- Home
- Karnataka Districts
- ಬೆಳಗಾವಿ: ಮನೆ, ಕಚೇರಿಯಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ ಭಾವೈಕ್ಯತೆ ಮೆರೆದ ಡಿಸಿ ಮೊಹಮ್ಮದ್ ರೋಷನ್
ಬೆಳಗಾವಿ: ಮನೆ, ಕಚೇರಿಯಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ ಭಾವೈಕ್ಯತೆ ಮೆರೆದ ಡಿಸಿ ಮೊಹಮ್ಮದ್ ರೋಷನ್
ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಭಕ್ತಿಯಿಂದ ಕಚೇರಿ, ಮನೆಯಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ ವಿಶೇಶ ಪೂಜೆ ಸಲ್ಲಿಸಿ ಭಾವೈಕ್ಯತೆ ಸಂದೇಶ ಸಾರಿದ್ದಾರೆ. ಜಿಲ್ಲಾಧಿಕಾರಿಯ ಈ ನಡೆಗೆ ಹಿಂದೂಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಫೋಟೋ ಗ್ಯಾಲರಿ ನೋಡಿ.

ಗಣಪತಿ ಮೂರ್ತಿ ಹೊತ್ತು ನಡೆದ ಬೆಳಗಾವಿ ಡಿಸಿ ಮೊಹಮ್ಮದ್ ರೋಷನ್
ಕಳೆದ ವರ್ಷದಂತೆ ಈ ಬಾರಿಯೂ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡುವ ವಿಚಾರವಾಗಿ ಕಾನೂನು ಸಂಘರ್ಷ, ರಾಜಕೀಯ ಸ್ವರೂಪ ಪಡೆದು ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕೋಮು ಗಲಾಟೆ, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ನಡುವೆಯೇ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಮನೆ, ಕಚೇರಿಯಲ್ಲಿ ಭಕ್ತಿಯಿಂದ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ ಭಾವೈಕ್ಯತೆ ಮೆರೆದು ಹಿಂದೂ-ಮುಸ್ಲಿಂ ಬಾಂಧವರಿಗೆ ಸೌಹಾರ್ದತೆಯ ಸಂದೇಶ ಸಾರಿದ್ದಾರೆ.
ಬೆಳಗಾವಿ ಡಿಸಿ ಮನೆ, ಕಚೇರಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ
ಬೆಳಗಾವಿ ಜಿಲ್ಲಾಧಿಕಾರಿಯಾಗಿರುವ ಮೊಹಮ್ಮದ್ ರೋಷನ್ ಅವರು ಕಚೇರಿಯಲ್ಲಷ್ಟೇ ಅಲ್ಲದೆ ತಮ್ಮ ಮನೆಯಲ್ಲೂ ಗಣಪತಿ ಮೂರ್ತಿ ಪ್ರತಿಷ್ಟಾಪನೆ ಮಾಡಿದ್ದಾರೆ. ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ ಆರತಿ ಬೆಳಗುವ ಮೂಲಕ ವಿಘ್ನ ವಿನಾಶಕನನ್ನು ಭಕ್ತಿಯಿಂದ ಬರಮಾಡಿಕೊಂಡಿದ್ದಾರೆ.
ಗಣಪತಿಗೆ ಬೆಳಗಾವಿ ಡಿಸಿ ಮೊಹಮ್ಮದ್ ರೋಷನ್ ವಿಶೇಷ ಪೂಜೆ
ಡಿಸಿ ಮೊಹಮ್ಮದ್ ರೋಷನ್ ಅವರು ಇದಕ್ಕೂ ಮುನ್ನ ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿರುವ ಗಣಪತಿ ದೇವಸ್ಥಾನಕ್ಕೆ ಹೋದರು. ಅಲ್ಲಿ ಗಣಪತಿಗೆ ಭಕ್ತಿಯಿಂದ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಪರಿಸರ ಸ್ನೇಹಿ ಗಣೇಶ ಮೂರ್ತಿಯನ್ನು ಹೊತ್ತು ನಡೆದ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಕೂಡ ಭಾಗವಹಿಸಿದರು.
ಗಣಪತಿ ಮೂರ್ತಿ ಹೊತ್ತು ನಡೆದ ಬೆಳಗಾವಿ ಡಿಸಿ
ಚೆನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಗಣಪತಿ ಮೂರ್ತಿಯನ್ನು ಹೊತ್ತು ಸಿಬ್ಬಂದಿಯೊಂದಿಗೆ ಡಿಸಿ ರೋಷನ್ ಮೆರವಣಿಗೆಯಲ್ಲಿ ಸಾಗಿದರು. ಈ ವೇಳೆ ಕಚೇರಿ ಸಿಬ್ಬಂದಿ ಕೂಡ ಭಕ್ತಿಯಿಂದ ಪಾಲ್ಗೊಂಡು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಬೆಳಗಾವಿ ಡಿಸಿ ಮೊಹಮ್ಮದ್ ರೋಷನ್ ನಡೆಗೆ ಮೆಚ್ಚುಗೆ
ಗಣಪತಿ ದೇವರಿಗೆ ಆರತಿ ಬೆಳಗಿದರು. ಗಣಪತಿಗೆ ಭಕ್ತಿಯಿಂದ ನಮಿಸಿ ಹಣೆಗೆ ತಿಲಕ ಹಚ್ಚಿದರು. ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರ ಈ ನಡೆ ಸೌಹರ್ದತೆ, ಭಾವೈಕ್ಯತೆಯ ಸಂದೇಶ ಸಾರುವಂತಿತ್ತು. ಗಣೇಶ ಹಬ್ಬದ ವಿಚಾರವಾಗಿ ಅಲ್ಲಲ್ಲಿ ಕೋಮು ಸೌಹರ್ದತೆ ಹದಗೆಡುತ್ತಿರುವ ಹೊತ್ತಲ್ಲಿ ಹಿಂದೂ ಮುಸ್ಲಿಂ ಬೇರೆಯಲ್ಲ, ದೇವರು ಒಬ್ಬನೇ ನಾಮ ಹಲವು ಎಂದು ಸಾರಿದರು.
ಬೆಳಗಾವಿ ಡಿಸಿ ಮೊಹಮ್ಮದ್ ರೋಷನ್ ರಿಂದ ಗಣೇಶ ಮೂರ್ತಿ ಪ್ರತಿಷ್ಠಾಪನೆ
ಭಾರತೀಯರು ಧರ್ಮ, ಜಾತಿ-ಭೇದವಿಲ್ಲದೆ ಎಲ್ಲರೊಂದಾಗಿ ಇರಬೇಕಾದ ರೀತಿ ಇದು ಎಂಬುದನ್ನ ಬೆಳಗಾವಿ ಡಿಸಿ ಮಾತಾಡದೆ ಆಚರಿಸಿ ತೋರಿಸಿದ್ದಾರೆ. ಇನ್ನಾದರೂ ಹಿಂದೂ-ಮುಸ್ಲಿಂ ಗಲಾಟೆ ಮಾಡುವುದು ಬಿಟ್ಟು ಭಾವೈಕ್ಯತೆಯಿಂದ ಹಿಂದೂ-ಮುಸ್ಲಿಮರಿಬ್ಬರೂ ಒಟ್ಟಾಗಿ ಹಬ್ಬಗಳು ಆಚರಿಸಿದರೆ ಭಾರತ ಸರ್ವಜನಾಂಗದ ಶಾಂತಿಯ ತೋಟವಾಗಲಿದೆ.

