#Feelfree: Oral Sex ಅಪರಾಧವೇ? ಈ ಬಗ್ಗೆ ಒಂದಿಷ್ಟು ಡೌಟ್ಸಿಗಿಲ್ಲಿವೆ ಮಾಹಿತಿ

ನವವಿವಾಹಿತೆಯೊಬ್ಬರಿಗೆ ಮುಖ ಮೈಥುನದ ಬಗ್ಗೆ ಆಸಕ್ತಿ, ಕುತೂಹಲ, ಹಾಗೇ ಆತಂಕ. ಓರಲ್ ಸೆಕ್ಸ್ ಬಗ್ಗೆ ತಿಳಿಯೋ ವಿಷಯ ತುಂಬಾ ಇದೆ.

Is oral sex healthy or not here is answer for a querry

ಪ್ರಶ್ನೆ: ನಾನು ಇಪ್ಪತ್ತಾರು ವರ್ಷದ ವಿವಾಹಿತೆ. ನನ್ನ ಮದುವೆಯಾಗಿ ಆರು ತಿಂಗಳಾಗಿದೆ. ಮೊದಲ ರಾತ್ರಿಯಿಂದಲೇ ನಮ್ಮ ಸೆಕ್ಸ್ ಲೈಫು ಚೆನ್ನಾಗಿದೆ. ಸರಾಸರಿ ಪ್ರತಿದಿನ ಸಂಭೋಗಿಸುತ್ತೇವೆ. ಇತ್ತೀಚೆಗೆ ಮುಖಮೈಥುನ ಅಥವಾ ಓರಲ್ ಸೆಕ್ಸ್ ವಿಚಾರದಲ್ಲಿ ನಮ್ಮಿಬ್ಬರಿಗೆ ಭಿನ್ನಾಭಿಪ್ರಾಯ ಬಂತು. ಮುಖಮೈಥುನ ಒಳ್ಳೆಯದು ಎಂದು ನನ್ನ ಪತಿ ಹೇಳುತ್ತಾರೆ. ಅವರು ನನ್ನಿಂದ ಮುಖಮೈಥುನ ಮಾಡಿಸಿಕೊಳ್ಳಲು ಬಯಸುತ್ತಿರುವುದು ಸ್ಪಷ್ಟ. ಅವರು ನನಗೂ ಮುಖಮೈಥುನ ಮಾಡಲು ಯತ್ನಿಸಿದ್ದಾರೆ. ಆದರೆ ನಾನು ಅದಕ್ಕೆ ಆಸ್ಪದ ಕೊಟ್ಟಿಲ್ಲ. ನನಗೆ ಅದು ಅಸಹ್ಯ, ಅನಾರೋಗ್ಯಕರ ಎಂದೇ ಅನಿಸುತ್ತದೆ. ಈ ಬಗ್ಗೆ ಕೌನ್ಸೆಲಿಂಗ್‌ಗೆ ಹೋಗೋಣವೇ ಎಂದು ಪತಿ ಕೇಳಿದರು. ಅದು ಅಗತ್ಯವಿಲ್ಲ, ತಜ್ಞರ ಸಲಹೆ ಸಾಕು ಎಂದು ನಾನು ನಿಮ್ಮ ಬಳಿಕ ಕೇಳುತ್ತಿದ್ದೇನೆ. ಈ ವಿಚಾರದಲ್ಲಿ ನಾನು ಏನು ಮಾಡಬಹುದು?

#Feelfree: ಇಬ್ಬರ ಜೊತೆ ಲೈಂಗಿಕ ಸಂಬಂಧ, ಮಗು ಯಾರದ್ದು? ...

ಉತ್ತರ: ನಿಮ್ಮ ಸೆಕ್ಸ್ ಲೈಫು ಸೂಪರ್ರಾಗಿರುವುದಾಗಿ ನೀವು ಹೇಳಿದ್ದು ಕೇಳಿ ಸಂತೋಷವಾಯಿತು. ಹಾಗೇ ಓರಲ್ ಸೆಕ್ಸ್ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯವನ್ನು ಹೇಳಿಕೊಂಡಿದ್ದೀರಿ. ಅದೂ ಓಕೆ. 
ಪ್ರಪಂಚದಲ್ಲಿ ಎಲ್ಲ ವಿವಾಹಿತರೂ ಸಂಭೋಗ ನಡೆಸುತ್ತಾರೆ ಎಂದೇನಿಲ್ಲ. ಶೇ. 20 ವಿವಾಹಿತರು ವರ್ಷಕ್ಕೆ ಒಂದು ಬಾರಿ ಕೂಡ ಸಂಭೋಗ ನಡೆಸದ ನಿದರ್ಶನಗಳು ಇವೆ. ಅದಕ್ಕೆ ಬೇರೆ ಬೇರೆ ದೈಹಿಕ, ಮಾನಸಿಕ ಕಾರಣಗಳು ಇರುತ್ತವೆ. ಆದರೆ ಮನುಷ್ಯ ಜೀವಿಗೆ ಸಹಜವಾದ, ಸೆಕ್ಸ್ ಎಂಬ ಸುಂದರ ಅನುಭವ ಒಂದರಿಂದ ಇವರು ವಮಚಿತರಾಗುತ್ತಾರೆ ಎಂದು ಹೇಳಿದರೆ ತಪ್ಪೇನಿಲ್ಲ.
ಮುಖಮೈಥುನದ ಬಗ್ಗೆಯೂ ಇದನ್ನೇ ಹೇಳಬಹುದು. ಎಲ್ಲ ಸರಿಯಾಗಿದ್ದರೆ, ಓರಲ್ ಸೆಕ್ಸ್ ಎಂಬುದು ತುಂಬಾ ಒಳ್ಳೆಯ, ಸುಖಕರವಾದ ಒಂದು ಅನುಭವ. ಆದರೆ ಇದೇ ವೇಳೆಗೆ ಈ ಕೆಳಗಿನ ಹಲವು ಅಂಶಗಳನ್ನು ನೆನಪಿಟ್ಟುಕೊಳ್ಳಬೇಕು.

Is oral sex healthy or not here is answer for a querry



- ಓರಲ್ ಸೆಕ್ಸ್ ಅಪರಾಧವಲ್ಲ. ಆದರೆ ಸಂಗಾತಿಯ ಒಪ್ಪಿಗೆ ಇಲ್ಲದೆ ಅದನ್ನು ನೆರವೇರಿಸಿದರೆ ಅದು ಅಪರಾಧ. ಈ ಅಪರಾಧಕ್ಕೆ ಕಾನೂನಿನಲ್ಲಿ ಶಿಕ್ಷೆಯೂ ಇದೆ. ಇತ್ತೀಚೆಗೆ ಅನೈಸರ್ಗಿಕ ಸೆಕ್ಸ್‌ಗಾಗಿ ಒತ್ತಾಯಿಸಿದ ಪತಿಯೊಬ್ಬನನ್ನು ಜೈಲಿಗೆ ಕಳುಹಿಸಿದ ಪತ್ನಿಯ ಬಗೆಗಿನ ಸುದ್ದಿಯನ್ನು ನೀವು ಓದಿರಬಹುದು.

#Feelfree: ಪಕ್ಕದ್ಮನೆಯವಳನ್ನು ನೋಡಿದ್ರೆ ಏನೇನೋ ಅನಿಸುತ್ತೆ! ...

- ಇದು ಅಸಹ್ಯಕರವಲ್ಲ. ಜಗತ್ತಿನ ಸಂಗಾತಿಗಳಲ್ಲಿ ಶೇ.70 ಮಂದಿ ಒಂದಲ್ಲ ಒಂದು ಬಾರಿ ಮುಖಮೈಥುನ ಮಾಡುತ್ತಾರೆ ಅಥವಾ ಮಾಡಿಸಿಕೊಳ್ಳುತ್ತಾರೆ.
- ಇದು ಅನಾರೋಗ್ಯಕರವೂ ಅಲ್ಲ. ಗುಪ್ತಾಂಗಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಂಡರೆ ಇದು ಆರೋಗ್ಯಕರ. ಆದರೆ ಗುಪ್ತಾಂಗಗಳನ್ನು ಸರಿಯಾಗಿ ಕ್ಲೀನ್ ಮಾಡದೆ ಇರುವುದು, ಅಲ್ಲಿ ಫಂಗಸ್ ಇರುವುದು, ಚಮದ ಸಮಸ್ಯೆಗಳು ಇತ್ಯಾದಿಗಳಿದ್ದರೆ, ಅಲ್ಲಿ ಓರಲ್‌ ಸೆಕ್ಸ್ ನೆರವೇರಿಸಿದ ಸಂಗಾತಿಗೆ ಇದರಿಂದ ಆರೋಗ್ಯ ಸಮಸ್ಯೆ ಉಂಟಾಗಬಹುದು. ಹೀಗಾಗಿ ಮುಖಮೈಥುನಕ್ಕೆ ಮುನ್ನ ಸರ್ವಾಂಗ ಸ್ವಚ್ಛತೆ ಅವಶ್ಯಕ. ಮೈಥುನಕ್ಕೆ ಮುನ್ನ ಸ್ನಾನ ಮಾಡಿ ಬರುವುದು ಒಳ್ಳೆಯ ರೂಢಿ. ಇಲ್ಲಿಗೆ ಸಿಂಪಡಿಸಿಕೊಳ್ಳುವುದಕ್ಕೆ ಕೆಲವು ಪರಿಮಳಯುಕ್ತವಾದ ಸ್ಪ್ರೇಗಳು ಕೂಡ ಸಿಗುತ್ತವೆ. ಇದು ಸಂಗಾತಿಗೆ ಆನಂದದಾಯಕವಾದ ಅನುಭವ ನೀಡುತ್ತವೆ. ನೀವು ಅದನ್ನು ಪ್ರಯತ್ನಿಸಬಹುದು. 
- ಓರಲ್ ಸೆಕ್ಸ್‌ನಿಂದ ಆರೋಗ್ಯಕ್ಕೆ ಹಲವಾರು ಉಪಯೋಗಗಳು ಇರುವುದನ್ನೂ ತಜ್ಞರು ಕಂಡುಕೊಂಡಿದ್ದಾರೆ. ಉದಾಹರಣೆಗೆ, ಒತ್ತಡದ ನಿವಾರಣೆ. ಮನಸ್ಸಿನಲ್ಲಿ ಒತ್ತಡಗಳು ತುಂಬಿಕೊಂಡಿದ್ದಾಗ ದೇಹಕ್ಕೆ ಮಸಾಜ್‌ ಮಾಡಿದರೆ ಹೇಗೆ ರಿಲ್ಯಾಕ್ಸ್ ಆಗುತ್ತದೋ ಹಾಗೇ ಸೆಕ್ಸ್ ಕೂಡ ಒತ್ತಡ ನಿವಾರಕ. ಓರಲ್ ಸೆಕ್ಸ್ ಇನ್ನಷ್ಟು ಆನಂದದಾಯಕ. ದೇಹದಲ್ಲಿ ಉಂಟಾಗುವ ಎಂಡಾರ್ಫಿನ್ ಸ್ರಾವಗಳು ದೇಹವನ್ನು ಹಗುರಗೊಳಿಸುತ್ತವೆ, ಉಲ್ಲಾಸಗೊಳಿಸುತ್ತವೆ.
- ಹಾಗೇ ಇದು ಸಂಗಾತಿಗಳಲ್ಲಿ ಬಾಂಡಿಂಗ್ ಅಥವಾ ಬಾಂಧವ್ಯ ವೃದ್ಧಿಗೊಳಿಸುವುದೂ ಗೊತ್ತಾಗಿದೆ. ತನ್ನ ಸಂಗಾತಿ ತನಗಾಗಿ ಏನನ್ನೂ ಮಾಡಲು ಸಿದ್ಧ ಎಂಬ ಭಾವನೆಯೇ ಸುಖಕರವಾದುದು ಅಲ್ಲವೇ?
- ಪ್ರಾಚೀನ ಭಾರತದ ಕಾಮಶಾಸ್ತ್ರ ರಚಯಿತ ವಾತ್ಸಾಯನ ಮುನಿ ಕೂಡ ಮುಖಮೈಥುನವನ್ನು ಉಲ್ಲೇಖಿಸಿದ್ದಾನೆ. ಖಜುರಾಹೋ ಮುಂತಾದ ದೇವಾಲಯಗಳ ಹೊರಭಿತ್ತಿಯ ಕೆತ್ತನೆಗಳಲ್ಲಿ ಮುಖಮೈಥುನದ ಶಿಲ್ಪಗಳಿವೆ. ಅಂದರೆ ಪ್ರಾಚೀನ ಭಾರತದಲ್ಲೂ ಇದು ಒಪ್ಪಿತ ಕ್ರಿಯೆಯಾಗಿತ್ತು ಎಂಬುದು ನಿಮಗೆ ಗೊತ್ತಿರಲಿ.    

#Feelfree: ನಾನು ಉಭಯಲಿಂಗಕಾಮಿಯಾ? ಇದು ತಪ್ಪಾ? ...

 

Latest Videos
Follow Us:
Download App:
  • android
  • ios