ಸರ್ಕಾರಿ ಉದ್ಯೋಗ, ವಯೋಮಿತಿ ಸಡಿಲಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ವಿದ್ಯಾರ್ಥಿಗಳು ಆಯೋಜಿಸಿದ್ದ 'ಧಾರವಾಡ ಚಲೋ' ಬೃಹತ್ ಪ್ರತಿಭಟನೆಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದೆ. ಪ್ರತಿಭಟನೆಯ ರೂಪುರೇಷೆಗಳಲ್ಲಿನ ಅಸ್ಪಷ್ಟತೆ ಉಲ್ಲೇಖಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.
- Home
- News
- Politics
- DK Shivakumar Vs Siddaramaiah: ಧಾರವಾಡ ಚಲೋ - ಡಿ.1ರಂದು ಪ್ರತಿಭಟನೆಗೆ ನಿರಾಕರಣೆ - ಪೊಲೀಸ್ ಆಯುಕ್ತರಿಂದ ಸ್ಪಷ್ಟನೆ
DK Shivakumar Vs Siddaramaiah: ಧಾರವಾಡ ಚಲೋ - ಡಿ.1ರಂದು ಪ್ರತಿಭಟನೆಗೆ ನಿರಾಕರಣೆ - ಪೊಲೀಸ್ ಆಯುಕ್ತರಿಂದ ಸ್ಪಷ್ಟನೆ

ಬೆಂಗಳೂರು: ಹೈಕಮಾಂಡ್ನವರು ಡಿಕೆ ಶಿವಕುಮಾರ್ ಮತ್ತು ನನಗೂ ಕಾಲ್ ಮಾಡಿದ್ದರು. ನೀವಿಬ್ಬರು ಭೇಟಿ ಮಾಡಿ ಅಂತಾ ಹೇಳಿದ್ದಾರೆ. ಅದಕ್ಕೆ ನಾನು ಅವನಿಗೆ ಬ್ರೇಕ್ ಫಾಸ್ಟ್ ಗೆ ಕರೆದಿದ್ದೇನೆ. ಅಲ್ಲಿಗೆ ಬಂದಾಗ ಇಬ್ಬರು ಚರ್ಚೆ ಮಾಡುತ್ತೇವೆ. ನನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಹೈಕಮಾಂಡ್ ನವರು ಹೇಳಿದಂತೆ ನಾನು ಕೇಳ್ತೇನೆ ಎಂದಿದ್ದೇನೆ. ಇವಾಗ್ಲೂ ಅದೇ ಹೇಳ್ತೇನೆ, ನಾಳೆಗೂ ಅದೇ ಹೇಳ್ತೇನೆ. ಅವರು ಕೂಡ ಅನೇಕ ಬಾರಿ ಹೇಳಿದ್ದಾರೆ. ಒಂದು ವೇಳೆ ದೆಹಲಿಗೆ ಕರೆದರೆ ಹೋಗುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಬಿಜೆಪಿ ಶಾಸಕ ಬೇಲೂರು ಸುರೇಶ್ ಶುಕ್ರವಾರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿದ್ದು ಚರ್ಚೆಗೆ ಗ್ರಾಸವಾಗಿದೆ.
Karnataka Political News Live 29 November 2025ಧಾರವಾಡ ಚಲೋ - ಡಿ.1ರಂದು ಪ್ರತಿಭಟನೆಗೆ ನಿರಾಕರಣೆ - ಪೊಲೀಸ್ ಆಯುಕ್ತರಿಂದ ಸ್ಪಷ್ಟನೆ
Karnataka Political News Live 29 November 2025ಬೆಂಗಳೂರು - ಶೇಷಾದ್ರಿಪುರಂನಲ್ಲಿ ಕಟ್ಟಡ ಕಾರ್ಮಿಕ ಮಹಿಳೆಯ ಭೀಕರ ಕೊಲೆ!
Karnataka Political News Live 29 November 2025ಸಿದ್ದರಾಮಯ್ಯ ಮುಖ ನೋಡಿ ಮುಸ್ಲಿಮರು ವೋಟ್ ಮಾಡಿಲ್ಲ; ಡಿಸಿಎಂ ಡಿಕೆಶಿ ಪರ ಬ್ಯಾಟ್ ಬೀಸಿದ ಮುಸ್ಲಿಂ ಮುಖಂಡ !
ಮುಸ್ಲಿಂ ಮುಖಂಡ ಸಾದಿಕ್, ಡಿಕೆ ಶಿವಕುಮಾರ್‌ಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಆಗ್ರಹಿಸಿದ್ದಾರೆ. ಮುಸ್ಲಿಂ ಸಮುದಾಯ ಡಿಕೆಶಿ ಮುಖ ನೋಡಿ ಮತ ಹಾಕಿದ್ದು, ಅಧಿಕಾರ ಹಸ್ತಾಂತರ ಮಾಡದಿದ್ದರೆ ಮುಂದಿನ ಚುನಾವಣೆಯಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕಾಂಗ್ರೆಸ್‌ಗೆ ಎಚ್ಚರಿಕೆ ನೀಡಿದ್ದಾರೆ.
Karnataka Political News Live 29 November 2025ಆಟೋ ಓಡಿಸುವ ಸಲುವಾಗಿ ಕಾರ್ಪೋರೇಟ್ ಕೆಲಸ ಬಿಟ್ಟ ಟೆಕ್ಕಿ!
ಬೆಂಗಳೂರು ಮೂಲದ ರಾಕೇಶ್ ಎಂಬುವವರು ತಮ್ಮ ಕಾರ್ಪೋರೇಟ್ ಕೆಲಸವನ್ನು ತೊರೆದು ಆಟೋ ರಿಕ್ಷಾ ಚಾಲಕರಾಗಿದ್ದಾರೆ. ಜೀವನದಲ್ಲಿ ಹತಾಶರಾಗಿ ಮತ್ತೆ ಹೊಸದಾಗಿ ಪ್ರಾರಂಭಿಸಿದ ತಮ್ಮ ಸ್ಪೂರ್ತಿದಾಯಕ ಕಥೆಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
Karnataka Political News Live 29 November 2025'ದಬ್ಬಾಳಿಕೆ ಇರುವಲ್ಲೆಲ್ಲಾ ಜಿಹಾದ್ ಇರುತ್ತದೆ'- ಮುಲ್ಲಾ ಮದನಿ ಹೇಳಿಕೆಗೆ ದೇಶಾದ್ಯಂತ ಆಕ್ರೋಶ; 'ವೈಟ್-ಕಾಲರ್ ಟೆರರ್'ಎಂದ ಬಿಜೆಪಿ
ಜಮಿಯತ್ ಉಲಮಾ-ಎ-ಹಿಂದ್ ಮುಖ್ಯಸ್ಥ ಮೌಲಾನಾ ಮಹಮೂದ್ ಮದನಿ ಅವರು ಭೋಪಾಲ್‌ನಲ್ಲಿ 'ದಬ್ಬಾಳಿಕೆ ನಡೆದಾಗಲೆಲ್ಲಾ ಜಿಹಾದ್ ಇರುತ್ತದೆ' ಎಂದು ನೀಡಿದ ಹೇಳಿಕೆ ತೀವ್ರ ವಿವಾದ ಸೃಷ್ಟಿಸಿದೆ. ಇದನ್ನು 'ವೈಟ್-ಕಾಲರ್ ಭಯೋತ್ಪಾದನೆ' ಎಂದ ಬಿಜೆಪಿ
Karnataka Political News Live 29 November 2025'ರಾಹುಲ್ ಗಾಂಧಿಗೇ ಗೊತ್ತಿಲ್ಲ, ನನಗೆ ಹೇಗೆ ಗೊತ್ತಾಗಬೇಕು?' ಮುಂದಿನ ಸಿಎಂ ಯಾರು ಎಂಬ ಪ್ರಶ್ನೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವ್ಯಂಗ್ಯ
Karnataka Political News Live 29 November 2025ಭಾರತದ ಹೊಸ ಭೂಕಂಪ ನಕ್ಷೆ ರಿಲೀಸ್, ಇಡೀ ಹಿಮಾಲಯ ಸೇರಿ ದೇಶದ ಶೇ.61ರಷ್ಟು ಭಾಗ ಡೇಂಜರ್ ಝೋನ್‌ನಲ್ಲಿ!
ಭಾರತವು ತನ್ನ ಭೂಕಂಪ ವಲಯ ನಕ್ಷೆಯನ್ನು ನವೀಕರಿಸಿದ್ದು, ಇದೇ ಮೊದಲ ಬಾರಿಗೆ ಸಂಪೂರ್ಣ ಹಿಮಾಲಯವನ್ನು ಹೊಸದಾಗಿ ರಚಿಸಲಾದ ಅತಿ ಅಪಾಯಕಾರಿ 'ಆರನೇ ವಲಯ'ಕ್ಕೆ ಸೇರಿಸಿದೆ. ಈ ಹೊಸ ನಕ್ಷೆಯ ಪ್ರಕಾರ, ದೇಶದ 61% ಭೌಗೋಳಿಕ ಪ್ರದೇಶವು ಮಧ್ಯಮದಿಂದ ಹೆಚ್ಚಿನ ಭೂಕಂಪದ ಅಪಾಯದಲ್ಲಿದೆ.
Karnataka Political News Live 29 November 2025ಕಪ್ಪು ಸಮುದ್ರದಲ್ಲಿ ರಷ್ಯಾದ 'ಶ್ಯಾಡೋ ಫ್ಲೀಟ್' ಟ್ಯಾಂಕರ್‌ಗಳ ಮೇಲೆ ಡ್ರೋನ್ ದಾಳಿ - ಭಯಾನಕ ಸ್ಫೋಟ, ಸಿಬ್ಬಂದಿ ಕಿರುಚಾಟ!
Russian tanker attack Black Sea: ಕಪ್ಪು ಸಮುದ್ರದಲ್ಲಿ ರಷ್ಯಾದ 'ಶ್ಯಾಡೋ ಫ್ಲೀಟ್'ಗೆ ಸೇರಿದ 'ಕೈರೋಸ್' ಮತ್ತು 'ವಿರಾಟ್' ತೈಲ ಟ್ಯಾಂಕರ್‌ಗಳ ಮೇಲೆ ಉಕ್ರೇನ್ ಡ್ರೋನ್ ದಾಳಿ ನಡೆಸಿದೆ. ಈ ದಾಳಿಯ ಹೊಣೆ ಉಕ್ರೇನ್ ಹೊತ್ತುಕೊಂಡಿದ್ದು, ಇದು ರಷ್ಯಾದ ತೈಲ ರಫ್ತಿಗೆ ಗಮನಾರ್ಹ ಅಡ್ಡಿಯುಂಟುಮಾಡಿದೆ.
Karnataka Political News Live 29 November 2025ಮುಟ್ಟಿನ ರಜೆಗೆ ಸಾಕ್ಷಿ ಕೇಳಿದ ಹರ್ಯಾಣ ವಿವಿ! ಕರ್ನಾಟಕದಲ್ಲೂ ಮುಟ್ಟಿನ ರಜೆಗೆ ಸಾಕ್ಷಿ ಕೊಡಬೇಕೇ? - ಸುಪ್ರೀಂ ಗರಂ
ಹರ್ಯಾಣದ ವಿಶ್ವವಿದ್ಯಾಲಯವೊಂದರಲ್ಲಿ ನೈರ್ಮಲ್ಯ ಕಾರ್ಮಿಕರಿಗೆ ಮುಟ್ಟಿನ ರಜೆ ನೀಡಲು ಸಾಕ್ಷಿ ಕೇಳಿದ ಪ್ರಕರಣಕ್ಕೆ ಸುಪ್ರೀಂ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಮಹಿಳೆಯರ ಘನತೆ, ಆರೋಗ್ಯ, ಗೌಪ್ಯತೆ ರಕ್ಷಿಸಲು ದೇಶಾದ್ಯಂತ ಮಾರ್ಗಸೂಚಿಗಳನ್ನು ರೂಪಿಸಲು ನ್ಯಾಯಾಲಯ ನಿರ್ಧರಿಸಿದೆ.
Karnataka Political News Live 29 November 2025ಮಂಡ್ಯ - ಭೂವರಹನಾಥ ದೇಗುಲದಲ್ಲಿ ಡಿಸಿಎಂ ವಿಶೇಷ ಪೂಜೆ - 'ದೇವರ ಪ್ರೇರಣೆ', ತಿಹಾರ್ ಜೈಲು ನೆನಪಿಸಿಕೊಂಡ ಡಿಕೆಶಿ
Karnataka Political News Live 29 November 2025ಬೆಂಗಳೂರಿನಿಂದ ಮಂತ್ರಾಲಯಕ್ಕೆ ಹೋಗುತ್ತಿದ್ದ ಬಸ್ ಆಂಧ್ರದಲ್ಲಿ ಅಪಘಾತ, ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿತು ದುರಂತ
Karnataka Political News Live 29 November 2025ದಾವಣಗೆರೆ - ರೈಫಲ್‌ನಿಂದ ಗುಂಡು ಹಾರಿಸಿಕೊಂಡು ನಿವೃತ್ತ ಡಿವೈಎಸ್‌ಪಿ ದುರಂತ ಅಂತ್ಯ!
ದಾವಣಗೆರೆಯ ಕೆಟಿಜೆ ನಗರದಲ್ಲಿ, ನಿವೃತ್ತ ಡಿವೈಎಸ್‌ಪಿ ಹೆಚ್.ವೈ. ತುರಾಯಿ (70) ಅವರು ತಮ್ಮ ವೈಯಕ್ತಿಕ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮ೧ಹತ್ಯೆ ಮಾಡಿಕೊಂಡಿದ್ದಾರೆ. 2014ರಲ್ಲಿ ನಿವೃತ್ತರಾಗಿದ್ದ ಅವರ ಈ ದುರಂತ ಅಂತ್ಯಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Karnataka Political News Live 29 November 2025ಡ್ರಿಂಕ್ & ಡ್ರೈವ್ ಚೆಕ್ಕಿಂಗ್ - ಕುಡುಕ ಚಾಲಕರಿದ್ದ ಬಸ್ ಕಂಪನಿ ಹೆಸರನ್ನು ಬಹಿರಂಗಪಡಿಸಿ!
Karnataka Political News Live 29 November 2025ಸಿದ್ದರಾಮಯ್ಯ-ಡಿಕೆಶಿ ಕದನ ವಿರಾಮ ತಾತ್ಕಾಲಿಕನಾ? ಅಧಿಕಾರ ಹಂಚಿಕೆ ಬದಲು ಒಗ್ಗಟ್ಟಾಗಲು 5 ಕಾರಣವಿದು!
Karnataka Political News Live 29 November 2025ವಿಜಯಪುರ - ಟ್ಯೂಷನ್ ಕ್ಲಾಸ್ ಮುಗಿಸಿ ಮನೆಗೆ ತೆರಳುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿ ಅಟ್ಯಾಕ್!
Karnataka Political News Live 29 November 2025ಬೆಂಗಳೂರಿನ ಸೈಬರ್ ಸುಳಿಯಲ್ಲಿ ಮಾಯವಾದ ಸಾವಿರಾರು ಕೋಟಿ! 45 ತಿಂಗಳಲ್ಲಿ ಬರೋಬ್ಬರಿ 4,341 ಕೋಟಿ ವಂಚನೆ
ಕಳೆದ 45 ತಿಂಗಳಲ್ಲಿ ಬೆಂಗಳೂರಿನಲ್ಲಿ 53,252 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದ್ದು, ವಂಚಕರು 4,341 ಕೋಟಿ ರೂ. ಲಪಟಾಯಿಸಿದ್ದಾರೆ. ಉದ್ಯಮಿಗಳು ಮತ್ತು ಸಾಫ್ಟ್‌ವೇರ್ ಇಂಜಿನಿಯರ್‌ಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿದೆ.
Karnataka Political News Live 29 November 2025ಕಲಬುರಗಿಯಲ್ಲಿ ಅಕ್ರಮ ಗೋ ಸಾಗಾಟ ತಡೆದ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣ ಖಂಡಿಸಿ ಪ್ರತಿಭಟನೆ
ಕಲಬುರಗಿಯಲ್ಲಿ ಅಕ್ರಮ ಗೋ ಸಾಗಾಟ ತಡೆಯಲು ಯತ್ನಿಸಿದ ಹಿಂದೂ ಕಾರ್ಯಕರ್ತರ ಮೇಲಿನ ಹಲ್ಲೆಯನ್ನು ಖಂಡಿಸಿ ಬೃಹತ್ ಪ್ರತಿಭಟನೆ ನಡೆಯಿತು. ಸಿದ್ದಲಿಂಗ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಆರೋಪಿಗಳನ್ನು ಗಡಿಪಾರು ಮಾಡುವಂತೆ ಒತ್ತಾಯಿಸಲಾಯಿತು.
Karnataka Political News Live 29 November 2025ಮಂಡ್ಯ - ಭೂವರಾಹನಾಥ ದೇವಸ್ಥಾನಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಭೇಟಿ; ಆಗಮನಕ್ಕೂ ಮುನ್ನ ಜೇನು ದಾಳಿಯ ಆತಂಕ!
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಐತಿಹಾಸಿಕ ಭೂವರಾಹನಾಥ ದೇವಸ್ಥಾನಕ್ಕೆ ಭೇಟಿ ನೀಡಿ, ಇಷ್ಟಾರ್ಥ ಸಿದ್ಧಿಗಾಗಿ ಮೃತ್ಯುಂಜಯ ಹೋಮದಲ್ಲಿ ಭಾಗಿಯಾಗಲಿದ್ದಾರೆ. ಅವರ ಆಗಮನಕ್ಕೂ ಮುನ್ನ ದೇಗುಲದ ಆವರಣದಲ್ಲಿ ಹೆಜ್ಜೇನು ದಾಳಿಯಿಂದಾಗಿ ಕೆಲಕಾಲ ಆತಂಕದ ವಾತಾವರಣ
Karnataka Political News Live 29 November 2025ಶಬರಿಮಲೆ ಯಾತ್ರೆ ಹೋಗುತ್ತಿದ್ದ ಕನ್ನಡಿಗರ ಬಸ್ ಕೇರಳದಲ್ಲಿ ಕಮರಿಗೆ ಬಿದ್ದು ಭೀಕರ ಅಪಘಾತ!
Karnataka Political News Live 29 November 2025ರಾಮಾಯಣದ ರಾಮ, ಲಕ್ಷ್ಮಣ, ರಾವಣ ಕ್ರೂರಿಗಳು ಎಂದ ಬಂಡಾಯ ಸಾಹಿತಿ ಲಲಿತಾ ನಾಯಕ್ ವಿರುದ್ಧ ಎಫ್‌ಐಆರ್
ಬಂಡಾಯ ಸಾಹಿತಿ ಹಾಗೂ ಕಾಂಗ್ರೆಸ್ ಮುಖಂಡೆ ಬಿ.ಟಿ. ಲಲಿತಾ ನಾಯಕ್ ಅವರ ವಿರುದ್ಧ ದಾವಣಗೆರೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ವಿಚಾರ ಸಂಕಿರಣವೊಂದರಲ್ಲಿ ರಾಮ, ಲಕ್ಷ್ಮಣ ಮತ್ತು ರಾವಣರ ಕುರಿತು ನೀಡಿದ ವಿವಾದಾತ್ಮಕ ಹೇಳಿಕೆಯಿಂದಾಗಿ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.