- Home
- Technology
- Mobiles
- ಒಪ್ಪೋ ಫೈಂಡ್ X9 ಸಿರೀಸ್ ಫೋನ್ ಜೊತೆ ಬಡ್ಸ್ 3 ಪ್ರೋ+ ಲಾಂಚ್, ನ.30ರ ವರೆಗೆ ಡಿಸ್ಕೌಂಟ್ ಆಫರ್
ಒಪ್ಪೋ ಫೈಂಡ್ X9 ಸಿರೀಸ್ ಫೋನ್ ಜೊತೆ ಬಡ್ಸ್ 3 ಪ್ರೋ+ ಲಾಂಚ್, ನ.30ರ ವರೆಗೆ ಡಿಸ್ಕೌಂಟ್ ಆಫರ್
ಒಪ್ಪೋ ಫೈಂಡ್ X9 ಸಿರೀಸ್ ಫೋನ್ ಜೊತೆ ಬಡ್ಸ್ 3 ಪ್ರೋ+ ಲಾಂಚ್, ನ.30ರ ವರೆಗೆ ಡಿಸ್ಕೌಂಟ್ ಆಫರ್ ನೀಡಲಾಗಿದೆ. ನವೆಂಬರ್ 21ರಿಂದ ಮಾರಾಟ ಆರಂಭಗೊಳ್ಳುತ್ತಿದೆ. ಹೊಸ ಫೋನ್ ವಿಶೇಷತೆ, ಬೆಲೆ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಓಪ್ಪೋ ಫೈಂಡ್ ಎಕ್ಸ್9 ಸೀರಿಸ್ ಫೋನ್
OPPO India ಇಂದು ಬಹು ನಿರೀಕ್ಷಿತ Find X9 Series ಭಾರತದಲ್ಲಿ ಬಿಡುಗಡೆ ಮಾಡಿದೆ. ಪ್ರೀಮಿಯಂ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಪ್ರಮುಖ ಫೋನ್ ಇದಾಗಿದೆ. Find X9 ಮತ್ತು Find X9 Pro ಒಳಗೊಂಡಿರುವ ಈ ಹೊಸ ಸರಣಿ, ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳು ನೀಡಬಹುದಾದ ಮಾನದಂಡಗಳನ್ನು ಮತ್ತಷ್ಟು ಹೊಸ ಮಟ್ಟಕ್ಕೆ ಕೊಂಡೊಯ್ಯುತ್ತಿದೆ. ಹೊಸ ಸರಣಿ ಬಳಕೆದಾರರಿಗೆ ಸಂಪೂರ್ಣ ಹೊಸ ಅನುಭವವನ್ನು ನೀಡುತ್ತದೆ. ಇದರಲ್ಲಿ Hasselblad ಜೊತೆಗೆ ನ್ಯೂ ಜನರೇಶನ್ ಕ್ಯಾಮೆರಾ, ದೀರ್ಘಕಾಲ ಬರುವ ಬ್ಯಾಟರಿ, ಶಕ್ತಿಶಾಲಿ ಕಾರ್ಯಕ್ಷಮತೆ ಮತ್ತು ಮೃದುವಾದ, ಸ್ಮಾರ್ಟ್ ColorOS 16 ಇದೆ.
ಓಪ್ಪೋ ಫೈಂಡ್ ಎಕ್ಸ್9 ಸಿರೀಸ್ ಬೆಲೆ
ಭಾರತದಲ್ಲಿ OPPO ಉತ್ತಮ ಮಾರುಕಟ್ಟೆ ಸಾಧನೆ ಮಾಡಿದ ತಕ್ಷಣವೇ ಈ ಲಾಂಚ್ ನಡೆದಿದೆ. ಇಂಟರ್ನ್ಯಾಷನಲ್ ಡೇಟಾ ಕಾರ್ಪೊರೇಷನ್ (IDC)ನ ವಿಶ್ಚದಾದ್ಯಂತ ತ್ರೈಮಾಸಿಕ ಮೊಬೈಲ್ ಫೋನ್ ಟ್ರ್ಯಾಕರ್ Q3 2025 ಪ್ರಕಾರ, OPPO ಭಾರತದಲ್ಲಿ ತನ್ನ ಮಾರುಕಟ್ಟೆ ಹಂಚಿಕೆಯನ್ನು 13.9% ಆಗಿ ಹೆಚ್ಚಿಸಿಕೊಂಡು, ಎರಡನೇ ಸ್ಥಾನಕ್ಕೆ ಏರಿಕೆಯಾಗಿದೆ. Find X9 Pro 16GB + 512GB ವೇರಿಯೆಂಟ್ ಫೋನ್ 109999 ರೂಪಾಯಿಗೆ ಲಭ್ಯವಿದ್ದು, Find X9 12GB + 256GB ಮತ್ತು 16GB + 512GB ವೇರಿಯೆಂಟ್ ಕ್ರಮವಾಗಿ 74999 ರೂಪಾಯಿ ಹಾಗೂ 84999 ರೂಪಾಯಿಗೆ ಲಭ್ಯವಿವೆ.
ಒಪ್ಪೋ ಹೆಚ್ಚುವರಿ ಕಿಟ್
Find X9 Pro OPPO e-store, ಅಮೆಜಾನ್, ಫ್ಲಿಪ್ಕಾರ್ಟ್ ಹಾಗೂ ಪ್ರಮುಖ ರಿಟೇಲ್ ಮಳಿಗೆಗಳಲ್ಲಿ ಲಭ್ಯವಾಗಲಿದೆ. Find X9 OPPO ಇ-ಸ್ಟೋರ್, ಫ್ಲಿಪ್ಕಾರ್ಟ್ ಮತ್ತು ಪ್ರಮುಖ ರಿಟೇಲ್ ಮಳಿಗೆಗಳಲ್ಲಿ ಲಭ್ಯವಾಗುತ್ತದೆ. Hasselblad Teleconverter Kit ಹೆಚ್ಚುವರಿ ₹29,999 ದರದಲ್ಲಿ ಲಭ್ಯವಾಗಲಿದೆ ಮತ್ತು OPPO ಇ-ಸ್ಟೋರ್ ನಲ್ಲಿ ಖರೀದಿಸಬಹುದು.
ಬಡ್ಸ್ 3 ಪ್ಲೋ ಪ್ಲಸ್
Find X9 Series ಜೊತೆಗೆ, OPPO ತನ್ನ ಹೊಸ TWS — Enco Buds3 Pro+ ಅನ್ನು ಕೂಡ ಬಿಡುಗಡೆ ಮಾಡಿದೆ. ಇದರ ಬೆಲೆ INR 2099 ಆಗಿದ್ದು, ನವೆಂಬರ್ 21ರಿಂದ ನವೆಂಬರ್ 30, 2025ರವರೆಗೆ INR 1899 ವಿಶೇಷ ಲಾಂಚ್ ಆಫರ್‌ನಲ್ಲಿ ಲಭ್ಯವಿರುತ್ತದೆ. ಈ ಇಯರ್‌ಬಡ್ಸ್‌ಗಳು OPPO e-store, ಫ್ಲಿಪ್ಕಾರ್ಟ್, ಅಮೆಜಾನ್ ಮತ್ತು ಪ್ರಮುಖ ರಿಟೇಲ್ ಮಳಿಗೆಗಳಲ್ಲಿ ಲಭ್ಯವಿದೆ.
ಬಡ್ಸ್ 3 ಪ್ಲೋ ಪ್ಲಸ್
ಭಾರತದಲ್ಲಿ ಪ್ರೀಮಿಯಂ ಸ್ಮಾರ್ಟ್‌ಫೋನ್ ಖರೀದಿ ಏರಿಕೆ
Find X9 Series ಮೂಲಕ, ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳಿಂದ ಬಳಕೆದಾರರು ನಿರೀಕ್ಷಿಸಬಹುದಾದ ಅನುಭವವನ್ನು OPPO ಮತ್ತೊಮ್ಮೆ ಹೊಸದಾಗಿ ವ್ಯಾಖ್ಯಾನಿಸುತ್ತಿದೆ ಎಂದು OPPO ಮುಖ್ಯಸ್ಥ ಪೀಟರ್ ದೋಹ್ಯುಂಗ್ ಲೀ ಹೇಳಿದ್ದಾರೆ. ಕಳೆದ ಕೆಲವು ತ್ರೈಮಾಸಿಕಗಳಲ್ಲಿ ಭಾರತದಲ್ಲಿ ಪ್ರೀಮಿಯಂ ಸ್ಮಾರ್ಟ್‌ಫೋನ್ ಸ್ವೀಕಾರವು ಕ್ರಮವಾಗಿ ಹೆಚ್ಚಾಗಿದೆ. ಗ್ರಾಹಕ–ಕೇಂದ್ರೀಕೃತ ಬ್ರಾಂಡ್ ಆಗಿರುವ ನಾವು, ಗ್ರಾಹಕರ ಅಗತ್ಯಗಳಿಗೆ ಹೊಂದುವ ಉತ್ಪನ್ನಗಳನ್ನು ತರುತ್ತೇವೆ. Find X9 Series ಮೂಲಕ, ಕ್ಯಾಮೆರಾ ಅನುಭವ, ವಿನ್ಯಾಸದ ಸೌಂದರ್ಯ, ಅದ್ಭುತ ಕಾರ್ಯಕ್ಷಮತೆ ಮತ್ತು ಮೃದು ಬಳಕೆದಾರ ಇಂಟರ್‌ಫೇಸ್‌ಗಳಲ್ಲಿ ಹೊಸ ಮಟ್ಟದ ಫ್ಲಾಗ್‌ಶಿಪ್ ಅನುಭವವನ್ನು ಪರಿಚಯಿಸುತ್ತಿದ್ದೇವೆ ಎಂದಿದ್ದಾರೆ.
ಭಾರತದಲ್ಲಿ ಪ್ರೀಮಿಯಂ ಸ್ಮಾರ್ಟ್‌ಫೋನ್ ಖರೀದಿ ಏರಿಕೆ
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

