Affordable Cars Under Rs 5 Lakh in India: ತಿಂಗಳಿಗೆ ₹30,000 ಸಂಬಳವಿದ್ದರೂ, ಸ್ಮಾರ್ಟ್ ಆರ್ಥಿಕ ಯೋಜನೆ ಮತ್ತು ಸಾಲದ ಸೌಲಭ್ಯಗಳ ಮೂಲಕ ಹೊಸ ಕಾರು ಖರೀದಿಸುವುದು ಸಾಧ್ಯ. ಈ ಲೇಖನವು 2025ರಲ್ಲಿ ಲಭ್ಯವಿರುವ ₹5 ಲಕ್ಷದೊಳಗಿನ ಕಾರುಗಳ ಮಾಹಿತಿ ನೀಡಲಾಗಿದೆ.
- Home
- News
- State
- State News Live: ₹30,000 ಸಂಬಳದಲ್ಲಿ ನೀವು ಯಾವ ಕಾರನ್ನು ಖರೀದಿಸಬಹುದು? ಇಲ್ಲಿವೆ ಕಡಿಮೆ ಬೆಲೆಯ ಕಾರುಗಳು!
State News Live: ₹30,000 ಸಂಬಳದಲ್ಲಿ ನೀವು ಯಾವ ಕಾರನ್ನು ಖರೀದಿಸಬಹುದು? ಇಲ್ಲಿವೆ ಕಡಿಮೆ ಬೆಲೆಯ ಕಾರುಗಳು!

ಬೆಂಗಳೂರು (ನ.12): ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಿದ ವಿಡಿಯೋ ವಿಚಾರದಲ್ಲಿ ಷಡ್ಯಂತ್ರ ಇರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ಕೇಸ್ನಲ್ಲಿ ನಮ್ಮನ್ನು ಸಿಲುಕಿಸಲು ಕೈದಿಗಳ ಕೈಗೆ ಮೊಬೈಲ್ ನೀಡಲಾಗಿದೆ ಎಂದು ಕಾರಾಗೃಹ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಈ ಸಂಬಂಧಪಟ್ಟ ವರದಿಯನ್ನು ಸರ್ಕಾರಕ್ಕೆ ನೀಡಲಾಗಿದೆ. ಆರೋಪಿಗಳು ನಾವು ಮೊಬೈಲ್ ಬಳಸಿಲ್ಲ ಎಂದು ಹೇಳಿದ್ದರೆ, ವಿಕೃತಕಾಮಿ ಉಮೇಶ್ ರೆಡ್ಡಿ ತಾನು ಮೊಬೈಲ್ ಬಳಕೆ ಮಾಡಿದ್ದು ನಿಜ ಎಂದು ಹೇಳಿದ್ದಾರೆ.ಅದರೊಂದಿಗೆ ಇಂದಿನ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್ಲೈವ್ ಬ್ಲಾಗ್
Karnataka News Live 12th November:₹30,000 ಸಂಬಳದಲ್ಲಿ ನೀವು ಯಾವ ಕಾರನ್ನು ಖರೀದಿಸಬಹುದು? ಇಲ್ಲಿವೆ ಕಡಿಮೆ ಬೆಲೆಯ ಕಾರುಗಳು!
Karnataka News Live 12th November:ಭಟ್ಕಳ - ಡಿಸ್ಕೌಂಟ್ ಆಸೆ ತೋರಿಸಿ 300 ಜನರಿಗೆ ಪಂಗನಾಮ; ತಮಿಳುನಾಡು ಮೂಲದ ಮೂವರು ಅರೆಸ್ಟ್
ಭಟ್ಕಳದಲ್ಲಿ 'ಗ್ಲೋಬಲ್ ಎಂಟರ್ ಪ್ರೈಸಸ್' ಹೆಸರಿನಲ್ಲಿ ಡಿಸ್ಕೌಂಟ್ ಆಫರ್ ನೀಡಿ 300ಕ್ಕೂ ಹೆಚ್ಚು ಜನರಿಂದ ಲಕ್ಷಾಂತರ ರೂಪಾಯಿ ಮುಂಗಡ ಹಣ ಪಡೆದು ವಂಚಿಸಿದ್ದ ತಮಿಳುನಾಡು ಮೂಲದ ಮೂವರು ಆರೋಪಿಗಳನ್ನು ಭಟ್ಕಳ ಶಹರ ಠಾಣೆ ಪೊಲೀಸರು ಒಂದು ವಾರದೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Karnataka News Live 12th November:ಲೋನ್ ಮಾಡಿ ಐಫೋನ್ ಖರೀದಿ, ಕಂತು ಕಟ್ಟದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ!
Palakkad Man Brutally Attacked Over iPhone Loan Default: ಮೊಬೈಲ್ ಫೋನ್ ಲೋನ್ ಕಂತು ಕಟ್ಟಿಲ್ಲ ಅಂತ ಪಾಲಕ್ಕಾಡ್ ಮೂಲದ ಯುವಕನಿಗೆ ಖಾಸಗಿ ಫೈನಾನ್ಸ್ ಕಂಪನಿ ಉದ್ಯೋಗಿ ಮನಬಂದಂತೆ ಥಳಿಸಿದ್ದಾನೆ. ಹಲ್ಲೆಯಿಂದ ಯುವಕನ ತಲೆಬುರುಡೆ ಮತ್ತು ದವಡೆಗೆ ಗಂಭೀರ ಗಾಯಗಳಾಗಿವೆ.
Karnataka News Live 12th November:ಬೆಂಗಳೂರು - 10 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿ ಆರೋಪ - ಸತ್ವ ಗ್ರೂಪ್ ಅಶ್ವಿನ್ ಸಂಚೆಟಿ ಅರೆಸ್ಟ್!
ಸಾವಿರಾರು ಕೋಟಿ ಮೌಲ್ಯದ 10 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪದ ಮೇಲೆ ಸತ್ವ ಗ್ರೂಪ್‌ನ ಅಶ್ವಿನ್ ಸಂಚೆಟಿಯನ್ನು ಅವಲಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. 1978ರಲ್ಲಿ ಜಮೀನು ಖರೀದಿಸಿದ್ದ ಮೂಲ ಮಾಲೀಕರಾದ ರಾಧ ಎಂಬುವವರು ಇತ್ತೀಚೆಗೆ ಪರಿಶೀಲಿಸಿದಾಗ ಈ ವಂಚನೆ ಬೆಳಕಿಗೆ ಬಂದಿದೆ.
Karnataka News Live 12th November:ವಿದ್ಯಾರ್ಥಿಗಳ ವಿದೇಶ ಪ್ರಯಾಣ ಮುಂಗಡ ಹಣ ಅಕ್ರಮ - ಮೂವರ ಬಂಧನ; 1.9 ಕೋಟಿ ಲೂಟಿ ಬೆಳಕಿಗೆ!
ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ)ಯಲ್ಲಿ ವಿದ್ಯಾರ್ಥಿಗಳ ವಿದೇಶ ಪ್ರಯಾಣದ ಹಣದಲ್ಲಿ 1.9 ಕೋಟಿ ರೂ. ವಂಚಿಸಿದ ಆರೋಪದ ಮೇಲೆ ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು, ನಕಲಿ ದಾಖಲೆ ಸೃಷ್ಟಿಸಿ ಹೇಗೆ ವಂಚಿಸುತ್ತಿದ್ದರು ಗೊತ್ತೇ?
Karnataka News Live 12th November:ದೆಹಲಿ ಸ್ಫೋಟದಲ್ಲಿ ಐ20 ಜೊತೆ ಮತ್ತೊಂದು ಕೆಂಪು ಕಾರು, ಶಂಕಿತ ಉಗ್ರ ಡಾ.ಉಮರ್ ಇಕೋ ಸ್ಪೋರ್ಟ್ ಪತ್ತೆ
ದೆಹಲಿ ಸ್ಫೋಟದಲ್ಲಿ ಐ20 ಜೊತೆ ಮತ್ತೊಂದು ಕೆಂಪು ಕಾರು, ಶಂಕಿತ ಉಗ್ರ ಡಾ.ಉಮರ್ ಇಕೋ ಸ್ಪೋರ್ಟ್ ಪತ್ತೆ ಮಾಡಲಾಗಿದೆ. ಸ್ಫೋಟ ಪ್ರಕರಣದಲ್ಲಿ ರೆಡ್ ಇಕೋ ಸ್ಪೋರ್ಟ್ ಪ್ರಮುಖ ಪಾತ್ರವಹಿಸಿರುವ ಕುರಿತು ಪೊಲೀಸರು ಕೆಲ ದಾಖಲೆ ಸಂಗ್ರಹಿಸಿದ್ದಾರೆ.
Karnataka News Live 12th November:ದೆಹಲಿ ಸ್ಫೋಟ ಪ್ರಕರಣಕ್ಕೆ ಇಂಟಲಿಜೆನ್ಸ್, ಭದ್ರತಾ ವ್ಯವಸ್ಥೆ ಫೇಲ್ಯೂರ್ ಕಾರಣ - ಸಂಸದೆ ಪ್ರಭಾ ಮಲ್ಲಿಕಾರ್ಜುನ್
ದೆಹಲಿಯ ಚಾಂದನಿ ಚೌಕ್‌ನಲ್ಲಿ ನಡೆದ ಕಾರ್ ಬಾಂಬ್ ಸ್ಫೋಟದಲ್ಲಿ 13 ಮಂದಿ ಮೃತಪಟ್ಟಿದ್ದು, ಇದೊಂದು ಗುಪ್ತಚರ ಮತ್ತು ಭದ್ರತಾ ವೈಫಲ್ಯ ಎಂದು ಕಾಂಗ್ರೆಸ್ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಖಂಡಿಸಿದ್ದಾರೆ. ಈ ಕೃತ್ಯವು 'ಆಪರೇಷನ್ ಸಿಂದೂರ್'ಗೆ ಭಯೋತ್ಪಾದಕರು ನೀಡಿದ ಉತ್ತರವಾಗಿರಬಹುದು ಎಂದಿದ್ದಾರೆ.
Karnataka News Live 12th November:ಮದುವೆ ಕಾರ್ಯಕ್ರಮದಲ್ಲಿ ಉದ್ಯಮಿ ಕಿರಣ್ ಮಜುಂದಾರ್ ಜೊತೆ ಸುಧಮೂರ್ತಿ ಭರ್ಜರಿ ಡ್ಯಾನ್ಸ್
ಮದುವೆ ಕಾರ್ಯಕ್ರಮದಲ್ಲಿ ಉದ್ಯಮಿ ಕಿರಣ್ ಮಜುಂದಾರ್ ಜೊತೆ ಸುಧಮೂರ್ತಿ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಡೋಲು ನಾದಕ್ಕೆ ಆಪ್ತರ ಜೊತೆ ಸೇರಿ ಇಬ್ಬರು ಶ್ರೀಮಂತ ಉದ್ಯಮಿಗಳು ಕುಣಿದು ಕುಪ್ಪಳಿಸಿದ್ದಾರೆ. ಈ ವಿಡಿಯೋ ಇದೀಗ ಭಾರಿ ವೈರಲ್ ಆಗುತ್ತಿದೆ.
Karnataka News Live 12th November:ಮಲೆ ಮಹದೇಶ್ವರ ವನ್ಯಧಾಮದಲ್ಲಿ ಮರಿ ವೀರಪ್ಪನ್! ದೈತ್ಯ ಹುಲಿಯನ್ನೇ ಮೂರು ತುಂಡು ಮಾಡಿ ಗೋವಿಂದ ಯಾರು?
ಚಾಮರಾಜನಗರದ ಮಲೆ ಮಹದೇಶ್ವರ ವನ್ಯಧಾಮದಲ್ಲಿ ದೈತ್ಯ ಹುಲಿಯನ್ನು ತುಂಡರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಗಂಗನದೊಡ್ಡಿ ಗೋವಿಂದ 'ಮರಿ ವೀರಪ್ಪನ್' ಎಂದು ಕುಖ್ಯಾತಿ ಪಡೆದಿದ್ದಾನೆ. ವೀರಪ್ಪನ್‌ನಂತೆಯೇ ದೊಡ್ಡ ಕಾಡುಗಳ್ಳನಾಗಿ ಬೆಳೆಯುವ ಮುನ್ನ ಈತನನ್ನು ಬಂಧಿಸಲು ಅರಣ್ಯ ಇಲಾಖೆ ಬಲೆ ಬೀಸಿದೆ.
Karnataka News Live 12th November:ಚಿಕ್ಕಮಗಳೂರು - ಗೃಹ ಸಚಿವರ ವಿರುದ್ಧ ಅವಹೇಳನ; ಬಿಜೆಪಿ ಮುಖಂಡ ಅರೆಸ್ಟ್, ಅಷ್ಟಕ್ಕೂ ಸಂತೋಷ್ ಕೊಟ್ಯಾನ್ ಹೇಳಿದ್ದೇನು?
ಗೃಹ ಸಚಿವ ಪರಮೇಶ್ವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಸಂತೋಷ್ ಕೊಟ್ಯಾನ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಂಧನವನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
Karnataka News Live 12th November:'ಮೋನಿಕಾ' ಹಾಡಿಗೆ ರಿಯಲ್ ಪುತ್ರಿ ಜೊತೆ ರಿಯಲ್ ವೇಷದಲ್ಲಿ Naa Ninna Bidallare ಶಂಭು ಭರ್ಜರಿ ಸ್ಟೆಪ್!
Karnataka News Live 12th November:ದೇಶದಲ್ಲಿ ಭಯೋತ್ಪಾದನೆಗೆ ಕಾಂಗ್ರೆಸ್ ತುಷ್ಟೀಕರಣ ನೀತಿಯೇ ಕಾರಣ - ಎಂಎಲ್‌ಸಿ ರವಿಕುಮಾರ ವಾಗ್ದಾಳಿ
ಬಿಜೆಪಿ ಎಂಎಲ್‌ಸಿ ಎನ್. ರವಿಕುಮಾರ್ ಅವರು, ಕಾಂಗ್ರೆಸ್‌ನ ಹಿಂದಿನ ಆಡಳಿತದಲ್ಲಿ ಭಯೋತ್ಪಾದನೆಗೆ ಆಶ್ರಯ ನೀಡಲಾಗಿತ್ತು ಎಂದು ಆರೋಪಿಸಿದ್ದಾರೆ. ಯುಪಿಎ ಅವಧಿಗಿಂತ ಮೋದಿ ಸರ್ಕಾರದ ಅವಧಿಯಲ್ಲಿ ಭಯೋತ್ಪಾದಕ ಕೃತ್ಯಗಳು 70% ಕಡಿಮೆಯಾಗಿವೆ ಎಂದು ಅಂಕಿ-ಅಂಶ ಸಮೇತ ವಾಗ್ದಾಳಿ ನಡೆಸಿದರು.
Karnataka News Live 12th November:ಮಡಿಕೇರಿ ಜೂನಿಯರ್ ಕಾಲೇಜು ವಿದ್ಯಾರ್ಥಿಗಳಿಬ್ಬರು ಹಾರಂಗಿ ಹಿನ್ನೀರಿನಲ್ಲಿ ಮುಳುಗಿ ಸಾವು
ಮಡಿಕೇರಿ ಜೂನಿಯರ್ ಕಾಲೇಜು ವಿದ್ಯಾರ್ಥಿಗಳಿಬ್ಬರು ಹಾರಂಗಿ ಹಿನ್ನೀರಿನಲ್ಲಿ ಮುಳುಗಿ ಸಾವು , ಇಬ್ಬರು ವಿದ್ಯಾರ್ಥಿಗು ಈಜಲು ತೆರಳಿದಾಗ ಈ ಘಟನೆ ನಡೆದಿದೆ. ಆಳ ಹಿನ್ನೀರಿನಲ್ಲಿ ಈಜುವ ಸಾಹಸ ಮಾಡಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗುತ್ತಿದೆ.
Karnataka News Live 12th November:Bigg Boss 12 - ಸಮಸ್ಯೆ ಗಿಲ್ಲಿದಾ, ಗಿಲ್ಲಿನೇ ಸಮಸ್ಯೆನಾ? ಶಾಕಿಂಗ್ ಸ್ಟೇಟ್ಮೆಂಟ್ ಕೊಟ್ಟ ಅಭಿಷೇಕ್!
ಬಿಗ್ಬಾಸ್ನಲ್ಲಿ ವೀಕ್ಷಕರ ಮನಗೆದ್ದಿರುವ ಗಿಲ್ಲಿ ನಟ, ಟಾಸ್ಕ್ಗಳಲ್ಲಿ ಸತತವಾಗಿ ಸೋಲುತ್ತಿದ್ದಾರೆ. ಈ ಸರಣಿ ಸೋಲಿನಿಂದಾಗಿ ತಾವೇ ತಂಡಕ್ಕೆ ಸಮಸ್ಯೆಯಾಗುತ್ತಿದ್ದಾರೆಯೇ ಎಂದು ಅವರು ಪ್ರಶ್ನಿಸುತ್ತಿದ್ದು, ಸಹ ಸ್ಪರ್ಧಿ ಅಭಿಷೇಕ್ ಶ್ರೀಕಾಂತ್ ಬೇರೆಯದ್ದೇ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ. ಏನದು?
Karnataka News Live 12th November:ಎಚ್ಚರ, ಡೇಟಿಂಗ್ ಆ್ಯಪ್‌ನಲ್ಲಿ ಸಿಗ್ತಾಳೆ ಲಾಡ್ಜ್‌ವರೆಗೂ ಬರ್ತಾಳೆ, ಬೆಂಗಳೂರು ಮಾಯಗಾತಿಗೆ ಪೊಲೀಸ್ ಸರ್ಚ್
ಎಚ್ಚರ, ಡೇಟಿಂಗ್ ಆ್ಯಪ್‌ನಲ್ಲಿ ಸಿಗ್ತಾಳೆ ಲಾಡ್ಜ್‌ವರೆಗೂ ಬರ್ತಾಳೆ, ಬೆಂಗಳೂರು ಮಾಯಗಾತಿಗೆ ಪೊಲೀಸ್ ಸರ್ಚ್ ಮಾಡುತ್ತಿದ್ದಾರೆ. ಯುವತಿಯ ಜೊತೆ ಲಾಡ್ಜ್‌ಗ ಹೋಗಿದ್ದು ಮಾತ್ರ ಗೊತ್ತು, ಬೆಳಗ್ಗೆ ಎದ್ದಾಗ, ಹಣ ಚಿನ್ನ ಯಾವೂದು ಇಲ್ಲ. ಮಾಯಗಾತಿ ವಿರುದ್ದ ದೂರು ದಾಖಲಾಗಿದೆ.
Karnataka News Live 12th November:Naa Ninna Bidalaare - ಶರತ್- ದುರ್ಗಾ ಮೊದಲ ರಾತ್ರಿ ಸಂಭ್ರಮ- ಹಾಲಿನ ಬದಲು ನೀರು; ಇದೇನಾಗೋಯ್ತು?
Karnataka News Live 12th November:ಮೈಸೂರು - ಬಲರಾಮನಿಗಾಗಿ ಕಟ್ಟಿಕೊಂಡ ಗಂಡನ ಮರ್ಮಾಂಗ ಹಿಸುಕಿ ಕೊಂದ ಪತ್ನಿ!
Wife kills husband in Nanjangud: ನಂಜನಗೂಡು ಪತ್ನಿಯ ಅಕ್ರಮ ಸಂಬಂಧವನ್ನು ವಿರೋಧಿಸಿದ್ದಕ್ಕೆ, ಪತಿಯನ್ನೇ ದೊಣ್ಣೆಯಿಂದ ಹೊಡೆದು ಕೊಲೆ.. ಕೊಲೆಯನ್ನು ಆತ್ಮ೧ಹತ್ಯೆ ಎಂದು ಬಿಂಬಿಸಲು ಯತ್ನಿಸಿದ ಪತ್ನಿಯನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಇಬ್ಬರು ಮಕ್ಕಳು ಅನಾಥರಾಗಿದ್ದಾರೆ.
Karnataka News Live 12th November:ಭೂಮಿಯತ್ತ ಸೂರ್ಯನ ಕೆನ್ನಾಲಿಗೆ - ಏನಿದು ನಿಗೂಢ ಸೌರ ಜ್ವಾಲೆ?
ಸೂರ್ಯನಿಂದ ಸಿಡಿದ ವರ್ಷದ ಅತ್ಯಂತ ಶಕ್ತಿಶಾಲಿ X5.1 ಸೌರ ಜ್ವಾಲೆಯು ಭೂಮಿಯನ್ನು ತಲುಪಿದ್ದು, ಯುರೋಪ್ ಮತ್ತು ಆಫ್ರಿಕಾದಲ್ಲಿ ರೇಡಿಯೋ ಸಂವಹನವನ್ನು ಸ್ಥಗಿತಗೊಳಿಸಿದೆ. ಈ ಘಟನೆಯು G4 ಮಟ್ಟದ ಸೌರ ಬಿರುಗಾಳಿ ಮತ್ತು ವ್ಯಾಪಕ ಅರೋರಾಗಳ ಸಾಧ್ಯತೆಯನ್ನು ಹೆಚ್ಚಿಸಿದೆ. ಈ ಜ್ವಾಲೆಯು ಉಪಗ್ರಹ, ಜಿಪಿಎಸ್ ಪರಿಣಾಮ.
Karnataka News Live 12th November:ಅಂದರಿಕೆ ಮಂಚೋಡು...ವೇದಿಕೆಯಲ್ಲಿ ತೆಲುಗು ಗಾದೆ ಹೇಳಿ ಅಚ್ಚರಿಗೊಳಿಸಿದ ಸಿಎಂ ಸಿದ್ದರಾಮಯ್ಯ
ಅಂದರಿಕೆ ಮಂಚೋಡು...ವೇದಿಕೆ ಮೇಲೆ ತೆಲುಗು ಗಾದೆ ಹೇಳಿ ಎಲ್ಲರ ಅಚ್ಚರಿಗೊಳಿಸಿದ ಸಿಎಂ ಸಿದ್ದರಾಮಯ್ಯ, ಕುರುಬ ಸಂಘ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ಪರಿಸ್ಥಿತಿಗೆ ತಕ್ಕಂತೆ ತೆಲುಗು ಗಾದೆಯೊಂದನ್ನು ಹೇಳಿ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ.
Karnataka News Live 12th November:ನನ್ ಹೆಂಡ್ತಿಗೂ ಫ್ರೀ, ರೇವಣ್ಣ ಹೆಂಡ್ತಿಗೂ ಫ್ರಿ ಎಂದು ವೇದಿಕೆ ಮೇಲೆ ಮುಜುಗರಕ್ಕೀಡಾದ ಸಿದ್ದರಾಮಯ್ಯ
ನನ್ ಹೆಂಡ್ತಿಗೂ ಫ್ರೀ, ರೇವಣ್ಣ ಹೆಂಡ್ತಿಗೂ ಫ್ರಿ ಎಂದು ವೇದಿಕೆ ಮೇಲೆ ಮುಜುಗರಕ್ಕೀಡಾದ ಸಿದ್ದರಾಮಯ್ಯ, ಭಾಷಣದ ವೇಳೆ ಸಿದ್ದರಾಮ್ಯ ಆಡಿದ ಮಾತಿನಿಂದ ಮುಜುಗುರದ ಸನ್ನಿವೇಶ ಎದುರಾಗಿದೆ. ಮುಖಂಡರ ಸೂಚನೆ ಬಳಿಕ ಸಿದ್ದರಾಮಯ್ಯ ಮಾತು ಬದಲಿಸಿದ ಘಟನೆ ನಡೆದಿದೆ.