Asianet Suvarna News Asianet Suvarna News

ನನ್ನ ನೋಡಿ ದೀಪಿಕಾ ಅಮ್ಮಾ ಛೇ ಯಾರಿವ್ನು ಅಂದಿದ್ರು: ಮದ್ವೆ ವಿಡಿಯೋ ರಿಲೀಸ್​ ಮಾಡಿ ರಣವೀರ್​ ಮಾತು!

ದೀಪಿಕಾ ಪಡುಕೋಣೆ ಅವರ ಅಮ್ಮನಿಗೆ ಮಗಳು ರಣವೀರ್​ ಸಿಂಗ್​ ಅವರನ್ನು ಮದ್ವೆಯಾಗೋದು ಇಷ್ಟವಿರಲಿಲ್ಲವಂತೆ. ಈ ಬಗ್ಗೆ ನಟ ಹೇಳಿದ್ದೇನು? 
 

Ranveer Singh Reveals His MomIn Law Was Shocked When Deepika Said Yes To Him suc
Author
First Published Oct 26, 2023, 3:53 PM IST

ಬಾಲಿವುಡ್​ನ ಕ್ಯೂಟ್​ ಕಪಲ್​ಗಳಲ್ಲಿ ಒಬ್ಬರು ರಣವೀರ್​ ಸಿಂಗ್​ ಮತ್ತು ದೀಪಿಕಾ ಪಡುಕೋಣೆ. ಈ ಜೋಡಿ ಮದುವೆಯಾಗಿ ಬರುವ ನವೆಂಬರ್​ 14ಕ್ಕೆ ಐದು ವರ್ಷಗಳು ಕಳೆಯಲಿವೆ. 2018ರ ನವೆಂಬರ್​ 14ರಂದು ಜೋಡಿ  ಇಟಲಿಯಲ್ಲಿ ದಾಂಪತ್ಯಕ್ಕೆ ಕಾಲಿಟ್ಟಿತು. ಕುತೂಹಲದ ವಿಷಯವೇನೆಂದರೆ, ಮದುವೆಯಾಗಿ ಐದು ವರ್ಷವಾದರೂ ಇವರ ವಿಡಿಯೋ ರಿಲೀಸ್​ ಮಾಡಿರಲಿಲ್ಲ. ಇದೀಗ ಅವರ ಫ್ಯಾನ್ಸ್​ಗೆ ಗುಡ್​ ನ್ಯೂಸ್​ ಕೊಟ್ಟಿರೋ ಜೋಡಿ, ಮದುವೆಯ ವಿಡಿಯೋ ರಿಲೀಸ್​ ಮಾಡಿದೆ. ಅದು ಸೋಷಿಯಲ್​ ಮೀಡಿಯಾದಲ್ಲಿ ಅಲ್ಲ, ಬದಲಿಗೆ  ‘ಕಾಫಿ ವಿತ್ ಕರಣ್ ಸೀಸನ್ 8’ರಲ್ಲಿ! ಕರಣ್ ಜೋಹರ್ ತಮ್ಮ ಸೆಲೆಬ್ರಿಟಿ ಚಾಟ್ ಶೋ 8 ನೇ ಸೀಸನ್‌ನೊಂದಿಗೆ ಮತ್ತೆ ಮರಳಿದ್ದು, ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಮೊದಲ ಬಾರಿಗೆ ಕಾಫಿ ವಿಥ್ ಕರಣ್ ಶೋನಲ್ಲಿ ಭಾಗವಹಿಸಿದ್ದಾರೆ. ಹೊಸ ಸೀಸನ್​​​ನಲ್ಲಿ ಅವರ ಮೊದಲ ಅತಿಥಿಗಳು ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ.


ಇದೇ ಸಂದರ್ಭದಲ್ಲಿ ರಣವೀರ್​ ಕೆಲವೊಂದು ವಿಷಯಗಳನ್ನು ರಿವೀಲ್​ ಮಾಡಿದ್ದಾರೆ. ಅದರಲ್ಲಿ ಮುಖ್ಯವಾಗಿ ಗಮನ ಸೆಳೆದಿದ್ದು ದೀಪಿಕಾ ಜೊತೆ ಅವರ ಲವ್​ ಸ್ಟೋರಿ. ಈ ಸಂದರ್ಭದಲ್ಲಿ ರಣಬೀರ್​,  ಮಾಲ್ಡೀವ್ಸ್‌ನಲ್ಲಿ ದೀಪಿಕಾರನ್ನು  ಪ್ರಪೋಸ್‌ ಮಾಡಿದುದಾಗಿ  ಹೇಳಿದ್ದಾರೆ. ರಾಮ್ ಲೀಲಾ ಚಿತ್ರ ಬಿಡುಗಡೆಯಾದ ಬೆನ್ನಲ್ಲೇ ದೀಪಿಕಾ ಪಡುಕೋಣೆಗೆ ರಣವೀರ್ ಸಿಂಗ್ ಪ್ರಪೋಸ್‌ ಮಾಡಿದ್ದರಂತೆ. ಡೇಟಿಂಗ್ ಮಾಡಿದ ಆರು ತಿಂಗಳಲ್ಲೇ ದೀಪಿಕಾ ತನಗೆ ಪರ್ಫೆಕ್ಟ್ ಎಂದು ತಿಳಿದೆ ಎಂದು ರಣವೀರ್​ ತಿಳಿಸಿದರು. ದೀಪಿಕಾಗೆ ಉಂಗುರ ತೊಡಿಸುವ ಮೂಲಕ ಮದುವೆಗೆ ಪ್ರಪೋಸ್‌ ಮಾಡಿದೆ.  ಇದಕ್ಕಾಗಿ ನನ್ನ ತಾಯಿ ಮತ್ತು ಸಹೋದರಿಯೊಂದಿಗೆ ತೆರಳಿ ದೀಪಿಕಾಗೆ ರಹಸ್ಯವಾಗಿ ಉಂಗುರ ಖರೀದಿಸಿದ್ದೆ. ಇದಾದ ನಂತರ  ಮಾಲ್ಡೀವ್ಸ್‌ಗೆ ಹೋಗಿ ಪ್ರಪೋಸ್​ ಮಾಡಿದೆ.  ದೀಪಿಕಾಗೆ ಉಂಗುರವನ್ನು ನೀಡುವ ಮೂಲಕ ಮದುವೆಯ ಪ್ರಪೋಸ್‌ ಮಾಡಿದಾಗ,  ದೀಪಿಕಾ ತಕ್ಷಣ ಒಪ್ಪಿಕೊಂಡಳು ಎಂದು ಹೇಳಿದ್ದಾರೆ.  

ಜವಾನ್ ಜೋಡಿ ಶಾರುಖ್​- ದೀಪಿಕಾಗೆ ಮಗು ಹುಟ್ಟಿಸಿದ ಫ್ಯಾನ್ಸ್​! ನಾಮಕರಣವನ್ನೂ ಮಾಡಿದ್ದಾರೆ ನೋಡಿ

ಆದರೆ ಇವರ ಮದುವೆ ಅಷ್ಟು ಈಸಿಯಾಗಿ ನಡೆಯಲಿಲ್ಲ. ಇದಕ್ಕೆ ಕಾರಣ,  ತಮ್ಮನ್ನು ದೀಪಿಕಾ ಕುಟುಂಬದವರು ಸುಲಭದಲ್ಲಿ ಒಪ್ಪಿಕೊಳ್ಳುತ್ತಾರೆ ಎಂದು ರಣವೀರ್​ ಭಾವಿಸಿದ್ದರಂತೆ. ಆದರೆ  ಅದು ಹಾಗಾಗಲಿಲ್ಲ ಎಂದು ಹೇಳಿದ್ದಾರೆ.  ಆರಂಭದಲ್ಲಿ ದೀಪಿಕಾ ಅವರ ತಾಯಿ ಈ ಸಂಬಂಧದ ಬಗ್ಗೆ ಸಂತೋಷವಾಗಿರಲಿಲ್ಲ. ದೀಪಿಕಾ ಅವರ ಬಳಿ, ಈ ಹುಡುಗ ಯಾರು? ಎಂದು ಕೇಳಿದ್ದರು. ರಣವೀರ್ ಪ್ರಕಾರ, ದೀಪಿಕಾ ಅವರ ತಾಯಿಯನ್ನು ಮದುವೆಗೆ ಒಪ್ಪಿಸಲು ಒಂದು ವರ್ಷ ತೆಗೆದುಕೊಂಡಿತು. ಆದರೆ ನಂತರ ದೀಪಿಕಾ ತಾಯಿ ಈ ಸಂಬಂಧವನ್ನು ಒಪ್ಪಿಕೊಂಡರು. ಇಂದು ನಾನು ದೀಪಿಕಾ ಅವರ ತಾಯಿಯ ನೆಚ್ಚಿನ ವ್ಯಕ್ತಿ ಎಂದು ಹೇಳಿದ್ದಾರೆ. 

ರಿಲೀಸ್​ ಮಾಡಿರೋ ವಿಡಿಯೋದಲ್ಲಿ, ಮದುವೆಯ ಸೆಲೆಬ್ರೇಷನ್ ನೋಡಬಹುದು.  ನಿಶ್ಚಿತಾರ್ಥ, ಮೆಹೆಂದಿ, ಆನಂದ್​​​ ಕರಜ್ ಮತ್ತು ಮಂಟಪ ಸೇರಿದಂತೆ ಹಲವು ಆಚರಣೆಗಳನ್ನು ನೋಡಬಹುದು.  ವಿಡಿಯೋದಲ್ಲಿ ದೀಪಿಕಾ ಪಡುಕೋಣೆ ತಂದೆ ಹಾಗೂ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಕೂಡ ತಮ್ಮ ಅಳಿಯನನ್ನು ಹೊಗಳಿರುವುದು ಕಂಡುಬಂದಿದೆ. ಪ್ರಕಾಶ್ ಪಡುಕೋಣೆ, ಅಳಿಯ ತಮ್ಮ ಕುಟುಂಬಕ್ಕೆ ಜೀವ ತುಂಬಿದರು. ರಣವೀರ್ ಉತ್ಸಾಹಭರಿತ ವ್ಯಕ್ತಿ. ತನ್ನ ಕುಟುಂಬಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತಾನೆ ಎಂದು ಪ್ರಶಂಸಿಸಿದ್ದಾರೆ.

ಇಬ್ಬರು ಹಿಂದೂ ಪತ್ನಿಯರಿಗೆ ಡಿವೋರ್ಸ್​ ಕೊಟ್ಟ ಆಮೀರ್​ ಖಾನ್​ ಬಾಳಲ್ಲಿ 3ನೇ ಎಂಟ್ರಿ ಈ ನಟಿ?

 

Follow Us:
Download App:
  • android
  • ios