ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!

ಭಾರತದ ರಾಜಕೀಯ ಇತಿಹಾಸದಲ್ಲೇ ಅತ್ಯಂತ ರೋಚಕ ಘಟ್ಟಕ್ಕೀಗ ವೇದಿಕೆ ಸಿದ್ಧವಾಗಿದೆ. ಒಂದು ಕಡೆ ಪೂರ್ವ ಭಾರತದ ಹೆಬ್ಬಾಗಿಲಲ್ಲಿ ದೆಹಲಿ ಸಾಮ್ರಾಟರನ್ನೇ ಎದುರಿಸಿ ನಿಂತಿರೋ ಅಗ್ನಿಪುತ್ರಿಯ ಅಬ್ಬರ.

Share this Video
  • FB
  • Linkdin
  • Whatsapp

ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು.. ದೀದಿ ದರ್ಬಾರ್..! 15 ದಿನದ ಹೋರಾಟ.. ಸಮೀಕ್ಷೆಗಳ ಲೆಕ್ಕ ಬದಲಿಸ್ತಾರಾ ಚಾಣಕ್ಯ..? ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್..! ಬಂಗಾಳ-ಕೇರಳ..ಅಧಿಕಾರ ಅಧಿಪತ್ಯದ ಮತ ಮಿಡಿತ ರಹಸ್ಯ..! ಇದೇ ಇವತ್ತಿನ ಸುವರ್ಣ ಸ್ಪೆಷಲ್ ಜೋಡಿ ಕುಸ್ತಿ..ಗದ್ದುಗೆ ಗಣಿತ..! ಭಾರತದ ರಾಜಕೀಯ ಇತಿಹಾಸದಲ್ಲೇ ಅತ್ಯಂತ ರೋಚಕ ಘಟ್ಟಕ್ಕೀಗ ವೇದಿಕೆ ಸಿದ್ಧವಾಗಿದೆ. ಒಂದು ಕಡೆ ಪೂರ್ವ ಭಾರತದ ಹೆಬ್ಬಾಗಿಲಲ್ಲಿ ದೆಹಲಿ ಸಾಮ್ರಾಟರನ್ನೇ ಎದುರಿಸಿ ನಿಂತಿರೋ ಅಗ್ನಿಪುತ್ರಿಯ ಅಬ್ಬರ.. ಮತ್ತೊಂದು ಕಡೆ ದಕ್ಷಿಣದ ಕಡಲತೀರದಲ್ಲಿ ಕೆಂಪು ಪಡೆ ಮತ್ತು ಕಾಂಗ್ರೆಸ್ ಸೈನ್ಯದ ನಡುವಿನ ಭೀಕರ ಕದನ.

ಇದು ಬಂಗಾಳ ಮತ್ತು ಕೇರಳದ ಅಸ್ತಿತ್ವದ ಹೋರಾಟ.ಇಡೀ ದೇಶವೇ ಕಾತರದಿಂದ ಕಾಯ್ತಿರೋ ಈ ಮಹಾ ಸಂಗ್ರಾಮದಲ್ಲಿ ಮತದಾರನ ಗುಪ್ತಗಾಮಿ ನಡೆ ಹೇಗಿದೆ..? ಅಮಿತ್ ಶಾ ತಂತ್ರಗಾರಿಕೆ ಬಂಗಾಳದ ಮಣ್ಣಲ್ಲಿ ಫಲಿಸುತ್ತಾ..? ಅತ್ತ ಕೇರಳದ ಕೋಟೆಯನ್ನು ಉಳಿಸಿಕೊಳ್ಳಲು ಎಡಪಕ್ಷಗಳು ಹೂಡಿರೋ ವ್ಯೂಹವೇನು..? ಸಿ-ವೋಟರ್ ಮತ್ತು ವೋಟ್ ವೈಬ್ ನೀಡಿರೋ ಲೇಟೆಸ್ಟ್ ರಿಪೋರ್ಟ್ ಇಡೀ ರಾಜಕೀಯ ಲೆಕ್ಕಾಚಾರವನ್ನೇ ಉಲ್ಟಾ ಮಾಡಿದೆ. ಹಾಗಿದ್ರೆ ಈ ಬಾರಿ ಯಾರಿಗೆ ಗೆಲುವು ಅಂತಿವೆ ಸಮೀಕ್ಷೆಗಳು..? ಇನ್ನು ಜಿದ್ದಾಜಿದ್ದಿನ ಫೈಟ್​ಗೆ ಸಾಕ್ಷಿಯಾಗ್ತಿರೋ ಮತ್ತೊಂದು ರಾಜ್ಯ ಕೇರಳ. ಅಲ್ಲಿಯೂ ಚುನಾವಣಾ ಪೂರ್ವ ಸಮೀಕ್ಷೆಯೊಂದು ಹೊರಬಿದ್ದಿದೆ.

ಹಾಗಿದ್ರೆ ಆ ಸಮೀಕ್ಷೆ ಪ್ರಕಾರ ಅಲ್ಲಿ ಯಾರಿಗೆ ಅಧಿಕಾರ. ಕೇರಳದ ರಾಜಕೀಯ ಅಖಾಡದಲ್ಲಿಗ ಪ್ರಚಾರದ ಅಲೆಗಳ ಅಬ್ಬರಕ್ಕಿಂತಲೂ ಚುನಾವಣಾ ಸಮೀಕ್ಷೆಯ ಸಂಚಲನವೇ ಜೋರಾಗಿದೆ. ದಶಕದ ಕಾಲ ಅಲುಗಾಡದ ಕೆಂಪು ಕೋಟೆಗೆ ಈ ಬಾರಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಲಗ್ಗೆ ಇಡುತ್ತಾ..? ಸತತ ಗೆಲುವಿನ ನಾಗಾಲೋಟದಲ್ಲಿದ್ದ ಪಿಣರಾಯಿ ವಿಜಯನ್ ಅವರಿಗೆ ಸಿ-ವೋಟರ್ ಸಮೀಕ್ಷೆ ಮರ್ಮಾಘಾತ ನೀಡಿದ್ದು, ಕೇರಳದಲ್ಲಿ ಆಡಳಿತ ವಿರೋಧಿ ಅಲೆ ಸ್ಪಷ್ಟವಾಗಿ ಗೋಚರಿಸ್ತಿದೆ. ಇತ್ತ ಕಮಲ ಪಡೆ ಕೂಡ ತನ್ನ ಮತಬೇಟೆಯನ್ನು ಹೆಚ್ಚಿಸಿಕೊಂಡು ಕಿಂಗ್ ಮೇಕರ್ ಆಗೋ ಸೂಚನೆ ಕೊಟ್ಟಿದೆ.

ಹಾಗಿದ್ರೆ ಈ ಗಾಡ್ಸ್ ಓನ್ ಕಂಟ್ರಿಯಲ್ಲಿ ಈ ಬಾರಿ ಯಾರ ಪಟ್ಟಾಭಿಷೇಕವಾಗಲಿದೆ..? ಈ ಬಗ್ಗೆ ಸಿ ವೋಟರ್ ಸಮೀಕ್ಷೆ ಹೇಳ್ತಾ ಇರೋದೇನು..? ಇನ್ನು ಮತ್ತೆ ನಾವು ಪಶ್ಚಿಮ ಬಂಗಾಳದ ಕಡೆಗೆ ಹೋಗೋದಾದ್ರೆ, ಅಲ್ಲಿನ ಸಮೀಕ್ಷೆಗಳ ಲೆಕ್ಕಾಚಾರವನ್ನ ಉಲ್ಟಾ ಮಾಡೋಕೆ ಅಮಿತ್ ಶಾ ಒಂದು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಹಾಗಿದ್ರೆ ಆ ಪ್ಲಾನ್ ಏನು..? ಚುನಾವಣಾ ಚಾಣಕ್ಯನ ದಾಳಗಳೇನು.? ಪಶ್ಚಿಮ ಬಂಗಾಳದಲ್ಲಿ ನಾಲ್ಕನೇ ಬಾರಿಗೂ ಮಮತಾ ಬ್ಯಾನರ್ಜಿ ಸರ್ಕಾರ ಅಧಿಕಾರಕ್ಕೆ ಬರುತ್ತೆ ಅಂತ ಸಿ ವೋಟರ್ ಹಾಗೂ ವೋಟ್​ವೈಬ್ ಸಮೀಕ್ಷೆಗಳು ಹೇಳ್ತಿವೆ. ಆದ್ರೆ, ಸಮೀಕ್ಷೆಗಳ ಈ ಲೆಕ್ಕಾಚಾರವನ್ನೆಲ್ಲಾ ಉಲ್ಟಾ ಮಾಡೋಕೆ ಅಲ್ಲಿ 15 ದಿನಗಳ ವಿಜಯ ಶಪಥವನ್ನ ಮಾಡಿದ್ದಾರೆ ಕೇಸರಿ ಪಾಳ್ಯದ ಚುನಾವಣಾ ಚಾಣಕ್ಯ ಅಮಿತ್ ಶಾ.. ಹಾಗಿದ್ರೇ ಏನಿದು ಅಮಿತ್ ಶಾ ಶಪಥ..? ಇದ್ರಿಂದ ಅಲ್ಲಿನ ಚುನಾವಣಾ ಚಿತ್ರಣ ಬದಲಾಗುತ್ತಾ..? 

Related Video