Asianet Suvarna News Asianet Suvarna News

Feelfree: ಮಗುವಾದ ಬಳಿಕ ಸೆಕ್ಸ್ ಫೀಲ್ ಹೆಚ್ಚಾಗ್ತಿದೆ, ಮನೆಯವ್ರು ಗಂಡನ ಹತ್ರ ಬಿಡ್ತಿಲ್ಲ!

ಮಗುವಾದ ಒಂದು ವರ್ಷದವರೆಗೆ ಗಂಡನ ಜೊತೆ ಸೇರಬಾರದು ಅಂತ ತಾಯಿ ಹೇಳ್ತಿದ್ದಾರೆ. ಆಕೆ ನನ್ನನ್ನ ಗಂಡನ ಮನೆಗೆ ಕಳಿಸ್ತಲೂ ಇಲ್ಲ. ಆದರೆ ಮಗುವಾದ ಕಾರಣಕ್ಕೆ ಸೆಕ್ಸ್ ಫೀಲ್ (Sexual urge) ಕಡಿಮೆ ಆಗಿಲ್ಲ. ಬದಲಾಗಿ ಹೆಚ್ಚಾಗ್ತಿದೆ. ಏನು ಮಾಡಲಿ?

 

Sexual feeling increased after giving birth but parents deny to meet hubby
Author
Bengaluru, First Published Oct 18, 2021, 5:12 PM IST

ಪ್ರಶ್ನೆ: ಮಗುವಾದ ಮೇಲೆ ಹೆಣ್ಮಕ್ಕಳಿಗೆ ಸೆಕ್ಸ್ (sex) ಫೀಲ್ ಕಡಿಮೆ ಆಗುತ್ತೆ ಅಂತ ಗೆಳತಿಯರೆಲ್ಲ ಹೇಳುತ್ತಿರುತ್ತಾರೆ. ಆದರೆ ನನಗೆ ಉಲ್ಟಾ ಆಗಿದೆ. ನನಗೀಗ 28 ವರ್ಷ ವಯಸ್ಸು. ಐದೂವರೆ ತಿಂಗಳ ಗಂಡು ಮಗುವಿದೆ. ಎಂಟೂವರೆ ತಿಂಗಳು ತುಂಬಿದಾಗ ಹೆರಿಗೆಗೆಂದು (Delivery) ತಾಯಿಯ ಜೊತೆಗೆ ಬಂದು ಇದ್ದೀನಿ. ನಾನು ಇಲ್ಲಿಗೆ ಬರುವ ಮೊದಲೂ ನಾನೂ ಪತಿ ಸೆಕ್ಸ್ ಮಾಡುತ್ತಿದ್ದೆವು. ಗರ್ಭಿಣಿಯಾಗಿದ್ದಾಗಲೂ ನನಗೆ ಸೆಕ್ಸ್ ಫೀಲ್ ಇತ್ತು. ಮಗುವಾದ ಬಳಿಕವೂ ಆ ಫೀಲ್ ಹೋಗಿಲ್ಲ. ಆದರೆ ನಾನು ಅಮ್ಮನ ಜೊತೆಗಿರುವ ಕಾರಣ ಪತಿಯ ಸಂಪರ್ಕಕ್ಕೆ ಬರುವುದು ಸಾಧ್ಯವಾಗುತ್ತಿಲ್ಲ. ಪತಿಯೂ ಆ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಆದರೆ ಅವರೂ ಏನೂ ಮಾಡಲಾಗದ ಸ್ಥಿತಿಯಲ್ಲಿದ್ದಾರೆ. ನಾನು ಗಂಡನ ಮನೆಗೆ ಹೋಗುತ್ತೇನೆ ಅಂತ ಅಮ್ಮನ ಬಳಿ ಹೇಳಿದ್ದೇ ಜಗಳಕ್ಕೇ ನಿಂತು ಬಿಟ್ಟರು. ನಮ್ಮ ಮನೆಯ ಸಂಪ್ರದಾಯದಂತೆ ಮಗು ಹೆತ್ತ ಒಂದು ವರ್ಷದವರೆಗೂ ಗಂಡನ ಮನೆಗೆ ಹೋಗುವಂತಿಲ್ಲ. ದಿನೇ ದಿನೇ ಸೆಕ್ಸ್ ಫೀಲ್ ಹೆಚ್ಚಾಗುತ್ತಿದೆ. ಇಡೀ ದಿನ ಮಗುವಿನ ಜೊತೆಗೇ ಇರುವ ಕಾರಣ ಹಸ್ತಮೈಥುನ ಮಾಡಿಕೊಳ್ಳುವುದೂ ಸಾಧ್ಯವಿಲ್ಲ. ನನಗೆ ಹಾರ್ಮೋನಲ್ ಸಮಸ್ಯೆ ಇದೆಯಾ, ಎಲ್ಲರಿಗೂ ಸೆಕ್ಸ್ ಆಸಕ್ತಿ ಹೋದರೆ ನನಗೆ ಮಾತ್ರ ಯಾಕೆ ಹೆಚ್ಚಾಗುತ್ತಿದೆ, ದಯಮಾಡಿ ಉತ್ತರಿಸಿ.

ಉತ್ತರ: ಮಗು ಹುಟ್ಟಿದ ಬಳಿಕ ಹೆಣ್ಣಿನ ಲೈಂಗಿಕ ಆಸಕ್ತಿ ಕುಗ್ಗುತ್ತದೆ ಎಂಬ ಮಾತಿದೆ. ಇದಕ್ಕೆ ಕಾರಣ ಆಕೆಯ ದೇಹ ಹಲವಾರು ಮಾರ್ಪಾಡುಗಳನ್ನು ಕಂಡು ತಿರುಗಿ ಹಿಂದಿನಂತಾಗುವ ಪ್ರಕ್ರಿಯೆಯಲ್ಲಿ ಸೆಕ್ಸ್ ಮೇಲಿನ ಆಸಕ್ತಿ ಸ್ವಲ್ಪ ಕಡಿಮೆ ಆಗಬಹುದು. ಜೊತೆಗೆ ಈಸ್ಟ್ರೋಜನ್ ಮಟ್ಟವೂ (Estrogen Level) ಆಗ ಕಡಿಮೆ ಇರುತ್ತದೆ. ಆದರೆ ಇದೆಲ್ಲ ಹೆರಿಗೆಯಾಗಿ ಎರಡು ವಾರದಿಂದ ತಿಂಗಳವರೆಗಿನ ದೇಹಸ್ಥಿತಿ. ಆ ಬಳಿಕ ಆಕೆಯ ದೇಹದಲ್ಲಿ ಬದಲಾವಣೆ ಆಗುತ್ತಿದ್ದರೂ ಸೆಕ್ಸ್ ಬಯಕೆ ಮೊದಲಿನಂತಾಗುವ ಸಾಧ್ಯತೆ ಇದೆ. ಕೆಲವರಲ್ಲಿ ಮಗುವಿನ ಜವಾಬ್ದಾರಿ, ರಾತ್ರಿಯಡಿ ಅದು ಮಲಗದೇ ನಿದ್ರಾಹೀನತೆ (Sleeplessness), ಹಲವು ರಾತ್ರಿ ಮಗುವಿನ ಆರೈಕೆಯಲ್ಲೇ ತೊಡಗುವ ಕಾರಣ ಈ ಬಗ್ಗೆ ಯೋಚಿಸಲು ಸಮಯ ಇಲ್ಲದಿರುವುದು ಇತ್ಯಾದಿ ಕಾರಣಗಳಿಗೆ ಮಗುವಾದ ಬಳಿಕ ಸೆಕ್ಸ್ ಆಸಕ್ತಿ ಇಲ್ಲದೇ ಹೋಗಬಹುದು.
 

Sexual feeling increased after giving birth but parents deny to meet hubby

#Feelfree: ಹುಡುಗಿಯರ ಬಗ್ಗೆ ಕುತೂಹಲವಿಲ್ಲ, ಆಂಟಿಯನ್ನು ಕಂಡರೆ ಕಾಮೋದ್ರೇಕ!

ಆದರೆ ನಿಮ್ಮ ಹೆರಿಗೆಯಾಗಿ (Delivery) ಐದೂವರೆ ತಿಂಗಳಾಗಿದೆ. ಹೀಗಾಗಿ ನೀವು ಗಂಡನ ಜೊತೆಗೆ ಹಿಂದಿನಂತೇ ಸೆಕ್ಸ್ ಲೈಫ್ (Sex Life) ಎನ್‌ಜಾಯ್ ಮಾಡಬಹುದು. ಆದರೆ ಇನ್ನೊಮ್ಮೆ ಗರ್ಭಿಣಿಯಾಗುವ (Conceive)  ಸಾಧ್ಯತೆಯೂ ಇದೆ. ನಿಮಗೆ ಇನ್ನೊಂದು ಮಗುವಿನ ಯೋಚನೆ ಇಲ್ಲದಿದ್ದರೆ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. ಈ ಬಗ್ಗೆ ತಾಯಿಯ ಜೊತೆಗೆ ಸೂಚ್ಯವಾಗಿ ಹೇಳಿ. ಅವರಿಗೆ ಮನದಟ್ಟು ಮಾಡಿಸಿ. ಸಾಮಾನ್ಯ ಒಂದು ವರ್ಷದವರೆಗೆ ಮಗುವಿನ ಆರೈಕೆ ಮಗಳೊಬ್ಬಳೇ ಮಾಡುವುದು ಕಷ್ಟ ಎಂಬ ಕಾರಣಕ್ಕೆ ಹಿಂದಿನವರು ಒಂದು ವರ್ಷದವರೆಗೆ ಬಾಣಂತಿ ಹಾಗೂ ಮಗುವನ್ನು ನೋಡಿಕೊಳ್ಳುತ್ತಿದ್ದರು. ಆದರೆ ಈಗಿನ ಕಾಲದಲ್ಲಿ ಅಂಥದ್ದು ಕಡಿಮೆ. ಉಳಿದಂತೆ ಈ ಸಮಯ ಹೆಚ್ಚಿನ ಸೆಕ್ಸ್ ಆಸಕ್ತಿ ಇರುವುದು ಸಹಜವೇ ಹೌದು. ಆ ಬಗ್ಗೆ ಆತಂಕ, ಗೊಂದಲ ಬೇಡ.

Feelfree: ನನ್ನ ಗೆಳೆಯ ಥ್ರೀಸಮ್‌ಗೆ ಒತ್ತಾಯಿಸ್ತಾನೆ, ಏನು ಮಾಡಲಿ?

ಪ್ರಶ್ನೆ: ಗಂಡಸು, 39 ವರ್ಷ. ಸಿನಿಮಾ ನೋಡುವ ಚಟ ಬಹಳ ಇದೆ. ಅಷ್ಟಾಗಿದ್ದರೆ ಪರವಾಗಿರಲಿಲ್ಲ. ಆ ಹೀರೋಯಿನ್‌ಅನ್ನೇ ಕಲ್ಪಿಸಿಕೊಂಡು ಹಸ್ತಮೈಥುನ (Masturbation) ಮಾಡುವ ಚಟವೂ ಇದೆ. ಇದನ್ನು ನಿಯಂತ್ರಿಸಲಿಕ್ಕಾಗುತ್ತಿಲ್ಲ. ಇದರಿಂದ ನನ್ನ ವೈವಾಹಿಕ ಬದುಕಿಗೆ (Married Life) ಅಡ್ಡಿ ಆಗಬಹುದೇ? ಈ ಚಟದಿಂದ ಹೊರಬರುವುದು ಹೇಗೆ?

ಉತ್ತರ: ಫ್ಯಾಂಟಸೈಸ್ ಮಾಡಿ ಹಸ್ತಮೈಥುನ (mansturbation) ಮಾಡಿಕೊಳ್ಳುವುದು ಸಾಮಾನ್ಯ. ಆದರೆ ಅತಿಯಾದರೆ ಖಂಡಿತಾ ಕಷ್ಟ. ಇದು ನಿಮ್ಮ ವೈವಾಹಿಕ ಬದುಕಿನ ಮೇಲೂ ಪರಿಣಾಮ ಬೀರಲಾರದು ಎನ್ನಲಾಗದು. ನಿಮ್ಮ ಗಮನವನ್ನು ಬೇರೆ ಕಡೆ ಹರಿಸುವುದು, ಅಂದರೆ ಸಿನಿಮಾ ನೋಡುವ ಹೊತ್ತಲ್ಲಿ ನಿಮಗೇ ಅಷ್ಟೇ ಆಸಕ್ತಿಕರವಾದ ಮತ್ಯಾವುದೋ ಹವ್ಯಾಸದಲ್ಲಿ ತೊಡಗಿಸಿಕೊಳ್ಳುವುದು, ಧ್ಯಾನ, ಆ ಹೊತ್ತಲ್ಲೇ ಸ್ನೇಹಿತರು, ಬಂಧುಗಳ ಜೊತೆ ಮಾತನಾಡುವುದು ಇತ್ಯಾದಿ ಅಭ್ಯಾಸ ರೂಢಿಸಿಕೊಳ್ಳಿ. ಮೊದ ಮೊದಲು ಬಹಳ ಕಷ್ಟ ಅನಿಸುತ್ತದೆ. ನಿಧಾನಕ್ಕೆ ಪರಿಸ್ಥಿತಿ ನಿಮ್ಮ ನಿಯಂತ್ರಣದಲ್ಲಿರುತ್ತದೆ. 

#Feelfree: ಪತ್ನಿಯ ಕನ್ಯಾಪೊರೆ ಹರಿದಿರೋದು ಪತಿಗೆ ಗೊತ್ತಾಗುತ್ತಾ?

Follow Us:
Download App:
  • android
  • ios