MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • "ಮುಂದೆ ಎಲ್ಲರ ಮೊಬೈಲ್‌ನಲ್ಲೂ ಇದೇ ಫೋಟೋ ಇರುತ್ತೆ".. ಸಮಂತಾ ಫೋನ್ ವಾಲ್‌ಪೇಪರ್ ನೋಡಿ ಫ್ಯಾನ್ಸ್ ಫಿದಾ!

"ಮುಂದೆ ಎಲ್ಲರ ಮೊಬೈಲ್‌ನಲ್ಲೂ ಇದೇ ಫೋಟೋ ಇರುತ್ತೆ".. ಸಮಂತಾ ಫೋನ್ ವಾಲ್‌ಪೇಪರ್ ನೋಡಿ ಫ್ಯಾನ್ಸ್ ಫಿದಾ!

Samantha Ruth Prabhu: ಸಾಮಾನ್ಯವಾಗಿ ಸೆಲೆಬ್ರಿಟಿಗಳ ಮೊಬೈಲ್ ವಾಲ್‌ಪೇಪರ್‌ನಲ್ಲಿ ತಮ್ಮದೇ ಗ್ಲಾಮರಸ್ ಫೋಟೋ ಅಥವಾ ಪ್ರೀತಿಪಾತ್ರರ ಚಿತ್ರಗಳಿರುವುದು ಕಾಮನ್. ಆದರೆ ಸೌತ್ ಬ್ಯೂಟಿ ಸಮಂತಾ ಅವರ ಕೈಯಲ್ಲಿದ್ದ ಫೋನ್ ಸ್ಕ್ರೀನ್ ಮೇಲೆ ಕಣ್ಣು ಹಾಯಿಸಿದ ಅಭಿಮಾನಿಗಳಿಗೆ ಕಾದಿತ್ತು ಒಂದು ದೊಡ್ಡ ಸರ್‌ಪ್ರೈಸ್.

2 Min read
Author : Ashwini HR
Published : Sep 17 2026, 03:47 PM IST
Share this Photo Gallery
  • FB
  • TW
  • Linkdin
  • Whatsapp
15
ಮೊಬೈಲ್ ವಾಲ್‌ಪೇಪರ್ ಯಾವುದು?
Image Credit : Instagram

ಮೊಬೈಲ್ ವಾಲ್‌ಪೇಪರ್ ಯಾವುದು?

ಮೊಬೈಲ್ ವಾಲ್‌ಪೇಪರ್ ಯಾವುದು?
ಸೆಲೆಬ್ರಿಟಿಗಳು ಧರಿಸುವ ದುಬಾರಿ ಬಟ್ಟೆ, ತಿನ್ನುವ ಆಹಾರ, ಓಡಾಡುವ ಕಾರುಗಳಿಂದ ಹಿಡಿದು ಅವರು ಬಳಸುವ ಗ್ಯಾಜೆಟ್‌ಗಳವರೆಗೂ ಪ್ರತಿಯೊಂದು ವಿಚಾರವೂ ಅಭಿಮಾನಿಗಳಿಗೆ ಸದಾ ಕುತೂಹಲ ಕೆರಳಿಸುತ್ತದೆ. ನೆಚ್ಚಿನ ನಟ-ನಟಿಯರ ದಿನನಿತ್ಯದ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುವ ಅಭಿಮಾನಿಗಳು, ಅವರ ಸಣ್ಣ ಸಣ್ಣ ವಿಚಾರಗಳನ್ನೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಾರೆ. ಅಂತೆಯೇ, ಇದೀಗ ಸೌತ್ ಬ್ಯೂಟಿ ಸಮಂತಾ ರುತ್ ಪ್ರಭು ಅವರ ಮೊಬೈಲ್ ವಾಲ್‌ಪೇಪರ್ ಯಾವುದು ಎನ್ನುವ ವಿಚಾರ ಇನ್‌ಸ್ಟಾಗ್ರಾಮ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಶಕ್ತಿಶಾಲಿ ದೈವಸ್ವರೂಪವಾದ ‘ಲಿಂಗ ಭೈರವಿ ದೇವಿ’
Image Credit : Instagram, Filmfare

ಶಕ್ತಿಶಾಲಿ ದೈವಸ್ವರೂಪವಾದ ‘ಲಿಂಗ ಭೈರವಿ ದೇವಿ’

ಶಕ್ತಿಶಾಲಿ ದೈವಸ್ವರೂಪವಾದ ‘ಲಿಂಗ ಭೈರವಿ ದೇವಿ’
ಇತ್ತೀಚೆಗೆ ಸಮಂತಾ ಅವರ ಮೊಬೈಲ್ ಸ್ಕ್ರೀನ್ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದು, ಅವರ ಫೋನ್ ವಾಲ್‌ಪೇಪರ್‌ನಲ್ಲಿರುವ ಫೋಟೋವನ್ನು ಕಂಡು ಅಭಿಮಾನಿಗಳು ಅಚ್ಚರಿಯ ಜೊತೆಗೆ ಫುಲ್ ಖುಷ್ ಆಗಿದ್ದಾರೆ. ಹೌದು, ಸಮಂತಾ ತಮ್ಮ ಮೊಬೈಲ್ ವಾಲ್‌ಪೇಪರ್‌ನಲ್ಲಿ ಯಾವುದೇ ಗ್ಲಾಮರಸ್ ಫೋಟೋ ಇಟ್ಟುಕೊಂಡಿಲ್ಲ, ಬದಲಾಗಿ ಶಕ್ತಿಶಾಲಿ ದೈವಸ್ವರೂಪವಾದ ‘ಲಿಂಗ ಭೈರವಿ ದೇವಿ’ (Linga Bhairavi Amma) ಫೋಟೋವನ್ನು ಇಟ್ಟುಕೊಂಡಿದ್ದಾರೆ!

Related Articles

Related image1
'ಭೂತ ಶುದ್ಧಿ ಪದ್ಧತಿ'ಯಂತೆ ವಿವಾಹವಾದ Samantha Ruth Prabhu: ಏನಿದು ವಿಶಿಷ್ಟ ಸಂಪ್ರದಾಯ?
Related image2
ಮೈಯಲ್ಲಿದ್ದ ಹೂವುಗಳ ಒಳಹೊಕ್ಕು ಮೆಲ್ಲನೆ ಕಚ್ಚಿತ್ತು ತುಂಟ ಮೊಲ! ಆ ಅನುಭವ ತೆರೆದಿಟ್ಟ Samantha Ruth Prabhu
35
ಕಮೆಂಟ್ ಬಾಕ್ಸ್‌ನಲ್ಲಿ ಹಾರ್ಟ್ ಮತ್ತು ಫೈಯರ್ ಇಮೋಜಿಗಳ ಕಾಮೆಂಟ್ಸ್
Image Credit : Instagram

ಕಮೆಂಟ್ ಬಾಕ್ಸ್‌ನಲ್ಲಿ ಹಾರ್ಟ್ ಮತ್ತು ಫೈಯರ್ ಇಮೋಜಿಗಳ ಕಾಮೆಂಟ್ಸ್

ಕಮೆಂಟ್ ಬಾಕ್ಸ್‌ನಲ್ಲಿ ಹಾರ್ಟ್ ಮತ್ತು ಫೈಯರ್ ಇಮೋಜಿಗಳ ಕಾಮೆಂಟ್ಸ್
ಕಳೆದ ಕೆಲ ವರ್ಷಗಳಿಂದ ಸಮಂತಾ ಮಯೋಸಿಟಿಸ್ ಕಾಯಿಲೆಯ ವಿರುದ್ಧ ಹೋರಾಡಿ, ಆಧ್ಯಾತ್ಮಿಕತೆಯತ್ತ ಹೆಚ್ಚು ಒಲವು ಬೆಳೆಸಿಕೊಂಡಿದ್ದಾರೆ. ಸದ್ಗುರು ಅವರ ಈಶಾ ಫೌಂಡೇಶನ್‌ಗೆ ನಿಯಮಿತವಾಗಿ ಭೇಟಿ ನೀಡುವ ಸಮಂತಾ, ಧ್ಯಾನ ಮತ್ತು ಆಧ್ಯಾತ್ಮದ ಮೂಲಕವೇ ಮಾನಸಿಕ ನೆಮ್ಮದಿ ಕಂಡುಕೊಂಡಿದ್ದಾರೆ. ಈಗ ಅವರ ಮೊಬೈಲ್‌ನಲ್ಲಿಯೂ ಲಿಂಗ ಭೈರವಿ ಅಮ್ಮನ ಫೋಟೋ ಇರುವುದನ್ನು ಕಂಡು ನೆಟ್ಟಿಗರು ಪ್ರೀತಿಯಿಂದ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಸಮಂತಾ ಅವರ ಈ ಭಕ್ತಿಗೆ ಮನಸೋತ ಅಭಿಮಾನಿಗಳು ಹಾರ್ಟ್ ಮತ್ತು ಫೈಯರ್ ಇಮೋಜಿಗಳನ್ನು ಹಾಕಿ ಕಮೆಂಟ್ ಬಾಕ್ಸ್‌ನಲ್ಲಿ ಸಂಭ್ರಮಿಸುತ್ತಿದ್ದಾರೆ.

45
ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರ ಮೊಬೈಲ್ ಸ್ಕ್ರೀನ್‌ನಲ್ಲೂ ಇರಲಿದೆ
Image Credit : Instagram

ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರ ಮೊಬೈಲ್ ಸ್ಕ್ರೀನ್‌ನಲ್ಲೂ ಇರಲಿದೆ

ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರ ಮೊಬೈಲ್ ಸ್ಕ್ರೀನ್‌ನಲ್ಲೂ ಇರಲಿದೆ
ಸಮಂತಾ ಅವರ ಈ ಫೋಟೋಗೆ ಅಭಿಮಾನಿಗಳಿಂದ ವ್ಯಾಪಕ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಒರ್ವ ಅಭಿಮಾನಿ, "ನಾನು ಕೂಡ ಲಿಂಗ ಭೈರವಿ ಮಂತ್ರವನ್ನು ಸ್ಮರಿಸುವಾಗಲೆಲ್ಲಾ ನನ್ನಲ್ಲಿ ಅಪಾರ ಶಕ್ತಿ (ಎನರ್ಜಿ) ತುಂಬಿಕೊಳ್ಳುತ್ತಿತ್ತು" ಎಂದು ತಮ್ಮ ವೈಯಕ್ತಿಕ ಅನುಭವ ಹಂಚಿಕೊಂಡಿದ್ದಾರೆ. ಮತ್ತೊರ್ವ ಅಭಿಮಾನಿ, "ಲಿಂಗ ಭೈರವಿ ಎಂದರೆ ಸದ್ಗುರುಗಳಿಂದ ಪ್ರತಿಷ್ಠಾಪಿಸಲ್ಪಟ್ಟ ಅತ್ಯಂತ ಶಕ್ತಿಶಾಲಿ ಮತ್ತು ತೇಜಸ್ವಿ ಸ್ತ್ರೀ ದೈವತ್ವ ಅಲ್ಲವೇ ಅಕ್ಕ?" ಎಂದು ಅಭಿಮಾನದಿಂದ ಪ್ರಶ್ನಿಸಿದ್ದಾರೆ. ಇನ್ನೋರ್ವ ನೆಟ್ಟಿಗರಂತೂ ಒಂದು ಹೆಜ್ಜೆ ಮುಂದೆ ಹೋಗಿ, "ಇದು ಬೇರೆ ಯಾರೂ ಅಲ್ಲ, ಸಾಕ್ಷಾತ್ ಲಿಂಗ ಭೈರವಿ ದೇವಿ.. ಮುಂದಿನ ದಿನಗಳಲ್ಲಿ ಈ ಫೋಟೋ ಪ್ರತಿಯೊಬ್ಬರ ಮೊಬೈಲ್ ಸ್ಕ್ರೀನ್‌ನಲ್ಲೂ ಇರಲಿದೆ ನೋಡಿ" ಎಂದು ಬರೆದುಕೊಂಡಿದ್ದಾರೆ.

55
ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿದೆ
Image Credit : Instagram

ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿದೆ

ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿದೆ
ಕಷ್ಟದ ದಿನಗಳಲ್ಲೂ ಧೃತಿಗೆಡದೆ ದೈವಶಕ್ತಿಯನ್ನು ನಂಬಿ ಮುನ್ನಡೆಯುತ್ತಿರುವ ಸಮಂತಾ ಅವರ ಈ ಆಧ್ಯಾತ್ಮಿಕ ನಡೆ, ಅವರ ಅಭಿಮಾನಿಗಳಿಗೆ ಮತ್ತು ಯುವಪೀಳಿಗೆಗೆ ಹೊಸ ಪ್ರೇರಣೆಯಾಗಿದೆ. ಸದ್ಯ ಸಮಂತಾ ಅವರ ಈ ಮೊಬೈಲ್ ಸ್ಕ್ರೀನ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಮನರಂಜನಾ ಸುದ್ದಿ
ಬಾಲಿವುಡ್
ಸಮಂತಾ ರುತ್ ಪ್ರಭು
 

Latest Videos
Recommended Stories
Recommended image1
Rashmika Mandanna Saree: ಅತ್ತೆ ಮನೆಯಲ್ಲಿ ರಶ್ಮಿಕಾರಂತೆ ಮಿಂಚಬೇಕಾ? ಈ 5 ಸೀರೆ ಲುಕ್ ಟ್ರೈ ಮಾಡಿ!
Recommended image2
ಕೈತುಂಬಾ ಕೆಲ್ಸ ಇರುವಾಗ್ಲೇ ಬೆಂಗಳೂರು ತೊರೆದ ನಟಿ ಯಮುನಾ ಶ್ರೀನಿಧಿ! ಫ್ಯಾನ್ಸ್​ ಶಾಕ್​, ಏನಾಯ್ತು ನಟಿಗೆ
Recommended image3
ಮೊದಲ ಬಾರಿ ಪತ್ನಿಯನ್ನು ನೋಡಿದಾಗ ಅವಳು ತೊಟ್ಟಿಲಲ್ಲಿ ಮಲಗಿದ್ದಳು: ಆ ದಿನ ನೆನೆದ ಸಂಜಯ್‌ ದತ್‌
Related Stories
Recommended image1
'ಭೂತ ಶುದ್ಧಿ ಪದ್ಧತಿ'ಯಂತೆ ವಿವಾಹವಾದ Samantha Ruth Prabhu: ಏನಿದು ವಿಶಿಷ್ಟ ಸಂಪ್ರದಾಯ?
Recommended image2
ಮೈಯಲ್ಲಿದ್ದ ಹೂವುಗಳ ಒಳಹೊಕ್ಕು ಮೆಲ್ಲನೆ ಕಚ್ಚಿತ್ತು ತುಂಟ ಮೊಲ! ಆ ಅನುಭವ ತೆರೆದಿಟ್ಟ Samantha Ruth Prabhu
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved