- Home
- Entertainment
- Amruthadhaare serial ಸಮಾಧಿಯಿಂದ ನಾಪತ್ತೆಯಾಗಿದ್ದ ಜೈದೇವ ಕೊನೆಗೂ ಪ್ರತ್ಯಕ್ಷ! ನಟ ರಾಣವ್ ಫೋಟೋಶೂಟ್
Amruthadhaare serial ಸಮಾಧಿಯಿಂದ ನಾಪತ್ತೆಯಾಗಿದ್ದ ಜೈದೇವ ಕೊನೆಗೂ ಪ್ರತ್ಯಕ್ಷ! ನಟ ರಾಣವ್ ಫೋಟೋಶೂಟ್
'ಅಮೃತಧಾರೆ' ಸೀರಿಯಲ್‌ನಲ್ಲಿ ಜೈದೇವ್ ಶವ ಸಮಾಧಿಯಿಂದ ನಾಪತ್ತೆಯಾಗಿದೆ. ಈ ಪಾತ್ರಧಾರಿ ನಟ ರಾಣವ್ ಗೌಡ, ತಮ್ಮ ಮದುವೆಯ ಕಾರಣ ಸೀರಿಯಲ್‌ನಿಂದ ದೂರವಾಗಿದ್ದಾರೆ ಎನ್ನಲಾಗಿದ್ದು, ಇತ್ತೀಚೆಗೆ ತಮ್ಮ ಕಷ್ಟದ ದಿನಗಳು, ಕೂಲಿ ಕೆಲಸದಿಂದ ಜೈಲುವಾಸದವರೆಗಿನ ಬದುಕಿನ ಬಗ್ಗೆ ಹಂಚಿಕೊಂಡಿದ್ದಾರೆ.

ಜೈದೇವ್ ಶವ ಕಣ್ಮರೆ
ಅಮೃತಧಾರೆ ಸೀರಿಯಲ್ (Amruthadhaare serial) ನಲ್ಲಿ ಸದ್ಯ ಜೈದೇವನ ಶವ ಸಮಾಧಿಯಿಂದ ನಾಪತ್ತೆಯಾಗಿದೆ. ಆತ ಎಲ್ಲಿದ್ದಾನೆ ಎನ್ನುವ ವಿಷ್ಯ ಸದ್ಯ ಸಿಕ್ಕಾಪಟ್ಟೆ ಗುಟ್ಟಾಗಿ ಉಳಿದಿದೆ. ಸಮಾಧಿಯನ್ನು ಭೂಮಿಕಾ ಅಗೆದಾಗ ಅಲ್ಲಿ ಶವವೇ ಇಲ್ಲದೇ ಎಲ್ಲರಿಗೂ ಇದೀಗ ಒಗಟಾಗಿ ಉಳಿದುಬಿಟ್ಟಿದೆ.
ರಾಣವ್ ಗೌಡ ಫೋಟೋಶೂಟ್
ಅದರ ನಡುವೆಯೇ, ಜೈದೇವ್ ಉರ್ಫ್ ನಟ ರಾಣವ್ ಗೌಡ ಕ್ಯೂಟ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ರಾಣವ್ ಅವರ ಮದುವೆ ಭಾರ್ಗವಿ ಎಲ್ಎಲ್ಬಿ ಸೀರಿಯಲ್ ಹಾಗೂ ಅಮೃತಧಾರೆಯಲ್ಲಿ ಮೊದಲು ಮಲ್ಲಿ ಪಾತ್ರ ಮಾಡಿದ್ದ ರಾಧಾ ಭಗವತಿ ಅವರ ಜೊತೆಗೆ ಫಿಕ್ಸ್ ಆಗಿದ್ದು, ಇದೇ ಕಾರಣಕ್ಕೆ ಸದ್ಯ ಜೈದೇವನ ಪಾತ್ರವನ್ನು ದೂರ ಮಾಡಲಾಗಿದೆ ಎನ್ನಲಾಗುತ್ತಿದೆ.
ಜೈದೇವ್ ಜೀವಂತ
ಅದರ ನಡುವೆಯೇ, ಜೈದೇವ್ ಇಲ್ಲಿ ಜೀವಂತವಾಗಿ ಬಂದಿದ್ದಾನೆ ಎಂದು ರಾಣವ್ ಗೌಡ ಅವರ ಫೋಟೋಶೂಟ್ ನೋಡಿ ಸೀರಿಯಲ್ ಪ್ರೇಮಿಗಳು ತಮಾಷೆ ಮಾಡುತ್ತಿದ್ದಾರೆ.
ನಟನ ಕುರಿತು
ಇನ್ನು ನಟ ರಾಣವ್ ಗೌಡ (Ranav Gowda) ಕುರಿತು ಹೇಳುವುದಾದರೆ, ಅವರು ಈಚೆಗೆ ಸಂದರ್ಶನವೊಂದರಲ್ಲಿ, ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದ್ದರು. ಈ ಪರಿಯ ಸಕ್ಸಸ್ ನಟನಾಗಿ ಬರಲು ತಾವು ಪಟ್ಟಿರುವ ಕಷ್ಟಗಳ ದಿನಗಳನ್ನು ನಟ ನೆನೆದಿದ್ದರು.
ಕೂಲಿ ಕೆಲ್ಸ ಮಾಡಿದೆ
ಎಂಜಿನಿಯರಿಂಗ್ ಅರ್ಧಂದರ್ಧ ಕಲಿತ ಮೇಲೆ ಜೀವನದಲ್ಲಿ ಸಾಕಷ್ಟು ಅಪ್ಸ್ ಅಂಡ್ ಡೌನ್ಸ್ ಆಯ್ತು. ಸಿಮೆಂಟ್ ಕೆಲಸ, ಕೂಲಿ ಕೆಲಸನೂ ಮಾಡಬೇಕಾಯ್ತು. ಲೇಬರ್ ಆಗಿ ಐದಾರು ವರ್ಷ ದುಡಿದೆ. ದುಡ್ಡಿನ ವ್ಯಾಲ್ಯೂ ಗೊತ್ತಾಗ್ಲಿ ಅಂತಾನೆ ನಮ್ಮ ತಂದೆ ಇಂಥ ಸ್ಟೆಪ್ ತೆಗೆದುಕೊಂಡಿದ್ರು. ಸೋ ನಾನು ಅದಕ್ಕೆ ಚಾಲೆಂಜಿಂಗ್ ಆಗಿ ನಾನು ಏನು ಕೊಡ್ತೀರೋ ಕೊಡಿ ಅದು ಏನು ಮಾಡ್ಬೇಕೋ ಹೇಳಿ ಮಾಡ್ತೀನಿ ಅಂತ ನಾನು ರೆಡಿ ಆಗಿದ್ದೆ ಎಂದಿದ್ದರು.
ಬಿಜಿನೆಸ್ ಲಾಸ್- ಜೈಲಿಗೆ
ಅದಾದ ಬಳಿಕ ಬಿಸಿನೆಸ್ಗೆ ಕೈ ಹಾಕಿದೆ. ಅದು ಲಾಸ್ ಆಯ್ತು. ಸಿಮೆಂಟ್ ಬಿಸಿನೆಸ್ ಆಗಿತ್ತು ಅದು, ಆರು ತಿಂಗಳು ಚೆನ್ನಾಗಿಯೇ ನಡೆಯಿತು. ಕಮಿಟ್ಮೆಂಟ್ ಜಾಸ್ತಿ ಇತ್ತು. ಸೋ ಎಲ್ಲಾನು ಬಿಟ್ಟುಬಿಟ್ಟೆ ಎಂದಿದ್ದರು ರಾಣವ್. ಆದರೆ ಆ ಸಂದರ್ಭದಲ್ಲಿ ಕಾವೇರಿ ಗಲಾಟೆ ನಡೆಯುತ್ತಿತ್ತು. ಅಲ್ಲಿಗೆ ಹೋಗಿ ಸೆಂಟ್ರಲ್ ಜೈಲು ಸೇರುವ ಸ್ಥಿತಿ ಬಂತು. ಅಲ್ಲೆಲ್ಲ ಹೋಗಿ ಇದ್ದು ಬಂದದ್ದು ಸುಮಾರು ಜನಕ್ಕೆ ಗೊತ್ತಿಲ್ಲ ಬಿಡಿ. ಆ ಸಮಯದಲ್ಲಿ ತುಲಾ ರಾಶಿಗೆ ಸಾಡೇಸಾತಿ ನಡೆಯುತ್ತಿತ್ತು. ನನ್ನ ಅಮ್ಮ ನನ್ನನ್ನು ಎಚ್ಚರಿಸುತ್ತಲೇ ಇದ್ದರು. ಆದರೆ ಅವೆಲ್ಲಾ ಏನೂ ಇಲ್ಲಮ್ಮ, ಸುಮ್ಸುಮ್ನೆ ನಂಬಬೇಡ ಎಂದಿದ್ದೆ. ಆಮೇಲೆ ಗೊತ್ತಾಯ್ತು, ಜೈಲಿಗೆ ಸೇರಬೇಕಾಯ್ತು ಎಂದಿದ್ದರು ನಟ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

