ಪುರುಷರ Virginity ಟೆಸ್ಟ್ ಮಾಡೋದು ಹೇಗೆ?

ವರ್ಜಿನಿಟಿ ಎಂಬ ವಿಷ್ಯ ಬಂದಾಗ ಎಲ್ಲರ ಗಮನ ಮಹಿಳೆಯರ ಮೇಲೆ ಹೋಗುತ್ತದೆ. ಪುರುಷರು ವರ್ಜಿನ್ನಾ ಎಂಬ ಪ್ರಶ್ನೆ ಹುಟ್ಟೋದೇ ಅಪರೂಪ. ಈ ಪ್ರಶ್ನೆ ಕಾಡಿದ್ರೂ ಅದಕ್ಕೆ ಉತ್ತರ ಹೀಗೆ ಪಡೆಯೋದು ಎಂಬುದು ಅನೇಕರಿಗೆ ತಿಳಿದಿಲ್ಲ. 
 

Can We Check Male Virginity

ನಮಗೆ ಗೊತ್ತು, ಹೆಡ್ ಲೈನ್ ನೋಡ್ತಿದ್ದಂತೆ ಜನರು ಟ್ರೋಲ್ ಮಾಡ್ತಾರೆ ಅನ್ನೋದು. ಆದ್ರೆ ಕೆಲವೊಂದು ವಿಷ್ಯವನ್ನು ಪ್ರತಿಯೊಬ್ಬರೂ ತಿಳಿಯೋ ಅಗತ್ಯವಿರುತ್ತೆ. ಅದ್ರಲ್ಲಿ ವರ್ಜಿನಿಟಿ ವಿಷ್ಯ ಕೂಡ ಒಂದು. ವರ್ಜಿನಿಟಿ ಕನ್ಯತ್ವ ಎಂಬ ವಿಷ್ಯ ಬಂದಾಗ ಅದನ್ನು ಮಹಿಳೆಯರಿಗೆ ಮಾತ್ರ ಸೀಮಿತ ಮಾಡಲಾಗಿದೆ. ಹಿಂದೆ ಕನ್ಯತ್ವಕ್ಕೆ ಸಂಬಂಧಿಸಿದಂತೆ ಅನೇಕ ಗಲಾಟೆ, ಜಗಳಗಳು ನಡೆಯುತ್ತಿದ್ದವು. ಈಗ್ಲೂ ಕೆಲವು ಕಡೆ ಮದುವೆಯಾದ ಮೊದಲ ರಾತ್ರಿ ಕನ್ಯತ್ವ ಪರೀಕ್ಷೆ ನಡೆಯುತ್ತದೆ. ಮಹಿಳೆಯರು ಕನ್ಯತ್ವ ಕಳೆದುಕೊಳ್ಳೋದು ಕೇವಲ ಸಂಭೋಗ ಬೆಳೆಸಿದಾಗ ಮಾತ್ರವಲ್ಲ. ಇದ್ರ ಬಗ್ಗೆ ಈಗಾಗಲೇ ಅನೇಕ ಲೇಖನಗಳು ಬಂದಿವೆ. ಸೈಕ್ಲಿಂಗ್ ಸೇರಿದಂತೆ ಅನೇಕ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಹುಡುಗಿಯರು ಕನ್ಯತ್ವ ಕಳೆದುಕೊಳ್ತಾರೆ. ಈ ಕನ್ಯತ್ವ ಇಷ್ಟು ಮಹತ್ವಪಡೆದ ಕಾರಣ ಕನ್ಯತ್ವ ಮರುಜೋಡಣೆ ಶಸ್ತ್ರಚಿಕಿತ್ಸೆ ಕೂಡ ಸದ್ದು ಮಾಡ್ತಿದೆ. ನಾವಿಂದು ಮಹಿಳೆಯರ ಬದಲು ಪುರುಷರ ಕನ್ಯತ್ವದ ಬಗ್ಗೆ ಮಾತನಾಡ್ತೇವೆ.

ಗೂಗಲ್ (Google) ನಲ್ಲಿ ಇದ್ರ ಬಗ್ಗೆ ಚರ್ಚೆ ನಡೆದಿತ್ತು. ಪುರುಷರ ವರ್ಜಿನಿಟಿ (Virginity) ಬಗ್ಗೆ ಸುಮಾರು 2 ಕೋಟಿಗೂ ಹೆಚ್ಚು ಮಂದಿ ಸರ್ಚ್ ಮಾಡಿದ್ರು. ಅಂದ್ರೆ ಜನರಿಗೆ ಇದ್ರ ಬಗ್ಗೆ ತಿಳಿದುಕೊಳ್ಳುವ ಕುತೂಹಲವಿದೆ ಎಂದಾಯ್ತು. 

ದೈಹಿಕ ಸಂಪರ್ಕ ಬೆಳೆಸುವಾಗ ಡ್ರೈ ರನ್ ಸಮಸ್ಯೆ, ಇದಕ್ಕಿದ್ಯಾ ಪರಿಹಾರ?

ಪುರುಷರ ವರ್ಜಿನಿಟಿ ಟೆಸ್ಟ್ ಮಾಡಬಹುದಾ? : ಈ ಪ್ರಶ್ನೆಗೆ ಒಂದೇ ಉತ್ತರ ಇಲ್ಲ. ವಿವಿಧ ಲೈಂಗಿಕ ತಜ್ಞರ ಅಭಿಪ್ರಾಯವನ್ನು ಮತ್ತು ಅನೇಕ ಸಂಶೋಧನೆಗಳನ್ನು ಪರಿಶೀಲಿಸಿದ ನಂತರ, ಪುರುಷರ ವರ್ಜಿನಿಟಿ ಪತ್ತೆ ಹಚ್ಚಲು ಸಾಧ್ಯವಿಲ್ಲ ಎಂಬ ಉತ್ತರ ಸಿಕ್ಕಿದೆ. ಪುರುಷರ ವರ್ಜನಿಟಿ ಪರೀಕ್ಷೆಗೆ ಯಾವುದೇ ವೈಜ್ಞಾನಿಕ ಮಾರ್ಗವಿಲ್ಲ.  ವಿಜ್ಞಾನ ಅಥವಾ ಮಾನವ ಅಂಗರಚನಾಶಾಸ್ತ್ರದಿಂದ ಯಾವುದೇ ರೀತಿಯಲ್ಲಿ ಇದನ್ನು ಸಾಬೀತುಪಡಿಸಲು ಸಾಧ್ಯವಿಲ್ಲ. 

ಪುರುಷರ ವರ್ಜಿನಿಟಿ ಪರೀಕ್ಷೆ (Test) ಮಾಡಬಹುದೇ ಎಂಬ ಬಗ್ಗೆ ಆನ್‌ಲೈನ್ ಸಮೀಕ್ಷೆಯೊಂದು ನಡೆದಿತ್ತು. ಅದ್ರಲ್ಲಿ ಪಾಲ್ಗೊಂಡಿದ್ದ ಎಲ್ಲ ತಜ್ಞರು ಇಲ್ಲ ಎನ್ನುವ ಉತ್ತರವನ್ನು ನೀಡಿದ್ದರು. ಆದ್ರೆ ನೀವು ಗೂಗಲ್ ನಲ್ಲಿ ಹುಡುಕಿದ್ರೆ ಪುರುಷರ ವರ್ಜನಿಟಿ ಪರೀಕ್ಷೆ ಬಗ್ಗೆ ನಿಮಗೆ ಒಂದಿಷ್ಟು ಮಾರ್ಗಗಳು ಸಿಗ್ತವೆ. ಪುರುಷರ ವರ್ಜಿನಿಟಿ ಪರೀಕ್ಷೆ ಬಗ್ಗೆ ಗೂಗಲ್ (Google) ನಲ್ಲಿ ಇರುವ ಮಾರ್ಗಗಳು ಇಲ್ಲಿವೆ.

ಗೂಗಲ್ ಮಾಹಿತಿ ಪ್ರಕಾರ, ಯಾವುದೇ ಪುರುಷ ವರ್ಜಿನ್ ಆಗಿದ್ದರೆ ಸಂಭೋಗ (Intercourse) ನಡೆಸುವ ವೇಳೆ ದಿ ಬೆಸ್ಟ್ ಎನ್ನಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆತನಲ್ಲಿ ಆತಂಕ ಮನೆ ಮಾಡಿರುತ್ತದೆ. ಮೊದಲ ಬಾರಿ ಸಂಭೋಗ ಬೆಳೆಸುವಾಗ ಪುರುಷ ಉದ್ವಿಗ್ನಗೊಂಡಿರಲೂಬಹುದು. ರಕ್ತನಾಳಗಳು ಹೆಚ್ಚು ಬಿಗಿಯಾಗಿರುತ್ತವೆ. ಪೋರ್ ಪ್ಲೇ (Fore Play) ಬಗ್ಗೆ ಅವರಿಗೆ ಅಷ್ಟಾಗಿ ತಿಳಿದಿರುವುದಿಲ್ಲ. ಈಗಾಗಲೇ ಶಾರೀರಿಕ ಸಂಬಂಧ ಬೆಳೆಸಿದ ವ್ಯಕ್ತಿ ಪೋರ್ ಪ್ಲೇ ಬಗ್ಗೆ ತಿಳಿದಿರುವ ಜೊತೆಗೆ ಹಾಸಿಗೆಯಲ್ಲಿ ನಾರ್ಮಲ್ ಆಗಿ ವರ್ತಿಸ್ತಾನೆ ಎನ್ನುತ್ತದೆ ಗೂಗಲ್. 

ಮ್ಯಾರೀಡ್ ಲೈಫ್ ಚೆನ್ನಾಗಿರಬೇಕಂದ್ರೆ ಈ ಟ್ರಿಕ್ಸ್ ಟ್ರೈ ಮಾಡಿ ನೋಡಿ

ಕನ್ಯತ್ವದ ಬಗ್ಗೆ ಪುರುಷರು ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ತನ್ನ ಸಂಗಾತಿ ಇನ್ನೂ ಕನ್ಯೆಯೇ ಎಂದು ತಿಳಿಯುವ ಆಸಕ್ತಿ ಅವರಿಗೆ ಹೆಚ್ಚಿರುತ್ತದೆ. ಆದ್ರೆ ಮಹಿಳೆಯರು ಹೆಚ್ಚಾಗಿ ಇದ್ರ ಬಗ್ಗೆ ಗಮನ ನೀಡುವುದಿಲ್ಲವಾದ್ರೂ ಕುತೂಹಲಕ್ಕೆ ಪುರುಷರ ವರ್ಜಿನಿಟಿ ಹೇಗೆ ಪತ್ತೆ ಮಾಡೋದು ಎಂಬುದನ್ನು ಹುಡುಕುವ ಪ್ರಯತ್ನ ನಡೆಸ್ತಾರೆ. ವರ್ಜಿನಿಟಿ ಎನ್ನುವುದು ಬರೀ ಸೆಕ್ಸ್ ಗೆ ಸಂಬಂಧಿಸಿಲ್ಲ. ಮೌಖಿಕ, ಫೋರ್ ಪ್ಲೇ ಮತ್ತು ಇತರ ಅನೇಕ ವಿಷಯಗಳಿಗೆ ಸಂಬಂಧಿಸಿದೆ ಎನ್ನುತ್ತಾರೆ ತಜ್ಞರು. ಪುರುಷರ ವರ್ತನೆಯಿಂದ ಅವರು ವರ್ಜಿನ್ ಹೌದೋ, ಇಲ್ಲವೋ ಎಂಬುದನ್ನು ಪತ್ತೆ ಮಾಡುವುದು ಸರಿಯಲ್ಲ. ವಿಜ್ಞಾನದಲ್ಲಿ ಇದನ್ನು ಸಾಭೀತುಪಡಿಸಲು ಸಾಧ್ಯವೆ ಇಲ್ಲ. ಹಾಗಾಗಿ ಪುರುಷನಿರಲಿ, ಮಹಿಳೆಯಿರಲಿ ವರ್ಜಿನಿಟಿ ಹಿಂದೆ ಓಡ್ಬಾರದು ಎನ್ನುತ್ತಾರೆ ತಜ್ಞರು. 
 

Latest Videos
Follow Us:
Download App:
  • android
  • ios