userpic
user icon
0 Min read

ಅಪ್ಪನೇ ದೃಷ್ಟಿ ಹಾಕೋ ಥರ ದುಡ್ಡು ಗಳಿಸ್ತಿರೋ 'ಬಂಗಾಳದ ಹುಲಿ' ಸೌರವ್‌ ಗಂಗೂಲಿಯ ಏಕೈಕ ಮಗಳು!

cricketer sourav ganguly daughter sana company income

Synopsis

ಸೌರವ್‌ ಗಂಗೂಲಿ ಅಷೆಲ್ಲ ಹೆಸರು ಮಾಡಿದ್ದರೂ ಕೂಡ, ಈಗ ಇವರಿಗೆ ಸೆಡ್ಡು ಹೊಡೆಯುವಂತೆ ಮಗಳು ಸನಾ ಕಾರ್ಪೋರೇಟ್‌ ಕ್ಷೇತ್ರದಲ್ಲಿ ಬೆಳಗುತ್ತಿದ್ದಾರೆ. ಅಂದಹಾಗೆ ಇವರಿಗೆ ಸಿಗುತ್ತಿರುವ ಸಂಬಳ ಎಷ್ಟು? 
 

ಸೌರವ್ ಗಂಗೂಲಿ ಎಂದೇ ಕ್ರಿಕೆಟ್‌ ಲೋಕದಲ್ಲಿ ಜನಪ್ರಿಯತೆ ಪಡೆದಿರುವ ಈ ಕ್ರಿಕೆಟಿಗ ಈಗ ಮಗಳ ಬೆಳವಣಿಗೆ ನೋಡಿ ಇನ್ನಷ್ಟು ಖುಷಿಯಾಗಿದ್ದಾರೆ. ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ ಸೌರವ್‌ ಈಗ ನಿವೃತ್ತಿ ಬದುಕನ್ನು ಸವಿಯುತ್ತಿದ್ದಾರೆ. 'ಭಾರತೀಯ ಕ್ರಿಕೆಟ್‌ನ ಮಹಾರಾಜ', 'ಬಂಗಾಳದ ಹುಲಿ', 'ದಾದಾ' ಎಂದು ಇವರನ್ನು ಕರೆಯುತ್ತಾರೆ. ಸೌರವ್ ಗಂಗೂಲಿಯವರು ಭಾರತೀಯ ಕ್ರಿಕೆಟ್‌ಗೆ ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಮತ್ತೆ ಹೇಳುವ ಅವಶ್ಯಕತ ಇಲ್ಲ. ಈ ಎಡಗೈ ಬ್ಯಾಟ್ಸ್‌ಮನ್ 113 ಟೆಸ್ಟ್ ಪಂದ್ಯಗಳಲ್ಲಿ 7,212 ರನ್‌ಗಳನ್ನು, 311 ಏಕದಿನ ಪಂದ್ಯಗಳಲ್ಲಿ 11,363 ರನ್‌ಗಳನ್ನು ಗಳಿಸಿದ್ದಾಗ ಎಷ್ಟು ಖುಷಿಪಟ್ಟಿದ್ದರೋ ಗೊತ್ತಿಲ್ಲ. ಆದರೆ ಇವರ ನಾಯಕತ್ವದಲ್ಲಿ ಭಾರತವು 2002ರ ಐಸಿಸಿ ಚಾಂಪಿಯನ್ಸ್ ಟ್ರೋಫಿ, 2004ರ ಏಷ್ಯಾ ಕಪ್ ಗೆದ್ದಿತು. ಅದೇ ರೀತಿ ಈಗ ಮಗಳ ಸಾಧನೆ ನೋಡಿ ಇವರು ಸಿಕ್ಕಾಪಟ್ಟೆ ಖುಷಿಯಾಗಿ ಸಂದರ್ಶನಗಳಲ್ಲಿ ಮಾತನಾಡುತ್ತಿದ್ದಾರೆ. 

ಏಕೈಕ ಮಗಳು ಸನಾ!
1997ರ ಫೆಬ್ರವರಿಯಲ್ಲಿ ಸೌರವ್ ಗಂಗೂಲಿಯವರು ಬಾಲ್ಯ ಸ್ನೇಹಿತೆ ಡೋನಾ ರಾಯ್ ಅವರನ್ನು ವಿವಾಹವಾಗಿದ್ದಾರೆ. 2001ರ ನವೆಂಬರ್ 3ರಂದು ಸೌರವ್‌ ಅವರು ಹೆಣ್ಣುಮಗುವಿನ ತಂದೆಯಾದರು. ಸೌರವ್, ಡೋನಾ ತಮ್ಮ ಮಗಳಿಗೆ 'ಸನಾ' ಎಂದು ಹೆಸರಿಟ್ಟರು. ಈಗ ಸನಾ ಬೆಳೆದು ಕಾರ್ಪೊರೇಟ್ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿದ್ದಾರೆ.

ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮ ಪತ್ನಿ ಬಗ್ಗೆ ಹೀಗೆ ಹೇಳಿದ್ರಾ ದಾದಾ ಸೌರವ್‌ ಗಂಗೂಲಿ?

ವಿದೇಶದಲ್ಲಿ ಶಿಕ್ಷಣ ಪಡೆದರು! 
ಸೌರವ್ ಗಂಗೂಲಿ, ಅವರ ಪತ್ನಿ ಡೋನಾ ರಾಯ್ ತಮ್ಮ ಮಗಳು ಸನಾ ಗಂಗೂಲಿಯನ್ನು ಸದಾ ಕೊಂಡಾಡುತ್ತಿರುತ್ತಾರೆ. ಈಗಾಗಲೇ ಅನೇಕ ಸಂದರ್ಶನಗಳಲ್ಲಿ ಸೌರವ್‌ ಅವರು ಮಗಳನ್ನು ಹೊಗಳುವುದನ್ನು ಪದೇ ಪದೇ ನೋಡಲಾಗುತ್ತದೆ. ಸನಾ ಅವರು ಕೋಲ್ಕತ್ತಾದ ಪ್ರಸಿದ್ಧ ಶಾಲೆಗಳಾದ ಲಾ ಮಾರ್ಟಿನಿಯರ್ ಫಾರ್ ಗರ್ಲ್ಸ್, ಲೊರೆಟೊ ಹೌಸ್ ಶಾಲೆಯಲ್ಲಿ ತನ್ನ ಶಿಕ್ಷಣವನ್ನು ಪೂರ್ಣಗೊಳಿಸಿದ್ದರು. ಶಾಲಾ ಶಿಕ್ಷಣ ಮುಗಿಸಿದ ನಂತರ, ಸನಾ ಲಂಡನ್‌ಗೆ ತೆರಳಿ ಯೂನಿವರ್ಸಿಟಿ ಕಾಲೇಜ್ ಲಂಡನ್‌ನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದರು.
ಲಂಡನ್‌ನಲ್ಲಿದ್ದಾಗ, ಅವರು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸೇಂಟ್ ಆನ್ಸ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ಕೋರ್ಸ್ ಸಹ ಪಡೆದರು. ಇದು ಮಾತ್ರವಲ್ಲದೆ, ಅವರು ಎವರ್‌ಕೋರ್‌ನಲ್ಲಿ ಸ್ಪ್ರಿಂಗ್ ಇಂಟರ್ನ್‌ಶಿಪ್ ಸಹ ಮಾಡಿದರು. 

ಪ್ರಸಿದ್ಧ ಕಂಪೆನಿಗಳಲ್ಲಿ ಕೆಲಸ
ಫೈನಾನ್ಷಿಯಲ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ಸನಾ ಕೆಪಿಎಂಜಿ, ಗೋಲ್ಡ್‌ಮನ್ ಸ್ಯಾಚ್ಸ್, ಬಾರ್ಕ್ಲೇಸ್, ಐಸಿಐಸಿಐ, ಎಚ್‌ಎಸ್‌ಬಿಸಿ ಸೇರಿದಂತೆ ಹಲವಾರು ಪ್ರಸಿದ್ಧ ಕಂಪನಿಗಳೊಂದಿಗೆ ಕೆಲಸ ಮಾಡಿದ್ದಾರೆ. ಹಲವು ಇಂಟರ್ನ್‌ಶಿಪ್‌ಗಳ ನಂತರ, ಸನಾ ಎನಾಕ್ಟಸ್‌ನಲ್ಲಿ ಕಾರ್ಯನಿರ್ವಾಹಕರಾಗಿ ಕೆಲಸ ಮಾಡಲು ಸೇರಿದರು, ಇದು ಅವರ ಮೊದಲ ಫುಲ್‌ ಟೈಮ್ ಕೆಲಸ ಎಂದು ವರದಿಯಾಗಿದೆ.

ಟೀಮ್‌ ಇಂಡಿಯಾ ಕೋಚ್‌ ಸ್ಥಾನಕ್ಕೆ ಗೌತಮ್‌ ಗಂಭೀರ್‌, ವಿರೋಧಿಸಿ ಟ್ವೀಟ್‌ ಮಾಡಿದ್ರಾ ಸೌರವ್‌ ಗಂಗೂಲಿ?

ಪ್ರಸ್ತುತ ಏನು ಕೆಲಸ ಮಾಡುತ್ತಿದ್ದಾರೆ? 
ಎನಾಕ್ಟಸ್‌ನಲ್ಲಿ 1 ವರ್ಷಕ್ಕೂ ಹೆಚ್ಚು ಕಾಲ ಕೆಲಸ ಮಾಡಿದ ನಂತರ, ಸನಾ ಅವರು ಐಸಿಐಸಿಐನಲ್ಲಿ ಹಣಕಾಸು ವಿಶ್ಲೇಷಕರಾಗಿ‌ ಕೆಲಸಕ್ಕೆ ಸೇರಿದರು. ಸನಾ ಐಸಿಐಸಿಐನಲ್ಲಿ ಕೇವಲ 5 ತಿಂಗಳುಗಳ ಕಾಲ ಇದ್ದರು, ನಂತರ ಅವರು ಲಂಡನ್‌ನ ಯೂನಿವರ್ಸಿಟಿ ಕಾಲೇಜಿನಲ್ಲಿ ಸಂಶೋಧಕರಾಗಿ ಇಂಟರ್ನ್‌ಶಿಪ್ ಮಾಡಿದರು. ನಂತರದ ಉದ್ಯಮ ಜಗತ್ತಿನ ಹಲವಾರು ದೊಡ್ಡ ಶಾರ್ಕ್‌ಗಳೊಂದಿಗೆ ಕೆಲಸ ಮಾಡಿದರು. ಸನಾ ಪ್ರಸ್ತುತ INNOVERV ಕಂಪೆನಿಯಲ್ಲಿ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ.

ಆಗ ಸಿಗುತ್ತಿದ್ದ ಸಂಬಳ ಎಷ್ಟು? 
ಇನ್ನು ಸನಾ ಗಂಗೂಲಿ PWC ( 20 LPA - ರೂ. 30 LPA ), ಡೆಲಾಯ್ಟ್‌ನಲ್ಲಿ ( 5 LPA ನಿಂದ ರೂ. 12 LPA ವರೆಗೆ ) ಇಂಟರ್ನ್‌ಶಿಪ್ ಮಾಡಿದ್ದಾರೆ, ಅವರ ಇಂಟರ್ನ್‌ಶಿಪ್ ಪ್ಯಾಕೇಜ್‌ಗಳು ಲಕ್ಷಗಟ್ಟಲೇ ಇರುತ್ತವೆ. ಈ ಹಿಂದೆ ಅಂತಹ ಗೌರವಾನ್ವಿತ ಸಂಸ್ಥೆಯಲ್ಲಿ ಕೆಲಸ ಮಾಡಿದ್ದು, ಪ್ರಸ್ತುತ INNOVERV ನಂತಹ ಪ್ರಸಿದ್ಧ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಸನಾ ಚಿಕ್ಕ ವಯಸ್ಸಿನಲ್ಲಿ ಲಕ್ಷ ಗಳಿಸುತ್ತಿರಬೇಕು ಎಂದು ಕೆಲವು ಮಾಧ್ಯಮಗಳು ಭವಿಷ್ಯ ನುಡಿದಿವೆ.

ದೊಡ್ಡ ಕ್ರಿಕೆಟಿಗನ ಮಗಳಾಗಿದ್ದರೂ, ಸನಾ ಗಂಗೂಲಿ ಮಾತ್ರ ಖಾಸಗಿಯಾಗಿ ಜೀವನ ನಡೆಸುತ್ತಿದ್ದಾರೆ. ತಂದೆಯ ಜನಪ್ರಿಯತೆಯಿಂದ, ಸನಾ ಅವರನ್ನು 'ಕೋಲ್ಕತ್ತಾದ ರಾಜಕುಮಾರಿ' ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಸನಾ ಅವರ ತಾಯಿ ಡೋನಾ ಕೂಡ ತರಬೇತಿ ಪಡೆದ ಒಡಿಸ್ಸಿ ಡ್ಯಾನ್ಸರ್‌ ಕೂಡ ಹೌದು.

Download App

Latest Videos