09:48 PM (IST) Jun 15

Karnataka News Live 15 June 2026Kodagu - ಸಚಿವ ಸಂಪುಟ ವಿಸ್ತರಣೆ ಯಾವಾಗ? - ಶಾಸಕ ಎ.ಎಸ್.ಪೊನ್ನಣ್ಣ ಕೊಟ್ರು ಮಹತ್ವದ ಸುಳಿವು!

Karnataka Cabinet Expansion: ಜೂ.18ಕ್ಕೆ ಪರಿಷತ್ ಚುನಾವಣೆ ಇದ್ದು ಅದರ ಬಳಿಕ ಕರ್ನಾಟಕದಲ್ಲಿ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದ್ದಾರೆ. 

Read Full Story
09:01 PM (IST) Jun 15

Karnataka News Live 15 June 2026Chikkamagaluru - ಹಣ ನೀಡಲಿಲ್ಲವೆಂದು ಪೋಷಕರೊಂದಿಗೆ ಜಗಳ - ಆಕ್ರೋಶದಿಂದ ಮನೆ ಬಿಟ್ಟ ಯುವಕ ಶವವಾಗಿ ಪತ್ತೆ

Chikkamagaluru News: ಚಿಕ್ಕಮಗಳೂರು ಜಿಲ್ಲೆಯ ಬನ್ನೂರು ಗ್ರಾಮದಲ್ಲಿ ಹಣದ ವಿಚಾರವಾಗಿ ಪೋಷಕರೊಂದಿಗೆ ಜಗಳವಾಡಿದ 27 ವರ್ಷದ ಯುವಕ ಪ್ರದೀಪ್ ಕೆರೆಗೆ ಹಾರಿ ಆತ್ಮ*ಹ*ತ್ಯೆ ಮಾಡಿಕೊಂಡಿದ್ದಾನೆ.

Read Full Story
08:39 PM (IST) Jun 15

Karnataka News Live 15 June 2026Snakes - ಹಾವುಗಳಿಗೆ ಮರಿಗಳ ಮೇಲೆ ಪ್ರೀತಿ ಇಲ್ವಾ? ಮೊಟ್ಟೆಯಿಟ್ಟ ತಕ್ಷಣ ದೂರ ಹೋಗೋದೇಕೆ? ಇಲ್ಲಿದೆ ಸತ್ಯ!

Snakes: ಜಗತ್ತಿನ ಎಲ್ಲಾ ಪ್ರಾಣಿಗಳು ತಮ್ಮ ಮರಿಗಳ ಜೊತೆ ಇರುತ್ತವೆ, ಆದರೆ ಹಾವುಗಳು ಮಾತ್ರ ಯಾಕೆ ಒಂಟಿಯಾಗಿರುತ್ತವೆ? ಈ ಪ್ರಶ್ನೆ ನಿಮ್ಮನ್ನೂ ಕಾಡಿರಬಹುದು. ಇದರ ಹಿಂದಿನ ವೈಜ್ಞಾನಿಕ ಕಾರಣವನ್ನು ಈ ಗ್ಯಾಲರಿಯಲ್ಲಿ ತಿಳಿಯೋಣ.

Read Full Story
07:18 PM (IST) Jun 15

Karnataka News Live 15 June 2026Viral Video - ಮೈದಾನದಲ್ಲೇ ಕೈ ಮಿಲಾಯಿಸುವ ಹಂತಕ್ಕೆ ಹೋದ ಪ್ಲೇಯರ್ಸ್‌ - ಲಂಕಾ ಕ್ರಿಕೆಟಿಗನ ಎದೆಗೆ ಕೈಯಿಟ್ಟು ತಳ್ಳಿದ Vaibhav Sooryavanshi

ದಂಬುಲ್ಲಾದಲ್ಲಿ ನಡೆದ ಭಾರತ 'ಎ' ಮತ್ತು ಶ್ರೀಲಂಕಾ 'ಎ' ನಡುವಿನ ತ್ರಿಕೋನ ಸರಣಿಯ ಪಂದ್ಯವು ಸೂಪರ್ ಓವರ್‌ನಲ್ಲಿ ಅಂತ್ಯಗೊಂಡಿದ್ದು, ಶ್ರೀಲಂಕಾ 'ಎ' ಜಯ ಸಾಧಿಸಿತು. ಪಂದ್ಯದ ನಂತರ ಆಟಗಾರರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಅಂಪೈರ್ ತೀರ್ಪುಗಳ ಬಗ್ಗೆಯೂ ಗೊಂದಲ ಸೃಷ್ಟಿಯಾಗಿತ್ತು.
Read Full Story
06:55 PM (IST) Jun 15

Karnataka News Live 15 June 2026ಮೈಸೂರು ರೆಸ್ಟೋ ಪಬ್‌ನಲ್ಲಿ ಸ್ಫೋಟ ಪ್ರಕರಣ, ಸ್ಯಾಂಡಲ್‌ವುಡ್‌ ನಟನ ಮಾಲಿಕತ್ವದ ಬಾರ್, ಸ್ವತಃ ನಟನಿಗೂ ಗಂಭೀರ ಗಾಯ!

ಮೈಸೂರಿನ ದಟ್ಟಗಳ್ಳಿ ಬಳಿಯ ನಟ ಪ್ರೀತಂ ಪುಮೀತ್ ಮಾಲೀಕತ್ವದ 'ಫಾಕ್ಸ್ ಡೆನ್' ಪಬ್‌ನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭೀಕರ ಅಗ್ನಿ ಅವಘಡ ಸಂಭವಿಸಿದೆ. ಈ ದುರಂತದಲ್ಲಿ ಇಬ್ಬರು ಮೃತಪಟ್ಟು, ನಟ ಪ್ರೀತಂ ಸೇರಿದಂತೆ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.
Read Full Story
06:27 PM (IST) Jun 15

Karnataka News Live 15 June 2026ಬೆಂಗಳೂರಿನಲ್ಲಿ ಕಡಿಮೆ ಬಾಡಿಗೆಗೆ ಮನೆ ಬೇಕೇ? - ಉತ್ತಮ ಸಂಪರ್ಕ ಹೊಂದಿರುವ 8 ಬಜೆಟ್ ಸ್ನೇಹಿ ಏರಿಯಾಗಳಿವು

ಬೆಂಗಳೂರಿನಲ್ಲಿ ವಸತಿ ವೆಚ್ಚ ಹೆಚ್ಚಾಗಿದ್ದರೂ, ಕೆಲವು ಪ್ರದೇಶಗಳು ಇಂದಿಗೂ ಕೈಗೆಟುಕುವ ದರದಲ್ಲಿ ಬಾಡಿಗೆ ಮನೆಗಳನ್ನು ಒದಗಿಸುತ್ತವೆ. ಈ ಲೇಖನವು ಎಲೆಕ್ಟ್ರಾನಿಕ್ ಸಿಟಿ, ಕೆಂಗೇರಿ, ಮತ್ತು ಯಲಹಂಕದಂತಹ ಎಂಟು ಬಜೆಟ್-ಸ್ನೇಹಿ ಸ್ಥಳಗಳನ್ನು ಪರಿಚಯಿಸುತ್ತದೆ.

Read Full Story
06:10 PM (IST) Jun 15

Karnataka News Live 15 June 2026ರೇಣುಕಾಸ್ವಾಮಿ ಕೇಸ್ - ವಾರಕ್ಕೆ 4 ದಿನ ವಿಚಾರಣೆ ನಡೆಸಲು ಸಮ್ಮತಿ, ಕೋರ್ಟ್‌ಗೆ ದರ್ಶನ್‌ ಖುದ್ದು ಹಾಜರಿಗೆ ವಕೀಲರ ಅರ್ಜಿ

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯನ್ನು ಹೊಸ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದ್ದು, ತ್ವರಿತಗತಿ ವಿಚಾರಣೆಗೆ ಕೋರ್ಟ್ ಆದೇಶಿಸಿದೆ. ವಾರದಲ್ಲಿ ನಾಲ್ಕು ದಿನ ವಿಚಾರಣೆ ನಡೆಸಲು ಸಮ್ಮತಿಸಿದ್ದು, ದರ್ಶನ್ ಅವರನ್ನು ಖುದ್ದು ಹಾಜರುಪಡಿಸಲು ಅವರ ವಕೀಲರು ವಿಶೇಷ ಅರ್ಜಿ ಸಲ್ಲಿಸಿದ್ದಾರೆ, ಇದರ ತೀರ್ಪು ನಾಳೆಗೆ ಕಾಯ್ದಿರಿಸಲಾಗಿದೆ.
Read Full Story
05:34 PM (IST) Jun 15

Karnataka News Live 15 June 2026Chanakya Niti - ಮಹಿಳೆಯರ ಈ 5 ಅಭ್ಯಾಸಗಳು ಮನೆ ಮರ್ಯಾದೆ ಕಳೆಯುತ್ತವೆ, ಎಚ್ಚರ ಎಂದ ಚಾಣಕ್ಯ!

Chanakya Niti For Women: ಆಚಾರ್ಯ ಚಾಣಕ್ಯರ ನೀತಿಗಳ ಪ್ರಕಾರ, ಮಹಿಳೆಯರಲ್ಲಿರುವ ಕೆಲವು ಅಭ್ಯಾಸಗಳು ಇಡೀ ಕುಟುಂಬದ ಗೌರವಕ್ಕೆ ಧಕ್ಕೆ ತರಬಹುದು ಸೇರಿದಂತೆ ಯಾವೆಲ್ಲಾ ಅಭ್ಯಾಸಗಳಿಂದ ದೂರವಿರಬೇಕು ಎಂದು ಚಾಣಕ್ಯರು ಹೇಳಿದ್ದಾರೆ.

Read Full Story
04:49 PM (IST) Jun 15

Karnataka News Live 15 June 2026ಮೈಸೂರು - ಲಿಕ್ಕರ್ ಗ್ಯಾರೇಜ್ ಪಬ್ ನಲ್ಲಿ ಸಿಲಿಂಡರ್ ಸ್ಫೋಟ, ಇಬ್ಬರು ಹೊರ ರಾಜ್ಯದವರ ಬಲಿ, ಹಲವರು ಗಂಭೀರ!

ಮೈಸೂರಿನ 'ಫಾಕ್ಸ್ ಡೆನ್ ಲಿಕ್ಕರ್ ಗ್ಯಾರೇಜ್' ಪಬ್‌ನಲ್ಲಿ ಸಿಲಿಂಡರ್ ಸ್ಫೋಟಗೊಂಡು ಭೀಕರ ಅಗ್ನಿ ದುರಂತ ಸಂಭವಿಸಿದೆ. ಈ ಘಟನೆಯಲ್ಲಿ ಇಬ್ಬರು ಯುವಕರು ಮೃತಪಟ್ಟು, ಹಲವರು ಗಾಯಗೊಂಡಿದ್ದು, ಪ್ರಾಣ ಉಳಿಸಿಕೊಳ್ಳಲು ಜನರು ಕಟ್ಟಡದಿಂದ ಜಿಗಿದಿದ್ದಾರೆ. ಸದ್ಯ ಪೊಲೀಸರು ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ.
Read Full Story
04:36 PM (IST) Jun 15

Karnataka News Live 15 June 2026Special Interview - ಸಿನಿಮಾರಂಗದಲ್ಲಿ ಕಾಸ್ಟಿಂಗ್ ಕೌಚ್ ಸಾಮಾನ್ಯ, ನಾನು ಸ್ಟ್ರಿಕ್ಟ್ - ನಟಿ ನಿಮಿಷಾ ಚಂದ್ರ

Special Interview: ನಾವು ಹೇಗಿರುತ್ತೇವೆಯೋ ಪ್ರತಿಕ್ರಿಯೆ ಹಾಗೇ ಇರುತ್ತೆ. ಆದರೂ ಸಿನಿಮಾರಂಗದಲ್ಲಿ ಕಾಸ್ಟಿಂಗ್ ಕೌಚ್ ಸಾಮಾನ್ಯ ಎಂದು ಕೇಳಿದ್ದೇನೆ ಎಂದು ಸಂದರ್ಶನದಲ್ಲಿ ನಟಿ ನಿಮಿಷಾ ಚಂದ್ರ ತಿಳಿಸಿದರು.

Read Full Story
04:29 PM (IST) Jun 15

Karnataka News Live 15 June 2026ಕೊಲ್ಲಿ ಯುದ್ಧದಿಂದ ಡಾಂಬರ್‌ ದರ ದುಪ್ಪಟ್ಟು ದುಬಾರಿ - ಕರ್ನಾಟಕದ ಹಲವು ಕಡೆ ರಸ್ತೆ ಕೆಲಸ ಸ್ಥಗಿತ

ಮಧ್ಯಪ್ರಾಚ್ಯದ ಯುದ್ಧದಿಂದಾಗಿ ಡಾಂಬರ್ ಬೆಲೆ ಪ್ರತಿ ಟನ್‌ಗೆ ₹45 ಸಾವಿರದಿಂದ ₹1 ಲಕ್ಷಕ್ಕೆ ಏರಿಕೆಯಾಗಿದೆ. ಇದರಿಂದ ಹೂವಿನಹಡಗಲಿ ತಾಲೂಕಿನ ಹಲವು ರಸ್ತೆ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ, ಗುತ್ತಿಗೆದಾರರು ಜೆಲ್ಲಿಕಲ್ಲು ಹಾಕಿ ಕಾಮಗಾರಿ ನಿಲ್ಲಿಸಿದ್ದಾರೆ.

Read Full Story
04:11 PM (IST) Jun 15

Karnataka News Live 15 June 2026Exclusive Interview - ಹಳ್ಳಿ ಕಡೆಗೆ ಹೋದಾಗಲೆಲ್ಲ ಪೊಲಿಟಿಕಲ್‌ ಪವರ್‌ ಬೇಕು ಅನಿಸುತ್ತದೆ - ರಂಗಾಯಣ ರಘು

Exclusive Interview: 400 ಚಿತ್ರಗಳ ಸಂಭ್ರಮದಲ್ಲಿರುವ ಹಿರಿಯ ನಟ ರಂಗಾಯಣ ರಘು ತಮ್ಮ ಸಿನಿಮಾ ಪಯಣ, ರಂಗಭೂಮಿ ಅನುಭವ, ರಾಜಕೀಯ ಪ್ರವೇಶದ ಅವಕಾಶ, ಕೃಷಿ ಜೀವನ ಮತ್ತು ಭವಿಷ್ಯದ ಕನಸುಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

Read Full Story
03:32 PM (IST) Jun 15

Karnataka News Live 15 June 2026ರಾಯಚೂರಿನ 200 ಕೋಟಿ ರೂ. ಹಗರಣ - ದರ್ವೇಶ್ ಕಂಪನಿ ರಹಸ್ಯವೇ ಗೊತ್ತಾಗ್ತಿಲ್ಲ, ಸೂಜಾ ಸಿಕ್ತಿಲ್ಲ!

ರಾಯಚೂರಿನಲ್ಲಿ ‘ದರ್ವೇಶ್ ಗ್ರೂಪ್ ಆಫ್ ಕಂಪನಿ’ ಅಧಿಕ ಬಡ್ಡಿಯ ಆಸೆ ತೋರಿಸಿ ಸಾರ್ವಜನಿಕರಿಂದ ನೂರಾರು ಕೋಟಿ ರೂಪಾಯಿ ಹೂಡಿಕೆ ಮಾಡಿಸಿಕೊಂಡು ವಂಚಿಸಿದೆ. ಕಂಪನಿಯ ಮಾಲೀಕ ಮಹಮ್ಮದ್ ಸೂಜಾ ನಾಪತ್ತೆಯಾಗಿದ್ದು, ಎರಡು ವರ್ಷಗಳಿಂದ ಸಿಐಡಿ ತನಿಖೆ ನಡೆದರೂ ಆತ ಸಿಕ್ಕಿಲ್ಲ. ಇದೀಗ ಹಣ ಕಳೆದುಕೊಂಡ ಸಂತ್ರಸ್ತರು ನ್ಯಾಯಕ್ಕಾಗಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ.
Read Full Story
01:11 PM (IST) Jun 15

Karnataka News Live 15 June 2026ಗೃಹಲಕ್ಷ್ಮೀ ಆಯ್ತು ಗೃಹ ಜ್ಯೋತಿ ಯೋಜನೆಗೆ ಸರ್ಕಾರದ ಮೇಜರ್ ಸರ್ಜರಿ, ಉಚಿತ ವಿದ್ಯುತ್ ಪಡೆಯುವಲ್ಲಿಯೂ ಗೋಲ್ ಮಾಲ್!

ಗೃಹ ಜ್ಯೋತಿ ಯೋಜನೆಯ ದುರುಪಯೋಗ ತಡೆಯಲು ರಾಜ್ಯ ಸರ್ಕಾರವು ಕಠಿಣ ಕ್ರಮಗಳನ್ನು ಜಾರಿಗೆ ತರಲು ಸಜ್ಜಾಗಿದೆ. ವಾಣಿಜ್ಯ ಬಳಕೆ ಮತ್ತು ಹೊರ ರಾಜ್ಯದ ಅನರ್ಹ ಫಲಾನುಭವಿಗಳನ್ನು ಕೈಬಿಡಲು ಆಧಾರ್ ಮತ್ತು ಇ-ಕೆವೈಸಿ ಮೂಲಕ ಮರುಪರಿಶೀಲನೆ ನಡೆಸಲು ಹೊಸ ಮಾರ್ಗಸೂಚಿ ಸಿದ್ಧಪಡಿಸಲಾಗುತ್ತಿದೆ.
Read Full Story
12:31 PM (IST) Jun 15

Karnataka News Live 15 June 2026ರಾಜಸ್ಥಾನದಲ್ಲಿ ಲಂಚ ಪಡೆಯುವಾಗ ಸಿಕ್ಕಿಬಿದ್ದ ಬೆಂಗಳೂರು ಪೊಲೀಸ್‌, 'ಸಸ್ಪೆಂಡ್‌ ಮಾಡಿದ್ದೀವಿ' ಎಂದ ಪ್ರಿಯಾಂಕ್‌ ಖರ್ಗೆ

ರಾಜಸ್ಥಾನದಲ್ಲಿ ಲಂಚ ಪಡೆಯುವಾಗ ಸಿಕ್ಕಿಬಿದ್ದ ಬೆಂಗಳೂರು ಪೊಲೀಸರ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ. ಪೊಲೀಸರನ್ನು ಅಮಾನತು ಮಾಡಲಾಗಿದೆ ಎಂದಿದ್ದಾರೆ. ತಮ್ಮ ಮೇಲಿನ ಬಿಜೆಪಿ ಟೀಕೆಗಳಿಗೆ, ಗ್ಯಾರಂಟಿ ಯೋಜನೆಗಳ ವಿವಾದಕ್ಕೆ ಅವರು ಪ್ರತಿಕ್ರಿಯಿಸಿದ್ದಾರೆ.

Read Full Story
12:25 PM (IST) Jun 15

Karnataka News Live 15 June 2026ಪಿ.ಲಂಕೇಶ್ ಪತ್ನಿ, ಲೇಖಕಿ ಇಂದಿರಾ ಲಂಕೇಶ್ ನಿಧನ - ಸಾಹಿತ್ಯ-ಪತ್ರಿಕೋದ್ಯಮದ ಅಪೂರ್ವ ಕೊಂಡಿ ಕಳಚಿತು!

ಹಿರಿಯ ಲೇಖಕಿ ಮತ್ತು ಪಿ. ಲಂಕೇಶ್ ಅವರ ಧರ್ಮಪತ್ನಿ ಶ್ರೀಮತಿ ಇಂದಿರಾ ಲಂಕೇಶ್ (84) ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. 'ಲಂಕೇಶ್ ಪತ್ರಿಕೆ'ಯ ಯಶಸ್ಸಿನ ಹಿಂದಿನ ಶಕ್ತಿಯಾಗಿದ್ದ ಅವರು, 'ಹುಳಿಮಾವು ಮತ್ತು ನಾನು' ಕೃತಿಯ ಮೂಲಕವೂ ಗುರುತಿಸಿಕೊಂಡಿದ್ದರು.
Read Full Story
11:39 AM (IST) Jun 15

Karnataka News Live 15 June 2026ಬೆಂಗಳೂರು ಉಪನಗರ ರೈಲು - ಸೋಲದೇವನಹಳ್ಳಿ 26 ಎಕರೆ ಜಾಗದಲ್ಲಿ 200 ಕೋಟಿ ರು. ವೆಚ್ಚದಲ್ಲಿ ನಿರ್ವಹಣಾ ಘಟಕ

ಬೆಂಗಳೂರು ಉಪನಗರ ರೈಲು ಯೋಜನೆಗೆ ಪೂರಕವಾಗಿ, ಸೋಲದೇವನಹಳ್ಳಿಯಲ್ಲಿ ರೈಲು ನಿರ್ವಹಣಾ ಘಟಕ ನಿರ್ಮಿಸಲು ಬಿ-ರೈಡ್‌ ಟೆಂಡರ್‌ ಪ್ರಕ್ರಿಯೆ ಆರಂಭಿಸಿದೆ. ಚಿಕ್ಕಬಾಣಾವರ ಬಳಿ 26 ಎಕರೆ ಜಾಗದಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ಸ್ಥಾಪನೆಯಾಗಲಿರುವ ಈ ಘಟಕವು, ಕಾರಿಡಾರ್‌ 2 ಮತ್ತು 4ರ ರೈಲುಗಳ ನಿರ್ವಹಣೆ ಮಾಡಲಿದೆ.
Read Full Story
11:36 AM (IST) Jun 15

Karnataka News Live 15 June 2026ಕರ್ನಾಟಕ ಶಾಲಾ ಪಠ್ಯಪುಸ್ತಕಗಳಿಗೆ ಹೊಸ ಹೆಸರು - ವಿಜ್ಞಾನ ಪುಸ್ತಕಕ್ಕೆ ‘ಕುತೂಹಲ’, ಕನ್ನಡಕ್ಕೆ ‘ಸಿರಿ ಕನ್ನಡ’

ರಾಜ್ಯ ಪಠ್ಯಪುಸ್ತಕ ರಚನಾ ಮಂಡಳಿಯು ಕಲಿಕೆಯನ್ನು ಆಸಕ್ತಿದಾಯಕವಾಗಿಸಲು ಪಠ್ಯಪುಸ್ತಕಗಳಿಗೆ ಹೊಸ ಹೆಸರುಗಳನ್ನು ನೀಡಿದೆ. ವಿಜ್ಞಾನಕ್ಕೆ 'ಕುತೂಹಲ' ಎಂದು ಹೆಸರಿಡಲಾಗಿದ್ದು, ಈ ಹೊಸ ಪುಸ್ತಕಗಳು ರಾಷ್ಟ್ರೀಯ ಶಿಕ್ಷಣ ನೀತಿಯಂತೆ ಚಟುವಟಿಕೆ ಆಧಾರಿತ ಕಲಿಕೆ ಮತ್ತು ಅನ್ವೇಷಣೆಗೆ ಒತ್ತು ನೀಡುತ್ತವೆ. ವರ್ಣಮಯ ಚಿತ್ರಗಳು ಮತ್ತು ಪ್ರಾಯೋಗಿಕ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ವಿಶೇಷ ಆಸಕ್ತಿ ಮೂಡಿಸುತ್ತಿವೆ.
Read Full Story
10:45 AM (IST) Jun 15

Karnataka News Live 15 June 2026ರಾಮನಗರ ಕಾಂಗ್ರೆಸ್‌ ಶಾಸಕ ಇಕ್ಬಾಲ್ ಹುಸೇನ್‌ಗೆ ಹೃದಯಾಘಾತ - ಓಪನ್ ಹಾರ್ಟ್ ಸರ್ಜರಿಗೆ ಸಿದ್ಧತೆ

ರಾಮನಗರ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಅವರಿಗೆ ಹೃದಯಾಘಾತವಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಸ್ಟಂಟ್ ಅಳವಡಿಸಲಾಗಿದ್ದು, ಶೀಘ್ರದಲ್ಲೇ ಓಪನ್ ಹಾರ್ಟ್ ಸರ್ಜರಿ ನಡೆಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ.
Read Full Story
10:33 AM (IST) Jun 15

Karnataka News Live 15 June 2026Jamakhandi - ತನಿಖೆಗೆ ತೆರಳಿದ್ದ ವೇಳೆಯೇ ASI ಭೀಮಶಿ ಮಧುರಖಂಡಿ ಹೃದಯಾಘಾತದಿಂದ ನಿಧನ

ಪ್ರಕರಣವೊಂದರ ತನಿಖೆಗಾಗಿ ಮಹಾರಾಷ್ಟ್ರದ ಪಂಢರಪುರಕ್ಕೆ ತೆರಳಿದ್ದ ಬಾಗಲಕೋಟೆ ನಗರ ಠಾಣೆಯ ಎಎಸ್‌ಐ ಭೀಮಶಿ ಮಧುರಖಂಡಿ, ಅಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ನಿವೃತ್ತಿಯ ಅಂಚಿನಲ್ಲಿದ್ದ 59 ವರ್ಷದ ಅಧಿಕಾರಿಯ ಅಂತ್ಯಕ್ರಿಯೆ ಸ್ವಗ್ರಾಮ ಹುನ್ನೂರಿನಲ್ಲಿ ನಡೆಯಲಿದೆ.
Read Full Story