ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ ನಡುವಿನ ನಾಯಕತ್ವದ ಚರ್ಚೆಗೆ ಹೈಕಮಾಂಡ್ ತಾತ್ಕಾಲಿಕ ತೆರೆ ಎಳೆದಿದೆ. ಉಪಾಹಾರ ಸಭೆಯ ನಂತರ ಇಬ್ಬರೂ ನಾಯಕರು ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ಹೇಳಿದ್ದು, ಈ ಕದನ ವಿರಾಮದ ಹಿಂದೆ ಐದು ಪ್ರಮುಖ ಕಾರಣಗಳಿವೆ ಎಂದು ವಿಶ್ಲೇಷಿಸಲಾಗಿದೆ.
ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಉಪಾಹಾರ ಸಭೆ ನಡೆಸಿದ್ದು, ಇಬ್ಬರೂ ಹೈಕಮಾಂಡ್ ಸೂಚನೆಗೆ ಬದ್ಧರಾಗಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ನಾಯಕತ್ವ ವಿಚಾರದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲದೆ, ಪಕ್ಷದ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ಉತ್ತಮ ಆಡಳಿತ ನೀಡಲು ಕಟಿಬದ್ಧವಾಗಿದ್ದು, 2028 ರ ಚುನಾವಣಾ ಕಾರ್ಯತಂತ್ರ ಹಾಗೂ ಡಿಸೆಂಬರ್ 8ರಿಂದ ಆರಂಭವಾಗುವ ವಿಧಾನಸಭಾ ಅಧಿವೇಶನದ ವಿಚಾರಗಳನ್ನೂ ಚರ್ಚಿಸಲಾಗಿದೆ. 2028 ರಲ್ಲಿ ಮತ್ತೆ ಸರ್ಕಾರ ರಚಿಸುವ ವಿಶ್ವಾಸವಿದೆ ಹಾಗೂ ಕರ್ನಾಟಕದ ಜನರಿಗೆ ನೀಡಿದ ಪ್ರತಿಯೊಂದು ಭರವಸೆಯನ್ನು ಪೂರೈಸುವುದು ನಮ್ಮ ಕರ್ತವ್ಯ ಎಂದು ಹೇಳಿದ್ದಾರೆ.
ಇದೆಲ್ಲದರ ಮಧ್ಯೆ ಇಬ್ಬರ ನಡುವಿನ ಕದನವಿರಾಮ ಆಗಿದ್ದೇಗೆ ಎಂಬ ಬಗ್ಗೆ ಕೂಡ ಚರ್ಚೆ ನಡೆಯುತ್ತಿದೆ. ಅಧಿಕಾರ ಹಂಚಿಕೆಗೆ ಕದನ ವಿರಾಮಕ್ಕೆ ಐದು ಕಾರಣಗಳ ಬಗ್ಗೆಯೂ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ರಾಜ್ಯದಲ್ಲಿ ಅಧಿಕಾರ ಹಂಚಿಕೆ ಚರ್ಚೆಗೆ ಹೈಕಮಾಂಡ್ ಬ್ರೇಕ್ ಹಾಕಲು ಚರ್ಚಿತವಾಗಿರುವ ಐದು ಕಾರಣಗಳನ್ನು ಇಲ್ಲಿ ನೀಡಲಾಗಿದೆ.
ಕಾರಣ 1 ನೇರಾನೇರ ಫೈಟ್
- ಸಿಎಂ ಡಿಸಿಎಂ ನಡುವೆ ಪೋಸ್ಟರ್ ವಾರ್
- ಡಿಸಿಎಂಗೆ ಸಿಎಂ ನೇರಾ ನೇರ ಕೌಂಟರ್ ಕೊಟ್ಟಿದ್ದು
- ಕೊಟ್ಟ ಮಾತಿನ ವಿವರದಲ್ಲಿ ಸಿಎಂ-ಡಿಸಿಎಂ ಪೋಸ್ಟ್ ಕಾರಣಕ್ಕೆ ಹೈಕಮಾಂಡ್‌ಗೆ ಆತಂಕ ಶುರುವಾಗಿತ್ತು
ಕಾರಣ-2 - ಎರಡು ಸಮುದಾಯ ನಡುವೆ ತಿಕ್ಕಾಟ
- ಸಿಎಂ ಬದಲಾವಣೆ ಚರ್ಚೆ ಕೇವಲ ರಾಜಕೀಯವಾಗಿ ಚರ್ಚೆಯಾಗಿ ಮಾತ್ರ ಉಳಿಯಲಿಲ್ಲ
- ಸಮುದಾಯಗಳಿಗೆ ಈ ತಿಕ್ಕಾಟ ಹಬ್ಬಿದ್ದು ಹೈಕಮಾಂಡ್ ಮಧ್ಯಪ್ರವೇಶ ಅನಿವಾರ್ಯ
ಕಾರಣ 3 - ಚಳಿಗಾಲದ ಅಧಿವೇಶನ
- ಸಂಸತ ಅಧಿವೇಶನ ಮುಂದೆ ಇಟ್ಟುಕೊಂಡು ತೀರ್ಮಾನ ಮಾಡುವುದು ಕಷ್ಟ
- ಹೀಗಾಗಿ ಯಾವುದೇ ಬದಲಾವಣೆ ಮಾಡುವ ತೀರ್ಮಾನ ಈಗ ಕೈಗೊಳ್ಳುವುದು ಸೂಕ್ತ ಅಲ್ಲ ಎಂಬ ಅಭಿಪ್ರಾಯ
ಕಾರಣ 4 - ಮಲ್ಲಿಕಾರ್ಜುನ ಖರ್ಗೆ ಸಲಹೆ
- ಮೊನ್ನೆ ನಡೆದ ರಾಹುಲ್ ಗಾಂಧಿ, ವೇಣುಗೋಪಾಲ್, ಮಲ್ಲಿಕಾರ್ಜುನ ಖರ್ಗೆ ಸಭೆಯಲ್ಲಿ ಎಐಸಿಸಿ ಅಧ್ಯಕ್ಷರು ನೀಡಿದ್ದ ಸಲಹೆ ಪ್ರಮುಖವಾದದ್ದು
- ಒಬ್ಬರ ಮುಖ ಒಬ್ಬರು ನೋಡದೆ ಅಧಿವೇಶನಕ್ಕೆ ಹೋದರೆ ವಿಪಕ್ಷಗಳಿಗೆ ಅಸ್ತ್ರ ನೀಡಿದಂತಾಗುತ್ತದೆ.
- ಹೀಗಾಗಿ ಒಂದೋ ಸಮಸ್ಯೆ ಇತ್ಯರ್ಥ ಇಲ್ಲದೇ ಇಬ್ಬರು ಒಂದಾಗಿ ಹೋಗುವಂತೆ ಸೂಚಿಸಬೇಕು ಎಂದು ಸಲಹೆ ನೀಡಿದ್ದ ಖರ್ಗೆ
ಕಾರಣ 5 - ಗೊಂದಲದಲ್ಲಿರುವ ಹೈಕಮಾಂಡ್
- ಈ ಅಧಿಕಾರ ಹಸ್ತಾಂತರ ತೀರ್ಮಾನ ಮಾಡಲು ಹೈಕಮಾಂಡ್ ರೆಡಿ ಇಲ್ಲ
- ಪರ್ಯಾಯ ದಾರಿಗಳು ಏನು ಎಂಬ ಬಗ್ಗೆ ಇನ್ನೂ ಅಂತಿಮ ರೂಪರೇಷೆ ಸಿದ್ಧವಿಲ್ಲ
- ಸಿದ್ದರಾಮಯ್ಯ ಕೆಳಗಿಳಿಸಿದರೆ ಮುಂದೇನು..? ಎಂಬ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಿಲ್ಲ
ಹೀಗಾಗಿ ಸದ್ಯಕ್ಕೆ ಅಧಿಕಾರ ಹಸ್ತಾಂತರದ ಕದನಕ್ಕೆ ಬ್ರೇಕ್ ಬಿದ್ದಿದೆ ಎನ್ನಲಾಗುತ್ತಿದೆ. ಜೊತೆಗೆ ಈ ಕದನ ವಿರಾಮ ತಾತ್ಕಾಲಿಕ ಎನ್ನಲಾಗುತ್ತಿದ್ದು, ಮತ್ತೆ ಅಧಿಕಾರ ಹಸ್ತಾಂತರದ ಕೂಗು ಮುನ್ನಲೆಗೆ ಬರದೆ ಇರಲಾರದು. ಡಿಸೆಂಬರ್ ಒಳಗಡೆ ಅಥವಾ 2026ರ ಸಂಕ್ರಾಂತಿ ಹಬ್ಬದಲ್ಲಿ ಕ್ರಾಂತಿ ಆಗಲಿದೆ ಎಂದು ಹೇಳಲಾಗುತ್ತಿದೆ. ಎಲ್ಲದಕ್ಕೂ ಕಾಲವೇ ಉತ್ತರ ಕೊಡಲಿದೆ.


