ಮ್ಯಾರೀಡ್ ಲೈಫ್ ಚೆನ್ನಾಗಿರಬೇಕಂದ್ರೆ ಈ ಟ್ರಿಕ್ಸ್ ಟ್ರೈ ಮಾಡಿ ನೋಡಿ
ಸಂತೋಷದ ವಿವಾಹವೆಂದ್ರೆ ಎಲ್ಲವೂ ಪೆರ್ಫೆಕ್ಟಾಗಿದೆ ಎಂದು ಅರ್ಥವಲ್ಲ, ಒಬ್ಬರನ್ನೊಬ್ಬರು ಕೇರ್ ಮಾಡೋದು ಮತ್ತು ಗೌರವಿಸೋದು ಮುಖ್ಯ. ಪ್ರೀತಿಯು ಸಂಬಂಧದ ಫೌಂಡೇಶನಾಗಿರಬಹುದು, ಆದರೆ ಪರಸ್ಪರ ಮೇಲೆ ಗೌರವವು ಪ್ರೀತಿ ಮತ್ತು ವಿಶ್ವಾಸವನ್ನು ಬಲಪಡಿಸಲು ಮತ್ತು ಸಂಬಂಧವನ್ನು ಬಲಪಡಿಸಲು ತುಂಬಾ ಇಂಪಾರ್ಟೆಂಟ್. ಸಂಗಾತಿ ನಿಮ್ಮನ್ನು ಎಷ್ಟು ಪ್ರೀತಿಸುತ್ತಾರೋ ಅದು ಮುಖ್ಯ ಅಲ್ಲ, ಅವರು ನಿಮ್ಮನ್ನು ನಿಜವಾಗಿ ಪ್ರೀತಿಸುತ್ತಿದ್ದರೆ, ನಿಮ್ಮ ಅಭಿಪ್ರಾಯ, ಇಷ್ಟ, ಕಷ್ಟಗಳನ್ನು ಅರ್ಥ ಮಾಡಿಕೊಂಡು, ಗೌರವ ಕೊಡುವುದು ಮುಖ್ಯ.
ವರ್ಷಗಳು ಕಳೆದಂತೆ ಮದುವೆ ಬಾಂಧವ್ಯ ನೀರಸವಾಗುತ್ತಾ ಹೋಗುತ್ತದೆ. ಸಂಗಾತಿಯ ಬಗ್ಗೆ ಪ್ರೀತಿ(love), ಗೌರವದ ಬದಲಾಗಿ ದ್ವೇಷವೇ ತುಂಬುತ್ತದೆ. ತಮ್ಮ ಎಲ್ಲಾ ಹತಾಶೆಯನ್ನು ತಮ್ಮ ಸಂಗಾತಿಯ ಮೇಲೆ ಹಾಕ್ತಾರೆ ಮತ್ತು ಪ್ರತಿಯೊಂದು ತಪ್ಪಿನ ಜವಾಬ್ದಾರಿ ಸಂಗಾತಿಯ ಮೇಲೆ ಹೇರುತ್ತಾರೆ. ಈ ಕಾರಣದಿಂದಾಗಿ ಮ್ಯಾರೇಜ್ ಸ್ಟ್ರೆಸ್ ಮತ್ತು ಹೊರೆಯೆಂದು ಅನಿಸಲಾರಂಭಿಸುತ್ತೆ.
ನೆಗೆಟಿವ್ ಫೀಲಿಂಗ್ಸ್ ಗಳಿಂದ(Negative feelings) ತುಂಬಿರುವ ಈ ಸಂಬಂಧದಲ್ಲಿ, ಸಂಗಾತಿ ಈ ನೆಗೆಟಿವಿಟಿಗೆ ಯಾವುದೇ ಸೊಲ್ಯೂಷನ್ ಇಲ್ಲ ಎಂದು ಭಾವಿಸಿ ಸಂಗಾತಿಯಿಂದ ಉಂಟಾಗುವ ನಿಂದನಾತ್ಮಕ ನಡವಳಿಕೆಯನ್ನು ಸಹಿಸಿಕೊಳ್ತಾರೆ. ಅಂತಹ ನಡವಳಿಕೆಯು ವೈವಾಹಿಕ ಜೀವನವನ್ನು ಹಾಳುಮಾಡುತ್ತೆ. ಇದಕ್ಕೆ ಕರೆಕ್ಟ್ ರೀಸನ್ ತಿಳಿದ್ರೆ, ಆಗ ಈ ನಡವಳಿಕೆಯಿಂದ ಬಚಾವಾಗಬಹುದು.
ಈ ಟ್ರಿಕ್ಸ್ ಕೆಲಸ ಮಾಡುತ್ತೆ. ಟ್ರೈ ಮಾಡಿ ನೋಡಿ
ಭಾವನೆಗಳನ್ನು(Feelings) ಹಂಚಿಕೊಳ್ಳಿ:
ಸಂಗಾತಿಯೊಂದಿಗೆ ಪ್ರಾಮಾಣಿಕ ಸಂಭಾಷಣೆ ನಡೆಸಿ ಮತ್ತು ಅವರ ವರ್ತನೆಯು ನಿಮಗೆ ಹೇಗೆ ಅನಿಸುತ್ತೆ ಎಂಬುದರ ಬಗ್ಗೆ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ ಮತ್ತು ಪರಿಸ್ಥಿತಿಯನ್ನು ಸುಧಾರಿಸುವ ಮಾರ್ಗಗಳನ್ನು ಕಂಡುಕೊಳ್ಳಿ. ಮನಸ್ಸು ಬಿಚ್ಚಿ ಮಾತನಾಡಿದಾಗ ಮಾತ್ರ ಸಂಬಂಧ ಸುಮಧುರವಾಗಿರುತ್ತೆ.
ಸ್ಪಷ್ಟೀಕರಣ(Clarity):
ಯಾವುದಾದ್ರೂ ವಿಷ್ಯ ಅಪಮಾನ ಎಂದು ಅನಿಸಿದ್ರೆ, ಸಂಗಾತಿಯೊಂದಿಗೆ ಕೂತು ಮಾತನಾಡಿ ಮತ್ತು ಅದು ಉದ್ದೇಶಪೂರ್ವಕವಾಗಿ ಹೇಳಿದ್ದ ಅಥವಾ ಅಲ್ವ ಎಂದು ಸ್ಪಷ್ಟಪಡಿಸಿಕೊಳ್ಳಿ. ಈ ವಿಷಯವನ್ನು ಚರ್ಚಿಸೋದು ಭವಿಷ್ಯದಲ್ಲಿ ಜಾಗರೂಕತೆ ವಹಿಸಲು ಸಹಾಯ ಮಾಡುತ್ತೆ. ಇಬ್ಬರ ನಡುವೆ ಅಂತರ ಕಡಿಮೆಯಾಗುತ್ತೆ.
ಹೊಗಳಿಕೆ ಮುಖ್ಯ:
ನೀವು ನಿಮ್ಮ ಸಂಗಾತಿಯನ್ನು(Partner) ಹೇಗೆ ಉತ್ತಮವಾಗಿ ನಡೆಸಿಕೊಳ್ಳುತ್ತೀರಿ ಮತ್ತು ಅವರು ಉತ್ತಮವಾಗಿ ವರ್ತಿಸಿದಾಗ ನಿಮಗೆ ಎಷ್ಟು ಸಂತೋಷವಾಗುತ್ತೆ ಎಂದು ಅವರಿಗೆ ತಿಳಿಸಿ. ಹೊಗಳಿದಾಗ, ಅವರು ಇನ್ನು ಮುಂದೆ ಒಳ್ಳೆ ರೀತಿ ವರ್ತಿಸಬಹುದು. ಈ ಟ್ರಿಕ್ಸ್ ನ್ನು ಟ್ರೈ ಮಾಡಿ ನೋಡಿ.
ಸಹಾಯ ಪಡೆಯಿರಿ:
ಮೂರನೇ ವ್ಯಕ್ತಿಯ ಸಹಾಯ ಪಡೆಯಿರಿ. ಅದು ನಿಮ್ಮಿಬ್ಬರ ಸ್ನೇಹಿತ ಅಥವಾ ಸಂಬಂಧಿಕರಾಗಿರಬಹುದು. ಸಂಗಾತಿಯ ವರ್ತನೆಯ ಬಗ್ಗೆ ಬೇರೆಯವರ ಅಭಿಪ್ರಾಯ ತೆಗೆದುಕೊಳ್ಳಬಹುದು ಮತ್ತು ತಪ್ಪನ್ನು ನಿಭಾಯಿಸುವಲ್ಲಿ ಸಹಾಯ ಪಡೆಯಬಹುದು. ಆದರೆ ಪ್ರೈವೇಟ್(Private) ವಿಷಯಗಳನ್ನು ಪಬ್ಲಿಕ್ ಮಾಡೋದು ನಿಮ್ಮ ಸಂಗಾತಿಗೆ ಅಗೌರವ ತರಬಹುದು ಎಂಬುದನ್ನು ನೆನಪಿನಲ್ಲಿಡಿ, ಆದ್ರಿಂದ ಜಾಗರೂಕರಾಗಿ ಇದನ್ನು ಹ್ಯಾಂಡಲ್ ಮಾಡಿ.
ಸೆಲ್ಫ್ ರೆಸ್ಪೆಕ್ಟ್ (Self respect)ಮುಖ್ಯ:
ನಿಮ್ಮನ್ನು ನೀವು ಗೌರವಿಸಿ ಮತ್ತು ನಿಮ್ಮ ಬೌಂಡರಿ ಸ್ಪಷ್ಟವಾಗಿರಿಸಿಕೊಳ್ಳಿ. ಅಗತ್ಯವಿದ್ದಾಗಲೆಲ್ಲಾ ನಿಮಗೆ ನೀವೇ ಸಹಾಯ ಮಾಡಲು ರೆಡಿಯಾಗಿರಿ. ಸಂಗಾತಿಯ ಯಾವ ನಡವಳಿಕೆ ಅಗೌರವ ಮತ್ತು ಕೆಟ್ಟದ್ದಾಗಿ ಕಾಣುತ್ತೋ ಅದನ್ನು ಸ್ಪಷ್ಟಪಡಿಸಿ. ಇದನ್ನು ಮತ್ತೆ ಮಾಡೋದು ತಪ್ಪಾಗಬಹುದು ಮತ್ತು ತಪ್ಪುಗಳನ್ನು ಸಾಧ್ಯವಾದಷ್ಟು ಬೇಗ ಸರಿಪಡಿಸಿ ಹ್ಯಾಪಿ ಮ್ಯಾರೀಡ್ ಲೈಫ್ ನಿಮ್ಮದಾಗಿಸಿ.
ಕೌನ್ಸಲಿಂಗ್(Councelling)ಮಾಡಿ :
ಇಬ್ಬರೂ ಪರಸ್ಪರರ ನಡವಳಿಕೆಯಿಂದ ತೊಂದರೆಗೀಡಾಗಿದ್ದರೆ, ಇದಕ್ಕಾಗಿ ಕೌನ್ಸಿಲರ್ ಸಹಾಯ ತೆಗೆದುಕೊಳ್ಳಿ. ನಿಮ್ಮ ಸಮಸ್ಯೆ ಮತ್ತು ಭಿನ್ನಾಭಿಪ್ರಾಯಗಳನ್ನು ಉತ್ತಮ ರೀತಿ ಪರಿಹರಿಸಲು ನಿಮಗೆ ಸಾಧ್ಯವಾಗುವಂತಹ ವಾತಾವರಣ ಇದು ನಿಮಗೆ ನೀಡುತ್ತೆ. ಇದರಿಂದ ಇಬ್ಬರೂ ಒಬ್ಬರನ್ನೊರು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು.