ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?

ಸಿಎಂ ಸಿಂಹಾಸನ ಸಮರದ ಸಂದರ್ಭದಲ್ಲಿ ಸಿದ್ದು ಸುತ್ತಲೂ ರಕ್ಷಣೆಗೆ ನಿಂತವರಲ್ಲಿ ಸತೀಶ್ ಜಾರಕಿಹೊಳಿ ಪ್ರಮುಖರಾಗಿದ್ರು. ಆದ್ರೆ ಇತ್ತೀಚಿಗೆ ಸಿದ್ದರಾಮಯ್ಯ ಹಾಗೂ ಸತೀಶ್ ಜಾರಕಿಹೊಳಿ ಮಧ್ಯೆ ಸಣ್ಣದಾಗಿ ಭಿನಾಭಿಪ್ರಾಯ ಮೂಡಿದೆ ಅನ್ನೋ ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗಿದೆ.

Share this Video
  • FB
  • Linkdin
  • Whatsapp

ಡಿ.ಕೆ.ಶಿವಕುಮಾರ್ ಅವರು ಶುರು ಮಾಡಿರೋ ದೋಸ್ತಿಯ ಆಟ. ಇಲ್ಲಿ ಡಿಕೆ ಸ್ನೇಹ ಹಸ್ತಕ್ಕೆ ಕೈ ಜೋಡಿಸಿರೋದು ಬೆಳಗಾವಿಯ ಸಾಹುಕಾರ ಸತೀಶ್ ಜಾರಕಿಹೊಳಿ. ಒಂದು ಟೈಂನಲ್ಲಿ ಇವರಿಬ್ಬರ ಮಧ್ಯೆ ಮುನಿಸಿನ ಗೋಡೆಯಿತ್ತು. ಈಗದು ಉರುಳಿ ಬಿದ್ದಿದೆ. ಗೆಳೆತನ ಗಟ್ಟಿಯಾಗ್ತಿದೆ. ಇದೆಲ್ಲವೂ ಏಕಾಏಕಿ ಸಂಭವಿಸಿಲ್ಲ. ಹಲವು ಹಂತಗಳನ್ನಿಲ್ಲಿ ದಾಟಲಾಗಿದೆ. ಹಾಗಿದ್ರೆ ಮುನಿಸು ದಹನಗೊಂಡು ದೋಸ್ತಿ ಅರಳಿದ್ದು ಹೇಗೆ? ಎರಡು ಪ್ರಚಂಡ ಶಕ್ತಿಗಳ ಗೆಳೆತನ ಗಟ್ಟಿಯಾದ್ರೆ ಕಾಂಗ್ರೆಸ್ ಪಕ್ಷಕ್ಕೆ ಹೇಗೆಲ್ಲಾ ಲಾಭ? ಡಿಕೆಗೆ ಸನಿಹವಾಗ್ತಾ ಸಿದ್ದು ಆಪ್ತವಲಯದಿಂದ ಅಂತರ ಕಾಯ್ದುಕೊಳ್ತಾಯಿದ್ದಾರಾ ಸತೀಶ್ ಜಾರಕಿಹೊಳಿ..?


Related Video