ಎಸ್‌ಆರ್‌ಹೆಚ್ ಟ್ರಾವಿಸ್ ಹೆಡ್ ಒಳಗೊಂಡ ಉಬರ್ ಜಾಹೀರಾತು ಇದೀಗ ವಿವಾದಕ್ಕೆ ಕಾರಣವಾಗಿದೆ. ಹೈದರಾಬಾದಿ ಜಾಹೀರಾತಿನಲ್ಲಿ ಆರ್‌ಸಿಬಿಗೆ ಅಪಮಮಾನ ಮಾಡಲಾಗಿದೆ ಎಂದು ಆರ್‌ಸಿಬಿ ಫ್ರಾಂಚೈಸಿ ಕೋರ್ಟ್ ಮೆಟ್ಟಿಲೇರಿದೆ. ಅಷ್ಟಕ್ಕೂ ಈ ಜಾಹೀರಾತಿನಲ್ಲಿ ಏನಿದೆ? ಕೋರ್ಟ್ ಹೇಳಿದ್ದೇನು?

ಬೆಂಗಳೂರು(ಏ.17) ಐಪಿಎಲ್ 2025ರ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಉತ್ತಮ ಪ್ರದರ್ಶನ ನೀಡುತ್ತಿದೆ. ತವರಿನಲ್ಲಿ ಎರಡು ಪಂದ್ಯ ಸೋತರು ಆರ್‌ಸಿಬಿ ದಿಟ್ಟ ಹೋರಾಟ ನೀಡಿದೆ. ಇನ್ನು ಹೊರಗಡೆ ಸತತ ಗೆಲುವಿನ ಮೂಲಕ ಅಭಿಮಾನಿಗಳ ರಂಜಿಸಿದೆ. ಐಪಿಎಲ್ ಮೈದಾನದಲ್ಲಿ ಆರ್‌ಸಿಬಿ ತನ್ನ ಪ್ರತಿ ಎದುರಾಳಿ ವಿರುದ್ದ ಅಷ್ಟೇ ಪ್ರಬಲ ಹೋರಾಟ, ಸ್ಲೆಡ್ಡಿಂಗ್ ನಡೆಸುತ್ತೆ. ಆದರೆ ಇದೀಗ ಮೊದಲ ಬಾರಿಗೆ ಮೈದಾನದ ಹೊರಗಡೆ ಆರ್‌ಸಿಬಿ ಕಾನೂನು ಹೋರಾಟ ಆರಂಭಿಸಿದೆ. ಸನ್‌ರೈಸರ್ಸ್ ಹೈದರಾಬಾದ್ ತಂಡದ ಟ್ರಾವಿಸ್ ಹೆಡ್ ಒಳಗೊಂಡ ಉಬರ್ ಜಾಹೀರಾತು ಕೋಲಾಹಲ ಸೃಷ್ಟಿಸಿದೆ. ಜಾಹೀರಾತಿನಲ್ಲಿ ಆರ್‌ಸಿಬಿ ಅವಮಾನಿಸಲಾಗಿದೆ ಎಂದು ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದೆ.

ದೆಹಲಿ ಹೈಕೋರ್ಟ್‌ನಲ್ಲಿ ಪ್ರಕರಣ
ಊಬರ್ ಜಾಹೀರಾತಿನಲ್ಲಿ ಆರ್‌ಸಿಬಿಯನ್ನು ಗೇಲಿ ಮಾಡಲಾಗಿದೆ ಎಂದು ಆರ್‌ಸಿಬಿ ಫ್ರಾಂಚೈಸಿ ಆರೋಪಿಸಿದೆ. ಹೈದರಾಬಾದ್ ತಂಡದ ಆಟಗಾರ ಟ್ರಾವಿಸ್ ಹೆಡ್ ಬಳಸಿಕೊಂಡು ಉಬರ್ ಈ ಕೃತ್ಯ ಮಾಡಿದೆ. ಈ ಜಾಹೀರಾತಿನಿಂದ ಫ್ರಾಂಚೈಸಿ ಮೌಲ್ಯಕ್ಕೆ ಧಕ್ಕೆ ತರುವ ಕೆಲಸ ಮಾಡಲಾಗಿದೆ. ಇಷ್ಟೇ ಅಲ್ಲ ಆರ್‌ಸಿಬಿ ಅಭಿಮಾನಿಗಳಿಗೆ ನೋವುಂಟು ಮಾಡಲಾಗಿದೆ ಎಂದು ಆರ್‌ಸಿಬಿ ದೆಹಲಿ ಹೈಕೋರ್ಟ್‌ನಲ್ಲಿ ಹೇಳಿದೆ.

RCB ಫ್ಯಾನ್ಸ್ ಅಂದ್ರೆ ಕಡಿಮೆನಾ? ಬೆಂಗಳೂರು ತಂಡದ ಬಗ್ಗೆ ಜಿತೇಶ್ ಶರ್ಮಾ ಅಚ್ಚರಿ ಹೇಳಿಕೆ!

ಹೈದರಾಬಾದಿ ಜಾಹೀರಾತಿನಲ್ಲಿ ಏನಿದೆ?
ಉಬರ್ ತನ್ನ ಜಾಹೀರಾತಿನಲ್ಲಿ ಎಸ್ಆರ್‌ಹೆಚ್ ಬ್ಯಾಟರ್ ಟ್ರಾವಿಸ್ ಹೆಡ್ ಬಳಸಿಕೊಂಡಿದೆ. ಆರ್‌ಸಿಬಿ ಹಾಗೂ ಹೈದರಾಬಾದ್ ಪಂದ್ಯಕ್ಕೂ ಮೊದಲು ಟ್ರಾವಿಸ್ ಹೆಡ್ ಊಬರ್ ಮೋಟೋ ಮೂಲಕ ಪಂದ್ಯ ಆಯೋಜನೆಗೊಂಡಿರುವ ಮೈದಾನಕ್ಕೆ ತೆರಳುತ್ತಾರೆ. ಸಿಬ್ಬಂದಿಗಳ ರೀತಿ ಡ್ರೆಸ್ ಧರಿಸಿಕೊಂಡು ಅಕ್ರಮ ಮಾರ್ಗದ ಮೂಲಕ ಟ್ರಾವಿಸ್ ಹೆಡ್ ತೆರಳುತ್ತಾರೆ. ಮೈದಾನದ ಭದ್ರತಾ ಸಿಬ್ಬಂದಿ ಕಣ್ತಪ್ಪಿ ಕ್ರೀಡಾಂಗಣದ ಒಳ ಪ್ರವೇಶಿಸುವ ಟ್ರಾವಿಸ್ ಹೆಡ್ ಹಾಗೂ ಮತ್ತೊಬ್ಬ ಸ್ಪ್ರೇ ಬಳಸಿ ಬೋರ್ಡ್ ಬದಲಿಸುತ್ತಾರೆ. ಬೆಂಗಳೂರು ವರ್ಸಸ್ ಹೈದರಾಬಾದ್ ಎಂದು ಬೋರ್ಡ್ ಹಾಕಲಾಗಿತ್ತು. ಈ ಬೋರ್ಡ್‌ನಲ್ಲಿ ಬೆಂಗಳೂರು ಹೆಸರಿನ ಪಕ್ಕದಲ್ಲಿ ರಾಯಲಿ ಚಾಲೆಂಜ್ಡ್ ಎಂದು ಬರೆಯುತ್ತಾರೆ. ಈ ವೇಳೆ ಭದ್ರತಾ ಸಿಬ್ಬಂದಿಗಳು ಬರುತ್ತಿದ್ದಂತೆ ಟ್ರಾವಿಸ್ ಹೆಡ್ ಅಲ್ಲಿಂದ ಕಾಲ್ಕಿತ್ತು ಉಬರ್ ಮೋಟೋ ಸರ್ವೀಸ್ ಏರಿ ಸಾಗುತ್ತಾರೆ. 

ಆರ್‌ಸಿಬಿ ವಾದವೇನು?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರನ್ನು ಈ ಜಾಹೀರಾತಿನಲ್ಲಿ ರಾಯಲಿ ಚಾಲೆಂಜ್ಡ್ ಬೆಂಗಳೂರು ಎಂದು ಬರೆಯಲಾಗಿದೆ. ಈ ಮೂಲಕ ಈಗಾಗಲೇ ಸವಾಲು ಎಸೆದಾಗಿದೆ ಅನ್ನೋ ರೀತಿ ಜಾಹೀರಾತಿನಲ್ಲಿ ಹೇಳಲಾಗಿದೆ. ಆರ್‌ಸಿಬಿ ಹೆಸರನ್ನು ಬದಲಿಸಿದ್ದು, ಹಾಗೂ ಅಪಮಾನ ಮಾಡುವಂತೆ ಬದಲಿಸಿದ್ದು ಸರಿಯಲ್ಲ ಅನ್ನೋದು ಆರ್‌ಸಿಬಿ ವಾದವಾಗಿದೆ. ಉಬರ್ ಹಾಗೂ ಎಸ್‌ಆರ್‌ಹೆಚ್ ಹೈದರಾಬಾದ್ ತಂಡದ ಪ್ರಯೋಜಿತ ಜಾಹೀರಾತಿನಲ್ಲಿ ಆರ್‌ಸಿಬಿ ಟ್ರೇಡ್ ಮಾರ್ಕ್ ಬಳಸಿದ್ದು ಸರಿಯಲ್ಲ. ಹೀಗಾಗಿ ತಕ್ಷಣವೆ ಯೂಟ್ಯೂಬ್ ಹಾಗೂ ಇತರ ಪ್ಲಾಟ್‌ಫಾರ್ಮ್‌ನಿಂದ ಜಾಹೀರಾತು ತೆಗೆಯುವಂತೆ ಎಂದು ಆರ್‌ಸಿಬಿ ಕೋರ್ಟ್‌ನಲ್ಲಿ ಆಗ್ರಹಿಸಿದೆ.

ಪ್ರಕರಣದ ವಿಚಾರಣೆ ಮುಂದೂಡಿದ ಕೋರ್ಟ್ 
ಟ್ರಾವಿಸ್ ಹೆಡ್ ಮೂಲಕ ನಿರ್ಮಾಣಗೊಂಡಿರುವ ಜಾಹೀರಾತಿನಲ್ಲಿ ಆರ್‌ಸಿಬಿ ವಿರುದ್ಧವಾಗಲಿ, ಅಥವಾ ಕೆಟ್ಟದಾಗಿ ಏನು ಹೇಳಿಲ್ಲ. ಹೀಗಾಗಿ ಪ್ರಕರಣ ರದ್ದುಗೊಳಿಸಬೇಕು ಎಂದು ವಾದಿಸಿದೆ. ಪ್ರಕರಣದ ವಿಚಾರಣೆಯನ್ನು ಕೋರ್ಟ್ ಮುಂದೂಡಿದೆ.

RCB ಕೈಬಿಟ್ಟಿದ್ದೇ ಒಳ್ಳೇದಾಯ್ತು; ಐಪಿಎಲ್‌ನಲ್ಲಿ ಕೆಟ್ಟ ಆಟವಾಡುತ್ತಿದ್ದಾನೆ ಪಂಜಾಬ್ ಪ್ಲೇಯರ್!


YouTube video player