10:41 PM (IST) Jan 15

Karnataka News Live 15 January 2026 Bhatkal - ಮರ ಏರಿ ಹರಕೆ ತೀರಿಸುವ ವಿಶಿಷ್ಟ ಆಚರಣೆಗೆ ಸಾಕ್ಷಿಯಾದ ಶೇಡಬರಿ ಜಾತ್ರೆ

ಉತ್ತರಕನ್ನಡದ ಭಟ್ಕಳದಲ್ಲಿ ಪ್ರಸಿದ್ಧ ಶೇಡಬರಿ ಜಟಕ ಮಹಾಸತಿ ದೇವಿ ಜಾತ್ರೆಗೆ ವಿಧ್ಯುಕ್ತ ಚಾಲನೆ ದೊರೆತಿದೆ. ಮಕ್ಕಳಾಗದವರು ಸೇರಿದಂತೆ ಹರಕೆ ಹೊತ್ತ ಭಕ್ತರು, ತಮ್ಮ ಇಷ್ಟಾರ್ಥ ಸಿದ್ಧಿಯಾದ ಬಳಿಕ ಇಲ್ಲಿನ 'ಶೇಡಬರಿ ಮರ' ಏರಿ ಹರಕೆ ಒಪ್ಪಿಸುವುದು ಈ ಜಾತ್ರೆಯ ಪ್ರಮುಖ ವಿಶೇಷತೆಯಾಗಿದೆ.

Read Full Story
10:21 PM (IST) Jan 15

Karnataka News Live 15 January 2026 'ಅಶ್ವಿನಿ ಪರ ನಿಂತಿರುವುದು ಯಾಕೆ ಗೊತ್ತಾ?' ಟೀಕಾಕಾರರಿಗೆ ಕರವೇ ಅಧ್ಯಕ್ಷ ನಾರಾಯಣಗೌಡ ಖಡಕ್ ವಾರ್ನಿಂಗ್!

ಬಿಗ್ ಬಾಸ್ ಸ್ಪರ್ಧಿ ಅಶ್ವಿನಿ ಗೌಡ ಅವರನ್ನು ಕರವೇ ಬೆಂಬಲಿಸುತ್ತಿರುವುದಕ್ಕೆ ವ್ಯಕ್ತವಾದ ಟೀಕೆಗಳಿಗೆ ಟಿ.ಎ. ನಾರಾಯಣಗೌಡ ಪ್ರತಿಕ್ರಿಯಿಸಿದ್ದಾರೆ. ಅಶ್ವಿನಿ ಕನ್ನಡ ಹೋರಾಟಗಾರ್ತಿ ಎಂದು ಸಮರ್ಥಿಸಿಕೊಂಡ ಅವರು, ಇಲ್ಲಸಲ್ಲದ ಪೋಸ್ಟ್ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

Read Full Story
10:02 PM (IST) Jan 15

Karnataka News Live 15 January 2026 'ನಾಯಿ-ನರಿಗಳು ಕರವೇ ಬಗ್ಗೆ ಮಾತಾಡಿದ್ರೆ ಏನ್‌ ಹೇಳೋಕೆ ಆಗುತ್ತೆ..' ಸುದೀಪ್‌ ಭೇಟಿ ಕುರಿತ ವಿವಾದದ ಬಗ್ಗೆ ನಾರಾಯಣ ಗೌಡ ತಿರುಗೇಟು

Narayana Gowda Slams Trolls Over Sudeep Meeting & BBK12 Controversy ಬಿಗ್ ಬಾಸ್ ಸ್ಪರ್ಧಿ ಅಶ್ವಿನಿ ಗೌಡ ಪರ ಬ್ಯಾಟಿಂಗ್ ಹಾಗೂ ಕಿಚ್ಚ ಸುದೀಪ್ ಭೇಟಿ ಕುರಿತಾದ ವಿವಾದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣ ಗೌಡ ಅವರು ಖಡಕ್‌ ತಿರುಗೇಟು ನೀಡಿದ್ದಾರೆ.

Read Full Story
09:13 PM (IST) Jan 15

Karnataka News Live 15 January 2026 'ನನ್‌ ಮದ್ವೆಗೆ ಏನಾದ್ರೂ ಪ್ರಾಬ್ಲಮ್‌ ಆದ್ರೆ ಗಿಲ್ಲಿನೇ ಕಾರಣ..' ಬಿಗ್‌ಬಾಸ್‌ನಲ್ಲೇ ಅಫರ್‌ ಕೊಟ್ರಾ ಕಾವ್ಯಾ?

ಬಿಗ್‌ಬಾಸ್‌ ಫಿನಾಲೆ ವಾರದಲ್ಲಿ ಗಿಲ್ಲಿ ಮತ್ತು ಕಾವ್ಯಾ ಶೈವ ನಡುವಿನ ಬಾಂಧವ್ಯ ಹೊಸ ತಿರುವು ಪಡೆದಿದೆ. ಗಿಲ್ಲಿ ಕಣ್ಣು ಹೊಡೆದಿದ್ದಕ್ಕೆ ಪ್ರತಿಕ್ರಿಯಿಸಿದ ಕಾವ್ಯಾ, ತನ್ನ ಮದುವೆಗೆ ಗಿಲ್ಲಿಯೇ ಕಾರಣವಾದರೆ ಎಂಬ ಮಾತುಗಳನ್ನಾಡಿದ್ದು, ಇವರಿಬ್ಬರ ನಡುವಿನ ಸಂಭಾಷಣೆ ಪ್ರೀತಿಯ ಸಾಧ್ಯತೆಯನ್ನು ಸೂಚಿಸುತ್ತಿದೆ.
Read Full Story
08:40 PM (IST) Jan 15

Karnataka News Live 15 January 2026 ಸಚಿವ ದಿನೇಶ್‌ ಗುಂಡೂರಾವ್‌ ಕಾರ್ಯಕ್ರಮದ ವೇಳೆ ಅಗ್ನಿ ಅವಘಡ

ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಭಾಗವಹಿಸಿದ್ದ ಚಿಕ್ಕಪೇಟೆಯ ಸಂಕ್ರಾಂತಿ ಹಬ್ಬದ ಕಾರ್ಯಕ್ರಮದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಪಟಾಕಿ ಕಿಡಿಯಿಂದ ಫ್ಲೆಕ್ಸ್‌ ಬ್ಯಾನರ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಸ್ಥಳೀಯರ ಸಮಯಪ್ರಜ್ಞೆಯಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದೆ.
Read Full Story
07:15 PM (IST) Jan 15

Karnataka News Live 15 January 2026 ರಂಧ್ರ ಬಿದ್ದು ತುಂಗಭದ್ರಾ ನದಿಯಲ್ಲಿ ನಿಂತ ನಾಡದೋಣಿ, ಬರೋಬ್ಬರಿ 3 ಜಿಲ್ಲೆಗಳ ಸಂಪರ್ಕ ಕಡಿತ! ಜನರ ಪರದಾಟ

 ಮಾಗಳ-ವಿಠ್ಠಲಾಪುರ ಮಧ್ಯೆ ತುಂಗಭದ್ರಾ ನದಿಯಲ್ಲಿ ಸಂಚರಿಸುತ್ತಿದ್ದ ನಾಡದೋಣಿ 15 ದಿನಗಳಿಂದ ಸ್ಥಗಿತಗೊಂಡಿದೆ. ದೋಣಿಯ ತಳದಲ್ಲಿ ರಂಧ್ರ ಬಿದ್ದಿರುವುದರಿಂದ ಪ್ರಯಾಣಿಕರು 30-40 ಕಿ.ಮೀ. ಸುತ್ತುವರಿದು ಪ್ರಯಾಣಿಸುವಂತಾಗಿದ್ದು, ಇಲಾಖೆ ದುರಸ್ತಿಗೆ ಮುಂದಾಗಿಲ್ಲವೆಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read Full Story
06:55 PM (IST) Jan 15

Karnataka News Live 15 January 2026 ಬರೋಬ್ಬರಿ 12 ದಿನವಾದ್ರೂ ಹಿಪ್ಪರಗಿ ಬ್ಯಾರೇಜ್ ದುರಸ್ಥಿಗೆ ಹರಸಾಹಸ, ನೀರು ಸೋರಿಕೆಯಾಗಿ ಅರ್ಧದಷ್ಟು ಪೋಲು!

ಹಿಪ್ಪರಗಿ ಬ್ಯಾರೇಜ್‌ನ ಗೇಟ್ ನಂ.22ರ ದುರಸ್ತಿ ಕಾರ್ಯ 12 ದಿನಗಳಿಂದ ಮುಂದುವರೆದಿದ್ದು, ನೀರಿನ ಸೋರಿಕೆ ಸಂಪೂರ್ಣ ನಿಂತಿಲ್ಲ. ಈ ಅವಘಡದಿಂದ 3.5 ಟಿಎಂಸಿ ನೀರು ಪೋಲಾಗಿದ್ದು, ಎಲ್ಲಾ 22 ಗೇಟ್‌ಗಳನ್ನು ಬದಲಾಯಿಸಲು ಸ್ಥಳೀಯ ಮುಖಂಡರು ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.

Read Full Story
06:26 PM (IST) Jan 15

Karnataka News Live 15 January 2026 ಕೆ.ಎಸ್. ಈಶ್ವರಪ್ಪ ಬಿಜೆಪಿ ವಾಪಸಾತಿ, ನನ್ನ ಮನಸ್ಸಲ್ಲೂ ಇದೆ ಬಸನಗೌಡ ಯತ್ನಾಳ್ ಮನಸ್ಸಲ್ಲೂ ಇದೆ ಅಂದ್ರು!

ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಅವರು ಬಿಜೆಪಿಗೆ ಮರಳುವ ಇಂಗಿತವನ್ನು ವ್ಯಕ್ತಪಡಿಸಿದ್ದು, ತಾವೂ ಹಾಗೂ ಬಸನಗೌಡ ಪಾಟೀಲ ಯತ್ನಾಳ್ ಅವರ ಮನಸ್ಸಲ್ಲೂ ಇದೇ ಇದೆ ಎಂದಿದ್ದಾರೆ. ಪಕ್ಷದಲ್ಲಿ ಬದಲಾವಣೆ ತರಲು ಹೊರಬಂದಿರುವುದಾಗಿ ಹೇಳಿದರು,

Read Full Story
06:08 PM (IST) Jan 15

Karnataka News Live 15 January 2026 Bigg Bossಗೆ ವೋಟ್​ ಮಾಡುವ ಅಭಿಮಾನಿಗಳಿಗೆ 'ಲಕ್ಷ್ಮೀ ನಿವಾಸ' ನಟಿ ಹೇಳಿರೋ ಕಿವಿಮಾತೇನು?

ಲಕ್ಷ್ಮೀ ನಿವಾಸ ಧಾರಾವಾಹಿ ಖ್ಯಾತಿಯ ನಟಿ ಅಶ್ವಿನಿ ಆರ್, ಬಿಗ್‌ಬಾಸ್‌ ವೋಟಿಂಗ್ ಕುರಿತು ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ್ದಾರೆ. ದೇಶದ ಚುನಾವಣೆಗಳಲ್ಲೂ ಇದೇ ರೀತಿ ಮತ ಚಲಾಯಿಸಲು ಪ್ರೇರೇಪಿಸಿದ್ದು, ಅವರ ನಟನಾ ವೃತ್ತಿ ಮತ್ತು ಬ್ಯೂಟಿ ಸಲೂನ್ ವ್ಯವಹಾರದ ಬಗ್ಗೆಯೂ ಈ ಲೇಖನ ಮಾಹಿತಿ ನೀಡುತ್ತದೆ.
Read Full Story
05:59 PM (IST) Jan 15

Karnataka News Live 15 January 2026 ಕೋಟ್ಯಾಂತರ ಮೌಲ್ಯದ ಚಿನ್ನ ದರೋಡೆ ಮಾಡಿ ಎಸ್ಕೇಪ್ - ಆರೋಪಿ ಪ್ರೀತ್ ಪನ್ಸೇರ್ ಗಡೀಪಾರಿಗೆ ಭಾರತಕ್ಕೆ ಕೆನಡಾ ಮನವಿ

2023ರಲ್ಲಿ ಕೆನಡಾದ ಟೊರಾಂಟೊ ವಿಮಾನ ನಿಲ್ದಾಣದಲ್ಲಿ ನಡೆದ 20 ಮಿಲಿಯನ್ ಡಾಲರ್ ಮೌಲ್ಯದ ಚಿನ್ನದ ದರೋಡೆ ಪ್ರಕರಣದ ಮುಖ್ಯ ಆರೋಪಿ, ಭಾರತೀಯ ಮೂಲದ ಸಿಮ್ರಾನ್ ಪ್ರೀತ್ ಪನೇಸರ್‌ನನ್ನು ಹಸ್ತಾಂತರಿಸುವಂತೆ ಕೆನಡಾ ಸರ್ಕಾರ ಭಾರತಕ್ಕೆ ಅಧಿಕೃತವಾಗಿ ಮನವಿ ಮಾಡಿದೆ. 

Read Full Story
05:47 PM (IST) Jan 15

Karnataka News Live 15 January 2026 ಕಾರುಣ್ಯ ರಾಮ್ ತಂಗಿಯ ಬೆಟ್ಟಿಂಗ್ ಆ್ಯಪ್‌ ಗೀಳು, ಮೈ ತುಂಬಾ ಸಾಲ, ಸಂಪಾದಿಸಿದ ಗೌರವ ತಂಗಿಯಿಂದ ಹೋಯ್ತು ಮಾಧ್ಯಮದ ಮುಂದೆ ಕಣ್ಣೀರಿಟ್ಟ ನಟಿ!

ನಟಿ ಕಾರುಣ್ಯ ರಾಮ್,ತಮ್ಮ ಸಹೋದರಿ ಸಮೃದ್ಧಿ ರಾಮ್ ಅವರ ಬೆಟ್ಟಿಂಗ್ ಆ್ಯಪ್ ಚಟ ಮತ್ತು ಸಾಲ, ವಂಚನೆ ಹಾಗೂ ಮಾನಸಿಕ ಕಿರುಕುಳದ ವಿರುದ್ಧ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ. ಸಮೃದ್ಧಿ ಸುಮಾರು 25 ಲಕ್ಷ ಸಾಲ ಮಾಡಿ ಮನೆ ಬಿಟ್ಟು ಹೋಗಿದ್ದು, ಆಕೆ ಮಾಡಿದ ತಪ್ಪಿಗೆ ಇಂದು ಬೆದರಿಕೆ ಬರುತ್ತಿದೆ ಎಂದಿದ್ದಾರೆ.

Read Full Story
05:39 PM (IST) Jan 15

Karnataka News Live 15 January 2026 ನೀವು ಸಣ್ಣ ಸಣ್ಣ ವಿಷಯಕ್ಕೂ ಬೇಜಾರು ಮಾಡ್ಕೋತೀರಾ? - ಇಲ್ಲಿವೆ 5 ಮನೋವೈಜ್ಞಾನಿಕ ಕಾರಣಗಳು

ಜೀವನದಲ್ಲಿ ಒಳ್ಳೆ ಮತ್ತು ಕೆಟ್ಟ ಘಟನೆಗಳು ನಡೆಯುತ್ತಲೇ ಇರುತ್ತವೆ. ಕೆಲವರು ಬೇಗ ಮರೆತರೆ, ಇನ್ನು ಕೆಲವರು ಮನಸ್ಸಲ್ಲೇ ಇಟ್ಟುಕೊಂಡು ಕೊರಗುತ್ತಾರೆ. ಸಣ್ಣ ವಿಷಯಗಳಿಗೂ ಬೇಜಾರಾಗುತ್ತಾರೆ. ಯಾಕೆ ಹೀಗೆ? ಇದರ ಬಗ್ಗೆ ಮನೋವಿಜ್ಞಾನ ಏನು ಹೇಳುತ್ತೆ? ಇಲ್ಲಿ ಓದಿ.

Read Full Story
05:26 PM (IST) Jan 15

Karnataka News Live 15 January 2026 ಬಿಗ್ ಬಾಸ್ ಟ್ರೋಫಿಗೂ ಮುನ್ನ ಇತಿಹಾಸ ಸೃಷ್ಟಿಸಿದ ಗಿಲ್ಲಿ ನಟ - ಹಳ್ಳಿ-ಹಳ್ಳಿಗೂ ಡಂಗೂರ, ಎಂಎಲ್‌ಎ ಕೂಡ ಬಿಡ್ಲಿಲ್ಲ!

ಬಿಗ್ ಬಾಸ್ ಸೀಸನ್ 12ರ ಫಿನಾಲೆ ಸಮೀಪಿಸುತ್ತಿದ್ದಂತೆ, ಮಂಡ್ಯದ ಗಿಲ್ಲಿ ನಟನ ಪರವಾಗಿ ಹಳ್ಳಿ-ಹಳ್ಳಿಗಳಲ್ಲಿ ಡಂಗೂರ ಸಾರುವ ಮೂಲಕ ಬೃಹತ್ ವೋಟಿಂಗ್ ಅಭಿಯಾನ ನಡೆಯುತ್ತಿದೆ. ಶಾಸಕರೂ ಸೇರಿದಂತೆ ಜನಸಾಮಾನ್ಯರು ಗಿಲ್ಲಿ ನಟನ ಗೆಲುವಿಗಾಗಿ ಕೈಜೋಡಿಸಿದ್ದು, ಬಿಗ್ ಬಾಸ್ ಇತಿಹಾಸದಲ್ಲೇ ಹೊಸ ದಾಖಲೆಯಾಗಿದೆ.

Read Full Story
05:21 PM (IST) Jan 15

Karnataka News Live 15 January 2026 Bigg Boss ಗಿಲ್ಲಿ ಬಗ್ಗೆ ಅಂದೇ ಭವಿಷ್ಯ ನುಡಿದಿದ್ದ ನಟ ಜಗ್ಗೇಶ್​ - ಮಾತು ನಿಜವಾಗೋಯ್ತು- ವಿಡಿಯೋ ವೈರಲ್​

ಬಿಗ್​ಬಾಸ್​ನ ಪ್ರಬಲ ಸ್ಪರ್ಧಿ ಎನಿಸಿರುವ ಗಿಲ್ಲಿ ನಟನ ಕುರಿತು ನಟ ಜಗ್ಗೇಶ್ ಈ ಹಿಂದೆ ಕಾಮಿಡಿ ಕಿಲಾಡಿ ವೇದಿಕೆಯಲ್ಲಿ ಆಡಿದ್ದ ಮಾತುಗಳು ವೈರಲ್ ಆಗಿವೆ. ಗಿಲ್ಲಿ ನಟನ ಬಗ್ಗೆ ಅಂದು ಜಗ್ಗೇಶ್ ನುಡಿದಿದ್ದ ಭವಿಷ್ಯ ಇದೀಗ ನಿಜವಾಗುತ್ತಿದೆ ಎಂದು ಅಭಿಮಾನಿಗಳು ವಿಡಿಯೋ ಹಂಚಿಕೊಳ್ಳುತ್ತಿದ್ದಾರೆ.

Read Full Story
04:54 PM (IST) Jan 15

Karnataka News Live 15 January 2026 ಬೆಳ್ತಂಗಡಿ ಬಾಲಕ ಸುಮಂತ್ ಸಾವು ಪ್ರಕರಣಕ್ಕೆ ರೋಚಕ ಟ್ವಿಸ್ಟ್ - ಶವ ಪತ್ತೆಯಾದ ಕೆರೆಯಲ್ಲಿ ಕತ್ತಿ ಟಾರ್ಚ್ ಪತ್ತೆ

ಧನುರ್ಮಾಸದ ಪೂಜೆಗೆಂದು ಹೋದ ಬೆಳ್ತಂಗಡಿಯ 16 ವರ್ಷದ ಬಾಲಕ ಸುಮಂತ್, ನಿಗೂಢವಾಗಿ ನಾಪತ್ತೆಯಾಗಿ ನಂತರ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಮರಣೋತ್ತರ ಪರೀಕ್ಷೆಯಲ್ಲಿ ತಲೆಗೆ ಹೊಡೆದಿರುವುದು ದೃಢಪಟ್ಟಿದ್ದು, ಇದೊಂದು ಕೊಲೆ ಎಂದು ಪೊಲೀಸರು ಖಚಿತಪಡಿಸಿದ್ದು, ಆರೋಪಿಗಾಗಿ ಬಲೆ ಬೀಸಿದ್ದಾರೆ.

Read Full Story
04:34 PM (IST) Jan 15

Karnataka News Live 15 January 2026 Bigg Bossನಲ್ಲಿ ಊಹಿಸದ ತಿರುವು; ತಬ್ಬಿ ಭಾವುಕರಾದ ಹಾವು-ಮುಂಗುಸಿ! ಗಿಲ್ಲಿಗೆ ಅಶ್ವಿನಿ ಬಹು ಪರಾಕ್​

ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆ ಹತ್ತಿರವಾಗುತ್ತಿದ್ದಂತೆ, ಸದಾ ಹಾವು-ಮುಂಗುಸಿಯಂತಿದ್ದ ಅಶ್ವಿನಿ ಗೌಡ ಮತ್ತು ಗಿಲ್ಲಿ ನಟ ಒಂದಾಗಿದ್ದಾರೆ. ಏಕವಚನದಲ್ಲಿ ಮಾತನಾಡಿದ್ದಕ್ಕೆ ಗಿಲ್ಲಿ ನಟ ಅಶ್ವಿನಿಯವರ ಕ್ಷಮೆ ಕೇಳಿದರೆ, ಅಶ್ವಿನಿ ಧನ್ಯವಾದ ತಿಳಿಸಿದ್ದಾರೆ. ಆಗಿದ್ದೇನು?

Read Full Story
04:28 PM (IST) Jan 15

Karnataka News Live 15 January 2026 ಬೆಂಗಳೂರಿನಿಂದ ಮುಂಬೈ ಬರೀ 18 ಗಂಟೆಯಲ್ಲೇ ಪ್ರಯಾಣ? ಶೀಘ್ರದಲ್ಲೇ ಬರಲಿದೆ ದುರಂತೋ ಎಕ್ಸ್‌ಪ್ರೆಸ್‌..!

Bengaluru to Mumbai in 18 Hours: Duronto Express Premium Service Soon ಕೆಎಸ್ಆರ್ ಬೆಂಗಳೂರನ್ನು ಸಿಎಸ್ಎಂಟಿ ಮುಂಬೈಗೆ 18 ಗಂಟೆಗಳಲ್ಲಿ ಸಂಪರ್ಕಿಸುವ ಪ್ರೀಮಿಯಂ ರೈಲು ಸೇವೆ ಆರಂಭವಾಗುವ ಸಾಧ್ಯತೆ ಇದೆ.

Read Full Story
04:22 PM (IST) Jan 15

Karnataka News Live 15 January 2026 ವಿಜಯ್ ಹಜಾರೆ ಸೆಮಿಫೈನಲ್ - ಒಂದಂಕಿ ಮೊತ್ತಕ್ಕೆ ಮಯಾಂಕ್, ಪಡಿಕ್ಕಲ್ ಔಟ್; ಮತ್ತೆ ಕರ್ನಾಟಕಕ್ಕೆ ಆಸರೆಯಾದ ಅನುಭವಿ ಕ್ರಿಕೆಟಿಗ!

ವಿಜಯ್ ಹಜಾರೆ ಟ್ರೋಫಿ ಸೆಮಿಫೈನಲ್‌ನಲ್ಲಿ ವಿದರ್ಭ ವಿರುದ್ಧ ಕರ್ನಾಟಕ ಆರಂಭಿಕ ಆಘಾತ ಅನುಭವಿಸಿತು. ನಾಯಕ ಮಯಾಂಕ್ ಮತ್ತು ಪಡಿಕ್ಕಲ್ ವಿಫಲವಾದರೂ, ಕರುಣ್ ನಾಯರ್ (76) ಮತ್ತು ಕೃಷ್ಣನ್ ಶ್ರೀಜಿತ್ (51*) ಅವರ ಜವಾಬ್ದಾರಿಯುತ ಆಟದಿಂದ ತಂಡ ಚೇತರಿಸಿಕೊಂಡು ಬೃಹತ್ ಮೊತ್ತದತ್ತ ಸಾಗಿತು.
Read Full Story
04:18 PM (IST) Jan 15

Karnataka News Live 15 January 2026 ಬಿಗ್ ಬಾಸ್ ಮನೆಗೆ ಬಂದು ಗುಣಗಳನ್ನೇ ಬದಲಿಸಿಕೊಂಡ ಸ್ಪರ್ಧಿ; ನಾನು ವಿಲನ್ ಆಗ್ತೀನಿ ಸಪೋರ್ಟ್ ಮಾಡಿ ಎಂದ ಮಹಾಶಯ!

ಬಿಗ್ ಬಾಸ್ ಸೀಸನ್ 12ರ ಸ್ಪರ್ಧಿಯೊಬ್ಬರು ತಾನು ಸಿನಿಮಾಗಳಲ್ಲಿ ದೊಡ್ಡ ವಿಲನ್ ಆಗ್ತೇನೆ. ಆಗಲೂ ನೀವು ನನಗೆ ಬೆಂಬಲಿಸಬೇಕು ಎಂದು ಬಿಗ್ ಬಾಸ್ ವೀಕ್ಷಕರ ಮುಂದೆ ಬೆಂಬಲವನ್ನು ಕೋರಿದ್ದಾರೆ. ಆದರೆ ಈ ವ್ಯಕ್ತಿ ಮನೆಯೊಳಗೆ ಬರುವಾಗ ಇದ್ದ ಗುಣಗಳನ್ನು ಬದಲಿಸಿಕೊಂಡಿದ್ದಾರೆ.

Read Full Story
04:01 PM (IST) Jan 15

Karnataka News Live 15 January 2026 ಪೌರಾಯುಕ್ತೆಗೆ ಅಶ್ಲೀಲ ಪದ ಬಳಸಿ ಜೀವ ಬೆದರಿಕೆ, ಕೇಸ್ ದಾಖಲಾಗ್ತಿದ್ದಂತೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಎಸ್ಕೇಪ್!

ಶಿಡ್ಲಘಟ್ಟದಲ್ಲಿ ಫ್ಲೆಕ್ಸ್ ತೆರವು ವಿಚಾರವಾಗಿ ಪೌರಾಯುಕ್ತೆಗೆ ಅಶ್ಲೀಲವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ ವಿರುದ್ಧ ಎರಡು ಎಫ್‌ಐಆರ್‌ಗಳು ದಾಖಲಾಗಿವೆ. ಪ್ರಕರಣ ದಾಖಲಾಗುತ್ತಿದ್ದಂತೆ ರಾಜೀವ್ ಗೌಡ ತಲೆಮರೆಸಿಕೊಂಡಿದ್ದಾರೆ.

Read Full Story