MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Duleep Trophy Final
Today's Horoscope in Kannada
Mantralaya Online Scam
Hubballi Ganeshotsava
Kalaburagi Drought List
Pitru Paksha 2026 Date
PM Modi Meeting
Karnataka Farmers
Gulbarga Bus Accident
Western Ghats ESA
Karnataka Taxi Fare Meter
Bigg Boss Kannada 13
  • Home
  • Life
  • 10ನೇ ವಯಸ್ಸಲ್ಲೇ ಉದ್ಯಮಿಯಾದ ಮಗನ ಜೊತೆ ಬಾಲಿವುಡ್​ ಬ್ಯೂಟಿ ಶಿಲ್ಪಾ ಶೆಟ್ಟಿ: ಅಪರೂಪದ ವಿಡಿಯೋ ವೈರಲ್​

10ನೇ ವಯಸ್ಸಲ್ಲೇ ಉದ್ಯಮಿಯಾದ ಮಗನ ಜೊತೆ ಬಾಲಿವುಡ್​ ಬ್ಯೂಟಿ ಶಿಲ್ಪಾ ಶೆಟ್ಟಿ: ಅಪರೂಪದ ವಿಡಿಯೋ ವೈರಲ್​

ನಟಿ ಶಿಲ್ಪಾ ಶೆಟ್ಟಿ 10 ವರ್ಷದ ಮಗ ವಿಯಾನ್ ಜೊತೆಗೆ ಕಾಣಿಸಿಕೊಂಡಿರುವ ಅಪರೂಪದ ವಿಡಿಯೋ ವೈರಲ್​ ಆಗಿದೆ. ತಮ್ಮ ಎರಡನೇ ಮಗುವನ್ನು ಬಾಡಿಗೆ ತಾಯ್ತನದ ಮೂಲಕ ಪಡೆದ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ ನಟಿ.

2 Min read
Author : Suchethana D
Published : Sep 07 2026, 05:14 PM IST
Share this Photo Gallery
  • FB
  • TW
  • Linkdin
  • Whatsapp
16
ಎವರ್​ಗ್ರೀನ್ ತಾರೆ ಶಿಲ್ಪಾ
Image Credit : viralbhayani Instagram

ಎವರ್​ಗ್ರೀನ್ ತಾರೆ ಶಿಲ್ಪಾ

ನಟಿ ಶಿಲ್ಪಾ ಶೆಟ್ಟಿ ಎಂದರೇನೇ ವಯಸ್ಸೇ ಆಗದ ನಟಿಯ ಪೈಕಿ ಒಬ್ಬರು ಎಂದು ಗುರುತಿಸಿಕೊಳ್ಳುವವರು. ಕಳೆದ ಜೂನ್​ಗೆ ನಟಿಗೆ 51 ವರ್ಷ ಮುಗಿದಿದೆ. ಇದರ ಹೊರತಾಗಿಯೂ ನಟಿ ಇನ್ನೂ 25-30ರ ಚೆಲುವೆಯಂತೆ ಕಂಗೊಳಿಸುತ್ತಾರೆ. ಮೇಕಪ್​ಗಿಂತಲೂ ಹೆಚ್ಚಾಗಿ ನಟಿಯ ಸೌಂದರ್ಯದ ರಹಸ್ಯ ಡಯೆಟ್​ ಜೊತೆ ಯೋಗ ಮತ್ತು ಧ್ಯಾನ. ಶಿಲ್ಪಾ ಶೆಟ್ಟಿ ಮತ್ತು ರಾಜ್​ ಕುಂದ್ರಾ ದಂಪತಿ ಮದುವೆಗೆ ಈಗ 17 ವರ್ಷಗಳ ಸಂಭ್ರಮ. 2009ರಲ್ಲಿ ಮದುವೆಯಾಗಿದ್ದ ಜೋಡಿ 2012 ರಲ್ಲಿ ತಮ್ಮ ಮೊದಲ ಮಗು ವಿಯಾನ್‌ಗೆ ಅಪ್ಪ-ಅಮ್ಮ ಆದರು. ವಿಯಾನ್​ಗೆ ಈಗ 14 ವರ್ಷ. ಬಳಿಕ 2020 ರಲ್ಲಿ ಬಾಡಿಗೆ ತಾಯ್ತನದ ಮೂಲಕ ಸಮೀಶಾ ಎಂಬ ಮಗಳನ್ನು ದಂಪತಿ ಪಡೆದುಕೊಂಡಿದ್ದಾರೆ. ಈ ಪುಟಾಣಿಗೆ ಈಗ ಆರು ವರ್ಷ ವಯಸ್ಸು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಮಗನ ಜೊತೆ ವಿಡಿಯೋ
Image Credit : Asianet News

ಮಗನ ಜೊತೆ ವಿಡಿಯೋ

ಶಿಲ್ಪಾ ಶೆಟ್ಟಿ ಅವರು ಮಕ್ಕಳ ಜೊತೆ ಓಪನ್​ ಆಗಿ ಕಾಣಿಸಿಕೊಳ್ಳುವುದು ಅಪರೂಪ. ಕೆಲ ದಿನಗಳ ಹಿಂದೆ ಅವರು ಮಗಳ ಜೊತೆ ಕಾಣಿಸಿಕೊಂಡಿದ್ದ ವಿಡಿಯೋ ಸಾಕಷ್ಟು ವೈರಲ್​ ಆಗಿತ್ತು. ಇದೀಗ ಅವರು ಮಗ ವಿಯಾನ್​ ಜೊತೆ ಕಾಣಿಸಿಕೊಂಡಿದ್ದು, ಇದರ ವಿಡಿಯೋಗೆ ಲಕ್ಷಾಂತರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Related Articles

Related image1
ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾ ಆತ್ಮಹತ್ಯೆಗೆ ಯತ್ನ! ಅಂದು ಆದದ್ದಾದರೂ ಏನು
Related image2
ನಟಿ ಶಿಲ್ಪಾ ಶೆಟ್ಟಿ ಪುತ್ರಿ ಹೇಗಿದ್ದಾಳೆ ಗೊತ್ತಾ? ಬಾಡಿಗೆ ತಾಯ್ತನದಿಂದ ಹುಟ್ಟಿದ ಪುತ್ರಿಯ ಅಪರೂಪದ ವಿಡಿಯೋ ವೈರಲ್​
36
10ನೇ ವಯಸ್ಸಲ್ಲೇ ಉದ್ಯಮಿ
Image Credit : Social Media

10ನೇ ವಯಸ್ಸಲ್ಲೇ ಉದ್ಯಮಿ

ಅಂದಹಾಗೆ, ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಅವರ ಮಗ ವಿಯಾನ್ ತನ್ನ 10ನೇ ವಯಸ್ಸಿನಲ್ಲಿಯೇ ಬಿಜಿನೆಸ್​ ಪ್ರಾರಂಭಿಸಿದ್ದಾನೆ. ಶಿಲ್ಪಾ ಅವರು ಈ ಕುರಿತು ಅಂದು ಪೋಸ್ಟ್​ ಶೇರ್​ ಮಾಡಿಕೊಂಡಿದ್ದರು. ತನ್ನ ಮಗನ ಸ್ಟಾರ್ಟ್ಅಪ್ ಕಲ್ಪನೆಯನ್ನು ಘೋಷಿಸುವ ಮತ್ತು ಅವರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ ಸ್ನೀಕರ್ಸ್ ಜೋಡಿಯನ್ನು ಪ್ರದರ್ಶಿಸುವ ವಿಡಿಯೋ ಪೋಸ್ಟ್ ಮಾಡಿದ್ದರು.

46
ಮಗನ ಬಗ್ಗೆ ಶಿಲ್ಪಾ
Image Credit : Social Media

ಮಗನ ಬಗ್ಗೆ ಶಿಲ್ಪಾ

ವಿಯಾನ್ 4,999 ರೂಪಾಯಿಂದ ಪ್ರಾರಂಭವಾಗುವ VR KICKSS ಹೆಸರಿನಲ್ಲಿ ಕಸ್ಟಮೈಸ್ ಮಾಡಿದ ಸರಕುಗಳನ್ನು ಮಾರಾಟ ಮಾಡುತ್ತಿದ್ದಾನೆ. ಈ ಬಗ್ಗೆ ಮಾಹಿತಿ ನೀಡಿರುವ ಶಿಲ್ಪಾ "ನನ್ನ ಮಗ ವಿಯಾನ್ ರಾಜ್, ಬಿಜಿನೆಸ್​ ಆರಂಭಿಸಿದ್ದಾನೆ. ಪುಟ್ಟ ಮಕ್ಕಳು ಮತ್ತು ಅವರ ದೊಡ್ಡ ಕನಸುಗಳನ್ನು ಯಾವಾಗಲೂ ಪ್ರೋತ್ಸಾಹಿಸಬೇಕು ಎನ್ನುವುದು ಇದರ ಉದ್ದೇಶ. ಸಾಹಸೋದ್ಯಮದ ಕಲ್ಪನೆ ಮತ್ತು ಪರಿಕಲ್ಪನೆಯಿಂದ ವಿನ್ಯಾಸಗಳವರೆಗೆ, ಮತ್ತು ವಿಡಿಯೋ ಕೂಡ ಎಲ್ಲವೂ ಮಗನದ್ದೇ ಎಂದಿದ್ದಾರೆ.

56
ಎರಡನೆ ಮಗುವಿಗಾಗಿ ಪ್ರಯತ್ನ
Image Credit : Social Media

ಎರಡನೆ ಮಗುವಿಗಾಗಿ ಪ್ರಯತ್ನ

ಅಷ್ಟಕ್ಕೂ ನಟಿ ಬಾಡಿಗೆ ತಾಯ್ತನದ ಮೂಲಕ ಇನ್ನೊಂದು ಮಗುವನ್ನು ಪಡೆದಿರುವ ಬಗ್ಗೆ ಈ ಹಿಂದೆ ಹೇಳಿಕೊಂಡಿದ್ದರು. ಎರಡನೇ ಮಗು ಪಡೆಯಲು 5 ವರ್ಷದಿಂದ ಪ್ರಯತ್ನಿಸುತ್ತಿದ್ದೆ. ಆದರೆ ಅದು ಸಾಧ್ಯವಾಗದಿದ್ದ ಹಿನ್ನೆಲೆಯಲ್ಲಿ ಬಾಡಿಗೆ ತಾಯ್ತನತದ ಮೂಲಕ ಮಗುವನ್ನು ಪಡೆದುಕೊಂಡೆ ಎಂದಿದ್ದರು. 2012ರಲ್ಲಿ ವಿಹಾನ್ ಹುಟ್ಟಿದ ಬಳಿಕ ನಾವೆಲ್ಲರೂ ತುಂಬಾ ಖುಷಿಯಾಗಿದ್ದೆವು. ಆದಾದ ಬಳಿಕ ನಾವು ಪ್ಲಾನಿಂಗ್ ಮಾಡುತ್ತಿದ್ದೆವು. ಮತ್ತೊಂದು ಮಗು ಪಡೆಯಲು ನಾನು 5 ವರ್ಷ ಪ್ರಯತ್ನಿಸುತ್ತಿದ್ದೆ. ನಾನು ಆ ಸಮಯದಲ್ಲಿ ‘ನಿಕಮ್ಮಾ’ ಹಾಗೂ ‘ಹಂಗಾಮ’ ಚಿತ್ರದ ಚಿತ್ರೀಕರಣವನ್ನು ಸೈನ್ ಮಾಡಿ ಡೇಟ್ಸ್ ಮುಂದೂಡಿದ್ದೆ. ಆದರೆ ಮಗು ಹುಟ್ಟುವುದು ಸಾಧ್ಯವಾಗಲಿಲ್ಲ. ಅನಾರೋಗ್ಯದ ಕಾರಣದಿಂದ ಅದು ಸಾಧ್ಯವಾಗಲಿಲ್ಲ. ನನ್ನ ದೇಹವು ಗರ್ಭಧಾರಣೆಗೆ ಸ್ಪಂದಿಸುತ್ತಿರಲಿಲ್ಲ. ಇನ್ನೊಂದು ಮಗುವನ್ನು ಪಡೆಯಲು ಆಟೋ ಇಮ್ಯೂನೋ ಡಿಸೀಸ್ (APLC) ಎನ್ನವ ಕಾಯಿಲೆ ಅಡ್ಡಿಯಾಯಿತು. ಈ ಸಮಸ್ಯೆಯಿಂದ ಹಲವಾರು ಬಾರಿ ಗರ್ಭಪಾತವಾಗಿತ್ತು ಎಂದು ಶಿಲ್ಪಾ ಶೆಟ್ಟಿ ತಿಳಿಸಿದರು.

66
ಬಾಡಿಗೆ ತಾಯ್ತನ
Image Credit : Asianet News

ಬಾಡಿಗೆ ತಾಯ್ತನ

ಅಷ್ಟಕ್ಕೂ ನಟಿ ಬಾಡಿಗೆ ತಾಯ್ತನದ ಮೂಲಕ ಇನ್ನೊಂದು ಮಗುವನ್ನು ಪಡೆದಿರುವ ಬಗ್ಗೆ ಈ ಹಿಂದೆ ಹೇಳಿಕೊಂಡಿದ್ದರು. ಎರಡನೇ ಮಗು ಪಡೆಯಲು 5 ವರ್ಷದಿಂದ ಪ್ರಯತ್ನಿಸುತ್ತಿದ್ದೆ. ಆದರೆ ಅದು ಸಾಧ್ಯವಾಗದಿದ್ದ ಹಿನ್ನೆಲೆಯಲ್ಲಿ ಬಾಡಿಗೆ ತಾಯ್ತನತದ ಮೂಲಕ ಮಗುವನ್ನು ಪಡೆದುಕೊಂಡೆ ಎಂದಿದ್ದರು. 2012ರಲ್ಲಿ ವಿಹಾನ್ ಹುಟ್ಟಿದ ಬಳಿಕ ನಾವೆಲ್ಲರೂ ತುಂಬಾ ಖುಷಿಯಾಗಿದ್ದೆವು. ಆದಾದ ಬಳಿಕ ನಾವು ಪ್ಲಾನಿಂಗ್ ಮಾಡುತ್ತಿದ್ದೆವು. ಮತ್ತೊಂದು ಮಗು ಪಡೆಯಲು ನಾನು 5 ವರ್ಷ ಪ್ರಯತ್ನಿಸುತ್ತಿದ್ದೆ. ನಾನು ಆ ಸಮಯದಲ್ಲಿ ‘ನಿಕಮ್ಮಾ’ ಹಾಗೂ ‘ಹಂಗಾಮ’ ಚಿತ್ರದ ಚಿತ್ರೀಕರಣವನ್ನು ಸೈನ್ ಮಾಡಿ ಡೇಟ್ಸ್ ಮುಂದೂಡಿದ್ದೆ. ಆದರೆ ಮಗು ಹುಟ್ಟುವುದು ಸಾಧ್ಯವಾಗಲಿಲ್ಲ. ಅನಾರೋಗ್ಯದ ಕಾರಣದಿಂದ ಅದು ಸಾಧ್ಯವಾಗಲಿಲ್ಲ. ನನ್ನ ದೇಹವು ಗರ್ಭಧಾರಣೆಗೆ ಸ್ಪಂದಿಸುತ್ತಿರಲಿಲ್ಲ. ಇನ್ನೊಂದು ಮಗುವನ್ನು ಪಡೆಯಲು ಆಟೋ ಇಮ್ಯೂನೋ ಡಿಸೀಸ್ (APLC) ಎನ್ನವ ಕಾಯಿಲೆ ಅಡ್ಡಿಯಾಯಿತು. ಈ ಸಮಸ್ಯೆಯಿಂದ ಹಲವಾರು ಬಾರಿ ಗರ್ಭಪಾತವಾಗಿತ್ತು ಎಂದು ಶಿಲ್ಪಾ ಶೆಟ್ಟಿ ತಿಳಿಸಿದರು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಶಿಲ್ಪಾ ಶೆಟ್ಟಿ
ಮನರಂಜನಾ ಸುದ್ದಿ
ಬಾಲಿವುಡ್
ಸಂಬಂಧಗಳು
ಜೀವನಶೈಲಿ

Latest Videos
Recommended Stories
Recommended image1
'ಒಳ್ಳೆಯ ಸ್ನೇಹಿತನಾಗಿರುವ ಸಂಗಾತಿ ಸಿಕ್ಕರೆ..': ಮದುವೆ ಬಗ್ಗೆ ನಟಿ ರಮ್ಯಾ ನಿಲುವೇನು?
Recommended image2
ಡೆವಿಲ್ಸ್ ಕಿಚನ್ Vs ಸಿನಿಮಾ ನಂಟು: ಪ್ರಕೃತಿಯ ರಹಸ್ಯದೊಳಗಿನ ಸಾಹಸದ ಲೋಕ 'ಗುಣ ಗುಹೆ'
Recommended image3
ಟಾಯ್ಲೆಟ್‌ ಸೀಟ್‌ಗಿಂತಲೂ ಕೊಳಕು! ನಿಮ್ಮ ಕಿಚನ್‌ನ ಈ 5 ವಸ್ತುಗಳಲ್ಲಿ ಅಡಗಿವೆ ಅಪಾಯಕಾರಿ ಕ್ರಿಮಿಗಳು
Related Stories
Recommended image1
ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾ ಆತ್ಮಹತ್ಯೆಗೆ ಯತ್ನ! ಅಂದು ಆದದ್ದಾದರೂ ಏನು
Recommended image2
ನಟಿ ಶಿಲ್ಪಾ ಶೆಟ್ಟಿ ಪುತ್ರಿ ಹೇಗಿದ್ದಾಳೆ ಗೊತ್ತಾ? ಬಾಡಿಗೆ ತಾಯ್ತನದಿಂದ ಹುಟ್ಟಿದ ಪುತ್ರಿಯ ಅಪರೂಪದ ವಿಡಿಯೋ ವೈರಲ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved