50 lakh package Salary : 50 ಲಕ್ಷದ ಪ್ಯಾಕೇಜ್ ಜಾಬ್ ಸಿಕ್ಕಿದ್ರೆ ಯಾರು ಬಿಡ್ತಾರೆ? ಈ ಮಹಿಳೆ ಆ ಕೆಲ್ಸವನ್ನು ಬಿಟ್ಟಿದ್ದಾಳೆ. 50 ಲಕ್ಷ ಕೆಲ್ಸದ ಬದಲು 12 ಲಕ್ಷದ ಕೆಲ್ಸ ಒಪ್ಕೊಂಡಿದ್ದಾಳೆ.
ಪ್ರತಿಯೊಬ್ಬರು ಹೆಚ್ಚು ಸಂಬಳ ಪಡೆಯೋಕೆ ಇಷ್ಟಪಡ್ತಾರೆ. ಅದಕ್ಕಾಗಿ ಸಾಕಷ್ಟು ಪ್ರಯತ್ನ ಕೂಡ ನಡೆಸ್ತಾರೆ. ಸಂಬಳ ಹೆಚ್ಚಾಗ್ತಿದ್ದಂತೆ ಇಲ್ಲ ಹೆಚ್ಚು ಸಂಬಳ ನೀಡುವ ಹೊಸ ಜಾಬ್ ಸಿಕ್ತಿದ್ದಂತೆ ಜನರು ಅದಕ್ಕೆ ಆಕರ್ಷಿತರಾಗ್ತಾರೆ. 50 ಲಕ್ಷ ಪ್ಯಾಕೇಜ್ ಸಿಕ್ಕಾಗ ಅದನ್ನು ಬಿಡುವವರ ಸಂಖ್ಯೆ ಬಹಳ ಅಪರೂಪ. ಮಹಿಳೆಯೊಬ್ಬರು 50 ಲಕ್ಷ ಪ್ಯಾಕೇಜ್ ಸಂಬಳದ ಕೆಲ್ಸ ಬಿಟ್ಟಿದ್ದಾರೆ. ಅದ್ರ ಬದಲು 12 ಲಕ್ಷದ ಸಂಬಳದ ಕೆಲ್ಸಕ್ಕೆ ಆಸಕ್ತಿ ತೋರಿದ್ದಾರೆ. ಅದಕ್ಕೆ ಕಾರಣವಿದೆ.
50 ಲಕ್ಷದ ಪ್ಯಾಕೇಜ್ ಬಿಟ್ಟ ಮಹಿಳೆ !
ದೆಹಲಿಯ ಜಸ್ಲೀನ್ ಕೌರ್ 50 ಲಕ್ಷದ ಪ್ಯಾಕೇಜ್ ಕೆಲ್ಸ ಬಿಟ್ಟಿದ್ದಾರೆ. ಅವರ ನಿರ್ಧಾರ ಎಲ್ಲರನ್ನು ಬೆರಗುಗೊಳಿಸಿದೆ. ದೆಹಲಿಯಲ್ಲಿ 50 ಲಕ್ಷದ ವಾರ್ಷಿಕ ಪ್ಯಾಕೇಜ್ನಲ್ಲಿ ಕೆಲಸ ಮಾಡುತ್ತಿದ್ದ ಜಸ್ಲೀನ್ ಕೌರ್, ಕೆಲ್ಸ ಬಿಟ್ಟು ಲಂಡನ್ ಗೆ ತೆರೆಳಿದ್ರು. ಲಂಡನ್ ನಲ್ಲಿ ಅವರಿಗೆ ಸಿಗುತ್ತಿರುವ ಸಂಬಳ ಬಹಳ ಕಡಿಮೆ. ಲಂಡನ್ ನಲ್ಲಿ ಅವರು 12 ಲಕ್ಷ ಪ್ಯಾಕೇಜ್ ಕೆಲ್ಸ ಮಾಡ್ತಿದ್ದಾರೆ. ಲಂಡನ್ಗೆ ತೆರಳಿ ತಮ್ಮ ವೃತ್ತಿಜೀವನ ಮುಂದುವರಿಸಲು ನಿರ್ಧರಿಸಿದ್ದ ಅವರು, ಸಂಬಳ ನೋಡ್ದೆ ಹೆಜ್ಜೆ ಮುಂದಿಟ್ಟಿದ್ದರು. ಅವರ ಅನುಭವದ ಪ್ರಕಾರ, ಲಂಡನ್ನಲ್ಲಿ ಅವರಿಗೆ ಸಿಕ್ಕಿದ್ದು ಕೇವಲ ಉದ್ಯೋಗವಲ್ಲ,ಜೀವನಶೈಲಿಯಲ್ಲೂ ಹಲವು ಬದಲಾವಣೆಗಳಾಗಿವೆ.
ಜಸ್ಲೀನ್ ಅವರ ಪ್ರಕಾರ, ಸ್ವಚ್ಛ ಗಾಳಿ, ಸುರಕ್ಷತೆ, ನಡೆಯಲು ಉತ್ತಮ ವ್ಯವಸ್ಥೆ, ಆರೋಗ್ಯ ಮತ್ತು ವರ್ಕ್ ಲೈಫ್ ಬ್ಯಾಲೆನ್ಸ್ ಅವರಿಗೆ ಲಂಡನ್ ಕೆಲ್ಸದಲ್ಲಿ ಸಿಕ್ಕಿದೆಯಂತೆ.
ದೆಹಲಿಯಲ್ಲಿದ್ದ ಸೌಲಭ್ಯ ಲಂಡನ್ ನಲ್ಲಿಲ್ಲ !
ದೆಹಲಿಯಲ್ಲಿ ಕಾರು ಇದ್ದ ಕಾರಣ ಎಲ್ಲಿಗೆ ಬೇಕಾದರೂ ಸುಲಭವಾಗಿ ಹೋಗಬಹುದಿತ್ತು. ಮನೆಯ ಕೆಲಸಗಳಿಗೆ ಸಹಾಯಕರಿದ್ದರು. ಅಗತ್ಯ ವಸ್ತುಗಳು ಕೂಡ ಬೇಗ ಮನೆಗೆ ಬರ್ತಿದ್ದವು. ಆದರೆ ಲಂಡನ್ನಲ್ಲಿ ದಿನನಿತ್ಯದ ಹಲವು ಕೆಲಸಗಳನ್ನು ಅವರೇ ಮಾಡಬೇಕಾಗಿದೆ. ನಡೆದುಕೊಂಡು ಹೋಗುವುದು ಮತ್ತು ಸಾರ್ವಜನಿಕ ಸಾರಿಗೆಯನ್ನು ಬಳಸುವುದು ಅವರ ಜೀವನದ ಭಾಗವಾಗಿದೆ. ಆರಂಭದಲ್ಲಿ ಇದು ಕಷ್ಟವೆನಿಸಿದರೂ, ಈಗ ಇದರಿಂದ ತಾವು ಹೆಚ್ಚು ಸಕ್ರಿಯರಾಗಿದ್ದೇವೆ ಮತ್ತು ಸ್ವತಂತ್ರರಾಗಿದ್ದೇವೆ ಎಂದು ಅವರು ಹೇಳುತ್ತಾರೆ. ಹೆಚ್ಚು ನಡೆಯುವುದು ಮತ್ತು ಉತ್ತಮ ಪರಿಸರದಲ್ಲಿ ಬದುಕುವುದು ತಮ್ಮ ಆರೋಗ್ಯಕ್ಕೂ ಒಳ್ಳೆಯ ಪರಿಣಾಮ ಬೀರಿದೆ ಎಂದಿದ್ದಾರೆ.
ದೆಹಲಿಯ ನೆನಪು ಬರ್ತಿದೆ. ಕುಟುಂಬದಿಂದ ದೂರವಾಗಿರುವುದು, ಮನೆಯ ಸಹಾಯ ಮತ್ತು ದೆಹಲಿಯ ಸುಲಭ ಜೀವನವನ್ನು ಮಿಸ್ ಮಾಡಿಕೊಳ್ತೇನೆ ಎಂದು ಜಸ್ಲೀನ್ ಹೇಳಿದ್ದಾರೆ.
ಸಂಬಳಕ್ಕಿಂತ ಜೀವನ ಮುಖ್ಯ
ಜಸ್ಲೀನ್ ಈ ನಿರ್ಧಾರ, ಜನರ ಆಯ್ಕೆ ಬಗ್ಗೆ ಚರ್ಚೆಗೆ ಕಾರಣವಾಗಿದೆ. ಕೆಲವರಿಗೆ ಕುಟುಂಬ ಹಾಗೂ ಸಂಬಳ ಮುಖ್ಯವಾದ್ರೆ ಮತ್ತೆ ಕೆಲವರಿಗೆ ಸ್ವಾತಂತ್ರ್ಯ, ಸುರಕ್ಷತೆ, ಆರಾಮದಾಯಕ ಜೀವನ ಹಾಗೂ ಆರೋಗ್ಯ ಮುಖ್ಯವಾಗುತ್ತದೆ. ಅವರು ಅದಕ್ಕಾಗಿ ಹೆಚ್ಚಿನ ಸಂಬಳವನ್ನು ನಿರ್ಲಕ್ಷ್ಯಿಸ್ತಾರೆ.


