ಒಂದು ನವದಂಪತಿ ತಮ್ಮ ಮೊದಲ ರಾತ್ರಿಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ. ಈ ವಿಡಿಯೋದಲ್ಲಿ ವಧು ಆಭರಣಗಳನ್ನು ತೆಗೆಯುವ ದೃಶ್ಯವಿದ್ದು, ಕೆಲವರು ಇದನ್ನು ಖಂಡಿಸಿದ್ದಾರೆ. ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ.
ಪೂರ್ತಿ ಓದಿKarnataka News Live 17th April: ಫಸ್ಟ್‌ನೈಟ್ ಲೈವ್ ಕ್ಯಾಮೆರಾ ಆನ್‌ಮಾಡಿ ಮೈಮರೆತ ಜೋಡಿ, ವಿಡಿಯೊ ವೈರಲ್

ಬೆಂಗಳೂರು (ಏ.17): ರಾಜ್ಯದಲ್ಲಿ ಸರ್ಕಾರದ ವಿರುದ್ಧ ಕಿಚ್ಚು ಎಬ್ಬಿಸಿರುವ ಜಾತಿ ಗಣತಿ ವರದಿಯ ಭವಿಷ್ಯ ಇಂದು ನಿರ್ಧಾರವಾಗಲಿದೆ. ಸಿಎಂ ಸಿದ್ದರಾಮಯ್ಯ ಹೇಳುವಂತೆ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷಾ ವರದಿ ಕುರಿತು ಇಂದು ವಿಶೇಷ ಸಚಿವ ಸಂಪುಟ ಸಭೆ ನಡೆಯಲಿದೆ. ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು ಆಕ್ರೋಶ ವ್ಯಕ್ತಪಡಿಸಿದರೆ, ಹಿಂದುಳಿದ ವರ್ಗಗಳು ವರದಿಗೆ ಬೆಂಬಲ ವ್ಯಕ್ತಪಡಿಸಿವೆ. ವಿಶೇಷ ಸಚಿವ ಸಂಪುಟ ಸಭೆ ಗುರುವಾರ ಸಂಜೆ 4ಕ್ಕೆ ನಡೆಯಲಿದ್ದು, ಯಾವ ತೀರ್ಮಾನ ಹೊರ ಬೀಳಬಹುದು ಎಂಬ ಕುರಿತು ಇದೀಗ ತೀವ್ರ ಕುತೂಹಲ ನಿರ್ಮಾಣವಾಗಿದೆ.
ಫಸ್ಟ್‌ನೈಟ್ ಲೈವ್ ಕ್ಯಾಮೆರಾ ಆನ್‌ಮಾಡಿ ಮೈಮರೆತ ಜೋಡಿ, ವಿಡಿಯೊ ವೈರಲ್
ಅಪ್ಪನೇ ದೃಷ್ಟಿ ಹಾಕೋ ಥರ ದುಡ್ಡು ಗಳಿಸ್ತಿರೋ 'ಬಂಗಾಳದ ಹುಲಿ' ಸೌರವ್ ಗಂಗೂಲಿಯ ಏಕೈಕ ಮಗಳು!
ಸೌರವ್ ಗಂಗೂಲಿ ಅಷೆಲ್ಲ ಹೆಸರು ಮಾಡಿದ್ದರೂ ಕೂಡ, ಈಗ ಇವರಿಗೆ ಸೆಡ್ಡು ಹೊಡೆಯುವಂತೆ ಮಗಳು ಸನಾ ಕಾರ್ಪೋರೇಟ್ ಕ್ಷೇತ್ರದಲ್ಲಿ ಬೆಳಗುತ್ತಿದ್ದಾರೆ. ಅಂದಹಾಗೆ ಇವರಿಗೆ ಸಿಗುತ್ತಿರುವ ಸಂಬಳ ಎಷ್ಟು?
ಚಿನ್ನದ ಬೆಲೆ ಏರಿಕೆ: ವಿಮೆ ಮಾಡಿಸಿಕೊಳ್ಳುವುದು ಕಡ್ಡಾಯವೇ?
ಚಿನ್ನದ ಬೆಲೆ ದಾಖಲೆ ಮಟ್ಟ ಮುಟ್ಟುತ್ತಿರುವ ಈ ಸಮಯದಲ್ಲಿ, ಚಿನ್ನಾಭರಣಗಳಿಗೆ ವಿಮೆ ಮಾಡಿಸುವುದು ಅತ್ಯಗತ್ಯ. ಹಲವು ವಿಮಾ ಕಂಪನಿಗಳು ಚಿನ್ನಕ್ಕೆ ಪ್ರತ್ಯೇಕ ವಿಮಾ ರಕ್ಷಣೆ ನೀಡುತ್ತಿವೆ. ಜಾಗತಿಕ ಟ್ರೇಡ್ ವಾರ್, ರೂಪಾಯಿ ಮೌಲ್ಯ ಕುಸಿತ, ಮತ್ತು ಮದುವೆ ಸೀಸನ್ ಚಿನ್ನದ ಬೆಲೆ ಏರಿಕೆಗೆ ಕಾರಣ.
ಪೂರ್ತಿ ಓದಿಯುವತಿ ಬೆಡ್ ರೂಮ್ ಶೇರಿಂಗ್ ಆಫರ್; ತಿಂಗಳಿಗೆ ₹52 ಸಾವಿರ ಬಾಡಿಗೆ!
ಮುಂಬೈನಲ್ಲಿ ಯುವತಿಯೊಬ್ಬರು ತಮ್ಮ 2BHK ಮನೆಯ ಒಂದು ಬೆಡ್‌ರೂಮ್‌ಗೆ ₹52,000 ಬಾಡಿಗೆ ಕೇಳಿದ್ದಾರೆ. ಈ ಬೆಲೆ ದುಬಾರಿ ಎಂದು ನೆಟ್ಟಿಗರು ಛೀಮಾರಿ ಹಾಕಿದ್ದಾರೆ. ಫ್ಲಾಟ್ ಜಿಮ್, ಜಾಗಿಂಗ್ ಟ್ರ್ಯಾಕ್‌ನಂತಹ ಸೌಲಭ್ಯಗಳನ್ನು ಹೊಂದಿದ್ದರೂ, ಬಾಡಿಗೆ ವಿಪರೀತ ಎಂಬುದು ಜನರ ಅಭಿಪ್ರಾಯ.
ಪೂರ್ತಿ ಓದಿಬಿಜೆಪಿಗರು ಲಜ್ಜೆಗೆಟ್ಟವರು, ಸುಳ್ಳು ಅವ್ರ ಮನೆ ದೇವ್ರು: ಸಿದ್ದರಾಮಯ್ಯ ವಾಗ್ದಾಳಿ
ಸುಳ್ಳು ಹೇಳುವುದರಲ್ಲಿ ಬಿಜೆಪಿಯವರು ನಿಸ್ಸೀಮರು, ಅವರ ಮನೆ ದೇವರೇ ಸುಳ್ಳು. ಬೆಲೆ ಏರಿಕೆಯ ಹೆಸರಲ್ಲಿ ಜನಾಕ್ರೋಶ ಯಾತ್ರೆಯ ಮೂಲಕ ಇಡೀ ರಾಜ್ಯದ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಜನಾಕ್ರೋಶ ಸಭೆ ಮಾಡುತ್ತಿರುವ ಬಿಜೆಪಿಯವರು ಲಜ್ಜೆಗೆಟ್ಟವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಪೂರ್ತಿ ಓದಿಖರ್ಗೆ, ಸಿದ್ದು, ಡಿಕೆಶಿ, ನಮ್ಮನೆಗೂ ಸಮೀಕ್ಷೆಗೆ ಬಂದಿಲ್ಲ: ಎಂ.ಪಿ.ರೇಣುಕಾಚಾರ್ಯ
ಅಧಿಕಾರ ಹಂಚಿಕೆ ಭಯದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ಜನಗಣತಿ ಬ್ರಹ್ಮಾಸ್ತ್ರವನ್ನು ಬಿಡುತ್ತಿದ್ದಾರೆ. ಇಂತಹ ಅವೈಜ್ಞಾನಿಕ ಜಾತಿ ಜನಗಣತಿ ವರದಿಗೆ ನಮ್ಮ ಸಂಪೂರ್ಣ ವಿರೋಧವಿದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಪೂರ್ತಿ ಓದಿಮಂಗಳೂರಿನಲ್ಲಿ ಗ್ಯಾಂಗ್ ರೇ*ಪ್: ಗೂಗಲ್ ಪೇ ನೀಡಿದ ಸುಳಿವು, ಮೂವರ ಬಂಧನ
ಕಡಲ ತಡಿ ಮಂಗಳೂರಿನಲ್ಲಿ ಉತ್ತರ ಭಾರತ ಮೂಲದ ಯುವತಿಯೊಬ್ಬಳ ಮೇಲೆ ಭೀಕರ ಗ್ಯಾಂಗ್ ರೇಪ್ ನಡೆದಿದೆ. ಯುವತಿಯನ್ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಬಲಾತ್ಕಾರ ಎಸಗಲಾಗಿದೆ.
ಪೂರ್ತಿ ಓದಿಭಾರತಕ್ಕೆ ಉಚಿತವಾಗಿ 2 ಬುಲೆಟ್ ರೈಲು ಉಡುಗೊರೆ ಘೋಷಿಸಿದ ಜಪಾನ್
ಭಾರತದ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆ ಪ್ರಗತಿಯಲ್ಲಿದೆ. ಇದರ ನಡುವೆ ಜಪಾನ್ ಘೋಷಣೆ ಭಾರತೀಯರ ಸಂತಸಕ್ಕೆ ಕಾರಣವಾಗಿದೆ. ಜಪಾನ್ ಇದೀಗ ಎರಡು ಹೈಸ್ಪೀಡ್ ಬುಲೆಟ್ ರೈಲು ಉಚಿತವಾಗಿ ಭಾರತಕ್ಕೆ ನೀಡುತ್ತಿದೆ.
ಪೂರ್ತಿ ಓದಿKodagu: ವಾಸನೆ ಸಹಿತ ಹಳದಿ ಬಣ್ಣ ಕೊಳಚೆ ನೀರೇ ಕಟ್ಟೆಹಾಡಿ ಜನರಿಗೆ ಜೀವಜಲ!
ಜಿಲ್ಲೆಯಲ್ಲಿ 4 ನದಿಗಳು ಹುಟ್ಟಿ ಹರಿದರೂ ಆ ಒಂದು ಗ್ರಾಮಕ್ಕೆ ಮಾತ್ರ ಶುದ್ಧ ಕುಡಿಯುವ ನೀರಿಗೆ ಬರ ಬಂದಿದೆ. ಊರಿನಿಂದ ನೂರೇ ಮೀಟರ್ ದೂರದಲ್ಲಿ ಜಲಾಶಯವಿದ್ದರೂ ಇವರಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸಿಲ್ಲ.
ಪೂರ್ತಿ ಓದಿSRH ಟ್ರಾವಿಸ್ ಹೆಡ್ ಊಬರ್ ಜಾಹೀರಾತಿಗೆ ಆರ್‌ಸಿಬಿ ಕೆಂಡ, ಕೋರ್ಟ್ ಮೆಟ್ಟಿಲೇರಿದ ಪ್ರಕರಣ
ಎಸ್‌ಆರ್‌ಹೆಚ್ ಟ್ರಾವಿಸ್ ಹೆಡ್ ಒಳಗೊಂಡ ಉಬರ್ ಜಾಹೀರಾತು ಇದೀಗ ವಿವಾದಕ್ಕೆ ಕಾರಣವಾಗಿದೆ. ಹೈದರಾಬಾದಿ ಜಾಹೀರಾತಿನಲ್ಲಿ ಆರ್‌ಸಿಬಿಗೆ ಅಪಮಮಾನ ಮಾಡಲಾಗಿದೆ ಎಂದು ಆರ್‌ಸಿಬಿ ಫ್ರಾಂಚೈಸಿ ಕೋರ್ಟ್ ಮೆಟ್ಟಿಲೇರಿದೆ. ಅಷ್ಟಕ್ಕೂ ಈ ಜಾಹೀರಾತಿನಲ್ಲಿ ಏನಿದೆ? ಕೋರ್ಟ್ ಹೇಳಿದ್ದೇನು?
ಪೂರ್ತಿ ಓದಿಸುಬ್ಬಿಗೆ ಸೀತಮ್ಮನೇ ಹೆತ್ತತಾಯಿ ಎನ್ನೋ ಸತ್ಯ ಹೇಳಿದ ಸ್ವಾಮಿ ತಾತ!
ಸ್ವಾಮಿ ತಾತ ಕೋಪದಲ್ಲಿ ಸುಬ್ಬಿಗೆ ತಾನು ಕಿಡ್ನಾಪ್ ಮಾಡಿದ ಸತ್ಯವನ್ನು ಬಹಿರಂಗಪಡಿಸುತ್ತಾನೆ. ಸೀತಾಳಿಗೆ ಹುಟ್ಟಿದ ಎರಡು ಮಕ್ಕಳಲ್ಲಿ ಸುಬ್ಬಿ ಒಬ್ಬಳು ಎಂಬುದು ಬೆಳಕಿಗೆ ಬರುತ್ತದೆ. ಸುಬ್ಬಿ ತನ್ನ ನಿಜವಾದ ತಾಯಿಯನ್ನು ತಿಳಿದು ಖುಷಿಪಡುತ್ತಾಳೆ.
ಪೂರ್ತಿ ಓದಿಹೆಬ್ಬಾಳೆ ಸೇತುವೆ ಕಾಮಗಾರಿ ವಿಳಂಬಕ್ಕೆ ಸ್ಥಳೀಯರ ಅಸಮಾಧಾನ: ವಾಹನ ಸವಾರರ ಪರದಾಟ
ಮಳೆಗಾಲ ಆರಂಭವಾದ ತಕ್ಷಣ ಭದ್ರೆಯ ಅಬ್ಬರಕ್ಕೆ ಪ್ರತಿ ವರ್ಷವೂ ಮೊದಲು ಮುಳುಗೋ ಸೇತುವೆಯೇ ಹೆಬ್ಬಾಳೆ ಸೇತುವೆ. ಸ್ಥಳೀಯರು ,ಭಕ್ತರು ಸೇತುವೆ ಮುಳುಗಡೆಯಿಂದ ಬೇಸತ್ತು ಹೊಸ ಸೇತುವೆಗೆ ಬೇಡಿಕೆಯಿಟ್ಟಿದ್ರು.
ಪೂರ್ತಿ ಓದಿಇನ್ಫೋಸಿಸ್ Q4 ಫಲಿತಾಂಶ, ನಿವ್ವಳ ಲಾಭದಲ್ಲಿ 12% ಕುಸಿತ!
ಇನ್ಫೋಸಿಸ್ ತನ್ನ FY25ರ ನಾಲ್ಕನೇ ತ್ರೈಮಾಸಿಕ ವರದಿಯನ್ನು ಬಿಡುಗಡೆ ಮಾಡಿದ್ದು, ನಿವ್ವಳ ಲಾಭವು 12% ರಷ್ಟು ಕುಸಿದು ₹7,033 ಕೋಟಿಗೆ ತಲುಪಿದೆ. ಆದಾಯವು 8% ರಷ್ಟು ಹೆಚ್ಚಳವಾಗಿ ₹40,925 ಕೋಟಿಗೆ ತಲುಪಿದೆ. ಕಂಪನಿಯು FY26 ರಲ್ಲಿ 0-3% ರಷ್ಟು ಆದಾಯದ ಬೆಳವಣಿಗೆಯನ್ನು ನಿರೀಕ್ಷಿಸುತ್ತಿದೆ.
ಪೂರ್ತಿ ಓದಿಜಾತಿ ಗಣತಿ ವರದಿ ಜಾರಿ ಮಾಡಿದಲ್ಲಿ ಹೋರಾಟ ಅನಿವಾರ್ಯ: ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ
ಜಾತಿಗಣತಿ ವರದಿ ಜಾರಿಗೆ ಚಾಮರಾಜನಗರ ಜಿಲ್ಲೆ ಮರಿಯಾಲ ಮುರುಘ ರಾಜೇಂದ್ರ ಮಠದ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮೀಜಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಪೂರ್ತಿ ಓದಿಜಾತಿಗಣತಿ ವರದಿ ಜಾರಿಗೆ ಸಿಎಂ ಕರೆದಿದ್ದ ಸಂಪುಟ ಸಭೆ ಠುಸ್ ಪಟಾಕಿ!
ಜಾತಿ ಗಣತಿ ವರದಿ ಜಾರಿಗೆ ತರಲು ಕರೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಸಚಿವರ ನಡುವೆ ಭಿನ್ನಾಭಿಪ್ರಾಯ ವ್ಯಕ್ತವಾಗಿದ್ದು, ಸಿಎಂ ಸಿದ್ದರಾಮಯ್ಯ ಅವರು ಎಲ್ಲ ಸಚಿವರಿಂದ ಲಿಖಿತ ರೂಪದಲ್ಲಿ ಉತ್ತರ ಕೇಳಿದ್ದಾರೆ.
ಪೂರ್ತಿ ಓದಿವಕ್ಫ್ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ: ರಸ್ತೆ ಸಂಚಾರ ನಿರ್ಬಂಧಿಸದಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ!
ವಕ್ಫ್ ತಿದ್ದುಪಡಿ ವಿರೋಧಿಸಿ ಮಂಗಳೂರಿನಲ್ಲಿ ನಾಳೆ ನಡೆಯಲಿರುವ ಬೃಹತ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಿದ್ದ ಮಂಗಳೂರು ಪೊಲೀಸ್ ಕಮಿಷನರ್ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ.
ಪೂರ್ತಿ ಓದಿಬಾಸ್ಗೆ ನಿನ್ನ ಫುಲ್ ಫಿಗರ್ ಫೋಟೋ ಕಳ್ಸು, ಕಂಪನಿ HR ಚಾಟ್ ಬಹಿರಂಗಪಡಿಸಿದ ಯುವತಿ
ಬಾಸ್ ಜೊತೆ ಪ್ರವಾಸದಲ್ಲಿ ಫುಲ್ ಎಂಜಾಯ್, ಈಗ ನಿನ್ನ ಫುಲ್ ಸೈಝ್ ಫೋಟೋ ಒಂದು ಕಳುಹಿಸು. ಬಾಸ್ ನಿನ್ನ ಪ್ರೊಫೈಲ್ ಫಿಗರ್ ತೋರಿಸಬೇಕಿದೆ. ಇದು ಯುವತಿ ಜೊತೆ ಕಂಪನಿಯ ಹೆಚ್ಆರ್ ನಡೆಸಿದ ವ್ಯಾಟ್ಸಾಪ್ ಚಾಟ್. ಕಂಪನಿಯ ಇನ್ನೊಂದು ಮುಖವನ್ನು ಯವತಿ ಬಹಿರಂಗಪಡಿಸಿದ್ದಾಳೆ.
ಪೂರ್ತಿ ಓದಿಬೇರೆಯವ್ರ ಹಾಡಿಗೆ ಸರಿಗಮಪ ಶೋನಲ್ಲಿ ಕ್ರೆಡಿಟ್ ತಕೊಂಡ್ರಾ ಹಂಸಲೇಖ! ಏನಿದು ಹೊಸ ವಿವಾದ!
ಸಂಗೀತ ನಿರ್ದೇಶಕ ಹಂಸಲೇಖ ವಿರುದ್ಧ ಹಿಂದೂಸ್ತಾನಿ ಗಾಯಕ ಶಂಕರ್ ಶಾನುಭಾಗ್ ಗಂಭೀರ ಆರೋಪ ಮಾಡಿದ್ದಾರೆ. ಕ್ರೆಡಿಟ್ ಕದಿಯುವುದು, ಪೇಮೆಂಟ್ ನೀಡದಿರುವುದು ಮತ್ತು 'ನಾದಬ್ರಹ್ಮ' ಬಿರುದಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪೂರ್ತಿ ಓದಿDMK ಸಚಿವನ ವಿರುದ್ಧ FIR ಹಾಕಿ ಇಲ್ಲವೇ.... ತಮಿಳುನಾಡು ಪೊಲೀಸರಿಗೆ ಹೈಕೋರ್ಟ್ ಖಡಕ್ ವಾರ್ನಿಂಗ್
ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಡಿಎಂಕೆ ಸಚಿವ ಕೆ. ಪೊನ್ಮುಡಿ ವಿರುದ್ಧ ಎಫ್‌ಐಆರ್ ದಾಖಲಿಸದ ಪೊಲೀಸರ ವಿರುದ್ಧ ಮದ್ರಾಸ್ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಪೂರ್ತಿ ಓದಿನಾದಬ್ರಹ್ಮ ಅಂದ್ರೇನು? ಹಂಸಲೇಖರಿಂದ ಅನ್ಯಾಯ, ಗಾಯಕನ ಗಂಭೀರ ಆರೋಪ!
ಸಂಗೀತ ನಿರ್ದೇಶಕ ಹಂಸಲೇಖ ಅವರ ವಿರುದ್ಧ ಗಾಯಕ ಶಂಕರ್ ಶಾನುಭಾಗ್ ಪ್ರತಿಫಲ ನೀಡದೆ ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಚಿತ್ರರಂಗದಲ್ಲಿ ತಮಗಾದ ಕೆಟ್ಟ ಅನುಭವಗಳನ್ನು ಹಂಚಿಕೊಂಡಿದ್ದಾರೆ. ರಿಯಾಲಿಟಿ ಶೋಗಳ ಬಗ್ಗೆಯೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪೂರ್ತಿ ಓದಿ