ಆಂಧ್ರಪ್ರದೇಶದ ಅಮರಾವತಿಯಲ್ಲಿ ಟಿವಿ ಸೌಂಡ್ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಗಂಡನಿಗೆ ಚಾಕುವಿನಿಂದ ಇರಿದು ಪತ್ನಿ ಕೊಂದಿದ್ದಾಳೆ. 27 ವರ್ಷದ ಶೇಖ್ ಅಹ್ಮದ್ ಮೃತಪಟ್ಟಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಅಮರಾವತಿ (ಫೆ.20): ಆಂಧ್ರಪ್ರದೇಶದಲ್ಲಿ ಒಂದು ಶಾಕಿಂಗ್ ಘಟನೆ ನಡೆದಿದೆ. ಮನೆಯಲ್ಲಿ ಟಿವಿ ಸೌಂಡ್ ಕಡಿಮೆ ಮಾಡಲು ಹೇಳಿದ್ದಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಪತಿಯನ್ನು ಪತ್ನಿಯೇ ಚಾಕುವಿನಿಂದ ಇರಿದು ಕೊಂದಿದ್ದಾಳೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಟಿವಿ ವಾಲ್ಯೂಮ್ ಕಡಿಮೆ ಮಾಡು ಅಂದಿದ್ದೇ ತಪ್ಪಾಯ್ತು!

ಮೃತಪಟ್ಟ ವ್ಯಕ್ತಿಯನ್ನು 27 ವರ್ಷದ ಶೇಖ್ ಅಹ್ಮದ್ ಎಂದು ಗುರುತಿಸಲಾಗಿದೆ. ಎಸಿ ಮೆಕ್ಯಾನಿಕ್ ಆಗಿದ್ದ ಅಹ್ಮದ್, ಮಂಗಳಗಿರಿಯ ಟಿಡ್ಕೋ ಹೌಸಿಂಗ್ ಕಾಲೋನಿಯಲ್ಲಿ ಪತ್ನಿ ಜೊತೆ ವಾಸವಾಗಿದ್ದರು. ಟಿವಿ ವಾಲ್ಯೂಮ್ ಕಡಿಮೆ ಮಾಡುವಂತೆ ಅಹ್ಮದ್ ತನ್ನ ಪತ್ನಿಗೆ ಹೇಳಿದ್ದಾರೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿದೆ.

ಚಿಕಿತ್ಸೆ ಫಲಕಾರಿಯಾಗದೆ ಸಾವು

ಮಾತಿಗೆ ಮಾತು ಬೆಳೆದು, ಜಗಳ ತಾರಕಕ್ಕೇರಿದಾಗ ಪತ್ನಿ ಚಾಕುವಿನಿಂದ ಅಹ್ಮದ್‌ಗೆ ಇರಿದಿದ್ದಾಳೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಘಟನೆ ನಡೆದ ತಕ್ಷಣ ಅಕ್ಕಪಕ್ಕದವರು ಅಹ್ಮದ್‌ನನ್ನು ವಿಜಯವಾಡದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.