- Home
- Entertainment
- TV Talk
- ಶೂಟಿಂಗ್ನಲ್ಲಿ ಅವಘಡದ ಮುನ್ನ ಆಗಿದ್ದೇನು? Naa Ninna Bidalaare ಅಂಬಿಕಾ ಆಸ್ಪತ್ರೆಯಿಂದ್ಲೇ ವಿಡಿಯೋ ಶೇರ್!
ಶೂಟಿಂಗ್ನಲ್ಲಿ ಅವಘಡದ ಮುನ್ನ ಆಗಿದ್ದೇನು? Naa Ninna Bidalaare ಅಂಬಿಕಾ ಆಸ್ಪತ್ರೆಯಿಂದ್ಲೇ ವಿಡಿಯೋ ಶೇರ್!
'ನಾ ನಿನ್ನ ಬಿಡಲಾರೆ' ಸೀರಿಯಲ್‌ನ ಅಂಬಿಕಾ ಪಾತ್ರಧಾರಿ ನೀತಾ ಅಶೋಕ್ ಶೂಟಿಂಗ್ ವೇಳೆ ಸ್ಟಂಟ್ ಮಾಡುವಾಗ ಕಾಲು ಮುರಿದುಕೊಂಡಿದ್ದಾರೆ. ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಅವರು ಸದ್ಯ ವಿಶ್ರಾಂತಿ ಪಡೆಯುತ್ತಿದ್ದು, ಕೆಲವು ದಿನಗಳ ಕಾಲ ಚಿತ್ರೀಕರಣದಿಂದ ದೂರ ಉಳಿಯಲಿದ್ದಾರೆ.

ನಾ ನಿನ್ನ ಬಿಡಲಾರೆ ದೆವ್ವ
ನಾ ನಿನ್ನ ಬಿಡಲಾರೆ (Naa Ninna Bidalaare) ಸೀರಿಯಲ್ನಲ್ಲಿರೋ ಕ್ಯೂಟ್ ದೆವ್ವ ಅಂಬಿಕಾ. ಇದ್ದರೆ ಇರಬೇಕು ಇಂಥ ದೆವ್ವ ಎಂದು ಎಲ್ಲರೂ ಪ್ರೀತಿಸುವ ದೆವ್ವ ಆಗಿರೋ ಅಂಬಿಕಾ ರಿಯಲ್ ಹೆಸರು ನೀತಾ ಅಶೋಕ್. ಆದರೆ ಶೂಟಿಂಗ್ನಲ್ಲಿ ಆಗಿರೋ ಅವಘಡದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ನೀತಾ.
ನಟಿಯ ಕಾಲು ಫ್ರಾಕ್ಚರ್
ಶೂಟಿಂಗ್ನಲ್ಲಿ ಸ್ಟಂಟ್ ಮಾಡುವ ಸಮಯದಲ್ಲಿ ಅವರ ಕಾಲು ಫ್ರಾಕ್ಚರ್ ಆಗಿದ್ದು, ಅದರಿಂದ ಅವರು ಕೆಲವು ದಿನಗಳ ಮಟ್ಟಿಗೆ ಶೂಟಿಂಗ್ನಲ್ಲಿ ಭಾಗವಹಿಸಲು ಆಗುತ್ತಿಲ್ಲ. ಈ ಹಿಂದೆ ಅವರು ಇರುವ ಶಾಟ್ಗಳನ್ನಷ್ಟೇ ಸೀರಿಯಲ್ನಲ್ಲಿ ಸದ್ಯ ತೋರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅವರು ಇಲ್ಲದೇ ಇರುವ ದೃಶ್ಯಗಳನ್ನಷ್ಟೇ ವೀಕ್ಷಕರು ನೋಡಬಹುದಾಗಿದೆ.
ಕಾಲು ಫ್ರಾಕ್ಚರ್ ಮುನ್ನ ಶೂಟಿಂಗ್
ಸದ್ಯ ಶಸ್ತ್ರಚಿಕಿತ್ಸೆಗೆ ಒಳಗಾಗಿರೋ ನಟಿ ನೀತಾ ಅಶೋಕ್ (Neetha Ashok) ನಿನ್ನೆ ಒಂದು ವಿಡಿಯೋ ಶೇರ್ ಮಾಡಿದ್ದಾರೆ. ಅದರಲ್ಲಿ ಅವರ ಕಾಲು ಫ್ರಾಕ್ಚರ್ ಆಗುವ ಮುನ್ನ ನಡೆದಿರುವ ಶೂಟಿಂಗ್ ದೃಶ್ಯಗಳಿವೆ. ಸದ್ಯ ಚಿಕಿತ್ಸೆಗೆ ಒಳಗಾಗಿರುವ ನಟಿ ಇದನ್ನು ಆಸ್ಪತ್ರೆಯಿಂದಲೇ ಶೇರ್ ಮಾಡಿರುವಂತಿದೆ.
ಶೂಟಿಂಗ್ ದೃಶ್ಯ
ಇದರಲ್ಲಿ, ದುರ್ಗಾ ಮತ್ತು ತನ್ನ ಗಂಡ ಶರತ್ನನ್ನು ಒಂದು ಮಾಡಲು ಅಂಬಿಕಾ ಶರತ್ ಕನಸಿನಲ್ಲಿ ಕಾಣಿಸಿಕೊಳ್ಳುವ ದೃಶ್ಯವಿದೆ. ಅದರಲ್ಲಿ ಬರುವ ಅಂಬಿಕಾ, ನೀವು ನನ್ನನ್ನು ಎಷ್ಟು ಲವ್ ಮಾಡ್ತಿದ್ರೋ ಅದೇ ರೀತಿ ದುರ್ಗಾಳನ್ನೂ ಮಾಡಬೇಕು ಎಂದು ಗಂಡನಿಂದ ಪ್ರಾಮಿಸ್ ಪಡೆಯುತ್ತಾಳೆ. ಈ ಮೂಲಕ ದಂಪತಿಯನ್ನು ಒಟ್ಟು ಮಾಡುವ ಪಣ ತೊಟ್ಟಿದ್ದಾಳೆ ಅಂಬಿಕಾ. ಈ ದೃಶ್ಯದ ಶೂಟಿಂಗ್ ಹೇಗೆ ಮಾಡಲಾಯಿತು ಎನ್ನುವುದನ್ನು ಶೇರ್ ಮಾಡಿಕೊಂಡಿದ್ದಾರೆ ನಟಿ. ಇದರಲ್ಲಿ ಶರತ್ ನನ್ನ ಮಾತನ್ನು ಉಳಿಸಿಕೊಡುತ್ತಾರೆ ಎನ್ನುವ ನಂಬಿಕೆ ಇದೆ ಎಂದು ಬರೆದುಕೊಂಡಿದ್ದಾರೆ.
ನಟಿ ನೀಡಿದ್ದ ಮಾಹಿತಿ
ಅಂದಹಾಗೆ,, ನಟಿ ನಿನ್ನೆ ತಮಗಾಗಿದ್ದ ಅಪಘಾತದ ಕುರಿತು ಮಾಹಿತಿ ನೀಡಿದ್ದರು. “ನನ್ನ ಪ್ರೀತಿಯ ಎಲ್ಲರಿಗೂ, ನಮಸ್ಕಾರ, ಶೂಟಿಂಗ್ ಟೈಮ್‌ನಲ್ಲಿ ಆದ ಸಣ್ಣ ಪಾದದ ಉಳುಕು, ಕೊನೆಗೆ ಮೂಳೆ ಮುರಿತಕೆ ಕಾರಣವಾಯಿತು. ನಮ್ಮ ಇಡೀ ದೇಹದ ತೂಕವನ್ನು ಪಾದವೇ ಹೊರುವುದು, ಹೀಗಾಗಿ ಸರ್ಜರಿ ಮಾಡಬೇಕಾಗಿ ಬಂತು. ಈಗ ಸರ್ಜರಿ ಯಶಸ್ವಿಯಾಗಿ ಮುಗಿದಿದೆ ಎಂದು ಹೇಳಲು ಖುಷಿಯಾಗುತ್ತದೆ. ಸೂಕ್ತ ಕಾಳಜಿಯೊಂದಿಗೆ ನನ್ನ ಚೇತರಿಕೆಯ ಹಂತ ಈಗ ಆರಂಭವಾಗಿದೆ” ಎಂದು ನೀತಾ ಅಶೋಕ್ ಹೇಳಿದ್ದರು.
ಧನ್ಯವಾದ ತಿಳಿಸಿದ್ದ ನಟಿ
“ನಿಮ್ಮ ಕಾಳಜಿ, ಪ್ರಾರ್ಥನೆ, ಪ್ರೀತಿಗಾಗಿ ಧನ್ಯವಾದಗಳು. ನಾನೀಗ ವಿಶ್ರಾಂತಿ ಪಡೆಯುತ್ತಿದ್ದೇನೆ. ಅಷ್ಟರವರೆಗೆ ನನ್ನನ್ನು ಸ್ವಲ್ಪ ಮಿಸ್ ಮಾಡಿಕೊಳ್ಳಿ, ಏಕೆಂದರೆ ನಾನು ಮೊದಲಿನಂತೆ ಈಗ ಆಕ್ಟಿವ್ ಆಗಿರೋಕೆ ಕಷ್ಟ ಆಗಬಹುದು. ನಿಮ್ಮ ಬಗ್ಗೆ ಕಾಳಜಿ ಇರಲಿ, ದಯೆ ತೋರಿ ಮತ್ತು ಕೃತಜ್ಞರಾಗಿರಿ” ಎಂದು ನೀತಾ ಅಶೋಕ್ ಅವರು ಹೇಳಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

