ಸಿಂಪಲ್ ಸುನಿ ನಿರ್ದೇಶನದ, ಅನಿಲ್ ಶೆಟ್ಟಿ ನಾಯಕನಾಗಿ ನಟಿಸಿರುವ ‘ಲಂಬೋದರ 2.0’ ಸಿನಿಮಾದಲ್ಲಿ ನೈಜ ಹ್ಯೂಮನಾಯ್ಡ್ ರೋಬೋಟ್ ನಟನೆ ಮಾಡಿದೆ. ಈ ಪ್ರಯತ್ನ ‘ಭಾರತೀಯ ಚಿತ್ರರಂಗದಲ್ಲೇ ಮೊದಲು’ ಎಂದು ಚಿತ್ರತಂಡ ತಿಳಿಸಿದೆ.
ಸಿಂಪಲ್ ಸುನಿ ನಿರ್ದೇಶನದ, ಅನಿಲ್ ಶೆಟ್ಟಿ ನಾಯಕನಾಗಿ ನಟಿಸಿರುವ ‘ಲಂಬೋದರ 2.0’ ಸಿನಿಮಾದಲ್ಲಿ ನೈಜ ಹ್ಯೂಮನಾಯ್ಡ್ ರೋಬೋಟ್ ನಟನೆ ಮಾಡಿದೆ. ಈ ಪ್ರಯತ್ನ ‘ಭಾರತೀಯ ಚಿತ್ರರಂಗದಲ್ಲೇ ಮೊದಲು’ ಎಂದು ಚಿತ್ರತಂಡ ತಿಳಿಸಿದೆ.
ಬೆಂಗಳೂರು ಮೂಲದ ‘ಮಚಾನಿ ರೋಬೋಟಿಕ್ಸ್’ ಸಂಸ್ಥೆ ಸಿದ್ಧಪಡಿಸಿರುವ ಜಿಯಾ ಎಂಬ ಸುಧಾರಿತ ಹ್ಯೂಮನಾಯ್ಡ್ ರೋಬೋಟ್ ಪ್ರಮುಖ ಪಾತ್ರದಲ್ಲಿ ನಟಿಸಿದೆ ಎಂದು ಚಿತ್ರತಂಡ ತಿಳಿಸಿದೆ. ಈ ಕುರಿತು ನಿರ್ದೇಶಕ ಸುನಿ, ‘ಜಿಯಾ ಪಾತ್ರ ಸಿನಿಮಾ ಪೂರ್ತಿ ಇರುತ್ತದೆ. ನಾವು ಪ್ರಾಂಪ್ಟ್ ಕೊಟ್ಟು ಆ ರೋಬೋಟ್ ಅನ್ನು ನಮಗೆ ಬೇಕಾದಂತೆ ನಟಿಸುವಂತೆ ಮಾಡಿದ್ದೇವೆ. ಇದೊಂದು ವಿಭಿನ್ನ ಪ್ರಯತ್ನ, ಹೊಸ ಅನುಭವ’ ಎಂದು ಹೇಳುತ್ತಾರೆ.
ಈ ಹಿಂದೆ ಸಿನಿಮಾಗಳಲ್ಲಿ ಕಂಪ್ಯೂಟರ್ ಗ್ರಾಫಿಕ್ಸ್ ಬಳಸಲಾಗುತ್ತಿತ್ತು ಅಥವಾ ನಟರೇ ರೋಬೋಟ್ ವೇಷ ಧರಿಸುತ್ತಿದ್ದರು ಎಂದು ತಂಡ ತಿಳಿಸಿದೆ. ಸೈನ್ಸ್-ಫಿಕ್ಷನ್ ಹಾಗೂ ಸೋಶಿಯಲ್ ಥ್ರಿಲ್ಲರ್ ಸಿನಿಮಾ ಇದಾಗಿದ್ದು, ಡಿಜಿಟಲ್ ಯುಗದಲ್ಲಿ ಸಂತೋಷ ಹುಡುಕುವವನ ಕತೆಯನ್ನು ಒಳಗೊಂಡಿದೆ. ಸಾಚಿ ಬಿಂದ್ರಾ ನಾಯಕಿಯಾಗಿ ನಟಿಸಿದ್ದಾರೆ. ಬಾಲಿವುಡ್‌ನ ಜನಪ್ರಿಯ ನಟ ಕುನಾಲ್ ಕಪೂರ್ ಈ ಚಿತ್ರದ ಮೂಲಕ ಅಧಿಕೃತವಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಸಾಧ್ವಿ ಪಾತ್ರದಲ್ಲಿ ಮೇಘನಾ ಗಾಂವ್ಕರ್
ಮೇಘನಾ ಗಾಂವ್ಕರ್ ಈಗ ಸಾಧ್ವಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಗ್ಲಾಮರಸ್ ನಟಿಯನ್ನು ಸಾಧ್ವಿಯಾಗಿಸಿರುವುದು ‘ಲಂಬೋದರ 2.0’ ಚಿತ್ರ. ಸಿಂಪಲ್ ಸುನಿ ನಿರ್ದೇಶನದ, ಅನಿಲ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ಚಿತ್ರವಿದು. ಮೇಘನಾ ಗಾಂವ್ಕರ್, ಚಿತ್ರದಲ್ಲಿ ನಾನು ಒಬ್ಬ ಆಧ್ಯಾತ್ಮಿಕ ಗುರು. ಈ ಪಾತ್ರ ಆಡುವ ಮಾತುಗಳು ಹಾಗೂ ವಿಚಾರಗಳ ಜೊತೆಗೆ ನಾನು ಸಂಪೂರ್ಣವಾಗಿ ಕನೆಕ್ಟ್ ಆಗಲು ಸಾಧ್ಯವಾಯಿತು.
ಯಾಕೆಂದರೆ ಕಳೆದ ಕೆಲವು ವರ್ಷಗಳಿಂದ ನನ್ನ ವೈಯಕ್ತಿಕ ಬದುಕಿನಲ್ಲಿಯೂ ಒಂದು ಬಗೆಯ ನೆಮ್ಮದಿ ಹಾಗೂ ಆಂತರಿಕ ಶಾಂತಿ ದೊರೆತಿದೆ. ಗ್ಲಾಮರಸ್ ಅಥವಾ ತೆರೆಯ ಮೇಲೆ ನಾಯಕನ ಪ್ರೇಯಸಿಯಾಗಿ ಕಾಣಿಸಿಕೊಳ್ಳುವುದಕ್ಕೆ ಸೀಮಿತವಾಗಬಾರದು. ಇಂಥ ವಿಭಿನ್ನ ಪಾತ್ರಗಳಲ್ಲೂ ನಟಿಸಬೇಕು ಎಂದಿದ್ದಾರೆ.


