Asianet Suvarna News Asianet Suvarna News

ಬೆತ್ತಲೆ ಶೂಟಿಂಗ್​ ಮಾಡಿ ಅನುಭವ ತಿಳಿಸಿದ್ದ 'ಹೆಬ್ಬುಲಿ' ನಟಿ 2ನೇ ಮದ್ವೆಗೆ ರೆಡಿ: ವಿಡಿಯೋ ವೈರಲ್

ಬೆತ್ತಲೆ ಶೂಟಿಂಗ್​ ಮಾಡಿ ಅದರ ಅನುಭವ ತಿಳಿಸಿದ್ದ 'ಹೆಬ್ಬುಲಿ' ನಟಿ 2ನೇ ಮದ್ವೆಗೆ ರೆಡಿ: ವಿಡಿಯೋ ವೈರಲ್
 

Hebbuli actress Amala Paul who shot naked  for 2nd Marraige suc
Author
First Published Oct 26, 2023, 5:10 PM IST

 ಕಿಚ್ಚ ಸುದೀಪ್‌ ಅಭಿನಯದ ಹೆಬ್ಬುಲಿ ನಟಿ ಅಮಲಾ ಪೌಲ್‌ ಎಲ್ಲರಿಗೂ ಚಿರಪರಿಚಿತರು. ಬೆರಳೆಣಿಕೆ ಕನ್ನಡ ಸಿನಿಮಾದಲ್ಲಿ ನಟಿಸಿದ್ದರೂ ತೆಲುಗು, ತಮಿಳು ಸಿನಿಮಾಗಳಲ್ಲಿ ಹೆಚ್ಚು ನಟಿಸಿದ್ದಾರೆ. ಭಾರತೀಯ ಸಿನಿಮಾದಲ್ಲಿ ಬೆತ್ತಲೆಯಾಗಿ ನಟಿಸಿದ ಕೆಲವೇ ಕೆಲವು ನಟಿಯರ ಪೈಕಿ ಅಮಲಾ ಪೌಲ್‌  ಒಬ್ಬರು.  ಆದೈ ಸಿನಿಮಾದಲ್ಲಿ ಅಮಲಾ ಮೈಚಳಿ ಬಿಟ್ಟ ನಟಿಸಿದ್ದಾರೆ. ಸಂಪೂರ್ಣ ಬೆತ್ತಲಾಗಿ ಇವರು ನಟಿಸಿದ್ದಾರೆ. ಇವರ ಈ ದೃಶ್ಯವನ್ನು ಕಂಡು ಸಿನಿ ಪ್ರಿಯರು ಹುಬ್ಬೇರಿಸಿದ್ದರು. ಆದರೆ ತಾವು ಹೀಗೆ ನಟಿಸಲು ಹೇಗೆ ಸಾಧ್ಯವಾಯಿತು ಎಂಬ ಬಗ್ಗೆ ಹೇಳಿಕೆ ನೀಡಿ ಮತ್ತಷ್ಟು ಸದ್ದು ಮಾಡಿದ್ದವರು ಅಮಲಾ ಪೌಲ್​.  ಆದೈ ಸಿನಿಮಾದಲ್ಲಿ ಬಟ್ಟೆ ಇಲ್ಲದೆ ನಟಿಸುವುದು ಸವಾಲಾಗಿತ್ತು.

ಶೂಟಿಂಗ್​ ಸಮಯದಲ್ಲಿ ನನ್ನೊಂದಿಗೆ 15 ಮಂದಿ ಇದ್ದರು. ಒಬ್ಬ ಮಹಿಳೆಯೂ ಕೂಡ ಇರಲಿಲ್ಲ. ಕ್ಯಾಮೆರಾಮನ್, ಲೈಟ್ ಮ್ಯಾನ್, ಡೈರೆಕ್ಟರ್ ಹೀಗೆ ಒಟ್ಟು 15 ಜನ ಕೆಲಸ ಮಾಡುತ್ತಿದ್ದರು.  ಇವರೆಲ್ಲರ ಮುಂದೆ ಬಟ್ಟೆ ಇಲ್ಲದೆ ಹೇಗೆ ಪ್ರದರ್ಶನ ನೀಡುವುದು ಎಂಬ ಚಿಂತೆಯಲ್ಲಿದ್ದೆ. ಈ ಮನಃಸ್ಥಿತಿಯಲ್ಲಿದ್ದರೆ ದೃಶ್ಯಗಳು ಖಂಡಿತಾ ಸರಿಯಾಗಿ ಬರುವುದಿಲ್ಲ ಎಂದರಿತು, ನನಗೆ ಈ ಕ್ಷಣಕ್ಕೆ 15 ಗಂಡಂದಿರಿದ್ದಾರೆ ಎಂದು ಭಾವಿಸಿಕೊಂಡು ನಟಿಸಲು ಪ್ರಾರಂಭಿಸಿದೆ ಎಂದಿದ್ದರು.

ಇದೀಗ ನಟಿ 2ನೇ ಮದ್ವೆಗೆ ಸಜ್ಜಾಗಿದ್ದಾರೆ.  ಗೆಳೆಯ ಜಗತ್ ದೇಸಾಯಿ ಜೊತೆ ಅಮಲಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ವಿಡಿಯೋನ ಜಗತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.  ಇವರ ಮೊದಲ ಪತಿ ತಮಿಳು ನಿರ್ದೇಶಕ ಎ.ಎಲ್. ವಿಜಯ್. ಇವರ ಜೊತೆ ಅಮಲಾ ಪೌಲ್ ಅವರು 2014ರಲ್ಲಿ ಮದುವೆ ಆದರು. ಆದರೆ ಇವರ ಸಂಬಂಧ ಹೆಚ್ಚು ಸಮಯ ಉಳಿಯಲಿಲ್ಲ. ಮೂರೇ ವರ್ಷಕ್ಕೆ ಇವರು ವಿಚ್ಛೇದನ ಪಡೆದರು.   

ನನ್ನ ನೋಡಿ ದೀಪಿಕಾ ಅಮ್ಮಾ ಛೇ ಯಾರಿವ್ನು ಅಂದಿದ್ರು: ಮದ್ವೆ ವಿಡಿಯೋ ರಿಲೀಸ್​ ಮಾಡಿ ರಣವೀರ್​ ಮಾತು!

ಈಗ ಅಮಲಾ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಜಗತ್ ದೇಸಾಯಿ ಜೊತೆ ಈಗ ಅವರು ಮದುವೆ ಆಗುತ್ತಿದ್ದಾರೆ. ಬರ್ತ್​ಡೇ ದಿನವೇ ಈ ಸುದ್ದಿಯನ್ನು ನಟಿ ಘೋಷಿಸಿದ್ದಾರೆ. ಈ ಕುರಿತು ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಸ್ನೇಹಿತ ಪ್ರಪೋಸ್​ ಮಾಡುವ ವಿಡಿಯೋ ಇದಾಗಿದೆ. ಈ ಜೋಡಿ ಹಂಚಿಕೊಂಡಿರುವ ವಿಡಿಯೋದಲ್ಲಿ ಎಂಗೇಜ್​ಮೆಂಟ್ ಸೆಲೆಬ್ರೇಷನ್ ಹೇಗಿತ್ತು ಎನ್ನುವ ಝಲಕ್ ಇದೆ. ಮಂಡಿ ಊರಿ ಅಮಲಾಗೆ ಜಗತ್ ಪ್ರಪೋಸ್ ಮಾಡಿದ್ದಾರೆ. ಇಬ್ಬರೂ ಪರಸ್ಪರ ಕಿಸ್ ಮಾಡಿಕೊಂಡಿದ್ದಾರೆ. ಈ ವಿಡಿಯೋಗೆ ಜಗತ್ ಅವರು ‘ನನ್ನ ಕ್ವೀನ್ ಯೆಸ್ ಎಂದಳು. ಹ್ಯಾಪಿ ಬರ್ತ್​ಡೇ ಲವ್’ ಎಂದು ಬರೆದುಕೊಂಡಿದ್ದಾರೆ.

ಅಂದಹಾಗೆ, ಕೇರಳ ಮೂಲದ ಅಮಲಾ, ನೀಲತಾಮರನ್​ ಹೆಸರಿನ ಮಲಯಾಳಂ ಸಿನಿಮಾ ಮೂಲಕ ಚಿತ್ರರಂಗ ಪದಾರ್ಪಣೆ ಮಾಡಿದರು. ಆದರೆ, ಕಾಲಿವುಡ್​ನ ಮೈನಾ ಚಿತ್ರ​ದ ಬಳಿಕ ಅಮಲಾ ಅದೃಷ್ಟವೇ ಬದಲಾಯಿತು. ವಿಜಯ್​, ವಿಕ್ರಮ್​, ಸೂರ್ಯ, ಆರ್ಯ, ಜಯಂ ರವಿ, ಧನುಷ್​ ಸೇರಿದಂತೆ ಕಾಲಿವುಡ್​ ಸೂಪರ್​ಸ್ಟಾರ್​ಗಳ ಜೊತೆ ನಟಿಸಿದ್ದಾರೆ. ಅಮಲಾ ಪೌಲ್​ ಅವರು ಸಿನಿಮಾ ಮಾತ್ರವಲ್ಲದೆ, ವೈಯಕ್ತಿಕ ಜೀವನದಿಂದಲೂ ಬಹಳ ಸುದ್ದಿಯಾಗಿದ್ದರು. ನಿರ್ದೇಶಕ ವಿಜಯ್​ ಜತೆಗಿನ ಮದುವೆ ಹಾಗೂ ಡಿವೋರ್ಸ್​ ಬಹಳ ಚರ್ಚೆಯಾಯಿತು. ಅಲ್ಲದೆ, ಮಾಜಿ ಬಾಯ್​ಫ್ರೆಂಡ್​ ಜತೆಗಿನ ಲಿಪ್​ಲಾಕ್​ ಫೋಟೋಗಳು ವೈರಲ್​​ ಆಗಿದ್ದವು.  ನಟಿ ಅಮಲಾ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದು ‘ಕ್ರಿಸ್ಟೋಫರ್’ ಸಿನಿಮಾದಲ್ಲಿ. ಅಜಯ್ ದೇವಗನ್ ನಟನೆಯ ‘ಭೋಲಾ’ ಸಿನಿಮಾದಲ್ಲಿ ಅಮಲಾ ಅತಿಥಿ ಪಾತ್ರ ಮಾಡಿದ್ದರು. ಈಗ ಮೂರು ಮಲಯಾಳಂ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ.

ಇಬ್ಬರು ಹಿಂದೂ ಪತ್ನಿಯರಿಗೆ ಡಿವೋರ್ಸ್​ ಕೊಟ್ಟ ಆಮೀರ್​ ಖಾನ್​ ಬಾಳಲ್ಲಿ 3ನೇ ಎಂಟ್ರಿ ಈ ನಟಿ?
 

 
 
 
 
 
 
 
 
 
 
 
 
 
 
 

A post shared by Jagat Desai (@j_desaii)

Follow Us:
Download App:
  • android
  • ios