಿ ಹುಡುಗಿಯರನ್ನು ಇಟ್ಕೊಂಡೇ...
ಕೊನೆಗೆ ಕಾಲೇಜು ದಿನಗಳಲ್ಲಿ ಎಂಟು ಮಂದಿ ಹುಡುಗಿಯರನ್ನು ಇಟ್ಟುಕೊಂಡೇ ತಿರುಗುತ್ತಿದ್ದೆ ಎಂದಿದ್ದಾರೆ. ಅಷ್ಟಕ್ಕೂ ತಮ್ಮ ಹಿಂದೆ ಈಗಲೂ ಹುಡುಗಿಯರು ಬೀಳ್ತಾರೆ, ಹೀರೋಯಿನ್ಗಳು ಕರೀತಾರೆ. ಪ್ರಧಾನಿಗೂ ನೀಡದ ವ್ಯವಸ್ಥೆ ನನಗೆ ನೀಡ್ತಾರೆ, ನನ್ನ ಒಂದೇಒಂದು ನೋಟಕ್ಕೆ ಇಂಟರ್ನ್ಯಾಷನಲ್ ಫಿಗರ್ಗಳೂ ಬೀಳ್ತಾರೆ ಎಂದೆಲ್ಲಾ ಇಂದಿಗೂ ಹೇಳುತ್ತಲೇ ಬಂದಿದ್ದಾರೆ.
ಗಿಲ್ಲಿ ನಟನ ಬಗ್ಗೆ
ಗಿಲ್ಲಿ ನಟ ಬಿಗ್ಬಾಸ್ ವಿನ್ ಆಗುವುದೇ ಇಲ್ಲ. ಒಂದು ವೇಳೆ ವಿನ್ ಆದರೆ ಅವನ ಕಾಲ ಕೆಳಗೆ ನುಸುಳುತ್ತೇನೆ ಎಂದಿದ್ದರು ಡಾಗ್ ಸತೀಶ್. ಆದರೆ ಈ ಬಗ್ಗೆ ಸದ್ಯ ಗಪ್ಚುಪ್ ಆಗಿದ್ದಾರೆ.
ನಾನು ಹೇಳ್ತಿರೋದೆಲ್ಲಾ ಸುಳ್ಳು
ಇದೀಗ ಅನುಬಂಧ ವೇದಿಕೆಯ ಮೇಲೆ ಕೊನೆಗೂ ನಾನು ಹೇಳ್ತಿರೋದೆಲ್ಲಾ ಸುಳ್ಳು ಎಂದು ಹೇಳಿದ್ದಾರೆ. ಇದನ್ನು ಕೇಳಿ ಅಲ್ಲಿಗೆ ಆಗಮಿಸಿದ್ದ ನಟ ರವಿಚಂದ್ರನ್ ಕೂಡ ನಕ್ಕಿದ್ದಾರೆ.
ಇಷ್ಟು ಪ್ರೊಮೋ ಬಿಡುಗಡೆಯಾಗುತ್ತಲೇ ಟ್ರೋಲ್ಗಳ ಸುರಿಮಳೆಯಾಗುತ್ತಿದೆ. ಕೊನೆಗೂ ಸತ್ಯ ಒಪ್ಪಿಕೊಂಡ ಪುಂಗಿದಾಸ ಎಂದೆಲ್ಲಾ ನೆಟ್ಟಿಗರು ಹೇಳುತ್ತಿದ್ದಾರೆ. ಮತ್ತೆ ಕೆಲವರು ಗಿಲ್ಲಿಯ ಕಾಲ ಕೆಳಗೆ ನುಸುಳು ಎನ್ನುತ್ತಿದ್ದರೆ, ಮತ್ತೆ ಕೆಲವರು ಕಿಚ್ಚನ ಕ್ಲಾಸ್ ಸರಿಯಾಗಿ ಏಟು ನೀಡಿದೆ ಎನ್ನುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

