- Home
- News
- State
- Karnataka News Live: ಮಾಜಿ ಶಿಕ್ಷಣ ಸಚಿವ, ಹಿರಿಯ ಬಿಜೆಪಿ ನಾಯಕ ಬಿ.ಸಿ. ನಾಗೇಶ್ ನಿಧನ; ನಾಳೆ ಅಂತ್ಯಕ್ರಿಯೆ!
Karnataka News Live: ಮಾಜಿ ಶಿಕ್ಷಣ ಸಚಿವ, ಹಿರಿಯ ಬಿಜೆಪಿ ನಾಯಕ ಬಿ.ಸಿ. ನಾಗೇಶ್ ನಿಧನ; ನಾಳೆ ಅಂತ್ಯಕ್ರಿಯೆ!

ಬೆಂಗಳೂರು: ಜಿಲ್ಲಾ ಕಾಂಗ್ರೆಸ್ ಸಮಿತಿಗಳಿಗೆ ಅಧ್ಯಕ್ಷರ ನೇಮಕ ಸಂಬಂಧ ಹೈಕಮಾಂಡ್ ನಾಯಕರೊಂದಿಗೆ ಚರ್ಚಿಸಲು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹಾಗೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ತೆರಳಲಿದ್ದಾರೆ.
ರಾಜ್ಯದ 35 ಜಿಲ್ಲಾ ಕಾಂಗ್ರೆಸ್ ಸಮಿತಿಗಳಿಗೆ ಹೊಸದಾಗಿ ಅಧ್ಯಕ್ಷರ ನೇಮಕ ಪ್ರಕ್ರಿಯೆಗೆ ಈಗಾಗಲೇ ಚಾಲನೆ ನೀಡಲಾಗಿದೆ. ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರವಹಿಸುವವರನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲು ನಿರ್ಧರಿಸಲಾಗಿದೆ. ಅದಕ್ಕಾಗಿ ಪ್ರತಿ ಜಿಲ್ಲೆಗಳಿಗೂ ವೀಕ್ಷಕರನ್ನು ನೇಮಿಸಿ ಪಟ್ಟಿ ಸಿದ್ಧಪಡಿಸಲಾಗುತ್ತಿದ್ದು, ಅಂತಿಮ ಹಂತದಲ್ಲಿದೆ. ಅದರ ಕುರಿತು ಹೈಕಮಾಂಡ್ ನಾಯಕರೊಂದಿಗೆ ಚರ್ಚೆ ನಡೆಸಲು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಮಂಗಳವಾರ ದೆಹಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಮತ್ತೊಂದೆಡೆ ಆ.19ರಂದು ದೆಹಲಿಯ ಇಂದಿರಾ ಭವನದಲ್ಲಿ ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ ಪಾಲ್ಗೊಳ್ಳಲು ಸಿದ್ದರಾಮಯ್ಯ ದೆಹಲಿಗೆ ತೆರಳುತ್ತಿದ್ದಾರೆ.
Karnataka News Live 18 August 2026 ಮಾಜಿ ಶಿಕ್ಷಣ ಸಚಿವ, ಹಿರಿಯ ಬಿಜೆಪಿ ನಾಯಕ ಬಿ.ಸಿ. ನಾಗೇಶ್ ನಿಧನ; ನಾಳೆ ಅಂತ್ಯಕ್ರಿಯೆ!
Karnataka News Live 18 August 2026 ಧಾರವಾಡದಲ್ಲಿ ಮೂವರು ರೈತರ ಸಾವು - ಸಚಿವರ ಬರ ವೀಕ್ಷಣೆ ವೇಳೆ ಸಂತ್ರಸ್ತರಿಗೆ ಸಿಗದ ಸಾಂತ್ವನ; ಸೌಜನ್ಯಕ್ಕೂ ಬರಲಿಲ್ಲ ಎಂದು ಆಕ್ರೋಶ
ಧಾರವಾಡ ಜಿಲ್ಲೆಯಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ ಮೂವರು ರೈತರು ಆತ್ಮ*ತ್ಯೆ ಮಾಡಿಕೊಂಡಿದ್ದರೂ, ಜಿಲ್ಲಾಡಳಿತ ಸೌಜನ್ಯಕ್ಕೂ ಅವರ ಮನೆಗೆ ಭೇಟಿ ನೀಡದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
Karnataka News Live 18 August 2026 Dharwad - ಡಿಸಿ ಕಚೇರಿಯಲ್ಲಿ ನೌಕರನ ಆತ್ಮ*ತ್ಯೆ ಯತ್ನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ - ಪ್ರಧಾನಿ ಮೋದಿಗೆ ಪತ್ರ ಬರೆದು ಕೈ ಕೊಯ್ದುಕೊಂಡ ನೌಕರ!
ಧಾರವಾಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ನೌಕರನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆಗೆ ಆಘಾತಕಾರಿ ತಿರುವು ಸಿಕ್ಕಿದೆ. ಸ್ನೇಹದ ಸೋಗಿನಲ್ಲಿ ಪರಿಚಯವಾದ ನೆರೆಹೊರೆಯವರು ಖಾಸಗಿ ವಿಡಿಯೋ ರೆಕಾರ್ಡ್ ಮಾಡಿ, ಅದನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ ಮಾನಸಿಕ ಕಿರುಕುಳ ನೀಡಿದ್ದೇ ಈ ಕೃತ್ಯಕ್ಕೆ ಕಾರಣವೆಂದು ತನಿಖೆಯಿಂದ ತಿಳಿದುಬಂದಿದೆ.
Karnataka News Live 18 August 2026 ಕರಾವಳಿ ರೈಲ್ವೆ ಬೇಡಿಕೆಗಳು - ಗೋಮಟೇಶ್ವರ ಎಕ್ಸ್‌ಪ್ರೆಸ್ ಮಂಗಳೂರು ಸೆಂಟ್ರಲ್ ವರೆಗೆ ವಿಸ್ತರಿಸಲು ಮನವಿ
Karnataka News Live 18 August 2026 ಸಿದ್ದರಾಮಯ್ಯ ಬರಲೇ ಇಲ್ಲ, ಯತೀಂದ್ರ ತಡವಾಗಿ ಬಂದ್ರು.. CLP ಮೀಟಿಂಗ್‌ಗೆ ಘಟಾನುಘಟಿಗಳೇ ಗೈರು..!
ಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಮೊದಲ ಸಿಎಲ್‌ಪಿ ಸಭೆಗೆ ಸಿದ್ದರಾಮಯ್ಯ ಗೈರಾಗಿದ್ದು, ಮಂತ್ರಿಗಿರಿ ಹಂಚಿಕೆ ವಿಚಾರದಲ್ಲಿನ ಅಸಮಾಧಾನ ಇನ್ನೂ ತಣಿದಿಲ್ಲ ಎಂಬ ಸೂಚನೆ ನೀಡಿದೆ. ಈ ಕುರಿತ ಸ್ಟೋರಿ ಇಲ್ಲಿದೆ..
Karnataka News Live 18 August 2026 ಬೆಂಗಳೂರು ಇಸ್ಕಾನ್ ವಿವಾದ, ಯಾರಿಗೆ ಒಲಿಯಲಿದೆ ರಾಜಾಜಿನಗರದ ಹರೇ ಕೃಷ್ಣ ಮಂದಿರ? ಹೊಸ ಪೀಠ ರಚನೆಗೆ ಸುಪ್ರೀಂ ಸಮ್ಮತಿ!
Karnataka News Live 18 August 2026 'ನನ್ನ ಏಕೈಕ ಕೆಲಸ ಬಡವರಿಗೆ ಸಹಾಯ ಮಾಡೋದು..' ವಿಧಾನಸಭೆ ಉಪಸಭಾಧ್ಯಕ್ಷರಾಗಿ ಆಯ್ಕೆಯಾದ ಮಂಕಾಳ ವೈದ್ಯ ಭಾವುಕ ಭಾಷಣ!
Karnataka News Live 18 August 2026 ಮಂಕಾಳ್ ವೈದ್ಯ ಸಜ್ಜನ ವ್ಯಕ್ತಿ, ಅವರ ಮನವೊಲಿಸಲು ಕಷ್ಟವಾಯಿತು - ಸಿಎಂ ಡಿಕೆ ಶಿವಕುಮಾರ್ ಬಣ್ಣನೆ
ಮೀನುಗಾರ ಕುಟುಂಬದ ಹಿನ್ನೆಲೆಯ ಮಂಕಾಳ್ ವೈದ್ಯ ಅವರು ವಿಧಾನಸಭೆಯ ಉಪಸಭಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಅವರನ್ನು ತಾವೇ ಮನವೊಲಿಸಿ ಈ ಜವಾಬ್ದಾರಿ ನೀಡಿದ್ದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸದನದಲ್ಲಿ ತಿಳಿಸಿದರು.
Karnataka News Live 18 August 2026 ಜಾರಕಿಹೊಳಿ ನಿವಾಸದಲ್ಲಿ ನಾಗರಪಂಚಮಿಯ ಪವಾಡ - ಶಾಸಕರು ಪೂಜೆ ಸಲ್ಲಿಸ್ತಿದ್ದಂತೆಯೇ ಬೆರಗಾದ ಭಕ್ತರು..!
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನಾಗರಪಂಚಮಿ ಪೂಜೆ ಮುಗಿಸಿದ ಬೆನ್ನಲ್ಲೇ ಅವರ ನಿವಾಸದ ಆವರಣದಲ್ಲಿ ಜೀವಂತ ನಾಗರಹಾವು ಪ್ರತ್ಯಕ್ಷವಾಗಿದೆ. ನಾಗದೇವರ ಮೂರ್ತಿಯ ಬಳಿ ಹಾವು ಕಾಣಿಸಿಕೊಂಡ ಈ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ 'ಪವಾಡ' ಎಂದು ವೈರಲ್ ಆಗುತ್ತಿದೆ.
Karnataka News Live 18 August 2026 ಗಣೇಶ ಭಕ್ತರಿಗೆ ಬೆಲೆ ಏರಿಕೆ ಶಾಕ್ - ಈ ಬಾರಿ ಶೇ. 15 ರಿಂದ 25 ರಷ್ಟು ದುಬಾರಿಯಾಗಲಿದೆ ಗಣಪತಿ ಮೂರ್ತಿ!
ಈ ಬಾರಿಯ ಗಣೇಶ ಚತುರ್ಥಿಗೆ ಕಚ್ಚಾವಸ್ತುಗಳ ಬೆಲೆ, ಕಾರ್ಮಿಕರ ಕೂಲಿ ಮತ್ತು ಸಾರಿಗೆ ವೆಚ್ಚ ಹೆಚ್ಚಳದಿಂದಾಗಿ ಗೌರಿ-ಗಣೇಶ ಮೂರ್ತಿಗಳ ಬೆಲೆ ಶೇ. 15 ರಿಂದ 25 ರಷ್ಟು ದುಬಾರಿಯಾಗಲಿದೆ. ಹುಬ್ಬಳ್ಳಿ, ಬೆಳಗಾವಿ, ಮೈಸೂರು ಹಾಗೂ ಬೆಂಗಳೂರಿನಂತಹ ಪ್ರಮುಖ ನಗರಗಳಲ್ಲಿ ಈ ಬೆಲೆ ಏರಿಕೆ ಪರಿಣಾಮ ಬೀರಲಿದೆ.
Karnataka News Live 18 August 2026 ಮೊದಲ ಟೆಸ್ಟ್ ಗೆಲುವು ಬಹುತೇಕ ಖಚಿತ - ಲಂಕಾ ವಿರುದ್ಧ 4ನೇ ದಿನ ಭಾರತ ಭರ್ಜರಿ ಆಟ
ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಭಾರತದ ಗೆಲುವು ಖಚಿತವಾಗಿದ್ದು, ಅಂತಿಮ ದಿನವಾದ ನಾಳೆ ಟೀಮ್ ಇಂಡಿಯಾಕ್ಕೆ ಕೇವಲ 6 ವಿಕೆಟ್‌ಗಳ ಅವಶ್ಯಕತೆಯಿದೆ. ದ್ವಿತೀಯ ಇನ್ನಿಂಗ್ಸ್‌ನಲ್ಲಿ 66 ರನ್ ಬಾರಿಸಿದ ರಿಷಬ್ ಪಂತ್, ಟೆಸ್ಟ್ ಕ್ರಿಕೆಟ್‌ನಲ್ಲಿ 100 ಸಿಕ್ಸರ್ ಸಿಡಿಸಿದ ಮೊದಲ ಭಾರತೀಯ ಎಂಬ ಐತಿಹಾಸಿಕ ದಾಖಲೆ ನಿರ್ಮಿಸಿದರು.
Karnataka News Live 18 August 2026 ಡಿಕೆಶಿಯ ಅತ್ಯಂತ ನಂಬಿಕಸ್ತ ಸಾರಥಿ ಅಂದ್ರೆ ಕೃಷ್ಣ ಬೈರೇಗೌಡ.. ಇದೀಗ ಮತ್ತೊಂದು ಪವರ್‌ಫುಲ್ ಜವಾಬ್ದಾರಿ..!
ಸಚಿವ ಕೃಷ್ಣ ಬೈರೇಗೌಡರ ಕಾರ್ಯಕ್ಷಮತೆ ಮತ್ತು ಕ್ಲೀನ್ ಇಮೇಜ್‌ಗೆ ಮೆಚ್ಚುಗೆ ಸೂಚಿಸಿರುವ ಸಿಎಂ ಡಿಕೆಶಿ, ಅವರಿಗೆ ಸಂಸದೀಯ ವ್ಯವಹಾರಗಳ ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಿದ್ದಾರೆ. ಬೆಂಗಳೂರು ಅಭಿವೃದ್ಧಿ ವಿಚಾರದಲ್ಲಿ ಈಗಾಗಲೇ ಜನಮನ್ನಣೆ ಗಳಿಸಿರುವ ಬೈರೇಗೌಡರು, ಸರ್ಕಾರದ ಅತ್ಯಂತ ನಂಬಿಕಸ್ತ ಸಚಿವರಾಗಿ ಹೊರಹೊಮ್ಮಿದ್ದಾರೆ.
Karnataka News Live 18 August 2026 ಜೈಲಿನಲ್ಲಿ ದರ್ಶನ್ ಭೇಟಿಯಾದ ವಿಜಯಲಕ್ಷ್ಮೀ, ತಾಯಿ ಮೀನಾ - ಧನ್ವೀರ್ ಕೂಡ ಭೇಟಿ, ಕುತೂಹಲ!
ಕಾನೂನು ಹೋರಾಟದಲ್ಲಿ ಹಿನ್ನಡೆ, ಸೊಳ್ಳೆ ಕಾಟ, ಜೈಲಲ್ಲಿನ ಕಿರಿಕಿರಿ ಸೇರಿದಂತೆ ಅನೇಕ ನೋವುಗಳನ್ನು ಅನುಭವಿಸುತ್ತಿದ್ದ ನಟ ದರ್ಶನ್‌ಗೆ ಇವತ್ತು ಕೊಂಚ ಸಮಾಧಾನ ಸಿಕ್ಕಿದೆ. ಕುಟುಂಬಸ್ಥರ ಭೇಟಿ ಹಿನ್ನೆಲೆಯಲ್ಲಿ ಮಾನಸಿಕವಾಗಿ ಗಟ್ಟಿಯಾಗಿದ್ದಾರೆ.
Karnataka News Live 18 August 2026 Cricket - ವಿರಾಟ್ ಕೊಹ್ಲಿಯ 18 ವರ್ಷದ ಕ್ರಿಕೆಟ್ ಪಯಣ! ಕಟ್ಟಾ ಅಭಿಮಾನಿಗಳಿಗೂ ತಿಳಿಯದ ಅಚ್ಚರಿ ದಾಖಲೆಗಳಿವು!
Karnataka News Live 18 August 2026 Car News; ಸ್ಟೈಲಿಶ್ ಲುಕ್, ಪವರ್‌ಫುಲ್ ಎಂಜಿನ್; ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಧುಮುಕಿದ ಸ್ಕೋಡಾ ಸ್ಲಾವಿಯಾ!
ಸ್ಕೋಡಾ ಆಟೋ ಇಂಡಿಯಾ ತನ್ನ ಜನಪ್ರಿಯ ಸೆಡಾನ್ 'ಸ್ಲಾವಿಯಾ'ದ ಹೊಸ ಫೇಸ್‌ಲಿಫ್ಟೆಡ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಈ ಮಾದರಿಯು ಆಕರ್ಷಕ ಬಾಹ್ಯ ವಿನ್ಯಾಸ, ಡಿಜಿಟಲ್ ಡಿಸ್ಪ್ಲೇ ಹಾಗೂ ವೆಂಟಿಲೇಟೆಡ್ ಸೀಟುಗಳಂತಹ ಆಧುನಿಕ ಕ್ಯಾಬಿನ್ ವೈಶಿಷ್ಟ್ಯಗಳನ್ನು ಹೊಂದಿದೆ.
Karnataka News Live 18 August 2026 ಜೈಲಿಗೆ ಹಾಕ್ಲಿ, ನೇಣಿಗೇ ಹಾಕ್ಲಿ..ವಂದೇ ಮಾತರಂ ಎರಡು ಚರಣ ಮಾತ್ರ ನಾವು ಹಾಡೋದು - KPCC ಅಧ್ಯಕ್ಷ ಬಿಕೆ ಹರಿಪ್ರಸಾದ್
ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು, 'ವಂದೇ ಮಾತರಂ' ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವ ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ಪದ್ಧತಿಯನ್ನು ಮುಂದುವರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
Karnataka News Live 18 August 2026 ಗಾಢ ನಿದ್ದೆಯಲ್ಲೂ ಮಾಸ್ಟರ್ ಬ್ಲಾಸ್ಟರ್‌ಗೆ ಕಾಡಿದ್ದು ಅದೊಂದೇ ಚಿಂತೆ! ಪಾಕ್‌ನಲ್ಲಿ ನಡೆದ ಘಟನೆ ನೆನಪಿಸಿಕೊಂಡು ಭಾವುಕರಾದ ಸಚಿನ!
ಮಾಜಿ ಕ್ರಿಕೆಟಿಗ ಸಲೀಲ್ ಅಂಕೋಲ ಅವರು ಸಚಿನ್ ತೆಂಡೂಲ್ಕರ್ ಅವರೊಂದಿಗಿನ ತಮ್ಮ ಆರಂಭಿಕ ದಿನಗಳನ್ನು ನೆನಪಿಸಿಕೊಂಡಿದ್ದಾರೆ. 1989ರ ಪಾಕಿಸ್ತಾನ ಪ್ರವಾಸದ ವೇಳೆ ಸಚಿನ್ ನಿದ್ರೆಯಲ್ಲಿ ನಡೆದು ಸಹ ಆಟಗಾರನ ಕೋಣೆಯ ಬಾಗಿಲು ತಟ್ಟಿದ ಸ್ವಾರಸ್ಯಕರ ಘಟನೆಯನ್ನು ಈ ಸ್ಟೋರಿ ವಿವರಿಸುತ್ತದೆ.
Karnataka News Live 18 August 2026 ಯಶವಂತಪುರ, KSR ಬೆಂಗಳೂರು ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಕನಿಷ್ಠ ಸೌಲಭ್ಯಗಳೇ ಇಲ್ಲ - ರೈಲ್ವೆ ಇಲಾಖೆಗೆ CAG ತರಾಟೆ
ಭಾರತೀಯ ನಿಯಂತ್ರಕ ಮತ್ತು ಮಹಾಲೇಖಾಪಾಲರ (CAG) ವರದಿಯು ಬೆಂಗಳೂರಿನ ಕೆಎಸ್‌ಆರ್ ಮತ್ತು ಯಶವಂತಪುರ ಸೇರಿದಂತೆ ರಾಜ್ಯದ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಕುಡಿಯುವ ನೀರಿನ ಸೌಲಭ್ಯದ ತೀವ್ರ ಕೊರತೆಯನ್ನು ಬಯಲುಮಾಡಿದೆ.
Karnataka News Live 18 August 2026 Dharwad Protest - ನಾವು ಮಾಡಿದ್ದಾದರೂ ಏನು ಅಪರಾಧ ಸ್ವಾಮಿ? ಧಾರವಾಡ ಬೀದಿಯಲ್ಲಿ ಕನಸುಗಳ ಹೊಸಕಿ ಹಾಕಿತಾ ಖಾಕಿ ದರ್ಪ! ನೊಂದ ಉದ್ಯೋಗಾಂಕ್ಷಿಗಳಿಂದ ಸ್ಟ್ರೇಟ್ ಸವಾಲ್!
ಸರ್ಕಾರಿ ಉದ್ಯೋಗಕ್ಕಾಗಿ ಧಾರವಾಡದಲ್ಲಿ ಶಾಂತಿಯುತ ಪ್ರತಿಭಟನೆಗೆ ಮುಂದಾದ ಉದ್ಯೋಗಾಂಕ್ಷಿಗಳ ಧ್ವನಿಯನ್ನು ಪೊಲೀಸ್ ಇಲಾಖೆ ಹತ್ತಿಕ್ಕಿದೆ. ಪ್ರತಿಭಟನೆಗೆ ಅನುಮತಿ ನಿರಾಕರಿಸಿ, ಸಂಘಟನೆಯ ಅಧ್ಯಕ್ಷ ಕಾಂತಕುಮಾರ್ ಅವರನ್ನು ಬಂಧಿಸುವ ಮೂಲಕ ಯುವಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯು ವ್ಯವಸ್ಥೆಯ ವಿರುದ್ಧ ಯುವ ಸಮೂಹದ ನೋವು ಮತ್ತು ಅಸಹಾಯಕತೆಯನ್ನು ಬಿಂಬಿಸುತ್ತದೆ
Karnataka News Live 18 August 2026 MMDR ಕಾಯ್ದೆ ತಿದ್ದುಪಡಿ - ಕರ್ನಾಟಕಕ್ಕೆ ₹15,786 ಕೋಟಿ ತೆರಿಗೆ ಪಾವತಿಸುವ ಭೀತಿಯಲ್ಲಿ ಎನ್‌ಎಂಡಿಸಿ!
ಕರ್ನಾಟಕ ಸರ್ಕಾರದ ಪೂರ್ವಾನ್ವಯ ಖನಿಜ ತೆರಿಗೆ ಮಸೂದೆಯಿಂದಾಗಿ, ಕೇಂದ್ರ ಸರ್ಕಾರದ ಗಣಿಗಾರಿಕೆ ಸಂಸ್ಥೆ ಎನ್‌ಎಂಡಿಸಿ ₹15,785.72 ಕೋಟಿಗಳಷ್ಟು ಬೃಹತ್ ತೆರಿಗೆಯನ್ನು ಪಾವತಿಸುವ ಸಂಭಾವ್ಯ ಅಪಾಯವನ್ನು ಎದುರಿಸುತ್ತಿದೆ.