ಇನ್ಫೋಸಿಸ್‌ನ FY25ರ Q4 ಲಾಭ 7,033 ಕೋಟಿ ರೂ.ಗೆ ಇಳಿಕೆಯಾಗಿದೆ, ಆದರೆ ಆದಾಯ 40,925 ಕೋಟಿ ರೂ.ಗೆ ಏರಿಕೆಯಾಗಿದೆ. FY26ರಲ್ಲಿ 0-3% ಆದಾಯ ಬೆಳವಣಿಗೆ ನಿರೀಕ್ಷಿಸಲಾಗಿದೆ. ಉದ್ಯೋಗಿಗಳ ಕಡಿತ ದರ 14.1%ಕ್ಕೆ ಏರಿದೆ, ಆದರೆ ಒಟ್ಟು ಸಿಬ್ಬಂದಿ ಸಂಖ್ಯೆ 323,578ಕ್ಕೆ ಏರಿದೆ. 15,000 ಹೊಸ ನೇಮಕಾತಿಗಳಾಗಿದ್ದು, FY26ರಲ್ಲಿ 20,000ಕ್ಕೂ ಹೆಚ್ಚು ನೇಮಕಾತಿಗಳನ್ನು ಯೋಜಿಸಲಾಗಿದೆ. ಕಾರ್ಯಾಚರಣೆಯ ಲಾಭ 21%ಕ್ಕೆ ಏರಿಕೆಯಾಗಿದೆ.
ಭಾರತದ ಎರಡನೇ ಅತಿದೊಡ್ಡ, ಬೆಂಗಳೂರು ಮೂಲದ ಐಟಿ ಕಂಪೆನಿಯಾದ ಇನ್ಫೋಸಿಸ್ ಏಪ್ರಿಲ್ 17 ರ ಗುರುವಾರ ತನ್ನ FY25 ಹಣಕಾಸು ವರ್ಷದ ರ ನಾಲ್ಕನೇ ತ್ರೈಮಾಸಿಕ ವರದಿಯನ್ನು ಬಿಡುಗಡೆಗೊಳಿಸಿದೆ. ಇನ್ಫೋಸಿಸ್ ಲಿಮಿಟೆಡ್ ನ ನಿವ್ವಳ ಲಾಭವು ವರ್ಷದಿಂದ ವರ್ಷಕ್ಕೆ ಶೇ. 12 ರಷ್ಟು ಕುಸಿತ ಕಂಡು 7,033 ಕೋಟಿ ರೂ.ಗಳಿಗೆ ತಲುಪಿದೆ ಎಂದು ವರದಿಯಲ್ಲಿ ತಿಳಿಸಿದೆ. ಅಂದಾಜಿನ ಪ್ರಕಾರ 7,278 ಕೋಟಿ ರೂ.ಗಳಿಗಿಂತ ಕಡಿಮೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 7,969 ಕೋಟಿ ರೂ ಇತ್ತು.
ಟೈಯರ್ -1 ಐಟಿ ಸೇವೆಗಳ ಕಂಪನಿಯು 2025 ರ ತ್ರೈಮಾಸಿಕದ ನಾಲ್ಕನೇ ಹಣಕಾಸು ವರ್ಷದ ಆದಾಯ 40,925 ಕೋಟಿ ರೂ.ಗಳಿಗೆ ತಲುಪಿದೆ, ಇದು ಹಿಂದಿನ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ 37,923 ಕೋಟಿ ರೂ.ಗಳಿಗೆ ಹೋಲಿಸಿದರೆ 8% ಹೆಚ್ಚಾಗಿದೆ.
2025-26ರ ಹಣಕಾಸು ವರ್ಷದಲ್ಲಿ ಇನ್ಫೋಸಿಸ್ ಸ್ಥಿರ ಕರೆನ್ಸಿಯಲ್ಲಿ ಶೇಕಡಾ 0-3 ರ ವ್ಯಾಪ್ತಿಯಲ್ಲಿ ಆದಾಯದ ಬೆಳವಣಿಗೆ ಯೋಜನೆ ಮಾಡಿಕೊಂಡಿದೆ. ಜನವರಿಯಲ್ಲಿ ಇನ್ಫೋಸಿಸ್ ತನ್ನ ಸ್ಥಿರ ಕರೆನ್ಸಿ (CC) ಆದಾಯದ ಬೆಳವಣಿಗೆಯ ಮಾರ್ಗದರ್ಶನವನ್ನು ಹಣಕಾಸು ವರ್ಷ FY25 ಗಾಗಿ ಸತತ ಮೂರನೇ ತ್ರೈಮಾಸಿಕದಲ್ಲಿ 4.5-5% ಕ್ಕೆ ಏರಿಕೆ ಮಾಡಿತ್ತು. ಇದು ಅದರ ಹಿಂದಿನ 3.75-4.5% ರ ಯೋಜನೆ ವಿರುದ್ಧವಾಗಿತ್ತು.
ಬೆಂಗಳೂರು: ಇನ್ಫೋಸಿಸ್ ಉದ್ಯೋಗಿ, ಬೈಕ್ ಟ್ಯಾಕ್ಸಿ ಡ್ರೈವರ್ ಆದ ಕಥೆ!
ಇನ್ನು ಭಾರತದ ಎರಡನೇ ಅತಿದೊಡ್ಡ ಸಾಫ್ಟ್‌ವೇರ್ ಸೇವೆಗಳ ರಫ್ತುದಾರ ಇನ್ಫೋಸಿಸ್ ಲಿಮಿಟೆಡ್, ಮಾರ್ಚ್ ತ್ರೈಮಾಸಿಕದಲ್ಲಿ ಸ್ವಯಂಪ್ರೇರಿತ ಉದ್ಯೋಗಿಗಳ ಕಡಿತ ದರದಲ್ಲಿ (ಉದ್ಯೋಗಿಗಳ ರಾಜೀನಾಮೆ) ಸ್ವಲ್ಪ ಏರಿಕೆ ಕಂಡಿದೆ, ಆದರೆ ಒಟ್ಟು ಉದ್ಯೋಗಿಗಳ ಸಂಖ್ಯೆಯಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ. ಮಾರ್ಚ್ 31, 2025 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಉದ್ಯೋಗಿಗಳ ಕಡಿತವು 14.1% ಕ್ಕೆ ಏರಿದೆ, ಇದು ಹಿಂದಿನ ಮೂರು ತಿಂಗಳ ಅವಧಿಯಲ್ಲಿ 13.7% ರಷ್ಟಿತ್ತು. ಈ ಐಟಿ ಕಂಪನಿಗೆ 199 ಉದ್ಯೋಗಿಗಳ ಸೇರ್ಪಡೆಯಾಗಿದ್ದು, 40 ಬೇಸಿಸ್ ಪಾಯಿಂಟ್‌ಗಳ ಏರಿಕೆ ಯೊಂದಿಗೆ ಒಟ್ಟು ಸಿಬ್ಬಂದಿ ಸಂಖ್ಯೆ 323,578 ಕ್ಕೆ ತಲುಪಿದೆ.
ಕಂಪನಿಯು ಈ ತ್ರೈಮಾಸಿಕದಲ್ಲಿ ಸುಮಾರು 15,000 ಹೊಸಬರನ್ನು ನೇಮಿಸಿಕೊಂಡಿದೆ ಎಂದು ಹೇಳಿದೆ. ಆದರೂ ಮಧ್ಯಮ ಮತ್ತು ಹಿರಿಯ ಮಟ್ಟದಲ್ಲಿ ನಿವ್ವಳ ಉದ್ಯೋಗಿಗಳ ಕೊರತೆ ಇದೆ ಎಂದಿದೆ. FY26 ರಲ್ಲಿ 20,000ಕ್ಕೂ ಹೆಚ್ಚು ಹೊಸಬರನ್ನು ನೇಮಿಸಿಕೊಳ್ಳುವ ನಿರೀಕ್ಷೆಯಿದೆ. ಯೋಜಿಸಿದಂತೆ ಏಪ್ರಿಲ್‌ನಲ್ಲಿ ವೇತನ ಹೆಚ್ಚಳ ನೀಡಲಾಗುವುದು ಎಂದಿದೆ.
ಈ ತ್ರೈಮಾಸಿಕದ ಒಟ್ಟು ಆದಾಯವು 40,925 ಕೋಟಿ ರೂ. ಆಗಿದ್ದು, ಇದು ವರ್ಷಕ್ಕೆ ಹೋಲಿಸಿದರೆ ಶೇ. 7.9 ರಷ್ಟು ಹೆಚ್ಚಾಗಿದೆ. ವಿಶ್ಲೇಷಕರ ಅಂದಾಜಿನ ಪ್ರಕಾರ ಈ ತ್ರೈಮಾಸಿಕದ ಆದಾಯವು 42,133 ಕೋಟಿ ರೂ.ಗಳಿಗಿಂತ ಕಡಿಮೆ ಆಗಿದೆ. ಕಂಪನಿಯ ಲಾಭವು ಶೇಕಡಾ 3.3 ರಷ್ಟು ಏರಿಕೆಯಾಗಿದೆ ಎಂದು ಇಂದು ಬಿಡುಗಡೆ ಮಾಡಿರುವ ಕಂಪೆನಿಯ ತ್ರೈಮಾಸಿಕ ವರದಿಯಲ್ಲಿ ಉಲ್ಲೇಖಿಸಿದೆ. ನಾಲ್ಕನೇ ತ್ರೈಮಾಸಿಕದಲ್ಲಿ Q4 ಫಲಿತಾಂಶಗಳಿಗೆ ಮುಂಚಿತವಾಗಿ, ಇನ್ಫೋಸಿಸ್ ಷೇರುಗಳು ಶೇಕಡಾ 1 ಕ್ಕಿಂತ ಹೆಚ್ಚು ಏರಿಕೆಯಾಗಿ 1,427.7 ಕ್ಕೆ ವಹಿವಾಟು ಮುಕ್ತಾಯಗೊಳಿಸಿತು.
ಕರ್ನಾಟಕದಲ್ಲಿ ಐಟಿ ಉದ್ಯಮ ಮಹಾಕುಸಿತ, 2025 ಅಲ್ಲಿ ಕೇವಲ 212 ಕಂಪನಿ ಸ್ಟಾರ್ಟ್, 440 ಕಂಪನಿ ಕ್ಲೋಸ್!
ಸ್ಥಿರ ಕರೆನ್ಸಿ ಪರಿಭಾಷೆಯಲ್ಲಿ, ಟಾಪ್‌ಲೈನ್ ವರ್ಷದಿಂದ ವರ್ಷಕ್ಕೆ ಶೇ. 4.2 ರಷ್ಟು ಬೆಳೆದಿದೆ. EBIT (ಬಡ್ಡಿ ಮತ್ತು ತೆರಿಗೆಗೆ ಮುನ್ನ ಗಳಿಕೆ) ಮಾರ್ಜಿನ್ ಅಥವಾ ಕಾರ್ಯಾಚರಣೆಯ ಮಾರ್ಜಿನ್ 90 ಬೇಸಿಸ್ ಪಾಯಿಂಟ್‌ಗಳಿಂದ (bps) 21 ಪ್ರತಿಶತಕ್ಕೆ ಹೆಚ್ಚಳವಾಗಿ, ಇದು 20.7 ಪ್ರತಿಶತದ ಒಟ್ಟು ಅಂದಾಜುಗಳನ್ನು ಮೀರಿದೆ. ಜನವರಿ ಮತ್ತು ಏಪ್ರಿಲ್‌ನಲ್ಲಿ ಭಾಗಶಃ ಬೋನಸ್ ವೇತನ ಮತ್ತು ವೇತನ ಹೆಚ್ಚಳದಿಂದ ಮಾರ್ಜಿನ್‌ಗಳು ಸ್ವಲ್ಪ ಮಟ್ಟಿಗೆ ಪರಿಣಾಮ ಬೀರಿವೆ.
ಕಂಪನಿಯು ತನ್ನ ಕಾರ್ಯಾಚರಣೆಯ ಲಾಭದ ಮಾರ್ಗದರ್ಶನವನ್ನು ಶೇಕಡಾ 20-22 ರಷ್ಟು ಉಳಿಸಿಕೊಂಡಿದೆ. 2024 ರ ಹಣಕಾಸು ವರ್ಷದದಲ್ಲಿ, ಆದಾಯವು ಶೇ. 6.1 ರಷ್ಟು ಅಂದರೆ ಶೇ. 1,62,990 ಕೋಟಿಗೆ ಹೆಚ್ಚಳವಾಗಿದೆ. ವರ್ಷದ ನಿವ್ವಳ ಲಾಭ ಶೇ. 1.9 ರಷ್ಟು ಹೆಚ್ಚಾಗಿ ರೂ. 26,750 ಕೋಟಿಗೆ ತಲುಪಿದೆ. ವರ್ಷದ ಕಾರ್ಯಾಚರಣೆಯ ಲಾಭವು ಶೇ. 21.1 ರಷ್ಟಿದ್ದು, 40 ಬಿಪಿಎಸ್ ಏರಿಕೆಯಾಗಿದೆ.
