- Home
- Entertainment
- TV Talk
- Bigg Boss Kannada 12 : ಸಮಸ್ಯೆ ಗಿಲ್ಲಿದಾ, ಗಿಲ್ಲಿನೇ ಸಮಸ್ಯೆನಾ? ಶಾಕಿಂಗ್ ಸ್ಟೇಟ್ಮೆಂಟ್ ಕೊಟ್ಟ ಅಭಿಷೇಕ್!
Bigg Boss Kannada 12 : ಸಮಸ್ಯೆ ಗಿಲ್ಲಿದಾ, ಗಿಲ್ಲಿನೇ ಸಮಸ್ಯೆನಾ? ಶಾಕಿಂಗ್ ಸ್ಟೇಟ್ಮೆಂಟ್ ಕೊಟ್ಟ ಅಭಿಷೇಕ್!
ಬಿಗ್ಬಾಸ್ನಲ್ಲಿ ವೀಕ್ಷಕರ ಮನಗೆದ್ದಿರುವ ಗಿಲ್ಲಿ ನಟ, ಟಾಸ್ಕ್ಗಳಲ್ಲಿ ಸತತವಾಗಿ ಸೋಲುತ್ತಿದ್ದಾರೆ. ಈ ಸರಣಿ ಸೋಲಿನಿಂದಾಗಿ ತಾವೇ ತಂಡಕ್ಕೆ ಸಮಸ್ಯೆಯಾಗುತ್ತಿದ್ದಾರೆಯೇ ಎಂದು ಅವರು ಪ್ರಶ್ನಿಸುತ್ತಿದ್ದು, ಸಹ ಸ್ಪರ್ಧಿ ಅಭಿಷೇಕ್ ಶ್ರೀಕಾಂತ್ ಬೇರೆಯದ್ದೇ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ. ಏನದು?

ಗಿಲ್ಲಿ ಹವಾ ಜೋರು
ಸದ್ಯ ಬಿಗ್ಬಾಸ್ನಲ್ಲಿ ಗಿಲ್ಲಿ ನಟನ ಹವಾ ಜೋರಾಗಿ ನಡೆದಿದ್ದು, ಇವರ ಪರವಾಗಿ ವೀಕ್ಷಕರ ಒಲುವು ಕೂಡ ಹೆಚ್ಚಾಗಿದೆ. ಇದರ ನಡುವೆಯೇ, ಆರು ವಾರಗಳು ಕಳೆದಿರುವ ಹಿನ್ನೆಲೆಯಲ್ಲಿ ಟಾಸ್ಕ್ಗಳ ಭರಾಟೆ ಜೋರಾಗಿದೆ.
ಟಾಸ್ಕ್ ವಿಷಯದಲ್ಲಿ ಸೋಲು
ಗಿಲ್ಲಿ ಎಲ್ಲರ ಮನಸ್ಸನ್ನು ಗೆಲ್ಲುತ್ತಿದ್ದರೂ ಟಾಸ್ಕ್ ವಿಷಯಕ್ಕೆ ಬಂದಾಗ ಪದೇ ಪದೇ ಸೋಲುತ್ತಿರುವುದು ಅವರಿಗೂ ನೋವು ತಂದಂತಿದೆ. ಇದಾಗಲೇ ಕೆಲವು ಟಾಸ್ಕ್ಗಳಲ್ಲಿ ಸೋತಿರೋ ಗಿಲ್ಲಿ ನಟ, ಮತ್ತೊಂದು ಟಾಸ್ಕ್ ಅನ್ನು ಸೋತಿದ್ದಾರೆ. ಜೊತೆಗೆ, ತಮ್ಮ ತಂಡವನ್ನೂ ಸೋಲಿಸಿದ್ದಾರೆ.
ಗಿಲ್ಲಿಯ ಸಮಸ್ಯೆ
ಪದೇ ಪದೇ ಇದು ಗಿಲ್ಲಿಯ ಸಮಸ್ಯೆ ಎಂದೇ ಹೇಳಲಾಗುತ್ತಿತ್ತು. ಇದೀಗ ಖುದ್ದು ಗಿಲ್ಲಿಗೂ ಇದರ ಬಗ್ಗೆ ಅರ್ಥವಾದಂತಿದೆ. ನಾನೇ ಸಮಸ್ಯೆ ಆಗ್ತಿದ್ದೀನಾ ಎಂದು ಪ್ರಶ್ನಿಸುತ್ತಿದ್ದಾರೆ.
ಗಿಲ್ಲಿ ಇದ್ರೆ ಸೋಲ್ತೀವಿ ಅಂತಿದ್ರು
ಪ್ರತಿ ಟಾಸ್ಕ್ ಆಡುವಾಗಲೂ ಗಿಲ್ಲಿ ಇದ್ರೆ ಸೋಲ್ತೀವಿ ಅಂತಿದ್ರು, ಆದ್ಯಾಕೋ ಈಗ ನನಗೂ ಹಾಗೆ ಅನಿಸೋಕೆ ಶುರುವಾಗಿದೆ. ಇಷ್ಟೆಲ್ಲ ಬಲಿಷ್ಠ ಆಟಗಾರರಿದ್ದೂ ನಾವು ಸೋಲ್ತಿರೋದ್ಯಾಕೆ ಅಂತ ಗಿಲ್ಲಿ ಪ್ರಶ್ನಿಸಿಕೊಂಡಿದ್ದಾರೆ.
ಅಭಿಷೇಕ್ ಶ್ರೀಕಾಂತ್ ಪ್ರತಿಕ್ರಿಯೆ
ಹೀಗೆ ತಮ್ಮ ಸೋಲಿನ ಬಗ್ಗೆ ಪರಾಮರ್ಶೆ ಮಾಡಿಕೊಳ್ತಿರುವಾಗಲೇ ಅಭಿಷೇಕ್ ಶ್ರೀಕಾಂತ್ ಅವರು, ಗಿಲ್ಲಿಗೆ ಇರೋ ಸಮಸ್ಯೆ ಏನ್ ಗೊತ್ತಾ? ಏನ್ ಮಾಡಿದ್ರೂ ತಾನು ನಾಮಿನೇಟ್ ಆಗಲ್ಲ ಎನ್ನೋದು ಗೊತ್ತು, ಅದಕ್ಕೇ ಹೀಗೆ ಆಡ್ತಿರೋದು ಎಂದಿದ್ದಾರೆ. ಅಲ್ಲಿಗೆ ಗಿಲ್ಲಿ ನಟ ಅವರನ್ನು ರಕ್ಷಣೆ ಮಾಡುತ್ತಿದ್ದಾರೆ ಎನ್ನುವ ಅರ್ಥದಲ್ಲಿ ಅವರು ಮಾತನಾಡಿದ್ದಾರೆ.