ನನ್ ಹೆಂಡ್ತಿಗೂ ಫ್ರೀ, ರೇವಣ್ಣ ಹೆಂಡ್ತಿಗೂ ಫ್ರಿ ಎಂದು ವೇದಿಕೆ ಮೇಲೆ ಮುಜುಗರಕ್ಕೀಡಾದ ಸಿದ್ದರಾಮಯ್ಯ, ಭಾಷಣದ ವೇಳೆ ಸಿದ್ದರಾಮ್ಯ ಆಡಿದ ಮಾತಿನಿಂದ ಮುಜುಗುರದ ಸನ್ನಿವೇಶ ಎದುರಾಗಿದೆ. ಮುಖಂಡರ ಸೂಚನೆ ಬಳಿಕ ಸಿದ್ದರಾಮಯ್ಯ ಮಾತು ಬದಲಿಸಿದ ಘಟನೆ ನಡೆದಿದೆ.
ಬೆಂಗಳೂರು (ನ.12) ಮುಖ್ಯಮಂತ್ರಿ ಸಿದ್ದರಾಮಯ್ಯ ವೇದಿಕೆ ಮೇಲೆ ಭಾಷಣ ಮಾಡಿ ಮುಜುಗರಕ್ಕೀಡಾದ ಘಟನೆ ನಡೆದಿದೆ. ಚುನಾವಣೆ ವೇಳೆ ಕಾಂಗ್ರೆಸ್ ಗ್ಯಾರೆಂಟಿ ಕುರಿತು ನಾಯಕರು ಮಾಡಿದ ಪ್ರಚಾರ ಭಾಷಣಗಳು ಭಾರಿ ಜನಪ್ರಿಯತೆ ಪಡೆದಿದೆ. ಈ ಪೈಕಿ ಸಿದ್ದರಾಮಯ್ಯನವರ ನನಗೂ ಫ್ರೀ, ಕಾಕಾ ಪಾಟೀಲನಿಗೂ ಫ್ರೀ ಎಂದಿರುವ ಭಾಷಣ ವೈರಲ್ ಆಗಿದೆ. ಇದೀಗ ಕುರುಬರ ಸಂಘದ ಕಾರ್ಯಕ್ರಮದಲ್ಲಿ ಭಾಷಣ ಮಾಡುವಾಗ ಉಚಿತ ಬಸ್ ಕುರಿತು ಮಾತನಾಡಿದ ಸಿದ್ದರಾಮಯ್ಯ, ವೇದಿಕೆ ಮೇಲಿದ್ದ ಹೆಚ್ ಎಂ ರೇವಣ್ಣನತ್ತ ನೋಡಿ ಭಾಷಣ ಮಾಡಿದ್ದಾರೆ. ಈ ವೇಳೆ ಉಚಿತ ಬಸ್ ನನ್ನ ಹೆಂಡತಿಗೂ ಫ್ರೀ , ರೇವಣ್ಣ ಹೆಂಡತಿಗೂ ಫ್ರೀ ಎಂದು ಭಾಷಣ ಮಾಡಿದ್ದಾರೆ. ಈ ವೇಳೆ ಮುಖಂಡರು ರೇವಣ್ಣ ಹೆಂಡತಿ ತೀರಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯಗೆ ತಿಳಿಸಿದ್ದಾರೆ.
ಇದ್ದಾಗ ಉಚಿತವಾಗಿ ಓಡಾಡಬಹುದಿತ್ತು ಎಂದ ಸಿದ್ದರಾಮಯ್ಯ
ನನ್ನ ಹೆಂಡತಿಗೂ ಫ್ರೀ, ರೇವಣ್ಣ ನಿನ್ನ ಹೆಂಡತಿಗೂ ಫ್ರೀ ಎಂದು ಸಿದ್ದರಾಮಯ್ಯ ಭಾಷಣ ಮಾಡಿದ್ದಾರೆ. ಆದರೆ ಮುಖಂಡರು ತಕ್ಷಣವೇ ಸಿದ್ದರಾಮಯ್ಯಗೆ ಅಲರ್ಟ್ ಮಾಡಿದ ಬಳಿಕ ಸಿದ್ದರಾಮಯ್ಯ ಮಜುಗರಕ್ಕೀಡಾಗದ್ದಾರೆ. ಆದರೆ ತೋರ್ಪಡಿಸದ ಸಿದ್ದರಾಮಯ್ಯ, ತಕ್ಷಣ ಮಾತು ಬದಲಿಸಿದ್ದಾರೆ. ಹೇಳಿಕೆ ಸರಿಪಡಿಸಿಕೊಂಡ ಸಿದ್ದರಾಮಯ್ಯ, ಇದ್ದಾಗ ಅವರೂ ಫ್ರೀಯಾ ಓಡಾಡಬಹುದಿತ್ತು ಎಂದು ಹೇಳಿದ್ದು ಎಂದಿದ್ದಾರೆ.
ಗ್ಯಾರೆಂಟಿ ಯೋಜನೆಗಳ ಕುರಿತು ಪ್ರಸ್ತಾಪಿಸಿ ಸಿದ್ದರಾಮಯ್ಯ ಮಾಡಿದ ಬಹುತೇಕ ಎಲ್ಲಾ ಭಾಷಣ ವೈರಲ್ ಆಗಿದೆ. ಇದೀಗ ಈ ಭಾಷಣವೂ ಸೇರಿಕೊಂಡಿದೆ. ಚುನಾವಣೆ ವೇಳೆ ಡಿಕೆ ಶಿವಕುಮಾರ್ ಮಾಡಿರುವ ಉಚಿತ, ಖಚಿತ, ನಿಶ್ಚಿತ ಭಾಷಣ ಕೂಡ ಅಷ್ಟೇ ವೈರಲ್ ಆಗಿತ್ತು.
ನಿಮ್ಮ ಬೆಂಬಲ ಹೀಗೆ ಇರಲಿ ಎಂದ ಸಿದ್ದರಾಮಯ್ಯ
ಭಾಷಣ ಮುಂದುವರಿಸಿದ ಸಿದ್ದರಾಮಯ್ಯ, ನಾನು ಯಾವತ್ತೂ ಜಾತಿಗಳ ನಡುವೆ ಬೇಧ ಮಾಡಿಲ್ಲ ಎಂದಿದ್ದಾರೆ. ಜಾತಿ ಗಣತಿ ಮಾಡುತ್ತಿದ್ದೇವೆ. ಜಾತಿಗಣತಿಯನ್ನು ನಾವು ಜಾರಿ ಮಾಡುತ್ತೇವೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಆಗಿದೆ. ಎಲ್ಲಾ ವರ್ಗದ ಜನ ಎಲ್ಲಾ ಧರ್ಮದ ಜನ ನನ್ನನ್ನು ಪ್ರೀತಿಸುತ್ತಾರೆ. ನಾನು ಇಡೀ ಸಮಾಜಕ್ಕೆ ಋಣಿ ಆಗಿದ್ದೇನೆ ಎಂದು ಸಿದ್ದಾರಮ್ಯ ಹೇಳಿದ್ದಾರೆ. ಸಮಾಜದಲ್ಲಿ ಸಮಾನತೆ ತರಲು ಪ್ರಯತ್ನ ಮಾಡುತ್ತೇನೆ. ನಿಮ್ಮ ಬೆಂಬಲ ನನಗೆ ಯಾವಾಗಲೂ ಹೀಗೇ ಇರಬೇಕು. ಇಷ್ಟು ವರ್ಷ ಬೆಂಬಲ ಕೊಟ್ಡಿದ್ದೀರಿ. ಮುಂದೆ ಕೂಡಾ ಆಶೀರ್ವಾದ ಮಾಡಬೇಕು ಎಂದು ಸಿದ್ದರಾಮಯ್ಯ ಜನತೆಯಲ್ಲಿ ಮನವಿ ಮಾಡಿದ್ದಾರೆ.
