ಟಿ.ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದಂತೆ ಪೊಲೀಸ್ ಇನ್‌ಸ್ಪೆಕ್ಟರ್ ನೀಡಿದ ಎಚ್ಚರಿಕೆಯು ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಪ್ರತಾಪ್ ಸಿಂಹ ವಿರುದ್ಧ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿವೆ.

ಮೈಸೂರು (ಸೆ.13): ಒಂದು ಕಡೆ ವಿಶ್ವವಿಖ್ಯಾತ ದಸರಾ ಹಬ್ಬ ಸಮೀಪಿಸಿರುವ ಹೊತ್ತಲ್ಲೇ ಇತ್ತ ಮೈಸೂರು ಜಿಲ್ಲೆ ಟಿ.ನರಸೀಪುರದ ಗಣೇಶೋತ್ಸವ ಮೆರವಣಿಗೆ ವಿಚಾರ ಇದೀಗ ತೀವ್ರ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.

ಲಿಂಕ್ ರಸ್ತೆಯಲ್ಲಿ, ಮಸೀದಿ ಮುಂಭಾಗ ಮೆರವಣಿಗೆ ಹೋಗಬಾರದು, ಪಟಾಕಿ ಸಿಡಿಸಬಾರದು ಎಂದು ಇನ್‌ಸ್ಪೆಕ್ಟರ್ ಧನಂಜಯ ನೀಡಿದ್ದ ಎಚ್ಚರಿಕೆ ವಿಡಿಯೋ ವೈರಲ್ ಆಗಿದೆ. ಅಧಿಕಾರಿ ಧಮ್ಕಿ ಬೆನ್ನಲ್ಲೇ ಬಿಜೆಪಿ ನಾಯಕರು ಸಿಡಿದಿದ್ದು, ಪ್ರತಿಪಕ್ಷ ನಾಯಕ ಆರ್ ಅಶೋಕ್, ಸಂಸದ ಯದುವೀರ್ ಒಡೆಯರ್, ಮಾಜಿ ಸಂಸದ ಪ್ರತಾಪ್ ಸಿಂಹ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಇನ್ಸಪೆಕ್ಟರ್ ಹೇಳಿಕೆ ಬಳಿಕ ಬಿಗುವಿನ ವಾತಾವರಣ

ಗಣೇಶ ಮೆರವರಣಿಗೆ ಬಗ್ಗೆ ಇನ್ಸ್‌ಪೆಕ್ಟರ್ ಧನಂಜಯ ಹೇಳಿಕೆ ಬಳಿಕ ಟಿ ನರಸೀಪುರದಲ್ಲಿ ಬಿಗುವಿನ ವಾತಾರವಣ ನಿರ್ಮಾಣವಾಗಿದೆ. ಇಂದು ಪೊಲೀಸ್ ಠಾಣೆಗೆ ಆಗಮಿಸಿರುವ ಬಿಜೆಪಿ ನಾಯಕರು. ಆರ್ ಅಶೋಕ್, ಪ್ರತಾಪ್ ಸಿಂಹ ಬೆಂಬಲಕ್ಕೆ ಆಗಮಿಸಿದ ನೂರಾರು ಕಾರ್ಯಕರ್ತರು.

ಪ್ರತಾಪ್ ಸಿಂಹ ವಿರುದ್ಧ ದಲಿತ ಸಂಘಟನೆ ಪ್ರತಿಭಟನೆ

ಇನ್ನೊಂದೆಡೆ ಪ್ರತಾಪ್ ಸಿಂಹ ಠಾಣೆಗೆ ನುಗ್ಗುವ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ದಲಿತ ಸಂಘಟನೆಗಳು ಪ್ರತಾಪ್ ಸಿಂಹ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಪ್ರತಾಪ್‌ ಸಿಂಹರನ್ನ ಬಂಧಿಸುವಂತೆ ಒತ್ತಾಯಿಸಿದ ಪ್ರತಿಭಟನೆ ನಡೆಸುತ್ತಿರುವ ದಲಿತ ಸಂಘಟನೆಗಳು, ಇತ್ತ ಪ್ರತಾಪ್ ಬೆಂಬಲವಾಗಿ ನೂರಾರು ಕಾರ್ಯಕರ್ತರು ಜಮಾಯಿಸಿದ್ದಾರೆ.

ಒಟ್ಟಾರೆ ಟಿ ನರಸೀಪುರ ಪೊಲೀಸ್ ಠಾಣೆ ಮುಂಭಾಗ ಇಂದು ಭಾರೀ ಹೈಡ್ರಾಮ ಸೃಷ್ಟಿಯಾಗಿದೆ. ಒಂದೆಡೆ ಡಿಎಸ್‌ಎಸ್‌ ಲೀಡರ್ಸ್ ಪ್ರತಾಪ್ ಸಿಂಹ ವಿರುದ್ಧ ದಿಕ್ಕಾರ ಕೂಗುತ್ತಿದ್ದರೆ, ಮತ್ತೊಂದೆಡೆ 'ಹಿಂದೂ ಹುಲಿ, ಪ್ರತಾಪ್ ಸಿಂಹಗೆ ಜೈ ಎಂದು ಪ್ರತಾಪ್ ಸಿಂಹ ಬೆಂಬಲಿಗರಿಂದಲೂ ಘೋಷಣೆ ಕೂಗುತ್ತಿದ್ದಾರೆ.