11:43 PM (IST) Nov 20

Karnataka News Live 20 November 2025ಒಪ್ಪೋ ಫೈಂಡ್ X9 ಸಿರೀಸ್ ಫೋನ್ ಜೊತೆ ಬಡ್ಸ್ 3 ಪ್ರೋ+ ಲಾಂಚ್, ನ.30ರ ವರೆಗೆ ಡಿಸ್ಕೌಂಟ್ ಆಫರ್

ಒಪ್ಪೋ ಫೈಂಡ್ X9 ಸಿರೀಸ್ ಫೋನ್ ಜೊತೆ ಬಡ್ಸ್ 3 ಪ್ರೋ+ ಲಾಂಚ್, ನ.30ರ ವರೆಗೆ ಡಿಸ್ಕೌಂಟ್ ಆಫರ್ ನೀಡಲಾಗಿದೆ. ನವೆಂಬರ್ 21ರಿಂದ ಮಾರಾಟ ಆರಂಭಗೊಳ್ಳುತ್ತಿದೆ. ಹೊಸ ಫೋನ್ ವಿಶೇಷತೆ, ಬೆಲೆ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.

Read Full Story
11:07 PM (IST) Nov 20

Karnataka News Live 20 November 2025ದೆಹಲಿಯಲ್ಲಿ ಡಿಕೆಶಿ ಬೆಂಬಲಿಗರ ದಾಳದ ಬೆನ್ನಲ್ಲೇ ಜಾರಕಿಹೊಳಿ ಮನೆಯಲ್ಲಿ ದಲಿತ ಶಾಸಕರ ಡಿನ್ನರ ಸಭೆ

ದೆಹಲಿಯಲ್ಲಿ ಡಿಕೆಶಿ ಬೆಂಬಲಿಗರ ದಾಳದ ಬೆನ್ನಲ್ಲೇ ಜಾರಕಿಹೊಳಿ ಮನೆಯಲ್ಲಿ ದಲಿತ ಶಾಸಕರ ಡಿನ್ನರ ಸಭೆ, ಕರ್ನಾಟಕ ರಾಜಕೀಯದಲ್ಲಿ ಕ್ಷಿಪ್ರ ಕ್ರಾಂತಿಗೆ ಮುನ್ನಡಿ ವಾತಾವರಣ ಸೃಷ್ಟಿಯಾಗುತ್ತಿದೆ. ದೆಹಲಿಯಲ್ಲಿ ಡಿಕೆಶಿ ತಂಡದ ಕಸರತ್ತು ಆರಂಭಗೊಂಡರೆ, ಇತ್ತ ದಲಿತ ಶಾಸಕರ ಡಿನ್ನರ್ ಸಭೆ ಕುತೂಹಲ ಕೆರಳಿಸಿದೆ.

Read Full Story
10:27 PM (IST) Nov 20

Karnataka News Live 20 November 2025Breaking - ಬೆಂಗಳೂರು ದರೋಡೆ ಕೇಸ್‌ನಲ್ಲಿ ಪೊಲೀಸ್‌ ಕೈವಾಡದ ಅನುಮಾನ?

ಬೆಂಗಳೂರಿನಲ್ಲಿ ನಡೆದ 7.11 ಕೋಟಿ ರೂಪಾಯಿ ದರೋಡೆ ಪ್ರಕರಣವು ರೋಚಕ ತಿರುವು ಪಡೆದುಕೊಂಡಿದೆ. ಈ ಪ್ರಕರಣದಲ್ಲಿ ಪೊಲೀಸರ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ದರೋಡೆಕೋರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಗೋವಿಂದಪುರ ಠಾಣೆಯ ಕಾನ್ಸ್‌ಟೇಬಲ್‌ ಅಣ್ಣಪ್ಪ ನಾಯಕರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ.
Read Full Story
10:19 PM (IST) Nov 20

Karnataka News Live 20 November 2025BBK 12 - ಅಶ್ವಿನಿ ಗೌಡ ಜೊತೆಗಿದ್ದೇ ಡಬಲ್‌ ಗೇಮ್‌ ಆಡಿದ ಧ್ರುವಂತ್;‌ ಅಬ್ಬಬ್ಬಾ...!

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಎರಡು ಟೀಂ ಮಾಡಲಾಗಿತ್ತು. ಮನೆ ಕೆಲಸ ಮಾಡದ ಅಶ್ವಿನಿ ಗೌಡ, ಗಿಲ್ಲಿ ನಟ ಅವರನ್ನು ಉಸ್ತುವಾರಿಗಳನ್ನಾಗಿ ಮಾಡಲಾಗಿತ್ತು. ಅಶ್ವಿನಿ ಗೌಡ ಅವರ ಟೀಂನಲ್ಲಿ ಧ್ರುವಂತ್‌ ಇದ್ದರು. ತನಗೆ ಆಟ ಆಡಲು ಕೊಟ್ಟಿಲ್ಲ ಎಂದು ಧ್ರುವಂತ್‌ ವಾದ ಮಾಡಿದ್ದರು.

Read Full Story
10:06 PM (IST) Nov 20

Karnataka News Live 20 November 2025ವಿಶ್ವದ 100 ಬೆಸ್ಟ್ ನಗರಗಳ ಪಟ್ಟಿ ಪ್ರಕಟ; ಲಂಡನ್ ನಂ.1, ಬೆಂಗಳೂರಿಗೂ ಇದೆ ಸ್ಥಾನ

ವಿಶ್ವದ 100 ಬೆಸ್ಟ್ ನಗರಗಳ ಪಟ್ಟಿ ಪ್ರಕಟ; ಲಂಡನ್ ನಂ.1, ಬೆಂಗಳೂರಿಗೂ ಇದೆ ಸ್ಥಾನ, ಭಾರತದ 4 ಪ್ರಮುಖ ನಗರಗಳು 100ರ ಒಳಗೆ ಸ್ಥಾನ ಪಡೆದಿದೆ. ಆದರೆ ನಮ್ಮ ಬೆಂಗಳೂರು ಅಗ್ರಸ್ಥಾನದಲ್ಲಿದೆ. 

Read Full Story
09:50 PM (IST) Nov 20

Karnataka News Live 20 November 2025ಶೀಘ್ರದಲ್ಲೇ ಮದುಮಗಳಾಗಲಿದ್ದಾರೆ ಸ್ಮೃತಿ ಮಂದನಾ, ಮುನ್ನಾಭಾಯಿ ಸ್ಟೈಲ್‌ನಲ್ಲಿ ಎಂಗೇಜ್‌ಮೆಂಟ್‌ ಘೋಷಿಸಿದ ಟೀಮ್‌ ಇಂಡಿಯಾ ಬ್ಯಾಟರ್‌!

Smriti Mandhana Confirms Engagement to Palash Muchaal ಟೀಮ್ ಇಂಡಿಯಾ ಆಟಗಾರ್ತಿ ಸ್ಮೃತಿ ಮಂಧಾನ, ಸಂಗೀತ ಸಂಯೋಜಕ ಪಲಾಶ್ ಮುಚಾಲ್ ಅವರೊಂದಿಗಿನ ತಮ್ಮ ನಿಶ್ಚಿತಾರ್ಥವನ್ನು ವಿಶಿಷ್ಟ ಇನ್ಸ್‌ಸ್ಟಾಗ್ರಾಮ್ ರೀಲ್ ಮೂಲಕ ಖಚಿತಪಡಿಸಿದ್ದಾರೆ. 

Read Full Story
09:27 PM (IST) Nov 20

Karnataka News Live 20 November 2025ಸಿಎಂ ಸ್ಥಾನ ಖಾಲಿಯಿಲ್ಲ, ಆದ್ರೆ ಡಿಕೆಶಿ ಮುಖ್ಯಮಂತ್ರಿಯಾಗಬೇಕೆಂಬ ಆಸೆ ನನಗೂ ಇದೆ - ಶಾಸಕ ಬಸವರಾಜ್

ಕರ್ನಾಟಕದಲ್ಲಿ ಸಿಎಂ ಬದಲಾವಣೆ ಚರ್ಚೆಯ ನಡುವೆ, ಸದ್ಯಕ್ಕೆ ಸಿಎಂ ಸ್ಥಾನ ಖಾಲಿಯಿಲ್ಲ ಎಂದು ಶಾಸಕ ಶಿವಗಂಗಾ ಬಸವರಾಜ್ ಹೇಳಿದ್ದಾರೆ. ಡಿಕೆ ಶಿವಕುಮಾರ್ ಸಿಎಂ ಆಗಬೇಕೆಂಬುದು ತಮ್ಮ ಆಶಯವಾದರೂ, ಈ ಬಗ್ಗೆ ಹೈಕಮಾಂಡ್ ನಿರ್ಧಾರವೇ ಅಂತಿಮವಾಗಿರುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
Read Full Story
09:02 PM (IST) Nov 20

Karnataka News Live 20 November 2025ಪಿಜಿ ವೈದ್ಯಕೀಯ ಪ್ರವೇಶ - ಕೆಇಎಯಿಂದ ಅನಿರೀಕ್ಷಿತ ಕೆಲವೇ ಗಂಟೆಗಳ ಕೊನೆಯ ಅವಕಾಶ!

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ರಾಜ್ಯದ ಪಿಜಿ ವೈದ್ಯಕೀಯ ಪ್ರವೇಶದ ಮೊದಲ ಸುತ್ತಿನ ಆಪ್ಷನ್ ಎಂಟ್ರಿ ಅವಧಿಯನ್ನು ವಿಸ್ತರಿಸಿದೆ. ಅಭ್ಯರ್ಥಿಗಳ ಮನವಿಯ ಮೇರೆಗೆ, ನವೆಂಬರ್ 21ರ ಬೆಳಿಗ್ಗೆ 9 ಗಂಟೆಯವರೆಗೆ ಆಯ್ಕೆಗಳನ್ನು ದಾಖಲಿಸಲು ಹೆಚ್ಚುವರಿ ಸಮಯ ನೀಡಲಾಗಿದೆ. 

Read Full Story
08:59 PM (IST) Nov 20

Karnataka News Live 20 November 2025ರಾಜಕಾರಣದಲ್ಲಿ ಶಾಶ್ವತವಾಗಿ ಇರಬೇಕು ಅಂದ್ರೆ ಕೊಟ್ಟ ಮಾತಿನಂತೆ ನಡೆಯಬೇಕು, ಡಿಕೆ ಸುರೇಶ್‌ ಎಚ್ಚರಿಕೆ ನೀಡಿದ್ದು ಯಾರಿಗೆ?

ಮಾಜಿ ಸಂಸದ ಡಿಕೆ ಸುರೇಶ್‌, ಕಾಂಗ್ರೆಸ್ ಸರ್ಕಾರಕ್ಕೆ 2.5 ವರ್ಷ ತುಂಬಿದ ದಿನದಂದೇ 'ಕೊಟ್ಟ ಮಾತಿನಂತೆ ನಡೆಯಬೇಕು' ಎಂದು ಹೇಳುವ ಮೂಲಕ ಡಿಕೆ ಶಿವಕುಮಾರ್‌ಗೆ ಸಿಎಂ ಸ್ಥಾನ ಹಸ್ತಾಂತರದ ಚರ್ಚೆಗೆ ಕಿಡಿ ಹೊತ್ತಿಸಿದ್ದಾರೆ. ಸಿದ್ದರಾಮಯ್ಯನವರು ಕೊಟ್ಟ ಮಾತಿಗೆ ತಪ್ಪುವವರಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

Read Full Story
08:56 PM (IST) Nov 20

Karnataka News Live 20 November 2025ಬೆಂಗಳೂರಿನ 7 ಕೋಟಿ ರಾಬರಿ ಪ್ರಕರಣದ ಇನ್ನೋವಾ ಕಾರು ಸೀಜ್, ಆದರೆ ವಾಹನ ಖಾಲಿ ಖಾಲಿ

ಬೆಂಗಳೂರಿನ 7 ಕೋಟಿ ರಾಬರಿ ಪ್ರಕರಣದ ಇನ್ನೋವಾ ಕಾರು ಸೀಜ್, ಆದರೆ ವಾಹನ ಖಾಲಿ ಖಾಲಿ , ಕಳ್ಳರ ಜಾಡು ಹಿಡಿದು ಪೊಲೀಸರು ಇನ್ನೋ ಕಾರು ಪತ್ತೆ ಮಾಡಿದರೂ ನಿರಾಸೆ ಎದುರಾಗಿದೆ. ಕಳ್ಳರು ಖಾಲಿ ಆಂಧ್ರದಲ್ಲಿ ಇನ್ನೋವಾ ಕಾರು ಖಾಲಿ ಮಾಡಿ ಪರಾರಿಯಾಗಿದ್ದಾರೆ.

Read Full Story
08:41 PM (IST) Nov 20

Karnataka News Live 20 November 2025ಬೆಂಗಳೂರು ಟೆಕ್ ಸಮ್ಮಿಟ್‌ - ವಿಟಿಯು ತರಗತಿಗಳಲ್ಲಿ ಭಾರತದ ತಂತ್ರಜ್ಞಾನ ಭವಿಷ್ಯದ ರಹಸ್ಯ!

ಟೆಕ್ ಸಮ್ಮಿಟ್‌ನಲ್ಲಿ ಮಾತನಾಡಿದ ವಿಟಿಯು ಕುಲಪತಿ ಡಾ.ಎಸ್.ವಿದ್ಯಾಶಂಕರ್, ತಂತ್ರಜ್ಞಾನ ಆಧಾರಿತ ಪಠ್ಯಕ್ರಮ, ಕೃತಕ ಬುದ್ಧಿಮತ್ತೆ ಮತ್ತು ಡಿಸೈನ್ ಥಿಂಕಿಂಗ್ ಲ್ಯಾಬ್‌ಗಳ ಮೂಲಕ ವಿದ್ಯಾರ್ಥಿಗಳನ್ನು ಕೇವಲ ಉದ್ಯೋಗಿಗಳನ್ನಾಗಿ ಅಲ್ಲ, ಬದಲಾಗಿ ಭವಿಷ್ಯದ ನಾಯಕರುರನ್ನಾಗಿ ರೂಪಿಸುತ್ತಿದ್ದೇವೆ ಎಂದು ಹೇಳಿದರು.

Read Full Story
08:00 PM (IST) Nov 20

Karnataka News Live 20 November 2025ಜೈಲಿಂದಲೇ ಅಭಿಮಾನಿಗಳಿಗೆ ದೊಡ್ಡ ಮೆಸೇಜ್‌ ಕಳಿಸಿದ ದರ್ಶನ್‌, ವಿಜಯಲಕ್ಷ್ಮೀ ಹೇಳಿದ್ರು ಸೀಕ್ರೆಟ್‌

ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್‌, ತಮ್ಮ ಪತ್ನಿ ವಿಜಯಲಕ್ಷ್ಮಿ ಮೂಲಕ ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ. ಯಾವುದಕ್ಕೂ ತಲೆಕೆಡಿಸಿಕೊಳ್ಳಬೇಡಿ ಎಂದಿರುವ ಅವರು, ಡಿಸೆಂಬರ್ 12 ರಂದು ಬಿಡುಗಡೆಯಾಗಲಿರುವ ತಮ್ಮ 'ಡೆವಿಲ್' ಚಿತ್ರಕ್ಕೆ ಹೆಚ್ಚು ಪ್ರೀತಿ ನೀಡುವಂತೆ ಕೇಳಿಕೊಂಡಿದ್ದಾರೆ.

Read Full Story
07:19 PM (IST) Nov 20

Karnataka News Live 20 November 2025'ಜನ ಎಲ್ಲಾ ಖಾಲಿ ಆಗೋದ್ರು, ಇನ್ಯಾರಿಗಯ್ಯ ಭಾಷಣ ಮಾಡ್ಲಿ..' ವೇದಿಕೆ ಮೇಲೆಯೇ ಜಿಟಿಡಿಗೆ ಹೇಳಿದ ಸಿದ್ದರಾಮಯ್ಯ

ಚಾಮರಾಜನಗರದಲ್ಲಿ ನಡೆದ ಸಹಕಾರ ಸಪ್ತಾಹದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಜನ ಖಾಲಿಯಾಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಜೆಡಿಎಸ್‌ನಲ್ಲಿದ್ದರೆ ದೇವೇಗೌಡರ ಕುಟುಂಬದಿಂದಾಗಿ ತಾನು ಮುಖ್ಯಮಂತ್ರಿ ಆಗುತ್ತಿರಲಿಲ್ಲ ಎಂದು ಹೇಳಿದ್ದಾರೆ.

Read Full Story
07:09 PM (IST) Nov 20

Karnataka News Live 20 November 2025ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿ ಪುರಿ ದೇವಾಲಯ ಭೇಟಿ, ಜಗನ್ನಾಥನ 11 ನಿಗೂಢ ರಹಸ್ಯಗಳಿವು

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಪುರಿ ಜಗನ್ನಾಥ ದೇವಾಲಯಕ್ಕೆ ಭೇಟಿ ನೀಡಿದರು. ಈ ದೇವಾಲಯವು ಕೇವಲ ತೀರ್ಥಕ್ಷೇತ್ರವಲ್ಲ, ಗಾಳಿಗೆ ವಿರುದ್ಧವಾಗಿ ಹಾರುವ ಧ್ವಜ, ನೆರಳಿಲ್ಲದ ಗೋಪುರ, ಮತ್ತು ಎಂದಿಗೂ ವ್ಯರ್ಥವಾಗದ ಮಹಾಪ್ರಸಾದದಂತಹ ವಿಜ್ಞಾನಕ್ಕೂ ಮೀರಿದ ಹಲವಾರು ನಿಗೂಢ ರಹಸ್ಯಗಳನ್ನು ಹೊಂದಿದೆ. 

Read Full Story
06:05 PM (IST) Nov 20

Karnataka News Live 20 November 2025Amruthadhaare - ಜೈದೇವನ​ ಮುಗಿಸಲು ದಿಯಾ ಸ್ಕೆಚ್​- ಅಪ್ಪನ ಬಳಿ ಹೋಗಲು ಭೂಮಿಕಾ ಗ್ರೀನ್​ ಸಿಗ್ನಲ್​!

ಗೌತಮ್ ತನ್ನ ತಂದೆ ಎಂಬ ಸತ್ಯ ತಿಳಿದ ಆಕಾಶ್, ಶಾಲಾ ಪ್ರಾಜೆಕ್ಟ್ ನೆಪದಲ್ಲಿ ಅಪ್ಪ-ಅಮ್ಮನನ್ನು ಒಂದು ಮಾಡಲು ಯತ್ನಿಸುತ್ತಿದ್ದಾನೆ. ಮತ್ತೊಂದೆಡೆ, ಜೈದೇವ್ ಮತ್ತು ಶಕುಂತಲಾ ವಿರುದ್ಧ ಸೇಡು ತೀರಿಸಿಕೊಳ್ಳಲು ದಿಯಾ ಹೊಸ ತಂತ್ರವನ್ನು ರೂಪಿಸುತ್ತಿದ್ದಾಳೆ.
Read Full Story
05:56 PM (IST) Nov 20

Karnataka News Live 20 November 2025ಚಲಿಸುವ ಕಾರ್ ರೂಫ್ ಮೇಲೆ ಯುವಕ ಯುವತಿಯ ರೋಮಾನ್ಸ್ - ಪೊಲೀಸರು ಮಾಡಿದ್ದೇನು ನೋಡಿ

couple stunt in moving car: ದೆಹಲಿಯಲ್ಲಿ, ಚಲಿಸುವ ಕಾರೊಂದರಲ್ಲಿ ಜೋಡಿಯೊಂದು ಅಪಾಯಕಾರಿ ರೋಮ್ಯಾಂಟಿಕ್ ಸ್ಟಂಟ್ ಮಾಡಿದೆ. ಯುವಕ ಕಾರಿನ ಮೇಲೇರಿ ಗೆಳತಿಗೆ ಚುಂಬಿಸಿದ್ದು, ಈ ವೀಡಿಯೋ ವೈರಲ್ ಆಗಿದೆ. 

Read Full Story
05:34 PM (IST) Nov 20

Karnataka News Live 20 November 2025BBK 12 - ಸಾಕ್ಷಿ ಸಮೇತ ಗಿಲ್ಲಿ ನಟನ ತಪ್ಪನ್ನು ಎತ್ತಿ ತೋರಿಸಿದ ಅಶ್ವಿನಿ ಗೌಡ; ಯಾಕೆ ಹೀಗೆ ಮಾಡ್ತಾರೆ?

Bigg Boss Kannada Season 12 Show Update: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಗಿಲ್ಲಿ ನಟನ ವಿರುದ್ಧ ಧ್ರುವಂತ್‌ ಒಂದು ಆರೋಪ ಮಾಡಿದ್ದರು. ಈಗ ಈ ಆರೋಪ ಮತ್ತೆ ಸಾಬೀತಾದಂತಿದೆ. ಹೌದು, ಅಶ್ವಿನಿ ಕೂಡ ಅದೇ ಆರೋಪ ಮಾಡಿದ್ದಾರೆ. ಹಾಗಾದರೆ ಏನದು? ನಿಜಕ್ಕೂ ಏನಾಯ್ತು?

Read Full Story
05:20 PM (IST) Nov 20

Karnataka News Live 20 November 2025ಕಾಂಗ್ರೆಸ್‌ನಲ್ಲಿ ಸದ್ದು ಮಾಡಲು ಆರಂಭಿಸಿದ ಡಿಕೆಶಿ ಬಣ, ಬಿಜೆಪಿ ರೆಬಲ್‌ ಟೀಮ್‌ ಕೂಡ ಆಕ್ಟೀವ್‌!

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸಕ್ರಿಯರಾಗುತ್ತಿದ್ದಂತೆ, ಪಕ್ಷದಲ್ಲಿ ಬಂಡಾಯದ ಚಟುವಟಿಕೆಗಳು ಗರಿಗೆದರಿವೆ. ಕುಮಾರ್ ಬಂಗಾರಪ್ಪ ಅವರ ನಿವಾಸದಲ್ಲಿ ರಮೇಶ್ ಜಾರಕಿಹೊಳಿ ಸೇರಿದಂತೆ ಹಲವು ಅತೃಪ್ತ ನಾಯಕರು ಸಭೆ ಸೇರಿ, ವಿಜಯೇಂದ್ರ ಅವರಿಗೆ ಸಹಕಾರ ನೀಡುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

Read Full Story
04:40 PM (IST) Nov 20

Karnataka News Live 20 November 2025ಕುನೋ ನ್ಯಾಷನಲ್‌ ಪಾರ್ಕ್‌ನಲ್ಲಿ ಐದು ಮರಿಗಳಿಗೆ ಜನ್ಮ ನೀಡಿದ ಭಾರತದಲ್ಲೇ ಜನಿಸಿದ ಚೀತಾ ಮುಖಿ!

ಭಾರತದಲ್ಲಿಯೇ ಜನಿಸಿದ ಚೀತಾ ಮುಖಿ, ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಐದು ಮರಿಗಳಿಗೆ ಜನ್ಮ ನೀಡುವ ಮೂಲಕ ಇತಿಹಾಸ ನಿರ್ಮಿಸಿದೆ. ಈ ಮಹತ್ವದ ಸಾಧನೆಯು ಪ್ರಾಜೆಕ್ಟ್ ಚೀತಾ ಯೋಜನೆಗೆ ಹೊಸ ಹುರುಪು ನೀಡಿದ್ದು, ತಾಯಿ ಮತ್ತು ಮರಿಗಳು ಆರೋಗ್ಯವಾಗಿವೆ. 

Read Full Story
04:22 PM (IST) Nov 20

Karnataka News Live 20 November 2025ಮುಖ್ಯಮಂತ್ರಿ ಬದಲಾವಣೆಗೆ ಡಿಕೆಶಿ ಬಿಗಿಪಟ್ಟು, ಹೈಕಮಾಂಡ್‌ಗೆ ಒತ್ತಡ ತರಲು ದೆಹಲಿಗೆ ಹಾರಿದ ಡಿಕೆ ಬಣ!

ಕರ್ನಾಟಕ ಸಿಎಂ ಸ್ಥಾನ ಬದಲಾವಣೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಬಿಗಿಪಟ್ಟು ಹಿಡಿದಿದ್ದು, ಅವರ ಪರವಾಗಿ ಒಕ್ಕಲಿಗ ಶಾಸಕರ ನಿಯೋಗ ದೆಹಲಿಗೆ ತೆರಳಿದೆ. ಸರ್ಕಾರದ ಎರಡೂವರೆ ವರ್ಷದ ಬೆನ್ನಲ್ಲೇ ಪವರ್ ಶೇರಿಂಗ್ ಸೂತ್ರದಂತೆ ಸಿಎಂ ಬದಲಾವಣೆಗೆ ಹೈಕಮಾಂಡ್ ಮೇಲೆ ಒತ್ತಡ ಹೇರುವುದು ಈ ಯಾತ್ರೆಯ ಉದ್ದೇಶವಾಗಿದೆ.

Read Full Story