Jamakhandi: ತನಿಖೆಗೆ ತೆರಳಿದ್ದ ವೇಳೆಯೇ ASI ಭೀಮಶಿ ಮಧುರಖಂಡಿ ಹೃದಯಾಘಾತದಿಂದ ನಿಧನ
ಪ್ರಕರಣವೊಂದರ ತನಿಖೆಗಾಗಿ ಮಹಾರಾಷ್ಟ್ರದ ಪಂಢರಪುರಕ್ಕೆ ತೆರಳಿದ್ದ ಬಾಗಲಕೋಟೆ ನಗರ ಠಾಣೆಯ ಎಎಸ್‌ಐ ಭೀಮಶಿ ಮಧುರಖಂಡಿ, ಅಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ನಿವೃತ್ತಿಯ ಅಂಚಿನಲ್ಲಿದ್ದ 59 ವರ್ಷದ ಅಧಿಕಾರಿಯ ಅಂತ್ಯಕ್ರಿಯೆ ಸ್ವಗ್ರಾಮ ಹುನ್ನೂರಿನಲ್ಲಿ ನಡೆಯಲಿದೆ.

ಎಎಸ್‌ಐ ಭೀಮಶಿ ಮಧುರಖಂಡಿ ನಿಧನ
ಬಾಗಲಕೋಟೆ: ಕರ್ತವ್ಯ ನಿರತ ನಗರ ಠಾಣೆ ಎಎಸ್‌ಐ ಭೀಮಶಿ ಮಧುರಖಂಡಿ ಭಾನುವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಭೀಮಶಿ ಮಧುರಖಂಡಿ 59 ವಯಸ್ಸು ಆಗಿತ್ತು.
ಹೃದಯಾಘಾತ
ಪ್ರಕರಣವೊಂದರ ತನಿಖೆಗೆಂದು ಪಕ್ಕದ ರಾಜ್ಯ ಮಹಾರಾಷ್ಟ್ರದ ಪಂಢರಪುರಕ್ಕೆ ತೆರಳಿದ್ದ ಅವರು, ದೇವರ ದರ್ಶನಕ್ಕೆಂದು ಹೋದ ಸಂದರ್ಭದಲ್ಲಿ ತೀವ್ರ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಭೀಮಶಿ ಮದರಖಂಡಿ ಸಮೀಪದ ಹುನ್ನೂರು ಗ್ರಾಮದವರಾಗಿದ್ದ ಅವರಿಗೆ ಪತ್ನಿ, ಇಬ್ಬರು ಪುತ್ರರು, ಒರ್ವ ಪುತ್ರಿ ಸೇರಿ ಅಪಾರ ಬಂಧು ಬಳಗ ಇದೆ. ಇದೇ ವರ್ಷ ಜುಲೈ 31ರಂದು ಅವರು ನಿವೃತ್ತಿ ಹೊಂದಲಿದ್ದರು.
ಹುನ್ನೂರಿನ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ
ಜನಸ್ನೇಹಿ ಅಧಿಕಾರಿಯಾಗಿದ್ದ ಎಎಸ್‌ಐ ಮದರಖಂಡಿ ಅವರ ಸಾವಿಗೆ ಅಧಿಕಾರಿಗಳು ಹಾಗೂ ಸ್ನೇಹಿತರು ಸಂತಾಪ ಸೂಚಿಸಿದ್ದಾರೆ. ಮೃತರ ಅಂತ್ಯಕ್ರಿಯೆ ಸೋಮವಾರ ಸ್ವಗ್ರಾಮ ಹುನ್ನೂರಿನ ರುದ್ರಭೂಮಿಯಲ್ಲಿ ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ನಗರಠಾಣೆಯ ಅಧಿಕಾರಿಗಳು ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ.
ಜಮಖಂಡಿ ಪಟ್ಟಣದಲ್ಲಿ ಸೂತಕದ ವಾತಾವರಣ
ಇಂದು ಜಮಖಂಡಿ ನಗರದ ಪ್ರಮುಖ ರಸ್ತೆಯಲ್ಲಿ ಪಾರ್ಥಿವ ಶರೀರ ಮೆರವಣಿಗೆ ನಡೆಯಲಿದೆ. ನಂತರ ಜಮಖಂಡಿ ಗ್ರಾಮೀಣ ಠಾಣೆಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ನಂತರ ಸ್ವಗ್ರಾಮ ಹುನ್ನೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

