ಎಚ್ಚರ, ಡೇಟಿಂಗ್ ಆ್ಯಪ್‌ನಲ್ಲಿ ಸಿಗ್ತಾಳೆ ಲಾಡ್ಜ್‌ವರೆಗೂ ಬರ್ತಾಳೆ, ಬೆಂಗಳೂರು ಮಾಯಗಾತಿಗೆ ಪೊಲೀಸ್ ಸರ್ಚ್ ಮಾಡುತ್ತಿದ್ದಾರೆ. ಯುವತಿಯ ಜೊತೆ ಲಾಡ್ಜ್‌ಗ ಹೋಗಿದ್ದು ಮಾತ್ರ ಗೊತ್ತು, ಬೆಳಗ್ಗೆ ಎದ್ದಾಗ, ಹಣ ಚಿನ್ನ ಯಾವೂದು ಇಲ್ಲ. ಮಾಯಗಾತಿ ವಿರುದ್ದ ದೂರು ದಾಖಲಾಗಿದೆ.
ಬೆಂಗಳೂರು (ನ.12) ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯ ಆಗ್ತಾಳೆ, ಕಾಫಿ ಶಾಪ್‌ನಲ್ಲಿ ಭೇಟಿ, ಲಾಡ್ಜ್‌ನಲ್ಲಿ ಒಂದು ರಾತಿ. ಬೆಳಗ್ಗೆ ಎದ್ದಾಗ ಹಣ, ಚಿನ್ನಾಭರಣ ಯಾವೂದೂ ಇರಲ್ಲ, ಆಕೆಯೂ ಇರಲ್ಲ. ಲಾಡ್ಜ್‌ಜೆ ಹೋಗಿದ್ದು ಮಾತ್ರ ನೆನಪು, ಮತ್ತೇನಾಗಿದೆ ಅನ್ನೋದು ಗೊತ್ತೆ ಆಗಲ್ಲ. ಹೀಗಾಗಿ ಬೆಂಗಳೂರಿನಲ್ಲಿ ಹಲವು ಯುವಕರನ್ನು ವಂಚಿಸುತ್ತಿರುವ ಮಾಯಾಗಾತಿ ವಿರುದ್ದ ದೂರು ದಾಖಲಾಗಿದೆ. ಆಘಾತ ಎಂದರೆ ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾಗಿ ಕೋಟಿ ಕೋಟಿ ರೂಪಾಯಿ ಕಳೆದುಕೊಂಡ ಘಟನೆಗಳು ನಡೆದಿದೆ. ಇಂದಿರಾನಗರ, ಉತ್ತರ ಸೈಬರ್ ಕ್ರೈಂ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದೆ.
ಎಣ್ಣೆ ಪಾರ್ಟಿಯೂ ಮಾಡ್ತಾಳೆ, ನಶೆ ಏರಿಸ್ತಾಳೆ
Happn app ಅನ್ನೋ ಡೇಟಿಂಗ್ ಆ್ಯಪ್ ಮೂಲಕ 2 ತಿಂಗಳ ಹಿಂದೆ ಯುವಕನೊಬ್ಬನಿಗೆ ಕವಿಪ್ರಿಯಾ ಅನ್ನೋ ಯುವತಿ ಪರಿಚಯವಾಗಿದ್ದಾಳೆ. ಡೇಟಿಂಗ್ ಆ್ಯಪ್‌ನಲ್ಲಿ ಪ್ರೀತಿಯಿಂದ ಮಾತನಾಡಿಸುುತ್ತಾ ಆತ್ಮೀಯವಾಗಿದ್ದಾಳೆ. ಯುವಕ ತನ್ನ ಜಾಲಕ್ಕೆ ಬಿದ್ದಿರುವುದು ಖಚಿತವಾಗುತ್ತಿದ್ದಂತೆ, ಇಂದಿರಾನಗರ ರೆಸ್ಟೋರೆಂಟ್‌ನಲ್ಲಿ ಭೇಟಿಯಾಗುವ ಪ್ರಸ್ತಾವನೆ ಮುಂದಿಟ್ಟಿದ್ದಾಳೆ. ಸಿಕ್ಕಿದ್ದೇ ಚಾನ್ಸ್ ಎಂದ ಯುವಕ ಒಕೆ ಎಂದಿದ್ದಾನೆ. ಇಂದಿರಾನಗರ ರೆಸ್ಟೋರೆಂಟ್‌ನಲ್ಲಿ ಇಬ್ಬರು ಭೇಟಿಯಾಗಿದ್ದಾರೆ. ಆ್ಯಪ್‌ನಲ್ಲೇ ಆತ್ಮೀಯವಾಗಿದ್ದ ಕಾರಣ ಇನ್ನೇನಿದೆ ಹೇಳಿ, ರೆಸ್ಟೋರೆಂಟ್‌ನಲ್ಲಿ ಇಬ್ಬರು ಮದ್ಯಪಾನ ಮಾಡಿದ್ದಾರೆ. ಯುವಕ ಒಂದೊಂದೆ ಗುಟುಕು ಹೀರುವಾಗಲೂ ಖುಷಿಯಿಂದ ಹಿಗ್ಗಿದ್ದಾನೆ.
ಒಂದು ರಾತ್ರಿಗೆ ಲಾಡ್ಜ್ ಬುಕ್
ರೆಸ್ಟೋರೆಂಟ್‌ನಲ್ಲಿ ಎಣ್ಣೆ ಪಾರ್ಟಿ ಬಳಿಕ ಕುಡಿದು ಮನೆಗೆ ಹೋಗುವುದಕ್ಕಿಂತ ಇಲ್ಲೇ ಲಾಡ್ಜ್ ಮಾಡೋಣ, ನಾಳೆ ಹೋಗೋಣ ಎಂದಿದ್ದಾಳೆ. ಇದಕ್ಕೂ ಒಕೆ ಎಂದ ಯುವಕ ಆಕೆಯ ಜೊತೆ ಲಾಡ್ಜ್‌ಗೆ ತೆರಳಿದ್ದಾಳೆ. ಆನ್‌ಲೈನ್ ಮೂಲಕ ಊಟವನ್ನೂ ಆರ್ಡರ್ ಮಾಡಿದ್ದಾಳೆ. ಊಟ ಮಾಡಿದ ಬಳಿಕ ನೀರು ಕೂಡ ಕೊಟ್ಟಿದ್ದಾಳೆ. ಇಷ್ಟೆ ನೋಡಿ, ನೀರು ಕುಡಿದು ಯುವಕನ ಪ್ರಜ್ಞೆ ತಪ್ಪಿದೆ. ಇತ್ತ ಮೊದಲ ಭೇಟಿಯಲ್ಲಿ ಇಂಪ್ರೆಸ್ ಮಾಡಲು ತನ್ನಲ್ಲಿರುವ ಎಲ್ಲಾ ಚಿನ್ನ ಅಂದರೆ ಚೈನ್, ಕೈಯಲ್ಲಿ ಬ್ರಾಸ್‌ಲೆಟ್, ಒಂದಿಷ್ಟು ಹಣ ಎಲ್ಲವನ್ನೂ ಹಿಡಿದು ಹೋಗಿದ್ದ. ಬೆಳಗ್ಗೆ ಎದ್ದು ನೋಡಿದಾಗ ತಾನು ಲಾಡ್ಜ್‌ನಲ್ಲಿದ್ದರೆ, ಯುವತಿ ಇರಲಿಲ್ಲ. ತನ್ನ ಚಿನ್ನಾಭರಣ, ನಗದು ಸೇರಿದಂತೆ ಎಲ್ಲವೂ ನಾಪತ್ತೆ. 6.89 ಲಕ್ಷರೂಪಾಯಿ ಮೌಲ್ಯದ ಚಿನ್ನಾಭರಣ, ದುಬಾರಿ ಹೆಡ್‌ಸೆಡ್, 10 ಸಾವಿರ ರೂಪಾಯಿ ನಗದು ಎಗರಿಸಿ ಕವಿಪ್ರಿಯಾ ಪರಾರಿಯಾಗಿದ್ದಾಳೆ. ಈ ಘಟನೆ ಸಂಬಂಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಯುವಕ ದೂರು ದಾಖಲಿಸಿದ್ದಾನೆ.
1.29 ಕೋಟಿ ರೂಪಾಯಿ ವಂಚನೆ
ಮತ್ತೊಂದು ಡೇಟಿಂಗ್ ಆ್ಯಪ್‌ನಲ್ಲಿ ಯುವತಿಯಿಂದ 1.29 ಕೋಟಿ ವಂಚನೆ ಪ್ರಕರಣ ದಾಖಲಾಗಿದೆ. ವೃದ್ದಾಶ್ರಮ, ಹೂಡಿಕೆ ಹೆಸರಲ್ಲಿ ಬೆಂಗಳೂರಿನ ವ್ಯಕ್ತಿಗೆ ವಂಚನೆ ಮಾಡಲಾಗಿದೆ. QUACK QUACK APP ಮೂಲಕ ವ್ಯಕ್ತಿಯೊಬ್ಬರಿಗೆ ಯುವತಿ ಪರಿಚಯವಾಗಿದ್ದಾಳೆ. ಸಲುಗೆ, ಮಾತುಕತೆ ಬೆಳೆದಿದೆ. ಮೇಘನಾ ರೆಡ್ಡಿ ಎಂದು ಯುವತಿ ಪರಿಚಯ ಮಾಡಿಕೊಂಡಿದ್ದಾಳೆ. ಬಳಿಕ ಇವರ ಚಾಟಿಂಗ್ ಟೆಲಿಗ್ರಾಂ ಆ್ಯಪ್ ಮೂಲಕ ಬೆಳೆದಿದೆ. ಇದೇ ವೇಳೆ ಯುವಕನ ಸೆಂಟಿಮೆಂಟ್, ಆತನ ಹಿನ್ನಲೆ, ಕುಟುಂಬ ಎಲ್ಲವನ್ನೂ ತಿಳಿದುಕೊಂಡಿದ್ದಾಳೆ. ಬಳಿಕ ನಿಮ್ಮ ತಂದೆಯ ಹೆಸರಿನಲ್ಲಿ ವದ್ಧಾಶ್ರಮ ಕಟ್ಟಿಸುವುದಾಗಿ ಯುವಕನಿಗೆ ಹೇಳಿದ್ದಾನೆ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಸಾಕು, ಅದರ ಲಾಭದಿಂದ ವೃದ್ಧಾಶ್ರಮ ಕಟ್ಟಿಸುವುದಾಗಿ ಯುವತಿ ಹೇಳಿದ್ದಾಳೆ.
ಯುವತಿ ಮಾತು ನಂಬಿ ಹಣ ಹೂಡಿಕೆ
ಯುವತಿ ಮಾತು ನಂಬಿದ ಈತ ಹಣ ಹೂಡಿಕೆ ಮಾಡಿದ್ದಾನೆ. ವೆಬ್ ಸೈಟ್ ಒಂದರ ಮೂಲಕ ಹಣ ಪಾವತಿ ಮಾಡಿದ್ದಾನೆ. ಹಂತಹಂತವಾಗಿ ಬರೋಬ್ಬರಿ 1.29 ಕೋಟಿ ರೂಪಾಯಿ ಹೂಡಿಕೆ ಮಾಡಿಸಿದ್ದಾಳೆ. ಆದರೆ ಮೇಘನಾ ರೆಡ್ಡಿ ಹೂಡಿಕೆ ಮಾಡಿದ ಹಣ, ಲಾಭ ಯಾವುದು ನೀಡದೆ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ಉತ್ತರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
