- Home
- Entertainment
- TV Talk
- Bigg Boss ಗಿಲ್ಲಿ ಬಗ್ಗೆ ಅಂದೇ ಭವಿಷ್ಯ ನುಡಿದಿದ್ದ ನಟ ಜಗ್ಗೇಶ್: ಮಾತು ನಿಜವಾಗೋಯ್ತು- ವಿಡಿಯೋ ವೈರಲ್
Bigg Boss ಗಿಲ್ಲಿ ಬಗ್ಗೆ ಅಂದೇ ಭವಿಷ್ಯ ನುಡಿದಿದ್ದ ನಟ ಜಗ್ಗೇಶ್: ಮಾತು ನಿಜವಾಗೋಯ್ತು- ವಿಡಿಯೋ ವೈರಲ್
ಬಿಗ್ಬಾಸ್ನ ಪ್ರಬಲ ಸ್ಪರ್ಧಿ ಎನಿಸಿರುವ ಗಿಲ್ಲಿ ನಟನ ಕುರಿತು ನಟ ಜಗ್ಗೇಶ್ ಈ ಹಿಂದೆ ಕಾಮಿಡಿ ಕಿಲಾಡಿ ವೇದಿಕೆಯಲ್ಲಿ ಆಡಿದ್ದ ಮಾತುಗಳು ವೈರಲ್ ಆಗಿವೆ. ಗಿಲ್ಲಿ ನಟನ ಬಗ್ಗೆ ಅಂದು ಜಗ್ಗೇಶ್ ನುಡಿದಿದ್ದ ಭವಿಷ್ಯ ಇದೀಗ ನಿಜವಾಗುತ್ತಿದೆ ಎಂದು ಅಭಿಮಾನಿಗಳು ವಿಡಿಯೋ ಹಂಚಿಕೊಳ್ಳುತ್ತಿದ್ದಾರೆ.

ವಿನ್ನರ್ ಇನ್ನಷ್ಟೇ ತಿಳಿಯಬೇಕಿದೆ...
ಬಿಗ್ಬಾಸ್ನಲ್ಲಿ (Bigg Boss) ವಿನ್ನರ್ ಯಾರಾಗುತ್ತಾರೆ ಎನ್ನುವ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ. ಆದರೆ ಇದಾಗಲೇ ಲಕ್ಷಾಂತರ ಮಂದಿ ಅಭಿಮಾನಿಗಳ ಮನಸ್ಸನ್ನು ಗೆದ್ದು ಬೀಗಿದವರು ಗಿಲ್ಲಿ ನಟ (Gilli Nata). ಇವರೇ ವಿನ್ನರ್ ಎಂದು ಬಿಗ್ಬಾಸ್ನಿಂದ ಹೊರಬಂದಿರುವ ಸ್ಪರ್ಧಿಗಳೂ ಹೇಳಿಯಾಗಿದೆ.
ಏನೇ ಆದರೂ ಗಿಲ್ಲಿ...
ಆದರೆ, ಕೊನೆ ಕ್ಷಣದವರೆಗೂ ಏನೂ ಹೇಳಲು ಆಗದು. ಯಾವಾಗ ಬೇಕಾದರೂ ಉಲ್ಟಾ ಹೊಡೆಯಬಹುದು. ಗೆಲುವು ಯಾರ ಕಡೆಗಾದರೂ ಆಗಬಹುದು. ಬಿಗ್ಬಾಸ್ ಮನಸ್ಸಿನಲ್ಲಿ ಏನು ಇದ್ಯೋ ಹೇಳುವುದೂ ಕಷ್ಟ. ವಿನ್ನರ್ ಯಾರೇ ಆಗಲಿ, ಗಿಲ್ಲಿ ನಟ ಮಾತ್ರ ತಮ್ಮ ಫ್ಯಾನ್ಸ್ ಸಂಖ್ಯೆಯನ್ನು ನೂರಾರು ಪಟ್ಟು ಹೆಚ್ಚಿಸಿಕೊಂಡದ್ದಂತೂ ಸುಳ್ಳಲ್ಲ.
ನಟ ಜಗ್ಗೇಶ್ ಮಾತು ವೈರಲ್
ಇದರ ನಡುವೆಯೇ, ನಟ ಜಗ್ಗೇಶ್ (Actor Jaggesh about Gilli Nata) ಅವರು ಕಾಮಿಡಿ ಕಿಲಾಡಿ ಸಂದರ್ಭದಲ್ಲಿ ಗಿಲ್ಲಿ ನಟನ ಬಗ್ಗೆ ಹೇಳಿದ್ದ ಮಾತೊಂದು ಇದೀಗ ವೈರಲ್ ಆಗುತ್ತಿದೆ. ಅವರು ಅಂದೇ ಗಿಲ್ಲಿಯ ಬಗ್ಗೆ ಭವಿಷ್ಯ ನುಡಿದಿದ್ದರು ಎಂದು ಹೇಳಲಾಗುತ್ತಿದೆ.
ಜಗ್ಗೇಶ್ ಮಾತು ನಿಜವಾಯ್ತು
ಕಾಮಿಡಿ ಕಿಲಾಡಿಯಲ್ಲಿ ಗಿಲ್ಲಿ ನಟನ ಪರ್ಫಾಮೆನ್ಸ್ ನೋಡಿದ್ದ ನಟ ಜಗ್ಗೇಶ್ ಅವರು, ಬರುವ ವರ್ಷ ಇವನು ಛತ್ರಿ ಹಿಡಿಯೋಕೆ ಒಬ್ಬರನ್ನ ಇಟ್ಕೊಂಡು, ಜೊತೆಗೆ ನಾಲ್ಕು ಜನ ಬಾಡಿ ಗಾರ್ಡ್ ಹಾಕೊಂಡು ಓಡಾಡೋ ಸ್ಟೇಜ್‌ಗೆ ಬರ್ತಾನೆ ಕಣಯ್ಯ ಎಂದಿದ್ದರು. ಇದೀಗ ನಿಜವಾಗ್ತಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹೇಳಲಾಗುತ್ತಿದೆ.
ರಾಯರ ಭಕ್ತರು
ಜಗ್ಗೇಶ್ ಅವರು ರಾಯರ ಭಕ್ತರು. ಅವರು ಮನಸಾರೆ ಹಾರೈಸಿದರೆ ಖಂಡಿತ ನಿಜ ಆಗುತ್ತೆ. ಈ ಬಾರಿ ಬಿಗ್ ಬಾಸ್ ಗೆಲುವು ಖಂಡಿತವಾಗಿಯೂ ಗಿಲ್ಲಿ ಅವರಿಗೇನೇ ಎಂದು ಹಲವರು ಈ ವಿಡಿಯೋಗೆ ಕಮೆಂಟ್ ಹಾಕುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

