ಪ್ರಶ್ನೆ: ಪಕ್ಕದಮನೆಯವಳನ್ನು ಕಳೆದ ಕೆಲವು ದಿನಗಳಿಂದ ಬಹಳ ತೀವ್ರವಾಗಿ ಗಮನಿಸುತ್ತಿದ್ದೇನೆ. ನನಗೆ ಅವಳ ಬಗ್ಗೆ ಬಹಳ ಆಕರ್ಷಣೆ. ಅವಳ ಜೊತೆಗೆ ಸೆಕ್ಸ್‌ ಮಾಡಬೇಕು ಅಂತ ಬಹಳ ಅನಿಸುತ್ತೆ. ಆದರೆ ಅವಳ ಬಳಿ ಕೇಳಲು ಭಯ. ಅವಳು ನನಗಿಂತ ಹತ್ತು ವರ್ಷ ದೊಡ್ಡೋಳು. ನನ್ನ ಮನದ ಬಯಕೆಯನ್ನು ಅವಳ ಬಳಿ ಹೇಳಿಕೊಳ್ಳುವುದು ಹೇಗೆ? ಅವಳನ್ನು ಒಪ್ಪಿಸೋದು ಹೇಗೆ? ಕೆಲವೊಮ್ಮೆ ಅವಳ ಜೊತೆಗೆ ಸುಖಿಸದೇ ಲೈಫೇ ವೇಸ್ಟ್‌ ಅನಿಸುತ್ತೆ. ಆದರೆ ಹೇಳುವುದು ಹೇಗೆ ಅಂತ ತೋಚುತ್ತಿಲ್ಲ.

ಉತ್ತರ: ನಿಮಗಿಂತ ಹತ್ತು ವರ್ಷ ದೊಡ್ಡವಳು ಅನ್ನುತ್ತೀರಿ. ನಿಮ್ಮ ವಯಸ್ಸೆಷ್ಟು ಅಂತ ಹೇಳಿಲ್ಲ. ಆಕೆ ವಿವಾಹಿತಳಾ ಅನ್ನೋದನ್ನೂ ತಿಳಿಸಿಲ್ಲ. ಆಕೆಗೆ ನಿಮ್ಮ ಬಗ್ಗೆ ಏನು ಭಾವನೆ ಇದೆ ಅಂತ ತಿಳಿಯಲು ಪ್ರಯತ್ನಿಸಿದ್ದೀರಾ? ಹೆಣ್ಣುಮಕ್ಕಳು ಬಹಳ ಸೂಕ್ಷ್ಮ ಮನಸ್ಥಿತಿಯವರಾಗಿರುತ್ತಾರೆ. ನೇರವಾಗಿ ಇಂಥಾ ವಿಚಾರ ಮಾತನಾಡುವುದು ಕಷ್ಟ. ಮೊದಲು ಆಕೆಯ ಮನಸ್ಥಿತಿ ಅರಿತುಕೊಳ್ಳಿ. ವಿವಾಹ ಬಾಹಿರ ಸಂಬಂಧ ಯಾವತ್ತೂ ಸೇಫ್ ಅಲ್ಲ ಅನ್ನೋದೂ ತಲೆಯಲ್ಲಿರಲಿ. ಎಷ್ಟೋ ಜನ ಮನಸ್ಸು ಹೇಳಿದಂತೆ ಕೇಳಿ, ಅದನ್ನೇ ಹೆಣ್ಣುಮಕ್ಕಳ ಎದುರು ಹೇಳಿ ಚಪ್ಪಲಿಯಿಂದ ಹೊಡೆಸಿಕೊಂಡದ್ದೂ ಇದೆ. ಈ ವಿಚಾರಗಳನ್ನೆಲ್ಲ ಅರಿತುಕೊಂಡು ಹುಚ್ಚಾಪಟ್ಟೆ ಓಡೋ ಮನಸ್ಸನ್ನು ನಿಗ್ರಹಿಸುವುದು ಒಳಿತು.

#Feelfree: ನಾನು ಉಭಯಲಿಂಗಕಾಮಿಯಾ? ಇದು ತಪ್ಪಾ? ...

ಪ್ರಶ್ನೆ : ನಾನು ಮೂವತ್ತೈದು ವರ್ಷದ ಗಂಡಸು. ಮದುವೆಯಾಗಿ ಮೂರು ವರ್ಷವಾಗಿದೆ. ಒಂದು ವರ್ಷದ ಗಂಡು ಮಗುವಿದೆ. ಆದರೆ ಮಗುವಾದ ಮೇಲೆ ನಮ್ಮ ಲೈಂಗಿಕ ಬದುಕು ಸಂಪೂರ್ಣ ಬರ್ಬಾದಾಗಿದೆ. ನನಗೆ ಇದು ನಂಗಲಾರದ ತುತ್ತಾಗಿದೆ. ಇದ್ಯಾಕೆ ಹೀಗೆ ಅಂತ ಗೊತ್ತಾಗ್ತಿಲ್ಲ. ರಾತ್ರಿ ಹತ್ರ ಬಂದ್ರೆ ಸಿಡುಕಿ ತಿರುಗಿ ಮಲಗುತ್ತಾಳೆ. ನಾನು ಎಷ್ಟೇ ಒತ್ತಾಯಿಸಿದರೂ ಒಪ್ಪಿಕೊಳ್ಳೋದಿಲ್ಲ. ಮಗುವನ್ನು ನಡುವೆ ಮಲಗಿಸಿ ಮಲಗುತ್ತಾಳೆ. ಇಡೀ ದಿನ ಅವಳು ಮಗುವಿನ ಜೊತೆಗೇ ಇರುತ್ತಾಳೆ. ನನ್ನ ಕಡೆ ಸಂಪೂರ್ಣ ನಿರ್ಲಕ್ಷ ತೋರುತ್ತಾಳೆ. ತೀರಾ ತಡೆಯದೇ ಬಲವಂತ ಮಾಡಿದರೆ ಮನಸ್ಸೇ ಇಲ್ಲದೇ ಸಹಕರಿಸುತ್ತಾಳೆ. ನನಗೆ ಮಗುವಿನ ಮೇಲೇ ಸಿಟ್ಟು ಬರುತ್ತದೆ. ಬೇರೆ ಹುಡುಗಿಯರ ಬಗ್ಗೆ ಮನಸ್ಸು ಹರಿಯುತ್ತದೆ. ಬೇರೆ ಸಂಬಂಧ ಬೆಳೆಸಿಕೊಳ್ಳೋಣವಾ ಅನ್ನುವಷ್ಟು ರೇಜಿಗೆ ಆಗುತ್ತದೆ. ಆದರೆ ಹಾಗೆಲ್ಲ ಮಾಡುವಷ್ಟು ಧೈರ್ಯವಿಲ್ಲ. ಅವಳಿಗೆ ಕಳೆದ ಹೆರಿಗೆಯಲ್ಲಿಸಿ ಸೆಕ್ಷನ್ ಆಗಿತ್ತು. ಅದರಿಂದ ಏನಾದ್ರೂ ಹೀಗಾಗಿರಬಹುದಾ? ಅವಳಿಗೆ ಹಿಂದಿನ ಆಸಕ್ತಿ ಬರಬೇಕು ಅಂದರೆ ಏನು ಮಾಡಬೇಕು ಹೇಳಿ.

#Feelfree: ಕದ್ದು ನೋಡಿದರೇ ನನ್ನ ಗಂಡನಿಗೆ ಮಜಾ! ಯಾಕ್ಹಿಂಗಾಡ್ತಾರೆ? ...

ಉತ್ತರ: ಈ ಅವಧಿಯಲ್ಲಿ ಹೆಚ್ಚಿನೆಲ್ಲ ಹೆಣ್ಣುಮಕ್ಕಳೂ ಇಂಥಾ ಸಮಸ್ಯೆ ಫೇಸ್ ಮಾಡುತ್ತಾರೆ. ಅವರ ದೇಹದಲ್ಲಿ ಈಸ್ಟ್ರೋಜೆನ್‌ ಲೆವೆಲ್ ಕಡಿಮೆ ಆಗಿರುವುದೇ ಇದಕ್ಕೆ ಕಾರಣ. ಕೆಲವು ಹೆಣ್ಣುಮಕ್ಕಳಿಗಂತೂ ಮೆನೊಪಾಸ್ ಆದಾಗ ಯಾವ ರೀತಿ ಸೆಕ್ಸ್ ನಲ್ಲಿ ಆಸಕ್ತಿ ಕುಂದುವುದೋ ಆ ಲೆವೆಲ್‌ನಲ್ಲಿ ನಿರಾಸಕ್ತಿ ಉಂಟಾಗುತ್ತದೆ. ಹಾಗೆಂದು ಇದೇ ಸ್ಥಿತಿ ಕೊನೇತನಕ ಇರೋದಿಲ್ಲ. ಮಕ್ಕಳು ಸ್ವಲ್ಪ ದೊಡ್ಡವರಾದಾಗ ಮರಳಿ ಹಿಂದಿನಂತಾಗುತ್ತಾರೆ. ಎಷ್ಟೋ ಅಮ್ಮಂದಿರಲ್ಲಿ ಮಗುವಿಗೆ ಎದೆ ಹಾಲು ನೀಡುವುದು ನಿಲ್ಲಿಸಿದ ಕೆಲವು ದಿನಗಳ ಬಳಿಕ ಸೆಕ್ಸ್ ಬಗೆಗೆ ಆಸಕ್ತಿ ಹೆಚ್ಚಾಗುತ್ತದೆ.

#Feelfree: ಹಳೆ ಬಾಯ್‌ಫ್ರೆಂಡ್ ಜತೆ ಸೆಕ್ಸ್: ಪತಿಗೆ ಹೇಳಲೇ, ಬಿಡಲೇ? ...

ಈ ಹಂತದಲ್ಲಿ ಮಗು ಆಗಾಗ ಎಚ್ಚರಗೊಳ್ಳುವ ಕಾರಣ, ಇಡೀ ದಿನ ಮಗುವಿನ ಜೊತೆಗೇ ಕಳೆದ ಏಕತಾನತೆ .. ಹೀಗೆ ಅನೇಕ ಕಾರಣಗಳಿರುತ್ತವೆ. ದಯಮಾಡಿ ಸ್ವಲ್ಪ ದಿನ ಸಹನೆಯಿಂದಿರಿ. ಮಗುವಿನ ಜವಾಬ್ದಾರಿಯನ್ನೂ ನೀವೂ ಹಂಚಿಕೊಳ್ಳಿ. ಆಗ ಆಕೆಗೂ ಆರಾಮ ಸಿಕ್ಕಿ ತನ್ನ ದೇಹ, ಮನಸ್ಸಿನ ಬಗ್ಗೆ ಯೋಚಿಸಲು ಕೊಂಚ ಸಮಯ ಸಿಕ್ಕಂತಾಗುತ್ತದೆ. ಪತ್ನಿಯ ಜೊತೆಗೆ ಸಾಧ್ಯವಾದಷ್ಟು ಪ್ರೀತಿಯಿಂದ ವ್ಯವಹಿಸಿ. ರೊಮ್ಯಾಂಟಿಕ್ ಸಿನಿಮಾಗಳು, ಬ್ಯೂಟಿಫುಲ್ ಜಾಗಕ್ಕೆ ಅಂದರೆ ಪ್ರಕೃತಿ ಸೌಂದರ್ಯ ಇರುವ ಜಾಗಗಳಿಗೆ ಔಟಿಂಗ್ ಹೋಗೋದು, ಇಬ್ಬರಿಗೂ ದಿನದಲ್ಲಿ ಒಂಚೂರು ಟೈಮ್ ಕೊಡೋದು ಸಲ ಈ ನಿಟ್ಟಿನಲ್ಲಿ ಸಹಕಾರಿ.