Maddur Ganeshotsav ಮದ್ದೂರಿನಲ್ಲಿ ಕಳೆದ ವರ್ಷದ ಗಣೇಶೋತ್ಸವದ ಕಲ್ಲು ತೂರಾಟ ಖಂಡಿಸಿ ಪ್ರತಿಭಟಿಸಿದ್ದ ಬಿಜೆಪಿ ಮುಖಂಡರಿಗೆ ಸರ್ಕಾರ ಒಂದು ವರ್ಷದ ಬಳಿಕ ನೋಟಿಸ್ ನೀಡಿದೆ. ಇದು ಹಿಂದೂಗಳನ್ನು ಕುಗ್ಗಿಸುವ ಪ್ರಯತ್ನವಾಗಿ ಎಂದು ಬಿಜೆಪಿ ಮುಖಂಡರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ,

ಮಂಡ್ಯ (ಸೆ.13): ಕಳೆದ ವರ್ಷ ಮದ್ದೂರು ಗಣೇಶೋತ್ಸವದ ವೇಳೆ ಕಲ್ಲು ತೂರಾಟ ನಡೆಸಿದ್ದ ಕಿಡಿಗೇಡಿಗಳ ವಿರುದ್ಧ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದ್ದರು. ಇದೀಗ ಒಂದು ವರ್ಷದ ಬಳಿಕ ಪ್ರತಿಭಟನೆ ನಡೆಸಿದ್ದ ಬಿಜೆಪಿ ಮುಖಂಡರಿಗೆ, ಹಿಂದೂಪರ ಸಂಘಟನೆಗಳಿಗೆ ಸರ್ಕಾರ ನೋಟಿಸ್ ನೀಡಿ ಅಚ್ಚರಿ ಮೂಡಿಸಿದೆ.

ಮದ್ದೂರು ಬಿಜೆಪಿ ಮುಖಂಡ ಆಕ್ರೋಶ

ಕಳೆದ ವರ್ಷ ಗಣೇಶೋತ್ಸವ ವೇಳೆ ಕಲ್ಲು ತೂರಿದ್ದು ಯಾರು? ಕಲ್ಲು ತೂರಿದ ಕಿಡಿಗೇಡಿಗಳನ್ನು ಬಿಟ್ಟು ಕಿಡಿಗಳ ಬಂಧನಕ್ಕೆ ಪ್ರತಿಭಟನೆ ನಡೆಸಿದ ನಮಗೇ ಸಮನ್ಸ್ ನೀಡ್ತೀರಾ? ಪೊಲೀಸರ ನಡೆಗೆ ಮದ್ದೂರಿನ ಬಿಜೆಪಿ ಮುಖಂಡ ಎಸ್‌ಪಿ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸರ್ಕಾರದಿಂದ ಹಿಂದೂಗಳ ಕುಗ್ಗಿಸುವ ಪ್ರಯತ್ನ

ಕಳೆದ ವರ್ಷ ಮೆರವಣಿಗೆ ವೇಳೆ ಕಲ್ಲು ತೂರಿದ್ದ ಕಿಡಿಗೇಡಿಗಳು. ಇದರ ವಿರುದ್ಧ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರು. ಇದೀಗ ಕಲ್ಲು ತೂರಿದ ಕಿಡಿಗೇಡಿಗಳ ಜೊತೆಗೆ ಘಟನೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದ 23 ಬಿಜೆಪಿ ಮುಖಂಡರಿಗೂ ಸಮನ್ಸ್ ಜಾರಿ ಮಾಡಿದೆ. ಸಮನ್ಸ್ ಕೊಟ್ಟು ಹಿಂದೂಗಳನ್ನು ಕುಗ್ಗಿಸುವ ಪ್ರಯತ್ನ ಮಾಡ್ತಿದ್ದಾರೆ. ಹಿಂದೂಗಳ ಹಬ್ಬ ಆಚರಣೆಗೆ ಕಾಂಗ್ರೆಸ್ ಸರ್ಕಾರ ಅಡ್ಡಿ ಮಾಡ್ತಿದೆ. ಕಳೆದ ವರ್ಷ ನಡೆದ ಗಲಾಟೆ ಸಂಬಂಧ ಒಂದು ವರ್ಷದ ಬಳಿಕ ಇದೀಗ ಗಣೇಶೋತ್ಸವದವೇಳೆ ಸಮನ್ಸ್ ಜಾರಿ ಮಾಡಿದ್ದಾರೆ. ಗಣಪತಿ ಪ್ರತಿಷ್ಠಾಪನೆಗೆ ಕಠಿಣ ಷರತ್ತು ಹೇರಿದ್ದಾರೆ. ಅನುಮತಿ ನೀಡಲು ಯುವಕರನ್ನು ಉದ್ದೇಶಪೂರ್ವಕವಾಗಿ ಅಲೆದಾಡಿಸುತ್ತಿದ್ದಾರೆ. ಮಸೀದಿ ಮುಂದೆ ಗಣಪತಿ ಮೆರವಣಿಗೆ ಹೋಗದಂತೆ ಪೋಲೀಸರಿಂದಲೇ ನಿರ್ಬಂಧವಿದೆ. ವೋಟ್‌ಬ್ಯಾಂಕ್‌ಗಾಗಿ ಈ ಸರ್ಕಾರದಿಂದ ಒಂದೇ ಕೋಮಿನ ಓಲೈಕೆ ನಡೆಯುತ್ತಿದೆ ಎಂದು ಆರೋಪಿಸಿದರು.

ಪೊಲೀಸ್ ಪವರ್ ಹಿಂದೂಗಳ ಮುಂದೆ ಮಾತ್ರವಾ?

ಅದೇ ಮುಸ್ಲಿಮರು ಹಬ್ಬ ಆಚರಿಸುವಾಗ ಯಾವುದ ನಿರ್ಬಂಧಗಳಿರೋದಿಲ್ಲ. ಗಣೇಶೋತ್ಸವ ಮೆರವಣಿಗೆಗೆ ಕೊಡೋ ಎಚ್ಚರಿಕೆ ಡೈಲಾಗ್‌ಗಳು ಅವರ ಹಬ್ಬದಲ್ಲಿ ಪೊಲೀಸರು ಕೊಡೋ ಧೈರ್ಯ ಮಾಡೋಲ್ಲ. ಅವರು ಮಂದಿರಗಳ ಮುಂದೆ ಮೆರವಣಿಗೆ ಹೋಗ್ತಾರೆ, ನಾವು ಮಸೀದಿ ಹೋಗ್ತೇವೆ. ಅವರ ಏನೇ ಹಬ್ಬ ಮೆರವಣಿಗೆಗಳಾದರೂ, ನಮ್ಮ ದೇವಾಲಯಗಳ ಮುಂದೆ ಸಾಗಿದ್ರೂ ಯಾವುದೇ ಕಲ್ಲು ತೂರಾಟ, ಗಲಾಟೆ ನಡೆಯಲ್ಲ. ಆದ್ರೆ ಹಿಂದೂಗಳ ಹಬ್ಬ ಆಚರಿಸುವಾಗ ಮಸೀದಿ ಮುಂದೆ ಹೋಗದಂತೆ ಪೊಲೀಸರೇ ನಿರ್ಬಂಧ ಹೇರುತ್ತಾರೆ. ಇದ್ಯಾಕೆ ಹಿಂಗೆ? ಯಾಕೆ ಕಲ್ಲು ತೂರಾಡೋದು? ಅವರಿಗೆ ಎಚ್ಚರಿಕೆ ಕೊಟ್ಟು ಕಲ್ಲು ತೂರುವ ಕಿಡಿಗೇಡಿಗಳಿಗೆ ಒಂದು ಭಯ ಹುಟ್ಟಿಸಬೇಕಲ್ಲ? ಕಲ್ಲು ತೂರದಂತೆ ಬಂದೋಬಸ್ತ್ ಮಾಡಬಹುದಲ್ಲ? ಅದುಬಿಟ್ಟ ಹಿಂದೂಗಳಿಗೆ ಷರತ್ತು ಹಾಕುವ ಕೆಲಸ ಮಾಡ್ತಾರೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು.