ದೆಹಲಿ ಸ್ಫೋಟದಲ್ಲಿ ಐ20 ಜೊತೆ ಮತ್ತೊಂದು ಕೆಂಪು ಕಾರು, ಶಂಕಿತ ಉಗ್ರ ಡಾ.ಉಮರ್ ಇಕೋ ಸ್ಪೋರ್ಟ್ ಪತ್ತೆ ಮಾಡಲಾಗಿದೆ. ಸ್ಫೋಟ ಪ್ರಕರಣದಲ್ಲಿ ರೆಡ್ ಇಕೋ ಸ್ಪೋರ್ಟ್ ಪ್ರಮುಖ ಪಾತ್ರವಹಿಸಿರುವ ಕುರಿತು ಪೊಲೀಸರು ಕೆಲ ದಾಖಲೆ ಸಂಗ್ರಹಿಸಿದ್ದಾರೆ.
ನವದೆಹಲಿ (ನ.12) ದೆಹಲಿ ಸ್ಫೋಟ ಪ್ರಕರಣದ ಹಿಂದೆ ಉಗ್ರರ ಅತೀ ದೊಡ್ಡ ಷಡ್ಯಂತ್ರ ಬಹಿರಂಗವಾಗಿದೆ. 10 ಮಂದಿ ಮೃತಪಟ್ಟು 24ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಈ ಸ್ಫೋಟ ಪ್ರಕರಣ ದೇಶದಲ್ಲಿ ಇತ್ತೀಚೆಗೆ ನಡೆದ ಸ್ಫೋಟ ದುರಂತದಲ್ಲಿ ಅತೀ ದೊಡ್ಡ ಘಟನೆಯಾಗಿದೆ. ಕಳೆದ 10 ರಿಂದ 11 ವರ್ಷದಲ್ಲಿ ಭಾರತದೊಳಗೆ ಸ್ಫೋಟ ಪ್ರಕರಣಗಳಿಗೆ ಬ್ರೇಕ್ ಬಿದ್ದಿತ್ತು. ಆದರೆ ದೆಹಲಿ ಸ್ಫೋಟ ಭಾರತ ಹೃದಯ ಭಾಗದ ಮೇಲೆ ನಡೆದ ದಾಳಿಯಾಗಿದೆ. ಈ ಪ್ರಕರಣದಲ್ಲಿ ಉಗ್ರರು ಐ20 ಕಾರಿನಲ್ಲಿ ಸ್ಫೋಟ ತಂದು, ಇದೇ ಕಾರು ಸ್ಫೋಟಗೊಂಡಿರುವುದು ಸ್ಪಷ್ಟವಾಗಿತ್ತು. ಆದರೆ ಈ ಸ್ಫೋಟದಲ್ಲಿ ಶಂಕಿತ ಉಗ್ರ ಡಾ. ಉಮರ್ ನಬಿಯ ಕೆಂಪು ಇಕೋ ಸ್ಪೋರ್ಟ್ ಕಾರು ಕೂಡ ಪ್ರಮುಖ ಪಾತ್ರವಹಿಸಿತ್ತು. ಇದೀಗ ಈ ಕಾರನ್ನು ಪತ್ತೆ ಹಚ್ಚಿರುವ ಪೊಲೀಸರು, ವಶಕ್ಕೆ ಪಡೆದಿದ್ದಾರೆ.
ಖಂಡವಾಲಿ ಗ್ರಾಮದಲ್ಲಿ ಕಾರು ಪತ್ತೆ
ದೆಹಲಿ ಸ್ಫೋಟದ ರೂವಾರಿಗಳು ಐ20 ಕಾರಿನಲ್ಲಿ ಸ್ಫೋಟಗೊಂಡಿದ್ದಾರೆ. ಆದರೆ ಈ ಸ್ಫೋಟಕ ತಯಾರಿ, ಜೋಡಣೆಯಲ್ಲಿ ಹಲವು ಭಾಗಿಯಾಗಿದ್ದಾರೆ. ಈ ಪೈಕಿ ಶಂಕಿತ ಉಗ್ರ ಉಮರ್ ನಬಿ ಕೂಡ ಒಬ್ಬ. ಉಮರ್ ನಬಿಗೆ ಸೇರಿದ ಕೆಂಪು ಇಕೋಸ್ಪೋರ್ಟ್ ಕಾರು DL10CK0458 ಕಾರನ್ನು ಹರ್ಯಾಣದ ಖಂಡವಾಲಿ ಗ್ರಾಮದ ಬಳಿ ನಿಲ್ಲಿಸಲಾಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೊಲೀಸರು ಕಾರನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದ್ದಾರೆ.
ನಕಲಿ ವಿಳಾಸ ನೀಡಿ ಕಾರು ಖರೀದಿ
ಫರೀದಾಬಾದ್ ಸ್ಫೋಟಕದಲ್ಲಿ ಅರೆಸ್ಟ್ ಆಗಿರುವ ವೈದ್ಯ ಉಮರ್ ಹಾಗೂ ಕೆಂಪು ಇಕೋ ಸ್ಪೋರ್ಟ್ ಕಾರು ಮಾಲೀಕ ಉಮರ್ ನಬಿ ಇಬ್ಬರು ಇಬ್ಬರು ಈ ವರ್ಷದ ಆರಂಭದಲ್ಲಿ ಟರ್ಕಿಗೆ ಪ್ರಯಾಣ ಮಾಡಿದ್ದಾರೆ. ಉಮರ್ ನಬಿ ಕೆಂಪು ಇಕೋ ಸ್ಪೋರ್ಟ್ ಕಾರಿನ 2ನೇ ಮಾಲೀಕ. ನವೆಂಬರ್ 22, 2017ರಂದು ಉಮರ್ ನಬಿ ಕಾರು ಖರೀದಿಸಿದ್ದಾರೆ. ದೆಹಲಿಯ ರಜೌರಿ ಆರ್‌ಟಿಒ ನೋಂದಣಿ ಹೊಂದಿದೆ. ಕಾರು ಖರೀದಿಸುವಾಗ ಉಮರ್ ನಕಲಿ ವಿಳಾಸ ನೀಡಿ ಕಾರು ಖರೀದಿಸಿದ್ದಾರೆ ಅನ್ನೋದು ಬಹಿರಂಗವಾಗಿದೆ. ಐಟಿ20 ಸ್ಫೋಟದಲ್ಲಿ ಭಸ್ಮವಾಗಿದ್ದರೆ, ಎರಡನೇ ಕಾರಾಗಿ ಉಗ್ರರು ಇದೇ ಇಕೋ ಸ್ಫೋರ್ಟ್ ಬಳಸಿದ್ದಾರೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಇಕೋ ಸ್ಪೋರ್ಟ್ ಕಾರು ಸ್ಫೋಟಕ ಅಥವಾ ಗನ್ ಸೇರಿದಂತೆ ಇತರ ಆಯುಧಗಳನ್ನು ಪೂರೈಕೆ, ಸಾಗಾಣೆಗೆ ಬಳಸಿರುವ ಸಾಧ್ಯತೆ ಹೆಚ್ಚು ಎಂದಿದ್ದಾರೆ.
ಉಮರ್ ಪ್ಲಾನ್ ಪ್ರಕಾರ ಸ್ಫೋಟ
ಉಮರ್ ದೆಹಲಿ ಸ್ಫೋಟದ ಪ್ಲಾನ್ ಮಾಡಿದ್ದಾರೆ ಅನ್ನೋ ಮಾಹಿತಿಗಳು ಬಯಲಾಗುತ್ತಿದೆ. ಒಟ್ಟು ಮೂವರು ಸೇರಿ ಈ ಸ್ಫೋಟ ಪ್ಲಾನ್ ಮಾಡಿದ್ದಾರೆ. ಆದರೆ ಇದು ರೆಡ್ ಫೋರ್ಟ್ ಬಳಿಯೇ ಸ್ಫೋಟ ಮಾಡಲು ತಂದಿದ್ದರಾ, ಅಥವಾ ಬೇರೆ ಕಡೆ ಸ್ಫೋಟ ಮಾಡಲು ತಂದಿದ್ದರಾ ಅನ್ನೋ ಕುರಿತು ತನಿಖೆ ನಡೆಯುತ್ತಿದೆ.
