ಮುಂಬೈನಲ್ಲಿ 2ಬಿಹೆಚ್‌ಕೆ ಫ್ಲಾಟ್‌ನ ಒಂದು ಕೋಣೆಗೆ ೫೨,೦೦೦ ರೂ. ಬಾಡಿಗೆ ಕೇಳಿದ ಯುವತಿಯ ಪೋಸ್ಟ್ ವೈರಲ್ ಆಗಿದೆ. ಫ್ಲಾಟ್ ಜಿಮ್, ಜಾಗಿಂಗ್ ಟ್ರ್ಯಾಕ್ ಮುಂತಾದ ಸೌಲಭ್ಯಗಳನ್ನು ಹೊಂದಿದ್ದರೂ, ಬಾಡಿಗೆ ಅತಿಯಾಗಿದೆ ಎಂದು ನೆಟ್ಟಿಗರು ಟೀಕಿಸಿದ್ದಾರೆ. ಇಡೀ ಫ್ಲಾಟ್‌ನ ಬಾಡಿಗೆ ೧ ಲಕ್ಷ ರೂ. ಎಂದು ಯುವತಿ ಸ್ಪಷ್ಟಪಡಿಸಿದ್ದಾಳೆ.
ಇತ್ತೀಚಿನ ದಿನಗಳಲ್ಲಿ ಮನೆ, ಫ್ಲ್ಯಾಟ್ ಅಥವಾ ಸಿಂಗಲ್ ವಿಲ್ಲಾಗಳ ಬಾಡಿಗೆ ದರಗಳು ತುಂಬಾ ಹೆಚ್ಚಾಗಿವೆ. ಅದರಲ್ಲಿಯೂ ದೆಹಲಿ, ಮುಂಬೈ, ಬೆಂಗಳೂರು ನಗರಗಳಲ್ಲಿ ಬಾಡಿಗೆ ಕಟ್ಟುವುದಕ್ಕೆ ದುಡಿಮೆಯ ಅರ್ಧ ಹಣ ಪಾವತಿ ಮಾಡಬೇಕಾದ ಸ್ಥಿತಿಯೂ ಇದೆ. ಅಂಥದ್ದರಲ್ಲಿ ಇಲ್ಲೊಬ್ಬ ಯುವತಿ ತನ್ನ 2ಬಿಹೆಚ್‌ಕೆ ಮನೆಯಲ್ಲಿ ಒಂದು ಬೆಡ್ ರೂಮ್ ಅನ್ನು ಶೇರ್ ಮಾಡುತ್ತೇನೆ. ಯಾರಾದರೂ ಬಾಡಿಗೆ ಬರುವವರಿದ್ದರೆ 1ಬಿಹೆಚ್‌ಕೆ ರೂಮಿಗೆ 52 ಸಾವಿರ ರೂ. ಬಾಡಿಗೆ ಕೊಡಬೇಕು ಎಂದು ಷರತ್ತು ಹಾಕಿದ್ದಾಳೆ. ಇದನ್ನು ನೋಡಿದ ನೆಟ್ಟಿಗರು ಯುವತಿಗೆ ಛೀಮಾರಿ ಹಾಕಿದ್ದಾರೆ.
ಹೌದು, ಈ ಘಟನೆ ನಡೆದಿರುವುದು ಮುಂಬೈ ನಗರದಲ್ಲಿ. ಭಾರತದ ಅತ್ಯಂತ ದುಬಾರಿ ನಗರಗಳಲ್ಲಿ ಒಂದಾಗಿರುವ ಮುಂಬೈ ನಗರದ ಜೀವನ ವೆಚ್ಚ ದಿನೇ ದಿನೇ ಸಾಮಾನ್ಯ ಜನರ ಕೈಗೆಟುಕದೇ ದುಬಾರಿ ಆಗುತ್ತಿದೆ. ಮುಂಬೈನಲ್ಲಿ ಸಣ್ಣ ಮನೆ, ರೂಮು, ಫ್ಲಾಟ್‌ಗಳ ಬಾಡಿಗೆ ಗಗನಕ್ಕೇರುತ್ತಿವೆ. ಇದರ ನಡುಇವೆ ಇತ್ತೀಚೆಗೆ ಫ್ಲಾಟ್ ಬಾಡಿಗೆಗೆ ಸಂಬಂಧಿಸಿದಂತೆ X ನಲ್ಲಿ ಪೋಸ್ಟ್ ವೈರಲ್ ಆಗಿದ್ದು, ಇದು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. ಮುಂಬೈನ ಪರೇಲ್ ಪ್ರದೇಶದ 2BHK ಫ್ಲಾಟ್‌ನಲ್ಲಿ ಮಾಸ್ಟರ್ ಬೆಡ್‌ರೂಮ್‌ಗಾಗಿ ರೂಮ್‌ಮೇಟ್ ಅನ್ನು ಹುಡುಕುವ ಬಗ್ಗೆ ಮಹಿಳೆಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ. ಈ ಕೋಣೆಯ ಮಾಸಿಕ ಬಾಡಿಗೆ 52 ಸಾವಿರ ರೂ. ಎಂದು ಅವರು ಬರೆದಿದ್ದಾರೆ.
1 ಮಲಗುವ ಕೋಣೆಗೆ 52 ಸಾವಿರ ಬಾಡಿಗೆ?
ಓಹ್ಶಿನ್ ಭಟ್ ಎಂಬ ಈ ಮಾಜಿ ಬಳಕೆದಾರ ಪೋಸ್ಟ್‌ನಲ್ಲಿ ಫ್ಲಾಟ್‌ನ ಕೆಲವು ಚಿತ್ರಗಳನ್ನು ಸಹ ಹಂಚಿಕೊಂಡಿದ್ದರು. ಈ ಅಪಾರ್ಟ್‌ಮೆಂಟ್ ಉತ್ತಮ ವಾತಾವರಣ ಹೊಂದಿದ್ದು, ಜಿಮ್, ಜಾಗಿಂಗ್ ಟ್ರ್ಯಾಕ್ ಮತ್ತು ಅನೇಕ ಉತ್ತಮ ಸೌಲಭ್ಯಗಳನ್ನು ಹೊಂದಿದೆ. ಆದರೆ ಬಳಕೆದಾರರು ಈ ಫ್ಲಾಟ್ ಬೆಲೆ ತುಂಬಾ ಹೆಚ್ಚಾಗಿದೆ ಎಂದು ಬರೆದಿದ್ದಾರೆ. ಅವರ ಟ್ವಿಟರ್ ಪೋಸ್ಟ್ ವೈರಲ್ ಆದ ತಕ್ಷಣ, ಜನರು ಮೊದಲು ಅವರು ಇಡೀ ಫ್ಲಾಟ್‌ನ ಬಾಡಿಗೆಯನ್ನು ಬರೆದಿರಬಹುದು ಎಂದು ಭಾವಿಸಿದ್ದರು. ಆದರೆ ಕೆಲವರು ಕಾಮೆಂಟ್‌ಗಳಲ್ಲಿ ಕೇಳಿದಾಗ, ಅವರು ಇಡೀ ಫ್ಲಾಟ್‌ನ ಬಾಡಿಗೆ 1 ಲಕ್ಷ ರೂ. ಆಗಿದೆ. ನಾನು ಹೇಳುತ್ತಿರುವ ಒಂದು ಕೋಣೆಯ ಬಾಡಿಗೆ 52 ಸಾವಿರ ರೂ. ಎಂದು ಬಾಡಿಗೆ ದರವನ್ನು ಹೇಳಿದ್ದಾರೆ.
ಇದನ್ನೂ ಓದಿ: ಬಾಸ್‌ಗೆ ನಿನ್ನ ಫುಲ್ ಫಿಗರ್ ಫೋಟೋ ಕಳ್ಸು, ಕಂಪನಿ HR ಚಾಟ್ ಬಹಿರಂಗಪಡಿಸಿದ ಯುವತಿ
ಯುವತಿಯ ಪೋಸ್ಟ್‌ನಲ್ಲಿ ತೋರಿಸಲಾದ ಫೋಟೋದ ಪ್ರಕಾರ ಫ್ಲಾಟ್ ಎತ್ತರದ ಮಹಡಿಯಲ್ಲಿದೆ. ಇದರಿಂದಾಗಿ ನೋಟವೂ ಅದ್ಭುತವಾಗಿದೆ. ರೂಮ್‌ಮೇಟ್‌ನ ವಯಸ್ಸು 20 ರಿಂದ 25 ವರ್ಷಗಳ ನಡುವೆ ಇರಬೇಕು ಎಂದು ಬರೆದುಕೊಂಡಿದ್ದಾಳೆ. ಆದರೆ, ನೆಟ್ಟಿಗರ ಗಮನ ನೇರವಾಗಿ ಫ್ಲಾಟ್‌ನ ಬಾಡಿಗೆಯತ್ತ ಹೋಯಿತು. ಕೇವಲ ಒಂದು ಮಲಗುವ ಕೋಣೆಗೆ ಇಷ್ಟೊಂದು ಬಾಡಿಗೆ ನೋಡಿ ಸಾಮಾಜಿಕ ಮಾಧ್ಯಮದಲ್ಲಿರುವ ಜನರು ಬೆರಗಾದರು. ಇನ್ನು ಕೆಲವರು ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ಕಟ್ಟಿ ಯಾರು ತಾನೇ ವಾಸ ಮಾಡುತ್ತಾರೆ. ನಿಮಗೆ ಪೇರ್ ಸಿಗುವುದಿಲ್ಲ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಯುವತಿ ಬರೆದ ಪೋಸ್ಟ್ ಇಲ್ಲಿದೆ ನೋಡಿ..
ಹೇ ಹುಡುಗರೇ, ನಾನು ಪ್ಯಾರೆಲ್‌ನಲ್ಲಿ 2bhk ನಲ್ಲಿ ನನ್ನ ಜೊತೆ ಸೇರಲು ಒಬ್ಬ ಮಹಿಳಾ ಫ್ಲಾಟ್‌ಮೇಟ್‌ನನ್ನು ಹುಡುಕುತ್ತಿದ್ದೇನೆ. ಇದು ಅಲಂಕಾರವಿಲ್ಲದ ಮಾಸ್ಟರ್ ಬೆಡ್‌ರೂಮ್ ಮತ್ತು ಬಾಡಿಗೆ 52k ಆಗಿದೆ. ಜಿಮ್, ಜಾಗಿಂಗ್ ಟ್ರ್ಯಾಕ್ ಮತ್ತು ಉತ್ತಮ ಸೌಕರ್ಯಗಳ ಸೌಲಭ್ಯವುದೆ. ಇದು ಎತ್ತರದ ಮಹಡಿಯಾಗಿರುವುದರಿಂದ ನೋಟವು ಉಸಿರುಕಟ್ಟುವಂತಿದೆ. 20-25 ವರ್ಷ ವಯಸ್ಸಿನವರಿಗೆ ಇದು ಉತ್ತಮ ಆಯ್ಕೆಯಾಗಿದೆ' ಎಂದು ಯುವತಿ ಓಶಿನ್ ಭಟ್ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಮೆಟ್ರೋ ರೈಲಿನಲ್ಲಿ ತಬಲ ಬಾರಿಸುತ್ತಾ ಭರ್ಜರಿ ಭಜನೆ ಮಾಡಿದ ಮಹಿಳೆಯರು
ಈ ಪೋಸ್ಟ್‌ಗೆ ತರಹೇವಾರಿ ಕಾಮೆಂಟ್‌ಗಳು ಬಂದಿವೆ. 'ಮುಂಬೈನಲ್ಲಿ ವಾಸಿಸುವುದು ಈಗ ಹುಚ್ಚುತನದಂತೆ ಮಾರ್ಪಟ್ಟಿದೆ' ಎಂದು ಕಾಮೆಂಟ್ ಬರೆದಿದ್ದಾರೆ. ಇಷ್ಟು ಹಣಕ್ಕೆ ನೀವು ಗಾಜಿಯಾಬಾದ್‌ನಲ್ಲಿ ಇಡೀ ಫ್ಲಾಟ್ ಪಡೆಯಬಹುದು, ಮತ್ತು ಅದು ಕೂಡ ತುಂಬಾ ಒಳ್ಳೆಯ ಫ್ಲಾಟ್ ಎಂದಿದ್ದಾರೆ. ಮತ್ತೊಬ್ಬ ಬಳಕೆದಾರರು, '52 ಸಾವಿರ ತುಂಬಾ ಹೆಚ್ಚಾಯಿತು' ಎಂದು ಕಾಮೆಂಟ್ ಮಾಡಿದ್ದಾರೆ. ನಾನು ಇಲ್ಲಿಯವರೆಗೆ ಪಾವತಿಸಿರುವ ಗರಿಷ್ಠ ಮೊತ್ತ 2BHKಗೆ 14,000 ರೂ. ಇದು ತುಂಬಾ ದುಬಾರಿಯಾಗಿದೆ. ನಿಮ್ಮಂತಹ ಜನರಿಗೆ ನನ್ನ ನಮನಗಳು ಎಂದು ಕೈಮುಗಿಸಿದ್ದಾರೆ. ಮೂರನೇ ಬಳಕೆದಾರರು, 'ಲಕ್ನೋದಲ್ಲಿ ಅಂತಹ ಫ್ಲಾಟ್‌ನ ಬಾಡಿಗೆ ಕೇವಲ 10-12 ಸಾವಿರ ರೂ. ಮತ್ತು ಜಿಮ್, ಪಾರ್ಕಿಂಗ್‌ನಂತಹ ಸೌಲಭ್ಯಗಳು ಸಹ ಅಲ್ಲಿ ಲಭ್ಯವಿದೆ' ಎಂದು ಹೇಳಿದರು. ಮುಂಬೈನ ದರಗಳು ಊಹಿಸಲೂ ಸಾಧ್ಯವಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
