ಇಬ್ಬರು ಹಿಂದೂ ಪತ್ನಿಯರಿಗೆ ಡಿವೋರ್ಸ್​ ಕೊಟ್ಟ ಆಮೀರ್​ ಖಾನ್​ ಬಾಳಲ್ಲಿ 3ನೇ ಎಂಟ್ರಿ ಕೊಟ್ರಾ ಈ ನಟಿ? ಈಗ ಹರಿದಾಡ್ತಿರೋ ಸುದ್ದಿಯೇನು? 

ಒಂದಾದ ಮೇಲೊಂದರಂತೆ ಫ್ಲಾಪ್​ ಸಿನಿಮಾ ಕೊಡುತ್ತಿರುವ ನಟ ಆಮೀರ್​ ಖಾನ್​, ಎಲ್ಲರಿಗೂ ತಿಳಿದಿರುವಂತೆ ಇಬ್ಬರು ಪತ್ನಿಯರಿಗೂ ವಿಚ್ಛೇದನ ನೀಡಿದ್ದಾರೆ. ಮೊದಲ ಪತ್ನಿ ರೀನಾ ದತ್ತಾ (1986–2002) ಹಾಗೂ ಎರಡನೆಯ ಪತ್ನಿ ಕಿರಣ್​ ರಾವ್​ (2005–2021) ಅವರಿಂದ ಜುನೈದ್​ ಖಾನ್​ ಮತ್ತು ಇರಾ ಖಾನ್​ ಎಂಬ ಮಕ್ಕಳನ್ನು ಪಡೆದು ಆಮೀರ್​ ಖಾನ್​ ದೂರವಾಗಿದ್ದಾರೆ. 2021ರಲ್ಲಿ ಆಮಿರ್‌ ಖಾನ್‌, ಕಿರಣ್‌ ರಾವ್‌ ಅವರು 15 ವರ್ಷಗಳ ದಾಂಪತ್ಯ ಜೀವನಕ್ಕೆ ವಿರಾಮ ಇಡಲು ಘೋಷಿಸಿದ್ದಾಗ ಫಾತಿಮಾ ಸನಾ ಶೇಖ್‌ ಹೆಸರು ಥಳಕು ಹಾಕಿಕೊಂಡಿತ್ತು. ಇವರಿಂದಲೇ ಕಿರಣ್​ ರಾವ್​ ಅವರಿಗೆ ಆಮೀರ್​ ಖಾನ್​ ವಿಚ್ಛೇದನ ನೀಡುತ್ತಾರೆ ಎನ್ನಲಾಗಿತ್ತು. ಇದಾದ ಬಳಿಕ ಫಾತಿಮಾ ಮತ್ತು ಆಮೀರ್​ ಹಲವು ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಆಮೀರ್‌ ಖಾನ್‌ ಅವರ ಮಗಳು ಇರಾ ಖಾನ್‌ರ ನಿಶ್ಚಿತಾರ್ಥದಂದು ಫಾತಿಮಾ ಸನಾ ಶೇಖ್‌ ಕೂಡ ಹಾಜರಿ ಹಾಕಿದ್ದರು.

ಇದೀಗ ಇವರಿಬ್ಬರ ಬಗ್ಗೆ ಮತ್ತೆ ಸುದ್ದಿ ದಟ್ಟವಾಗುತ್ತಿದೆ. ನಿತೇಶ್‌ ತಿವಾರಿ ನಟನೆಯ ದಂಗಲ್‌ ಸಿನಿಮಾ ಮೂಲಕ ಫಾತಿಮಾ ಸನಾ ಶೇಖ್‌ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಆ ನಂತರದಲ್ಲಿ ಆಮೀರ್‌, ಫಾತಿಮಾ ಅವರು ಡೇಟ್‌ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಆಮೀರ್​ ಖಾನ್​ ಡಿವೋರ್ಸ್​ಗೂ ಇದೇ ಕಾರಣ ಎನ್ನಲಾಗಿತ್ತು. ಅಷ್ಟಕ್ಕೂ ಕುತೂಹಲದ ಸಂಗತಿ ಎಂದರೆ, ಆಮೀರ್​ ಖಾನ್​ ಅವರು ಈ ಮೊದಲು ಮದುವೆಯಾಗಿದ್ದು ಇಬ್ಬರೂ ಹಿಂದು ಯುವತಿಯರನ್ನೇ. ಈಗ ಫಾತಿಮಾ ಅವರ ಜೊತೆಗಿನ ಸಂಬಂಧದ ವಿಷಯ ತಿಳಿಯುತ್ತಲೇ ನೆಟ್ಟಿಗರು ಫಾತಿಮಾ ಅವರ ಮೂಲವನ್ನು ಕೆದಕಿದ್ದಾರೆ. ಅದರ ಪ್ರಕಾರ, ಮಾಹಿತಿ ಪ್ರಕಾರ ಫಾತಿಮಾ ಹುಟ್ಟಿದ್ದು ಹೈದರಾಬಾದ್​ನಲ್ಲಿ. ಬೆಳೆದದ್ದು ಮುಂಬೈನಲ್ಲಿ. ಫಾತಿಮಾ ಅವರ ತಂದೆ ವಿಪಿನ್ ಶರ್ಮಾ ಜಮ್ಮುವಿನ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರಾಗಿದ್ದರೆ, ತಾಯಿ ತಬಸ್ಸುಮ್ ಶ್ರೀನಗರದ ಮುಸ್ಲಿಂ ಕುಟುಂಬಕ್ಕೆ ಸೇರಿದವರು. ಫಾತಿಮಾ ಅವರ ತಂದೆಯ ಧರ್ಮ ಪಾಲಿಸದೇ ತಾಯಿಯ ಧರ್ಮ ಫಾಲೋ ಮಾಡುತ್ತಿದ್ದಾರೆ. ಇಸ್ಲಾಂ ಧರ್ಮದಲ್ಲಿ ನಂಬಿಕೆ ಇಟ್ಟಿದ್ದಾರೆ. 

ಅರ್ಜುನ್‌ ಕಪೂರ್‌ ಜೊತೆ ಬ್ರೇಕಪ್‌ ಆಗಿದ್ದು ನಿಜನಾ? ಕೊನೆಗೂ ಮೌನ ಮುರಿದ ಮಲೈಕಾ ಅರೋರಾ

ಆಮೀರ್ ಖಾನ್ ಮತ್ತು ಫಾತಿಮಾ ಸನಾ ಶೇಖ್ ಎರಡು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಈ ಜೋಡಿ 'ದಂಗಲ್' ಮತ್ತು 'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿತ್ತು. 'ದಂಗಲ್' ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಎಂದು ಸಾಬೀತಾಯಿತು ಮತ್ತು 'ಥಗ್ಸ್ ಆಫ್ ಹಿಂದೂಸ್ತಾನ್' ವಿಫಲವಾಯಿತು. ಕಳೆದ ವರ್ಷ ಬಿಡುಗಡೆಯಾದ 'ಲಾಲ್ ಸಿಂಗ್ ಚಡ್ಡಾ' ಚಿತ್ರದಲ್ಲಿ ನಟ ಆಮೀರ್ ಖಾನ್ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಆಮೀರ್ ಖಾನ್ ಈ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುವುದರ ಜೊತೆಗೆ ಇದನ್ನು ನಿರ್ಮಿಸಿದ್ದು ಕೂಡ ಅವರೇ. ಇದು ನಟನ ಕನಸಿನ ಯೋಜನೆ ಎಂದೇ ಹೇಳಲಾಗುತ್ತಿದೆ. ಆದರೆ ಆಮೀರ್​ ಅವರ ಗ್ರಹಚಾರ ಸದ್ಯ ನೆಟ್ಟಗೆ ಇದ್ದಂತಿಲ್ಲ. ಅವರ ಇತ್ತೀಚಿನ ಬಹುತೇಕ ಚಿತ್ರಗಳಂತೆ ಈ ಚಿತ್ರಕ್ಕೂ ಪ್ರೇಕ್ಷಕರಿಂದ ಹೆಚ್ಚಿನ ಪ್ರತಿಕ್ರಿಯೆ ಸಿಗಲಿಲ್ಲ. ಆದ್ದರಿಂದ ಆಮೀರ್ ಖಾನ್ ಚಿತ್ರಗಳಿಂದ ವಿರಾಮ ತೆಗೆದುಕೊಂಡಿದ್ದರು. ಆದರೆ ಇದೀಗ ಒಂದೂವರೆ ವರ್ಷಗಳ ವಿರಾಮದ ನಂತರ ಅವರು ಮತ್ತೊಮ್ಮೆ ಹಿರಿತೆರೆಗೆ ಮರಳಲು ಸಿದ್ಧರಾಗಿದ್ದಾರೆ. ಇತ್ತೀಚೆಗೆ ನಟ ತನ್ನ ಅನೇಕ ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ.

ಆಮೀರ್ ಖಾನ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ ಮತ್ತು ಶೀಘ್ರದಲ್ಲೇ ನಿರ್ದೇಶಕರಾದ ರಾಜ್‌ಕುಮಾರ್ ಸಂತೋಷಿ ಮತ್ತು ಸನ್ನಿ ಡಿಯೋಲ್ ಅವರೊಂದಿಗೆ 'ಲಾಹೋರ್ 1947' ಚಿತ್ರದಲ್ಲಿ ಕೆಲಸ ಮಾಡಲಿದ್ದೇನೆ ಎಂದು ತಿಳಿಸಿದ್ದಾರೆ. ಈ ಚಿತ್ರದಲ್ಲಿ ಸನ್ನಿ ಡಿಯೋಲ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದು, ಆಮೀರ್ ನಿರ್ಮಾಣದ ಜವಾಬ್ದಾರಿಯನ್ನು ಮಾತ್ರ ವಹಿಸಿಕೊಳ್ಳಲಿದ್ದಾರೆ. ಕೆಲ ಸಮಯದ ಹಿಂದೆ ಅವರು 'ತಾರೆ ಜಮೀನ್ ಪರ್' ಚಿತ್ರದ ಸೀಕ್ವೆಲ್ ಚಿತ್ರ 'ಸಿತಾರೆ ಜಮೀನ್ ಪರ್' ಅನ್ನು ಸಹ ಘೋಷಿಸಿದ್ದರು.

ಇಸ್ರೇಲ್‌ ಮೇಲೆ ಹಮಾಸ್‌ ದಾಳಿ: ಭಯೋತ್ಪಾದನೆಗೆ ಕುಮ್ಮುಕ್ಕು ನೀಡಿದ ಖ್ಯಾತ ನಟಿ ಅರೆಸ್ಟ್‌

'ಸಿತಾರೆ ಜಮೀನ್ ಪರ್' ಚಿತ್ರದ ಮೂಲಕ ಮತ್ತೆ ತೆರೆಗೆ ಬರಲಿದ್ದಾರೆ ಆಮೀರ್​. ಈ ಚಿತ್ರದಲ್ಲಿ ಅವರು ನಾಯಕ ನಟ ಮತ್ತು ನಿರ್ಮಾಪಕ ಇಬ್ಬರ ಪಾತ್ರವನ್ನು ನಿರ್ವಹಿಸಲಿದ್ದಾರೆ. ಈ ಎಲ್ಲದರ ನಡುವೆ, ಈಗ ಪಿಂಕ್ವಿಲ್ಲಾ ವರದಿಯ ಪ್ರಕಾರ, ಆಮೀರ್ ಖಾನ್ ಶೀಘ್ರದಲ್ಲೇ ಮತ್ತೊಂದು ಚಿತ್ರದಲ್ಲಿ ಕೆಲಸ ಮಾಡಬಹುದು ಮತ್ತು ಈ ಚಿತ್ರದಲ್ಲಿ ನಟ ತನ್ನ 'ದಂಗಲ್' ಸಹನಟಿ ಫಾತಿಮಾ ಸನಾ ಶೇಖ್ ಅವರೊಂದಿಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.