ಜಾತಿಗಣತಿ ವರದಿ ಜಾರಿಗೆ ಚಾಮರಾಜನಗರ ಜಿಲ್ಲೆ ಮರಿಯಾಲ ಮುರುಘ ರಾಜೇಂದ್ರ ಮಠದ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮೀಜಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ವರದಿ: ಪುಟ್ಟರಾಜು.ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.
ಚಾಮರಾಜನಗರ (ಏ.17): ಜಾತಿಗಣತಿ ವರದಿ ಜಾರಿಗೆ ಚಾಮರಾಜನಗರ ಜಿಲ್ಲೆ ಮರಿಯಾಲ ಮುರುಘ ರಾಜೇಂದ್ರ ಮಠದ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮೀಜಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಮೇಲ್ವರ್ಗದ ಬಹುಸಂಖ್ಯಾತರನ್ನು ಹತ್ತಿಕ್ಕುವ ಕೆಲಸ ಆಗಿದ್ದು, ಸರ್ಕಾರ ಕೇವಲ ಒಂದು ವರ್ಗವನ್ನು ಓಲೈಸಲು ಹೊರಟಿದೆ. ಒಂದುವರೆ ಕೋಟಿ ಇರುವ ವೀರಶೈವ ಲಿಂಗಾಯತರನ್ನು ಕೇವಲ 75 ಲಕ್ಷಕ್ಕೆ ಇಳಿಸಿ ಸಮಾಜವನ್ನು ತುಳಿಯುವ ಪ್ರಯತ್ನ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಹತ್ತು ವರ್ಷ ಹಿಂದೆ ಮಾಡಿರುವ ಜಾತಿಗಣತಿ ವರದಿ ಈಗ ಜಾರಿಗೆ ತರುವುದು ಅಸಂಮಂಜಸವಾಗಿದೆ, ಎಲ್ಲ ವರ್ಗಗಳ ಬಡವರಿಗೆ ಮೀಸಲಾತಿ ಸಿಗಬೇಕು, ಲಿಂಗಾಯಿತ ಹಾಗೂ ಒಕ್ಕಲಿಗರನ್ನ ಈ ಜಾತಿಗಣತಿಯಲ್ಲಿ ಕಡೆಗಣಿಸಲಾಗಿದೆ. ಇದು ಮನೆ ಮನೆಗೆ ತೆರಳಿ ಮಾಡಿರುವ ಜನಗಣತಿಯಲ್ಲ, ತಕ್ಷಣವೇ ಈ ವರದಿಯನ್ನ ತಿರಸ್ಕರಿಸಿ ಮರುಸಮೀಕ್ಷೆ ನಡೆಸಬೇಕು. ಜಾತಿ ಗಣತಿ ವರದಿ ಜಾರಿ ಮಾಡಿದಲ್ಲಿ ಹೋರಾಟ ಅನಿವಾರ್ಯ ಎಂದು ಇಮ್ಮಡಿ ಮುರುಘ ರಾಜೇಂದ್ರ ಸ್ವಾಮೀಜಿ ಎಚ್ಚರಿಸಿದರು.
ಬಂಡೀಪುರ ಉಳಿಸಿ ಅಭಿಯಾನ: 'ನಮ್ಮ ನಡಿಗೆ ಬಂಡಿಪುರದ ಕಡೆಗೆ' ಬೃಹತ್ ಪಾದಯಾತ್ರೆಗೆ ಚಾಲನೆ
ಶರಣರ ವಚನಗಳ ಅರ್ಥವನ್ನು ಮಕ್ಕಳಿಗೆ ಹೇಳಿಕೊಡಿ: ಬಸವಾದಿ ಶರಣರು 12ನೇ ಶತಮಾನದಲ್ಲಿ ನೀಡಿದ ಜೀವನಾಮೃತ ವಚನಗಳು ಹಾಗೂ ಅವರ ಬದುಕು ನಮ್ಮೆಲ್ಲರಿಗೂ ಮಾದರಿಯಾಗಬೇಕು. ನುಡಿದಂತೆ ನಡೆದವರು ನಮ್ಮ ಶರಣರು ಎಂದು ಮರಿಯಾಲ ಮಠದ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ ತಿಳಿಸಿದರು. ತಾಲೂಕಿನ ಮರಿಯಾಲದಲ್ಲಿ ಯಳಂದೂರು ತಾಲೂಕು ವೀರಶೈವ-ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಬಸವಶ್ರೀ ಪತ್ತಿನ ಸಹಕಾರ ಸಂಘದ 2025ರ ದಿನದರ್ಶಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ನೂತನ ವರ್ಷವು ಆರಂಭವಾಗಿದೆ. ಎಲ್ಲರು ತಮ್ಮ ಕಾಯಕದಲ್ಲಿ ನಿಷ್ಟರಾಗಿ ದುಡಿಯುವ ಜೊತೆಗೆ ಬಸವ ತತ್ವಗಳನ್ನು ಪಾಲನೆ ಮಾಡಿ, ಶರಣರ ವಚನಗಳನ್ನು ವಾಚನ ಮಾಡುವ ಜೊತೆಗೆ ಅದರ ಅರ್ಥವನ್ನು ಮಕ್ಕಳಿಗೆ ಹೇಳಿಕೊಡಿ. ಅದರಂತೆ ನಡೆಯಲು ಪ್ರಯತ್ನ ಮಾಡಿದರೆ ಸಾಕು ನಮ್ಮ ಬಾಳು ಬಂಗಾರವಾಗುತ್ತದೆ. ಯಾವುದೇ ಕೆಲಸಕ್ಕೆ ಹೋಗುವ ಮುನ್ನ ಬಸವ ಬಸವ ಎಂದು ಹೇಳುತ್ತಾ. ದಿನದರ್ಶಿಕೆಯಲ್ಲಿ ಶರಣರ ಭಾವಚಿತ್ರಗಳು ಹಾಗೂ ಅವರ ನಾಣ್ಣುಡಿಗಳನ್ನು ಪ್ರಕಟಿಸಿ. ಪ್ರತಿ ದಿನವು ನಿಮ್ಮೆಲ್ಲರ ಮನಕ್ಕೆ ಉಲ್ಲಾಸವನ್ನು ನೀಡುವಂತ ಮಾದರಿ ದಿನದರ್ಶಿಕೆಗಳನ್ನು ಪ್ರಕಟಿಸಿ ಎಂದರು.
