- Home
- Karnataka Districts
- Kodagu
- ಮಡಿಕೇರಿ ಜೂನಿಯರ್ ಕಾಲೇಜು ವಿದ್ಯಾರ್ಥಿಗಳಿಬ್ಬರು ಹಾರಂಗಿ ಹಿನ್ನೀರಿನಲ್ಲಿ ಮುಳುಗಿ ಸಾವು
ಮಡಿಕೇರಿ ಜೂನಿಯರ್ ಕಾಲೇಜು ವಿದ್ಯಾರ್ಥಿಗಳಿಬ್ಬರು ಹಾರಂಗಿ ಹಿನ್ನೀರಿನಲ್ಲಿ ಮುಳುಗಿ ಸಾವು
ಮಡಿಕೇರಿ ಜೂನಿಯರ್ ಕಾಲೇಜು ವಿದ್ಯಾರ್ಥಿಗಳಿಬ್ಬರು ಹಾರಂಗಿ ಹಿನ್ನೀರಿನಲ್ಲಿ ಮುಳುಗಿ ಸಾವು , ಇಬ್ಬರು ವಿದ್ಯಾರ್ಥಿಗು ಈಜಲು ತೆರಳಿದಾಗ ಈ ಘಟನೆ ನಡೆದಿದೆ. ಆಳ ಹಿನ್ನೀರಿನಲ್ಲಿ ಈಜುವ ಸಾಹಸ ಮಾಡಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗುತ್ತಿದೆ.

ಹಾರಂಗಿ ಹಿನ್ನೀರಿನಲ್ಲಿ ದುರಂತ
ಈ ಬಾರಿ ಸತತವವಾಗಿ ಮಳೆ ಸುರಿದಿರುವ ಕಾರಣ ರಾಜ್ಯದ ಎಲ್ಲಾ ಜಲಾಶಗಳು, ನದಿಗಳು ತುಂಬಿದೆ. ನದಿಯಲ್ಲಿ ನೀರಿನ ರಭಸವೂ ಹೆಚ್ಚಾಗಿದೆ. ಆದರೆ ಇದನ್ನ ಲೆಕ್ಕಿಸದೆ ಈಜಲು ನೀರಿಗಿಳಿದ ಇಬ್ಬರು ವಿದ್ಯಾರ್ಥಿಗಳು ದುರಂತ ಅಂತ್ಯಕಂಡಿದ್ದಾರೆ. ಕೊಡಗಿನ ಹಾರಂಗ ಜಲಾಶಯದ ಹಿನ್ನೀರಿನಲ್ಲಿ ಈಜಲು ತೆರಳಿದ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ನಡೆದಿದೆ.
ಮಡಿಕೇರಿ ಜೂನಿಯರ್ ಕಾಲೇಜು ವಿದ್ಯಾರ್ಥಿಗಳು
ಮಡಿಕೇರಿ ಜೂನಿಯರ್ ಕಾಲೇಜು ವಿದ್ಯಾರ್ಥಿಗಳಾದ 17 ವರ್ಷದ ಚಂಗಪ್ಪ ಹಾಗೂ 17 ವರ್ಷದ ತರುಣ್ ತಿಮ್ಮಯ್ಯ ಮೃತ ದುರ್ದೈವಿಗಳು. ಬೈಕಿನಲ್ಲಿ ಹಾರಂಗಿ ಹಿನ್ನೀರಿಗೆ ಬಂದಿದ್ದ ಚಂಗಪ್ಪ, ತರುಣ್ ತಿಮ್ಮಯ್ಯ ಮತ್ತು ನವೀನ್ ಮೂವರು ವಿದ್ಯಾರ್ಥಿಗಳು, ಹಿನ್ನೀರಿನಲ್ಲಿ ಈಜಲು ತೆರಳಿದ್ದಾರೆ. ಈ ವೇಳೆ ಅವಘಡ ಸಂಭವಿಸಿದೆ.
ವಾಪಸ್ ಬರಲಾಗದದೇ ಸಾವು
ಹಿನ್ನೀರಿಗೆ ಆಗಮಿಸಿದ್ದ ವಿದ್ಯಾರ್ಥಿಗಳ ಪೈಕಿ ಇಬ್ಬರು ನೀರಿಗೆ ಇಳಿದಿದ್ದಾರೆ. ನವೀನ್ ನೀರಿಗೆ ಇಳಿಯದೇ ದಡದಲ್ಲೇ ಇದ್ದ. ಆದರೆ ಹಿನ್ನೀರು ಆಳವಾಗಿದ್ದ ಕಾರಣ ವಿದ್ಯಾರ್ಥಿಗಳಿಗೆ ವಾಪಸ್ ಬರಲು ಸಾಧ್ಯವಾಗಿಲ್ಲ. ನೋಡ ನೋಡುತ್ತಿದ್ದಂತೆ ಇಬ್ಬರು ಮುಳುಗಿದ್ದಾರೆ.
ಓರ್ವ ವಿದ್ಯಾರ್ಥಿ ಮೃತದೇಹ ಪತ್ತೆ
ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಸಿಬ್ಬಂದಿ, ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ತೀವ್ರ ಕಾರ್ಯಾಚರಣೆ ಆರಂಭಿಸಿದ್ದಾರೆ. ಸತತ ಕಾರ್ಯಾಚರಣ ಬಳಿಕ ಚಂಗಪ್ಪನ ಮೃತದೇಹ ಪತ್ತೆಯಾಗಿದೆ. ಆದರೆ ತರುಣ್ ತಿಮ್ಮಯ್ಯ ಮೃತದೇಹ ಪತ್ತೆಯಾಗಿಲ್ಲ. ರಕ್ಷಣಾ ತಂಡದಿಂದ ಹುಡುಕಾಟ ಮುಂದುವರಿದಿದೆ.
ಓರ್ವ ವಿದ್ಯಾರ್ಥಿ ಮೃತದೇಹ ಪತ್ತೆ
ಹಾರಂಗಿ ಹಿನ್ನೀರಿನಲ್ಲಿ ಈಜು ನಿಷೇಧ
ಹಾರಂಗಿ ಹಿನ್ನೀರಿನಲ್ಲಿ ಈಜಾಡುವುದು ನಿಷೇಧ ಮಾಡಲಾಗಿದೆ. ಅಪಾಯದ ಸಾಧ್ಯತೆ ಹೆಚ್ಚಿರುವ ಕಾರಣ ಈಜಾಟ, ದಡದಲ್ಲಿ ಯಾವುದೇ ಮೋಜು ಮಸ್ತಿಗೆ ಅವಕಾಶವಿಲ್ಲ. ವಿದ್ಯಾರ್ಥಿಗಳ ಸಾವು ಪ್ರಕರಣ ಸಂಬಂಧ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.