ಒಪ್ಪೋ ಹೊಚ್ಚ ಹೊಸ ಕೆ15 ಲೈಟ್ ಫೋನ್ ಬಿಡುಗಡೆ ಮಾಡಿದೆ. 7000mAh ಬ್ಯಾಟರಿ ಅಲ್ಟ್ರಾ ಡಿಸ್‌ಪ್ಲೆ, ಎಐ ಫೀಚರ್ , ಸುಲಭವಾಗಿ ಹ್ಯಾಂಡಲ್ ಮಾಡಬಹುದಾ K14 Lite ಫೋನ್ ಬಿಡುಗಡೆ ಮಾಡಿದೆ. ಆಫರ್ ಮೂಲಕ ಕೇವಲ 15,999 ರೂಗೆ ಲಭ್ಯವಿದೆ.
ಬೆಂಗಳೂರು (ಸೆ.18) ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಇದೀಗ ಒಪ್ಪೋ ಅತ್ಯಾಧುನಿಕ ಫೀಚರ್ಸ್ ಇರುವ ಒಪ್ಪೋ K14 Lite ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಸುದೀರ್ಘ ಬಾಳಿಕೆಯ 7000mAh ಬ್ಯಾಟರಿ, ಸ್ಮೂತ್ ಪರ್ಫಾಮೆನ್ಸ್ ಹ್ಯಾಂಡಲ್, ಬ್ರೈಟ್ ಡಿಸ್‌ಪ್ಲೆ, 120Hz ರಿಫ್ರೆಶ್ ರೇಟ್ 120Hz, ಎಐ ಫೀಚರ್ ಸೇರಿದಂತೆ ಹಲವು ವಿಶೇಷತೆಗಳ ಫೋನ್ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ಆಫರ್ ಮೂಲಕ ಒಪ್ಪೋ K14 Lite ಫೋನ್ ಕೇವಲ 15,999 ರೂಪಾಯಿಗೆ ಲಭ್ಯವಿದೆ.
ಒಪ್ಪೋ K14 Lite ಬೆಲೆ
ಒಪ್ಪೋ K14 Lite ಫೋನ್ ಆರಂಭಿಕ ಬೆಲೆ 16,999 ರೂಪಾಯಿ ( 4GB + 64GB ವೇರಿಯಂಟ್‌ಗೆ). ಆದರೆ ಒಪ್ಪೋ ಇ ಸ್ಟೋರ್ ಹಾಗೂ ಇಕಾಮರ್ಸ್ ಆನ್‌ಲೈನ್ ಮೂಲಕ ಖರೀದಿಗೆ ಲಭ್ಯವಿದೆ. ಆಯ್ದ ಬ್ಯಾಂಕ್ ಆಫರ್ ಮೂಲಕ ಖರೀದಿಸುವ ಗ್ರಾಹಕರು ತಕ್ಷಣವೇ 1000 ರೂಪಾಯಿ ಡಿಸ್ಕೌಂಟ್ ಪಡೆಯಲಿದ್ದಾರೆ. ಇದರಿಂದ ಫೋನ್ ಬೆಲೆ 15,999 ರೂಪಾಯಿಗೆ ಲಭ್ಯವಿದೆ.ಇದರ ಜೊತೆಗೆ ನೋ ಕಾಸ್ಟ್ ಇಎಂಐ ಸೇರಿದಂತೆ ಇತರ ಕೆಲ ಆಫರ್ ಲಭ್ಯವಿದೆ.
7000mAh ಬ್ಯಾಟರಿಯೊಂದಿಗೆ ದಿನವಿಡೀ ಬಳಕೆ
OPPO K14 Lite ಫೋನ್ ಪ್ರಮುಖ ಫೀಚರ್ ಬ್ಯಾಟರಿ. 7000mAh ದೊಡ್ಡ ಬ್ಯಾಟರಿ, ದಿನವಿಡೀ ವಿಶ್ವಾಸಾರ್ಹ ಪವರ್ ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ಬ್ಯಾಟರಿಯು 1,800 ಚಾರ್ಜ್ ಸೈಕಲ್‌ಗಳ ನಂತರವೂ ಅದರ ಮೂಲ ಸಾಮರ್ಥ್ಯದ ಶೇ.80ಕ್ಕಿಂತ ಹೆಚ್ಚಿನದನ್ನು ಉಳಿಸಿಕೊಳ್ಳುವಂತೆ ಆಪ್ಟಿಮೈಸ್ ಮಾಡಲಾಗಿದೆ. ಪ್ರತಿ 1.3 ದಿನಗಳಿಗೊಮ್ಮೆ ಒಂದು ಪೂರ್ಣ ಚಾರ್ಜ್ ಸೈಕಲ್ ಆಧರಿಸಿ OPPO ಆರು ವರ್ಷಗಳ ಬ್ಯಾಟರಿ ಬಾಳಿಕೆಯ ಕ್ಲೇಮ್ ಮಾಡಿದೆ. ಸ್ಮಾರ್ಟ್‌ಫೋನ್ 26.84 ಗಂಟೆಗಳವರೆಗೆ YouTube ಬಳಕೆ, 29.99 ಗಂಟೆಗಳವರೆಗೆ Google Maps ಬಳಕೆ, 13.19 ಗಂಟೆಗಳ PUBG Mobile ಗೇಮಿಂಗ್ ಮತ್ತು 55.55 ಗಂಟೆಗಳವರೆಗೆ ಕರೆಗಳನ್ನು ಸಪೋರ್ಟ್ ಮಾಡಲಿದೆ.
ವೇಗದ ದೈನಂದಿನ ಪರ್ಫಾರ್ಮೆನ್ಸ್
OPPO K14 Lite ಅನ್ನು ದೈನಂದಿನ ಸ್ಮಾರ್ಟ್‌ಫೋನ್ ಕಾರ್ಯಗಳಲ್ಲಿ ಸ್ಮೂತ್ ಮತ್ತು ವೇಗದ ಅನುಭವ ನೀಡುವಂತೆ ವಿನ್ಯಾಸಗೊಳಿಸಲಾಗಿದೆ. 1.8GHz ವರೆಗಿನ ವೇಗ ಹೊಂದಿರುವ Unisoc T7250 octa-core processorನಿಂದ ಚಾಲಿತವಾಗಿರುವ ಈ ಸಾಧನವು 4GB LPDDR4X RAM ಮತ್ತು 64GB UFS 2.2 storage ಅನ್ನು ಒಳಗೊಂಡಿದೆ.
ದೀರ್ಘಕಾಲ ಗೇಮಿಂಗ್ ಅಥವಾ ಕಂಟೆಂಟ್ ಬಳಕೆಯನ್ನು ಮಾಡುವವರಿಗೆ, K14 Liteನಲ್ಲಿ 13,700mm² ವರೆಗಿನ thermal graphite cooling area ನೀಡಲಾಗಿದ್ದು, ದೀರ್ಘಕಾಲದ ಬಳಕೆಯ ಸಂದರ್ಭದಲ್ಲಿ ಉಷ್ಣತೆಯನ್ನು ನಿರ್ವಹಿಸಲು ಮತ್ತು ಸ್ಥಿರ ಪರ್ಫಾರ್ಮೆನ್ಸ್ ಕಾಯ್ದುಕೊಳ್ಳಲು ಇದು ಸಹಾಯ ಮಾಡುತ್ತದೆ.
ಸ್ಮಾರ್ಟ್‌ಫೋನ್ Mobile Legends: Bang Bang (MLBB) Smooth Graphics ಜೊತೆಗೆ 60FPS high-frame mode ಅನ್ನು ಬೆಂಬಲಿಸುತ್ತದೆ. ಇದು 3 ಗಂಟೆಗಳವರೆಗೆ ಲ್ಯಾಗ್ ಫ್ರೀ ಗೇಮಿಂಗ್ ಅನುಭವವನ್ನು ಒದಗಿಸುವ ಮೂಲಕ, ಬಳಕೆದಾರರು ದೀರ್ಘಕಾಲ ಸ್ಮೂತ್ ಮತ್ತು ರೆಸ್ಪಾನ್ಸಿವ್ ಗೇಮಿಂಗ್ ಅನುಭವವನ್ನು ಪಡೆಯಲು ಸಹಾಯ ಮಾಡುತ್ತದೆ.
120Hz ಅಲ್ಟ್ರಾ ಬ್ರೈಟ್ ಡಿಸ್ಪ್ಲೇಯಲ್ಲಿ ಸ್ಮೂತ್ ವೀಕ್ಷಣೆ
OPPO K14 Liteನಲ್ಲಿ ದೊಡ್ಡ 17.15cm HD+ LCD ಡಿಸ್ಪ್ಲೇ ಇದ್ದು, 120Hz ರಿಫ್ರೆಶ್ ರೇಟ್ ಅನ್ನು ಬೆಂಬಲಿಸುತ್ತದೆ. ಇದರಿಂದ ದೈನಂದಿನ ಬಳಕೆಯಲ್ಲಿ ಸ್ಕ್ರೋಲಿಂಗ್, ಅನಿಮೇಷನ್‌ಗಳು ಮತ್ತು ಟ್ರಾನ್ಸಿಷನ್‌ಗಳು ಹೆಚ್ಚು ಸ್ಮೂತ್ ಆಗಿರುತ್ತವೆ. 900 nits peak brightnessನೊಂದಿಗೆ, ಪ್ರಕಾಶಮಾನವಾದ ಹೊರಾಂಗಣ ಪರಿಸ್ಥಿತಿಗಳಲ್ಲಿಯೂ ಸ್ಪಷ್ಟವಾದ ವೀಕ್ಷಣೆಯನ್ನು ಒದಗಿಸಲು ಡಿಸ್ಪ್ಲೇ ವಿನ್ಯಾಸಗೊಳಿಸಲಾಗಿದೆ. ಬ್ರೌಸಿಂಗ್, ಸೋಶಿಯಲ್ ಮೀಡಿಯಾ, ವೀಡಿಯೋ ಸ್ಟ್ರೀಮಿಂಗ್ ಮತ್ತು ಗೇಮಿಂಗ್ ಸೇರಿದಂತೆ ವಿವಿಧ ಬಳಕೆಗಳಿಗೆ ಇದು ಸೂಕ್ತವಾಗಿದೆ.
ಉಪಯುಕ್ತ AI ಫೀಚರ್‌ಗಳೊಂದಿಗೆ ದೈನಂದಿನ ಫೋಟೋಗ್ರಫಿ
ಫೋಟೋಗ್ರಫಿಗಾಗಿ OPPO K14 Lite ಆಟೋಫೋಕಸ್ ಹೊಂದಿರುವ 13MP ಅಲ್ಟ್ರಾ ಕ್ಲಿಯರ್ ರೇರ್ ಕ್ಯಾಮೆರಾ ಮತ್ತು 5MP ಫ್ರಂಟ್ ಕ್ಯಾಮೆರಾ ಒಳಗೊಂಡಿದೆ. ಕ್ಯಾಮೆರಾ ಸಿಸ್ಟಮ್ Portrait, Night ಮತ್ತು Time-Lapse ಸೇರಿದಂತೆ ವಿವಿಧ ಮೋಡ್‌ಗಳನ್ನು ಬೆಂಬಲಿಸುತ್ತದೆ. ಇದರಿಂದ ಬಳಕೆದಾರರು ತಮ್ಮ ದೈನಂದಿನ ಜೀವನದ ವಿವಿಧ ಕ್ಷಣಗಳನ್ನು ಸೆರೆಹಿಡಿಯಬಹುದು.
ಪ್ರತಿ ಹಂತದಲ್ಲೂ ಚಿಂತೆಯಿಲ್ಲದ ಬಳಕೆ
OPPO K14 Lite ಮೂಲಕ, ದೀರ್ಘಕಾಲ ಬಾಳಿಕೆ ನೀಡುವ ಹಾರ್ಡ್‌ವೇರ್ ಮತ್ತು ಪ್ರಾಯೋಗಿಕ ದೈನಂದಿನ ಫೀಚರ್‌ಗಳನ್ನು ಒಳಗೊಂಡ ವಿಶ್ವಾಸಾರ್ಹ ಸ್ಮಾರ್ಟ್‌ಫೋನ್ ಅನುಭವವನ್ನು ನೀಡುವತ್ತ OPPO ತನ್ನ ಗಮನವನ್ನು ಮುಂದುವರಿಸಿದೆ. ದೊಡ್ಡ 7000mAh ಬ್ಯಾಟರಿ, ಬಾಳಿಕೆ ಬರುವ ನಿರ್ಮಾಣ, ಸ್ಮೂತ್ 120Hz ಡಿಸ್ಪ್ಲೇ ಮತ್ತು ಆಪ್ಟಿಮೈಸ್ ಮಾಡಲಾದ ಪರ್ಫಾರ್ಮೆನ್ಸ್‌ನಿಂದ ಹಿಡಿದು, ಬಳಕೆದಾರರ ದಿನನಿತ್ಯದ ಅಗತ್ಯಗಳಿಗೆ ಹೊಂದಿಕೊಳ್ಳುವಂತೆ ಈ ಸಾಧನವನ್ನು ವಿನ್ಯಾಸಗೊಳಿಸಲಾಗಿದೆ.

