ಅಂದರಿಕೆ ಮಂಚೋಡು...ವೇದಿಕೆ ಮೇಲೆ ತೆಲುಗು ಗಾದೆ ಹೇಳಿ ಎಲ್ಲರ ಅಚ್ಚರಿಗೊಳಿಸಿದ ಸಿಎಂ ಸಿದ್ದರಾಮಯ್ಯ, ಕುರುಬ ಸಂಘ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ಪರಿಸ್ಥಿತಿಗೆ ತಕ್ಕಂತೆ ತೆಲುಗು ಗಾದೆಯೊಂದನ್ನು ಹೇಳಿ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ.
ಬೆಂಗಳೂರು (ನ.12) ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣದಲ್ಲಿ ಗಾಂಭೀರ್ಯತೆ, ಅಚ್ಚುಕಟ್ಟಾಗಿ ವಿಷಗಳ ಪ್ರಸ್ತಾಪ, ಹಾಸ್ಯ, ಸಂವಾದ ಎಲ್ಲವೂ ಮಿಳಿತಗೊಂಡಿರುತ್ತದೆ. ಸದನದಲ್ಲೇ ಇರಲಿ, ಕಾರ್ಯಕ್ರಮಗಳ ಭಾಷಣವೇ ಇರಲಿ ಸಿದ್ದರಾಮಯ್ಯ ಶೈಲಿ ಹಾಗೂ ಗತ್ತು ವಿಶೇಷ. ಇದೀಗ ಕುರುಬ ಸಂಘ ಸಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಭಾಷಣದ ನಡುವೆ ತೆಲುಗು ಗಾದೆ ಹೇಳಿ ಅಚ್ಚರಿಗೊಳಿಸಿದ್ದಾರೆ. ಸಂದರ್ಭಕ್ಕೆ ತಕ್ಕಂತೆ ಸಿದ್ದರಾಮ್ಯ ತೆಲುಗಿನ ಅಂದರಿಕೆ ಮಂಚೋಡು ಅನಂತರಾಮಯ್ಯ ಎಂದು ತೆಲುಗು ಗಾದೆ ಹೇಳಿದ್ದಾರೆ.
ಸಿದ್ದರಾಮಯ್ಯ ತೆಲುಗು ಗಾದೆ ಹೇಳಿದ್ದೇಕೆ?
ಭಾಷಣದಲ್ಲಿ ಸಿದ್ದರಾಮಯ್ಯ ತಾವು ಕುರುಬ ಸಂಘ ಸೇರಿದಂತೆ ಹಲವು ಸಮುದಾಯಕ್ಕೆ ಮಾಡಿರುವ ಕೆಲಸಗಳ ಬಗ್ಗೆ ವಿವರಿಸಿದ್ದಾರೆ. ಸಂಗೊಳ್ಳಿ ರಾಯಣ್ಣ ಪ್ರಾಧಿಕಾರ ಮಾಡಿದ್ದು, ಕಾಗಿನೆಲೆ ಗುರುಪೀಠ ಸೇರಿದಂತೆ ಹಲವು ಕೆಲಸಗಳ ಕುರಿತು ಸಿದ್ದರಾಮಯ್ಯ ಮಾತನಾಡಿದ್ದಾರೆ. ಇಷ್ಟೆಲ್ಲಾ ಮಾಡಿದರೂ ಸಿದ್ದರಾಮಯ್ಯ ಏನೂ ಮಾಡಿಲ್ಲ ಎಂದು ಆರೋಪ ಮಾಡುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದೇ ವೇಳೆ ಕೆಲಸ ಏನೇ ಇದ್ದರೂ ಮುಕುಡಪ್ಪ ನನಗೂ ಆಗಿ ಬರುವುದಿಲ್ಲ, ಅವರು ನನ್ನ ಜೊತೆ ಬರುವುದಿಲ್ಲ. ನಾನು ಮಾಡಿದ ಕೆಲಸಗಳನ್ನೂ ಅವರು ಹೇಳುವುದಿಲ್ಲ. ಹೆದರಿಕೊಂಡು ನಮ್ಮಲ್ಲಿ ಯಾರೂ ಸತ್ಯ ಹೇಳುವುದಿಲ್ಲ. ಗೊತ್ತಿದ್ದರೂ ಶಿವಣ್ಣ ಏನೂ ಹೇಳುವುದಿಲ್ಲ. ಭಯನಾ ಅಥವಾ ನಿಷ್ಠುರ ಯಾಕೆ? ಎಂದ ಸಿದ್ದರಾಮಯ್ಯ, ಅಂದರಿಕೆ ಮಂಚೋಡು ಅನಂತರಾಮಯ್ಯ ಎಂದು ತೆಲುಗು ಗಾದೆ ಹೇಳಿದ್ದಾರೆ.
ನಾನು ಇಲ್ಲದೇ ಹೋಗಿದ್ರೆ ಇವತ್ತು ಈ ಆಸ್ತೀನೇ ಉಳಿತಾ ಇರಲಿಲ್ಲ
ತಾವು ಮಾಡಿದ ಕೆಲಸದ ಕುರಿತು ಮಾತನಾಡುತ್ತಾ ಹೋದ ಸಿದ್ದರಾಮಯಯ್ಯ, ಸಂಗೊಳ್ಳಿ ರಾಯಣ್ಣ ಪ್ರಾಧಿಕಾರ ಮಾಡಿದ್ದು, ಮೈಸೂರಿನಲ್ಲಿ ಸಿಎ ಸೈಟ್ ಕೊಡಿಸಿ ವಿದ್ಯಾರ್ಥಿ ನಿಲಯ ಮಾಡಿದ್ದು ನಾನು, ಸಂಗೊಳ್ಳಿರಾಯಣ್ಣ ಸೈನಿಕ ಶಾಲೆಗೆ 300 ಕೋಟಿ ಖರ್ಚು ಮಾಡಿದ್ದೀನಿ, ಎಸ್.ಆರ್.ಬೊಮ್ಮಾಯಿ ಕಂದಾಯ ಸಚಿವರಾಗಿದ್ದರು ಆಗ ಅವರಿಂದ ಜಾಗ ಕೊಡಿಸಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇಷ್ಟೆಲ್ಲ ಮಾಡಿದ್ರೂ ಸಿದ್ದರಾಮಯ್ಯ ಏನೂ ಮಾಡಿಲ್ಲ ಅಂತಾರೆ. ಅವರೇನು ಮಾಡಿದ್ದಾರೆ ತೋರಿಸಲಿ, ಏನೂ ಮಾಡಿಲ್ಲ ಎಂದು ಹೆಚ್ ವಿಶ್ವನಾಥ್ ವಿರುದ್ದ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಕುರುಬ ಸಂಘ ಹಾಗೂ ಬೆಳೆದು ಬಂದ ರೀತಿ ಕುರಿತು ಮಾತನಾಡಿದ ಸಿದ್ದರಾಮಯ್ಯ, ಸದ್ಯ ಇರುವ ಕಟ್ಟಡ ಹಳೇ ಕಟ್ಟಡವಾಗಿದೆ. ಇದರಿಂದ ಪ್ರದೇಶ ಕುರುಬ ಸಂಘಕ್ಕೆ ಸಾಕಷ್ಟು ಅದಾಯ ಬರ್ತಾ ಇರಲಿಲ್ಲ. ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಸಹಾ ಸಾಕಷ್ಟು ಅವಕಾಶ ಇರಲಿಲ್ಲ. ಹಾಗಾಗಿ ಅದನ್ನು ಕೆಡವಿ ,ಹೊಸ ಕಟ್ಟಡ ನಿರ್ಮಾಣ ಮಾಡಲು ತೀರ್ಮಾನ ಮಾಡಲಾಯಿತು. ಇದಕ್ಕೆ ಮೂವತ್ತು ಕೋಟಿ ವೆಚ್ಚ ಆಗಬಹುದೆಂಬ ಅಂದಾಜು ಇದೆ. ಹದಿನೆಂಟು ತಿಂಗಳಿನಲ್ಲಿ ಕೆಲಸ ಪೂರ್ಣ ಆಗುವ ಸಾಧ್ಯತೆ ಇದೆ. ನಮ್ಮ ಪೂರ್ವಿಕರು ಅವತ್ತು ಯೋಚನೆ ಮಾಡಿ ಇಂತಹಾ ಕಟ್ಟಡ ಸ್ಥಾಪನೆ ಮಾಡಿದ್ದಾರೆ. ಬಹಳ ಬೆಲೆ ಬಾಳುವ ಏರಿಯಾ ಗಾಂಧಿನಗರದಲ್ಲಿ ಒಂದು ಚದುರ ಅಡಿಗೆ ಐವತ್ತು ಸಾವಿರಕ್ಕೂ ಹೆಚ್ಚು ಇದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
