ಪುನೀತ್ ರಾಜಕುಮಾರ್ ಅಭಿನಯದ ‘ರಣವಿಕ್ರಮ ಸಿನಿಮಾ’ ದಲ್ಲಿ ನಾಯಕಿಯಾಗಿ ಬಾಲಿವುಡ್ ನಟಿ ಅದಾ ಶರ್ಮಾ ನಟಿಸಿದ್ದರು. ಇದೀಗ ಬರೋಬ್ಬರಿ 11 ವರ್ಷಗಳ ಬಳಿಕ, ಅದಾ ಶರ್ಮಾ ಮತ್ತೊಂದು ಕನ್ನಡ ಸಿನಿಮಾ ಮೂಲಕ ಎಂಟ್ರಿ ಕೊಟ್ಟಿದ್ದು, ನಟಿಯ ಫಸ್ಟ್ ಲುಕ್ ಇದೀಗ ವೈರಲ್ ಆಗಿದೆ.
ಕನ್ನಡಕ್ಕೆ ಮತ್ತೆ ಎಂಟ್ರಿ ಕೊಟ್ಟ ‘ರಣವಿಕ್ರಮ’ ಬೆಡಗಿ
ಪುನೀತ್ ರಾಜಕುಮಾರ್ ಅಭಿನಯದ ಬ್ಲಾಕ್ ಬಸ್ಟರ್ ಸಿನಿಮಾ, ‘ರಣವಿಕ್ರಮ’. ಈ ಸಿನಿಮಾದಲ್ಲಿ ಅಪ್ಪುವಿಗೆ ನಾಯಕಿಯಾಗಿ ಬಾಲಿವುಡ್ ಬ್ಯೂಟಿ ಅದಾ ಶರ್ಮಾ ನಟಿಸಿದ್ದರು. ಈ ಸಿನಿಮಾ ಬಿಡುಗಡೆಯಾಗಿ ಇದೀಗ 11 ವರ್ಷ ಕಳೆದಿದ್ದು, ಸುದೀರ್ಘ ಸಮಯದ ಬಳಿಕ ಇದೀಗ ನಟಿ ಮತ್ತೆ ಕನ್ನಡ ಚಿತ್ರರಂಗಕ್ಕೆ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. ಚಂದನವನದಲ್ಲಿ ಸದ್ಯ ಭಾರಿ ಕುತೂಹಲ ಮೂಡಿಸಿರುವ ಸಿನಿಮಾದಲ್ಲಿ ನಟಿಸುವ ಮೂಲಕ ನಟಿ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ.
ರಾಮರಸ ಸಿನಿಮಾದಲ್ಲಿ ಅದಾ ಶರ್ಮಾ
ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಚಿತ್ರ ‘ರಾಮರಸ’ ತಮ್ಮ ಸಂಪೂರ್ಣ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಸದ್ಯ ಪೋಸ್ಟ್-ಪ್ರೊಡಕ್ಷನ್ ಹಂತಕ್ಕೆ ಕಾಲಿಟ್ಟಿದೆ.ಈ ಸಂದರ್ಭದಲ್ಲಿ ಸಿನಿಮಾದಲ್ಲಿ ಮುಖ್ಯ ಪಾತ್ರಗಳನ್ನು ರಿವೀಲ್ ಮಾಡುತ್ತಿದ್ದಾರೆ. ಇದೀಗ ಚಿತ್ರತಂಗ ನಟಿ ಅದಾ ಶರ್ಮಾ ಅವರ ಪೋಸ್ಟರ್, ಫಸ್ಟ್ ಲುಕ್ ರಿವೀಲ್ ಮಾಡಿದ್ದು, ನಟಿ ಡಿವೈನ್ ಲುಕ್ ನಲ್ಲಿ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ.
ಚಿತ್ರತಂಡ ಹಂಚಿಕೊಂಡ ಪೋಸ್ಟ್ ನಲ್ಲಿ ಏನಿದೆ?
ಇಡೀ ಸೃಷ್ಟಿಯೇ ಪರಾಶಕ್ತಿಯ ಲೀಲೆ. ಹಾಲುಣಿಸುವವಳೂ ತಾಯಿ. ಮಣ್ಣು ಮುಕ್ಕಿಸುವವಳೂ ತಾಯಿ. ಆದರೆ ಹಾಲು ಯಾವುದು, ಮಣ್ಣು ಯಾವುದು ಅನ್ನುವದರ ಅರಿವು ಪಡೆಯುವುದೇ ಇಡೀ ಬದುಕಿನ ಮಾಯೆ. ದಶ ಮಹಾವಿದ್ಯೆಯ ಸಾರವ ಪರಿಚಯಿಸಲು ತಾಯಿ ರಾಮರಸದಲ್ಲಿ ಯಾವ ರೂಪ ತಾಳಿ ಬರಲಿದ್ದಾಳೆ? ಅದನ್ನು ನೋಡಿಯೇ ಸವಿಯಬೇಕು.. ಎಂದು ಚಿತ್ರರಂಗ ಬರೆದುಕೊಂಡಿದ್ದು, ಅದಾ ಶರ್ಮಾತ್ರಿಶೂಲ್ ಹಿಡಿದಿರುವ ರೌದ್ರ ರೂಪದ ದೇವಿಯಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಎಲ್ಲೆಡೆ ಈ ಪೋಸ್ಟರ್ ವೈರಲ್ ಆಗುತ್ತಿದೆ. ಅದಾ ಶರ್ಮಾ ಯಾವ ದೇವಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ ಅನ್ನೋದು ಇನ್ನಷ್ಟೇ ರಿವೀಲ್ ಆಗಬೇಕಿದೆ.
ರಾಮರಸ ಚಿತ್ರದಲ್ಲಿ ತಾರೆಯರ ದಂಡು
ಬಿಎಂ ಗಿರೀಶ್ ನಿರ್ದೇಶನದ, ಗುರು ದೇಶಪಾಂಡೆ ಮತ್ತು ವಿಕ್ರಂ ಆರ್ಯ ನಿರ್ಮಾಣದ ಈ ಚಿತ್ರದಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್, ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್, ನಟಿ ಹೆಬ್ಬಾ ಪಟೇಲ್ ಸೇರಿ ಹಲವಾರು ತಾರೆಯರ ದಂಡೆ ಇದೆ. ಈ ಚಿತ್ರಕ್ಕೆ ಬಿ.ಜೆ.ಭರತ್ ಮ್ಯೂಸಿಕ್ ಮಾಡಿದ್ದಾರೆ. ವಿ.ನಾಗೇಂದ್ರ ಪ್ರಸಾದ್, ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದಿದ್ದಾರೆ. ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲ.


