Asianet Suvarna News Asianet Suvarna News

#Feelfree: ಹುಡುಗಿಯರ ಬಗ್ಗೆ ಕುತೂಹಲವಿಲ್ಲ, ಆಂಟಿಯನ್ನು ಕಂಡರೆ ಕಾಮೋದ್ರೇಕ!

ಹೈಸ್ಕೂಲ್ ಅಥವಾ ಕಾಲೇಜು ಹುಡುಗರಲ್ಲಿ ತಮ್ಮ ಯುವ ಪ್ರಾಯದ ಮಿಸ್‌ಗಳ ಮೇಲೆ ಕ್ರಶ್‌, ಲೈಂಗಿಕ ಒಲವು ಸಾಮಾನ್ಯ. ಆದರೆ ಈ ಗೀಳು ಹೆಚ್ಚಾದರೆ ಕೌನ್ಸೆಲಿಂಗ್ ಮಾಡಿಸಿಕೊಳ್ಳಬೇಕು.
 

problem of pleasure seeing matured women but not young girls
Author
Bengaluru, First Published Oct 15, 2021, 1:55 PM IST
  • Facebook
  • Twitter
  • Whatsapp

ಪ್ರಶ್ನೆ: ನನಗೀಗ ಹದಿನೆಂಟು ವರ್ಷ ವಯಸ್ಸು. ಕಾಲೇಜು ವಿದ್ಯಾರ್ಥಿ (Colleg Student). ನನ್ನ ಗೆಳೆಯರಲ್ಲಿ ಹೆಚ್ಚಿನವರಿಗೆ ಅವರ ಜೂನಿಯರ್ಸ್ ಜೊತೆಗೆ ಅಫೇರ್ (Affair) ಇದೆ. ನಮ್ಮ ಕ್ಲಾಸಿನ ಹುಡುಗಿಯರನ್ನು ಗರ್ಲ್ ಫ್ರೆಂಡ್ ಮಾಡಿಕೊಂಡವರೂ ಇದ್ದಾರೆ. ಆದರೆ ನನಗೆ ಮಾತ್ರ ಅವರನ್ನು ಕಂಡರೆ ಅಸೂಯೆಯಾಗುತ್ತೆ. ಯಾಕೆಂದರೆ ನನಗೊಂದು ವಿಚಿತ್ರ ಸಮಸ್ಯೆ ಇದೆ. ನನಗೆ ಅವರಂತೆ ಕಾಲೇಜು ಹುಡುಗಿಯರಲ್ಲಿ ಯಾವ ಭಾವನೆಯೂ ಬರುವುದಿಲ್ಲ. ಆಕರ್ಷಣೆಯಂತೂ ದೂರದ ಮಾತು. ಹಾಗಂತ ನನಗೂ ಸೆಕ್ಸ್‌ನಲ್ಲಿ ಆಸಕ್ತಿ ಇದೆ. ಆದರೆ ನನಗೆ ಹುಡುಗಿಯರಿಗಿಂತ ಆಂಟಿಯರೇ ಹೆಚ್ಚು ಇಷ್ಟ ಆಗುತ್ತಾರೆ. ಅವರನ್ನು ಕಂಡರೆ ಆಕರ್ಷಣೆ (Attraction) ಆಗುತ್ತದೆ. ಆದರೆ ಯಾರ ಎದುರಿನಲ್ಲೂ ಇದನ್ನು ಹೇಳಿಕೊಳ್ಳುವ ಧೈರ್ಯ ಇಲ್ಲ. ಅಮ್ಮನಿಂದ ತುಸು ಚಿಕ್ಕವರಾದ ಆಂಟಿಯರು ಹತ್ತಿರದಿಂದ ಹಾದು ಹೋದರೆ, ಮೈ ಮುಟ್ಟಿ ಮಾತನಾಡಿದರೆ ನಾನು ಸಂಪೂರ್ಣ ಬೆವೆತು ಹೋಗುತ್ತೇನೆ. ರಾತ್ರಿಯೆಲ್ಲ ಅವರೇ ಕನಸಲ್ಲಿ ಬರುತ್ತಾರೆ. ಇದು ನನ್ನ ಸಮಸ್ಯೆಯಾ ಅಥವಾ ನಾರ್ಮಲ್ ವಿಷಯವಾ ಅನ್ನೋದು ಗೊತ್ತಾಗುತ್ತಿಲ್ಲ. ಆನ್‌ಲೈನ್ (Online) ಮೂಲಕ ಪರಿಚಯವಾದ ವಿದೇಶದ ಗೆಳೆಯನಲ್ಲಿ ಈ ವಿಷಯ ಹೇಳಿದೆ. ಅವನು ನಮ್ಮ ದೇಶದಲ್ಲಿ ಇದೆಲ್ಲ ಕಾಮನ್ ಅಂದ. ಆದರೆ ನನಗ್ಯಾಕೋ ಇದು ಅಸಹಜ ಅನಿಸುತ್ತಿದೆ.

ಉತ್ತರ : ನಮ್ಮ ಭಾರತೀಯ ಸಮಾಜದಲ್ಲಿ (Indian Society) ಸೆಕ್ಸ್‌ಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಹೆಚ್ಚು ಓಪನ್ ಆಗಿ ಚರ್ಚಿಸದ ಕಾರಣ ಎಷ್ಟೋ ವಿಷಯಗಳು ಗೊತ್ತೇ ಆಗಲ್ಲ. ಇದರಿಂದ ಅನೇಕ ಮಾನಸಿಕ ಸಮಸ್ಯೆಗಳೂ (Pscychological Problems) ಬರುತ್ತವೆ. ನಿಮ್ಮ ಸಮಸ್ಯೆ ತೆಗೆದುಕೊಂಡರೆ ಅದಕ್ಕೆ ಉತ್ತರಿಸುವುದು ಸುಲಭವಲ್ಲ. ಏಕೆಂದರೆ ನಿಮ್ಮ ಹಿನ್ನೆಲೆ ಏನು ಅಂತ ತಿಳಿದಿಲ್ಲ. ನಿಮಗೆ ಆಂಟಿಯರ (Middle aged Women) ಮೇಲೆ ಆಕರ್ಷಣೆಯಾಗುತ್ತದೆ ಅಂದರೆ ಅದಕ್ಕೊಂದು ಕಾರಣ ಇರಬೇಕು. ಬಹುಶಃ ನಿಮ್ಮ ವಯಸ್ಸಿನ ಅಥವಾ ನಿಮಗಿಂತ ಚಿಕ್ಕ ಹುಡುಗಿಯರು ಚೈಲ್ಡಿಶ್ (Childish) ಆಗಿ ವರ್ತಿಸುತ್ತಾರೆ ಅಂತ ನಿಮಗನಿಸಬಹುದು. ಆದರೆ ಆಂಟಿಯರು ಹೆಚ್ಚು ಮೆಚ್ಯೂರ್ಡ್ ಆಗಿ ಬಿಹೇವ್ (Behave) ಮಾಡುತ್ತಾರೆ ಅನ್ನುವುದು ಕಾರಣ ಆಗಿರಬಹುದು. ಜೊತೆಗೆ ಅವರು ಸೆಕ್ಸ್‌ನಲ್ಲಿ ಪಳಗಿದವರಿರುತ್ತಾರೆ, ಹೆಚ್ಚು ಸುಖ ಸಿಗಬಹುದು ಅನ್ನುವ ಮನೋಭಾವ ಕಾರಣ ಇರಬಹುದು. 

#Feelfree: ಪತ್ನಿಯ ಕನ್ಯಾಪೊರೆ ಹರಿದಿರೋದು ಪತಿಗೆ ಗೊತ್ತಾಗುತ್ತಾ?

ನಿಮ್ಮದೇನೂ ಒಂಟಿ ಅಥವಾ ವಿಚಿತ್ರ ಸಮಸ್ಯೆಯಲ್ಲ. ಏಕೆಂದರೆ ನಿಮ್ಮ ಪ್ರಾಯದ ಅನೇಕ ಹುಡುಗರಲ್ಲಿ ಇದು ಕಂಡುಬರುತ್ತದೆ. ಹೈಸ್ಕೂಲ್ (Highschool) ಅಥವಾ ಕಾಲೇಜು ಹುಡುಗರು ತಮ್ಮ ಯುವಪ್ರಾಯದ ಮಿಸ್‌ಗಳ ಜೊತೆಗೆ ಕ್ರಶ್ (Crush) ಹೊಂದಿರುವುದು ಸಾಮಾನ್ಯ. ಆದರೆ ನೀವು ಇದೇ ಸಮಾಜದಲ್ಲೇ ಇರುವ ಕಾರಣ ಈ ಮನೋಭಾವ ಮುಂದುವರಿಯಲು ಬಿಡದಿರುವುದು ಬೆಟರ್ ಅನಿಸುತ್ತದೆ. ಏಕೆಂದರೆ ನೀವು ಭವಿಷ್ಯದಲ್ಲಾದರೂ ನಿಮ್ಮಷ್ಟೇ ಅಥವಾ ನಿಮಗಿಂತ ಸಣ್ಣ ವಯಸ್ಸಿನ ಸ್ತ್ರೀಯ ಜೊತೆ ಮದುವೆಯಾಗಬೇಕು. ಹಿರಿಯ ಅಥವಾ ವಿವಾಹಿತ ಹೆಣ್ಣುಮಕ್ಕಳೊಂದಿಗೆ ಸಂಬಂಧವಿಡುವುದು ಅಪಾಯಕಾರಿ. ನೀವೊಮ್ಮೆ ಮನೋವೈದ್ಯರ (Psychologis) ಬಳಿ ಹೋಗಿ. ಅವರು ನಿಮಗೆ ಕೌನ್ಸೆಲಿಂಗ್ (Counseling) ಮಾಡುತ್ತಾರೆ. ಆಗ ನಿಮ್ಮ ಈ ಸಮಸ್ಯೆಗೆ ಹಿನ್ನೆಲೆಯಲ್ಲಿ ಏನಾದರೂ ಕಾರಣ ಇದ್ದರೆ ಪತ್ತೆಯಾಗುತ್ತೆ. 

Feelfree: ನನ್ನ ಗೆಳೆಯ ಥ್ರೀಸಮ್‌ಗೆ ಒತ್ತಾಯಿಸ್ತಾನೆ, ಏನು ಮಾಡಲಿ?

ಪ್ರಶ್ನೆ : ನನಗೆ 23 ವರ್ಷ ವಯಸ್ಸು. ಇತ್ತೀಚೆಗೆ ಒಂದು ಭಯ ಕಾಡುತ್ತಿದೆ. ಪದೇ ಪದೇ ನನಗೆ ಸ್ವಪ್ನ ಸ್ಖಲನವಾಗುತ್ತಿದೆ. ಇದರಿಂದ ನನ್ನ ವೀರ್ಯ ನಾಶವಾಗಬಹುದಾ? ಆಯುಸ್ಸು ಹೆಚ್ಚಬೇಕಾದರೆ ವೀರ್ಯನಾಶವಾಗಬಾರದು ಅನ್ನುತ್ತಾರಲ್ಲ. ನನಗೆ ಮದುವೆಯಾದಾಗ ಸಮಸ್ಯೆ ಆಗಬಹುದಾ? ಅಷ್ಟಕ್ಕೂ ವೀರ್ಯನಾಶ ಸಮಸ್ಯೆಯಾ ಅಥವಾ ಕಾಮನ್ ವಿಷಯವಾ?

ಉತ್ತರ: ವೀರ್ಯ ಅನ್ನುವುದು ಹೆಚ್ಚು ಕಡಿಮೆ ನಮ್ಮ ಬಾಯಲ್ಲಿರುವ ಎಂಜಲಿನ ಹಾಗೆ. ನಿಮಗೆ ಸ್ಖಲನವಾದಾಗ ಹೊರಬರುತ್ತವೆ. ಮತ್ತೆ ವೃಷಣಗಳಲ್ಲಿ ಅದು ಸೃಷ್ಟಿಯಾಗಿ ತುಂಬಿಕೊಳ್ಳುತ್ತದೆ. ಈ ವಯಸ್ಸಿಗೆಲ್ಲ ಅದು ಖಾಲಿಯಾಗುವುದು ಅಂತಿಲ್ಲ. ನೀವು ಲೈಂಗಿಕ ಬಯಕೆಗಳನ್ನು ಬಲವಂತವಾಗಿ ತಡೆ ಹಿಡಿಯುವದರಿಂದ ಸ್ವಪ್ನ ಸ್ಖಲನ ಆಗಿರಬಹುದು. ಅದು ಖಂಡಿತಾ ಸಮಸ್ಯೆ ಅಲ್ಲ. ಕಾಮನ್ ವಿಚಾರ. ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳದೇ ಲೈಫ್ ಅನ್ನು ಎನ್‌ಜಾಯ್ ಮಾಡಿ.

ಮೂವತ್ತರ ನಂತರ ನಿಮ್ಮ ಸೆಕ್ಸ್ ಲೈಫ್‌ನಲ್ಲಿ ಏನೇನಾಗುತ್ತೆ? ಗೊತ್ತೇ?

Follow Us:
Download App:
  • android
  • ios