ಪ್ರತಿ ಮಂತ್ರಿಗಿರಿ ಹಿಂದೆ ನೂರೆಂಟು ಲೆಕ್ಕಾಚಾರ... ಯಾರಿಗೆ ಪಟ್ಟ..? ಯಾಕೆ ಪಟ್ಟ..? ಏನಿದರ ಗುಟ್ಟು?

ಸಿಎಮ್ ಡಿಕೆ ಶಿವಕುಮಾರ್ ಅವರ ಕ್ಯಾಬಿನೆಟ್ನ ಮೊದಲ ಪಟ್ಟಿ ನೋಡ್ತಾ ಇದ್ರೆ, ಜಾತಿ ಲೆಕ್ಕಾಚಾರನಾ ಎಷ್ಟು ನೀಟಾಗಿ ನಿಭಾಯಿಸಿದಾರೆ ಅನ್ನೋದು ಅರ್ಥವಾಗುತ್ತೆ. ಅದೇ ಥರ, ಕರ್ನಾಟಕದ ನಾನಾ ಭಾಗಗಳನ್ನೂ ಬ್ಯಾಲೆನ್ಸ್ ಮಾಡಿದೆ

Share this Video
  • FB
  • Linkdin
  • Whatsapp

ರಾಜ್ಯದಲ್ಲೀಗ ಹೊಸ ಪರ್ವ. ಅದು ಶಿವಪರ್ವ. ಡಿಕೆ ಶಿವಕುಮಾರ್, ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದಾರೆ. ಅದರ ಬೆನ್ನಲ್ಲೇ ಶಿವಸೇನೆಯೂ ಸರ್ವಥಾ ಸನ್ನದ್ಧವಾಗಿದೆ. ಅಂದ್ರೆ, ಮಂತ್ರಿಮಂಡಲ ರಚನೆಯಾಗಿದೆ. ಡಿಕೆಶಿ ಅವರ ಹೊಸ ಸಂಪುಟದ ಪಟ್ಟಿ ನೋಡಿದ್ರೆ ಹಲವರಿಗೆ ಬರೀ ಹೆಸರುಗಳು ಕಾಣ್ತಾವೆ. ಆದ್ರೆ ಇನ್ನೂ ಸೂಕ್ಷ್ಮವಾಗಿ ನೋಡಿದ್ರೆ ಯಾರಿಗೂ ಕಾಣದ ಒಗಟುಗಳು, ಒಳಗುಟ್ಟುಗಳು ಎದ್ದು ಕಾಣ್ತಾವೆ. ಅದೇನು ಅನ್ನೋದರ ಇನ್ ಡೆಪ್ತ್ ಸ್ಟೋರಿ. ಇಲ್ಲಿದೆ ನೋಡಿ

Related Video