ಬಾಸ್ ಜೊತೆ ಪ್ರವಾಸದಲ್ಲಿ ಫುಲ್ ಎಂಜಾಯ್, ಈಗ ನಿನ್ನ ಫುಲ್ ಸೈಝ್ ಫೋಟೋ ಒಂದು ಕಳುಹಿಸು. ಬಾಸ್‌ ನಿನ್ನ ಪ್ರೊಫೈಲ್ ಫಿಗರ್ ತೋರಿಸಬೇಕಿದೆ. ಇದು ಯುವತಿ ಜೊತೆ ಕಂಪನಿಯ ಹೆಚ್ಆರ್ ನಡೆಸಿದ ವ್ಯಾಟ್ಸಾಪ್ ಚಾಟ್. ಕಂಪನಿಯ ಇನ್ನೊಂದು ಮುಖವನ್ನು ಯವತಿ ಬಹಿರಂಗಪಡಿಸಿದ್ದಾಳೆ.

ನೋಯ್ಡಾ(ಏ.17) ಕಂಪನಿಯ ನೇಮಕಾತಿ, ಅದರ ಹಿಂದಿನ ಉದ್ದೇಶ ಎಲ್ಲವೂ ಒಂದು ವ್ಯಾಟ್ಸಾಪ್ ಚಾಟ್‌ನಿಂದ ಬಟಾ ಬಯಲಾಗಿದೆ. ನೋಯ್ಡಾದ ಕಂಪನಿ ಕಂಪನಿಯ ಬಾಸ್‌ಗೆ ಪರ್ಸನಲ್ ಅಸಿಸ್ಟೆಂಟ್ ಕೆಲಸಕ್ಕೆ ಅರ್ಜಿ ಅಹ್ವಾನಿಸಿತ್ತು. ಹಲವರು ಈ ಹುದ್ದಗೆ ರೆಸ್ಯೂಮ್ ಕಳುಹಿಸಿದ್ದಾರೆ. ಈ ಪೈಕಿ ಯುವತಿ ರೆಸ್ಯೂಮ್ ಒಕೆ ಮಾಡಿ ಕರೆ ಮಾಡಿದ್ದಾರೆ. ನೇರ ಸಂದರ್ಶನಕ್ಕೂ ಮೊದಲು ಯುವತಿಗೆ ಕರೆ ಮಾಡಿದ್ದಾರೆ. ಬಳಿಕ ಹೆಚ್ಆರ್‌ ಮೆಸೇಜ್ ಮೂಲಕ ಸ್ಯಾಲರಿ ಸೇರಿದಂತೆ ಇತರ ವಿಚಾರಗಳನ್ನು ಚರ್ಚಿಸಿದ್ದಾರೆ. ಆದರೆ ಇದೇ ಚಾಟ್ ಸಡನ್ ಯೂಟರ್ನ್ ಪಡದಿದೆ. ಇದೀಗ ಈ ವ್ಯಾಟ್ಸಾಪ್ ಚಾಟ್‌ನ್ನು ಯುವತಿ ಬಹಿರಂಗಪಡಿಸಿದ್ದಾಳೆ. ಈ ಮೂಲಕ ಕಂಪನಿಯ ಇನ್ನೊಂದು ಮುಖ ಬಯಲಾಗಿದೆ.

ನೋಯ್ಡಾ ಕಂಪನಿಯ ಕರ್ಮಕಾಂಡ
ನೋಯ್ಡಾ ಕಂಪನಿಯ ಉದ್ಯೋಗ ಜಾಹೀರಾತು ನೋಡಿ ರೆಸ್ಯೂಮ್ ಕಳುಹಿಸಿದ ಯುವತಿಗೆ ಕರೆ ಬಂದಿದೆ. ಕಂಪನಿಯ ಹೆಚ್ಆರ್ ಸಂದರ್ಶನ ಹೆಸರಿನಲ್ಲಿ ಕರೆ ಮಾಡಿದ್ದಾರೆ. ಬಳಿಕ ವ್ಯಾಟ್ಸಾಪ್ ಮೂಲಕ ಚಾಟ್ ಆರಂಭಿಸಿದ್ದಾರೆ. ಹೆಚ್ಆರ್ ಮೊದಲು ಕೇಳಿದ ಪ್ರಶ್ನೆ ಮದುವೆಯಾಗಿದೆಯಾ? ಇಲ್ಲ ಎಂದು ಉತ್ತರ ಆರಂಭಿಸಿದ ಯುವತಿಗೆ ಆರಂಭದಲ್ಲೇ ಕಸಿವಿಸಿ ಆಗಿತ್ತು. ಆದರೂ ಸಾವರಿಸಿಕೊಂಡು ಕೆಲಸ ಪ್ರಶ್ನೆಗೆ ಉತ್ತರಿಸಿದ್ದಾಳೆ.

ಟಾಯ್ಲೆಟ್ ಪೇಪರ್‌ನಲ್ಲಿ ರಿಸಿಗ್ನೇಶನ್ ಲೆಟರ್, ಒಂದೇ ವಾಕ್ಯದಲ್ಲಿ ಕಂಪನಿ ಜನ್ಮಜಾಲಾಡಿದ ಉದ್ಯೋಗಿ

ವ್ಯಾಟ್ಸಾಪ್ ಚಾಟ್‌ ಕಂಪನಿ ಮುಖ ಬಯಲು
ವ್ಯಾಟ್ಸಾಪ್ ಮೂಲಕ ಕಂಪನಿ ಕೆಲಸದ ಮಾಹಿತಿ, ತಿಂಗಳ ಸಂಬಳ ಕುರಿತು ಒಂದೆರೆಡು ಮೆಸೇಜ್ ಹಾಕಿದ್ದಾರೆ. ಹೀಗಾಗಿ ಯುವತಿ ಕೂಡ ಪ್ರತಿಕ್ರಿಯಿಸಿದ್ದಾರೆ. ನೀವು ಹೇಳುತ್ತಿರುವ ಸಂಬಳ ಕೈಗೆ ಸಿಗುವ ಸಂಬಳವೇ ಎಂದು ಪ್ರಶ್ನಿಸಿದ್ದಾಳೆ. ಇಷ್ಟೇ ಅಲ್ಲ ಮತ್ತೆ ಕಡಿಮೆ ಮಾಡುವ ಸಾಧ್ಯತೆ ಇದೆಯಾ ಎಂದು ಕೇಳಿದ್ದಾರೆ. ಆದರೆ ಈ ಪ್ರಶ್ನೆ ಉತ್ತರ ನಡುವೆ ವ್ಯಾಟ್ಸಾಪ್ ಚಾಟ್ ಬೇರೊಂದು ದಿಕ್ಕಿದೆ ತಿರುಗಿದೆ. ನಿನ್ನ ಫುಲ್ ಸೈಜ್ ಫೋಟೋ ಕಳುಹಿಸುವಂತೆ ಸೂಚಿಸಿದ್ದಾರೆ. 

ಇದು ಸಾಧ್ಯವಿಲ್ಲ.ನನ್ನ ಪಾಸ್‌ಪೋರ್ಟ್ ಸೈಝ್ ಫೋಟೋ ಸೇರಿದಂತೆ ಇತರ ಮಾಹಿತಿಗಳನ್ನು ಕಳುಹಿಸುತ್ತೇನೆ ಎಂದು ಯುವತಿ ಉತ್ತರ ನೀಡಿದ್ದಾಳೆ. ನಿಮ್ಮ ಇನ್‌ಸ್ಟಾ ಪ್ರೊಫೈಲ್ ಕಳುಹಿಸಿ. ಪರ್ಸನಲ್ ಅಸಿಸ್ಟೆಂಟ್ ಕೆಲಸಕ್ಕೆ ನಿಮ್ಮ ಪರ್ಸನಾಲಿಟಿ ತೋರಸಬೇಕಿದೆ ಎಂದು ಹೆಚ್ಆರ್ ಮೆಸೇಜ್ ಮಾಡಿದ್ದಾರೆ.ಈ ಮೆಸೇಜ್ ನೋಡಿದ ಯುವತಿಗೆ ಈ ಕಂಪನಿಯ ಜಾತಕ ಗೊತ್ತಾಗಿದೆ. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದಾಳೆ.ನನ್ನ ಇನ್‌ಸ್ಟಾಗ್ರಾಂ ಖಾತೆ ಪ್ರೈವೇಟ್. ಇದರ ಅವಶ್ಯಕತೆ ಏನಿದೆ? ನೇರ ಸಂದರ್ಶನಕ್ಕೆ ಸಮಯ ನಿಗಧಿ ಮಾಡಿ ಅಲ್ಲಿ ಬಂದು ನೇರವಾಗಿ ಈ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ ಎಂದು ಯುವತಿ ಪ್ರತಿಕ್ರಿಯಿಸಿದ್ದಾಳೆ.

ಯುವತಿ ಪ್ರತಿಕ್ರಿಯೆ ನೋಡಿ ಹೆಚ್ಆರ್ ಮತ್ತೆ ಮೆಸೇಜ್ ಮಾಡುವ ಸಾಹಸ ಮಾಡಲಿಲ್ಲ. ಉದ್ಯೋಗ ಹೆಸರಿನಲ್ಲಿ ಕಂಪನಿ ಈ ರೀತಿ ನಡೆಸಿಕೊಳ್ಳುತ್ತಿದೆ ಎಂದು ಆಕ್ರೋಶಗೊಂಡ ಯುವತಿ ಈ ವ್ಯಾಟ್ಸಾಪ್ ಚಾಟನ್ನು ರೆಡ್ಡಿಟ್ ಮೂಲಕ ಬಹಿರಂಗಪಡಿಸಿದ್ದಾಳೆ. ಈ ವ್ಯಾಟ್ಸಾಪ್ ಚಾಟ್ ಇದೀಗ ಭಾರಿ ವೈರಲ್ ಆಗಿದೆ. ಕಂಪನಿ ಹೆಸರು ಬಹಿರಂಗಪಡಿಸುಂತೆ ಸೂಚಿಸಿದ್ದಾರೆ. ಇಷ್ಟೇ ಅಲ್ಲ ಇದರಿಂತ ಇತರ ಹೆಣ್ಣುಮಕ್ಕಳಿಗೂ ನೆರವಾಗಲಿದೆ ಎಂದು ಸೂಚಿಸಿದ್ದಾರೆ. 

2 ಕಾರಣಕ್ಕೆ ಭಾರತೀಯ ಉದ್ಯೋಗಿಗಳನ್ನು ತೆಗೆದು ಹಾಕಲು ರೆಡಿಯಾದ ಸಾಲು ಸಾಲು MNC ಕಂಪೆನಿಗಳು!