11:07 PM (IST) Feb 20

Karnataka News Live:Amruthadhaare Serial - ಜಯದೇವ್‌ ಕುತಂತ್ರ ಜಾಸ್ತಿಯಾಯ್ತು! ಸಿಡಿದೆದ್ದ ಗೌತಮ್‌ ಈಗ ಸಾಮ್ರಾಜ್ಯ ಕಟ್ಟೋದು ಬಾಕಿ

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ ದಿವಾನ್‌ ತನ್ನ ತಂದೆ ಕಾರ್ಯ ಮಾಡಲು ರೆಡಿ ಆಗಿದ್ದನು. ಆಗ ಗೌತಮ್‌, ಜಯದೇವ್‌ ಇಬ್ಬರೂ ಸೇರಿಕೊಂಡು ಪಿಂಡ ಪ್ರಧಾನ ಮಾಡಲು ಬಂದಿದ್ದರು. ಆಗ ಜಯದೇವ್‌, ಗೌತಮ್‌ ಜೊತೆ ಸೇರಿ ಪಿಂಡ ಬಿಡೋದಿಲ್ಲ ಎಂದು ಹೇಳಿ ಹೋಗಿದ್ದನು. ಶಾಸ್ತ್ರದ ಪ್ರಕಾರ ಬೇರೆ ಬೇರೆ ಪಿಂಡ ಬಿಡೋ ಹಾಗಿಲ್ಲ.

Read Full Story
10:51 PM (IST) Feb 20

Karnataka News Live:Karna Serial - ಅರೆಸ್ಟ್‌ ಆದ ಕರ್ಣನನ್ನು ಕಾಪಾಡಲು ಬಂದ್ರು ನಾಲ್ವರು ಹೀರೋಯಿನ! ನಿಧಿ, ನಿತ್ಯಾ ಕಥೆ ಏನು?

ಕರ್ಣ ಧಾರಾವಾಹಿಯಲ್ಲಿ ರಮೇಶ್‌ ಮಾಡಿದ ಕುತಂತ್ರದಿಂದ ಮೂವರು ರೋಗಿಗಳು ನಿಧನರಾಗಿದ್ದರು. Expire Medicine ತಿಂದು, ರೋಗಿಗಳು ಸತ್ತಿದ್ದಾರೆ. ಇದಕ್ಕೆಲ್ಲ ಕಾರಣ ಏನು? ಏನಾಯ್ತು ಎಂದು ಕರ್ಣ ಚೆಕ್‌ ಮಾಡಲು ನೋಡಿದ್ದಾನೆ. ಆದರೂ ಕೂಡ ಸಂಜಯ್‌, ನಯನತಾರಾ, ರಮೇಶ್‌ ಅವಕಾಶ ಕೊಟ್ಟಿಲ್ಲ.

Read Full Story
09:53 PM (IST) Feb 20

Karnataka News Live:ಮೊದಲ ಬಾರಿಗೆ 2ನೇ ಮದುವೆ, ಸಂಗಾತಿ ಬಯಕೆ ಕುರಿತು ಓಪನ್ನಾಗಿ ಮನಸ್ಸಿನ ಮಾತು ತೆರೆದಿಟ್ಟ ನಟಿ Meghana Raj

ನಟಿ ಮೇಘನಾ ರಾಜ್ ಅವರು ಮೊದಲ ಬಾರಿಗೆ ತಮ್ಮ ಜೀವನದಲ್ಲಿ ಸಂಗಾತಿಯ ಅಗತ್ಯದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಪ್ರತಿಯೊಬ್ಬರಿಗೂ ಕಷ್ಟ-ಸುಖ ಹಂಚಿಕೊಳ್ಳಲು ಒಬ್ಬ ಜೊತೆಗಾರ ಬೇಕು ಎಂದಿರುವ ಅವರು, ತಮ್ಮ ತಂದೆ ಸುಂದರ ರಾಜ್ ಅವರ ಆಶಯದಂತೆಯೇ ಸಹಬಾಳ್ವೆಯ ಕುರಿತು ಸಕಾರಾತ್ಮಕ ಸೂಚನೆ ನೀಡಿದ್ದಾರೆ.
Read Full Story
09:04 PM (IST) Feb 20

Karnataka News Live:ನಾನು ಬಾಲ್ಡಿ ಆಗಿದ್ರೂ ಸೂಪರ್​ ಹೆಂಡ್ತಿನೇ ಬೇಕು ಎಂದ್ರೆ ಸಿನಿಮಾ ಸಕ್ಸಸ್​ ಆಗಲ್ಲ - ಶೆಟ್ರ ಪಂಚ್​ಗೆ ಉಪ್ಪಿ-ಶಿವಣ್ಣ ಫಿದಾ

ಕಡಿಮೆ ಬಜೆಟ್‌ನಲ್ಲಿ ಸತತ ಹಿಟ್ ಚಿತ್ರಗಳನ್ನು ನೀಡುತ್ತಿರುವ ರಾಜ್ ಬಿ. ಶೆಟ್ಟಿ ಅವರ ಯಶಸ್ಸಿನ ರಹಸ್ಯವನ್ನು ಉಪೇಂದ್ರ ಮತ್ತು ಶಿವರಾಜ್‌ಕುಮಾರ್ ಅವರೇ ಕೇಳಿದ್ದಾರೆ. ರಾಜ್ ಶೆಟ್ಟಿ ತಮ್ಮ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.

Read Full Story
08:08 PM (IST) Feb 20

Karnataka News Live:ಹಳಿ ತಪ್ಪಿತಾ ಕರ್ನಾಟಕದ ಅಷ್ಟೂ ರೈಲ್ವೆ ಯೋಜನೆಗಳು! ಭೂಸ್ವಾಧೀನ ಮಾಡಿಕೊಳ್ಳೋದೇ ದೊಡ್ಡ ಸವಾಲು, ಇಲ್ಲಿದೆ ಲಿಸ್ಟ್

ಕರ್ನಾಟಕದಲ್ಲಿ ಭೂಸ್ವಾಧೀನ ಪ್ರಕ್ರಿಯೆಯ ವಿಳಂಬದಿಂದಾಗಿ ಗದಗ-ವಾಡಿ, ತುಮಕೂರು-ದಾವಣಗೆರೆ ಸೇರಿದಂತೆ ಹಲವು ಪ್ರಮುಖ ರೈಲ್ವೆ ಯೋಜನೆಗಳು ದಶಕಗಳಿಂದ ನನೆಗುದಿಗೆ ಬಿದ್ದಿವೆ. 10 ಯೋಜನೆಗಳ ಪೈಕಿ 7 ಯೋಜನೆಗಳಿಗೆ ಇನ್ನೂ 3,338 ಎಕರೆ ಭೂಮಿ ಸ್ವಾಧೀನವಾಗಬೇಕಿದ್ದು, ಇದು ಕಾಮಗಾರಿಗೆ ದೊಡ್ಡ ಅಡ್ಡಿಯಾಗಿದೆ. 

Read Full Story
07:45 PM (IST) Feb 20

Karnataka News Live:ಬಾಗಲಕೋಟೆ ಶಿವಾಜಿ ಮೆರವಣಿಗೆಗೆ ಕಲ್ಲು ತೂರಿದ ಮುಸ್ಲಿಂ ಮತಾಂಧರಿಗೆ ಪಾಕಿಸ್ತಾನ ನಂಟಿನ ಶಂಕೆ; ಆರ್. ಅಶೋಕ್

ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮೆರವಣಿಗೆ ಮೇಲೆ ನಡೆದ ಕಲ್ಲು ತೂರಾಟವನ್ನು ಖಂಡಿಸಿರುವ ಪ್ರತಿಪಕ್ಷ ನಾಯಕ ಆರ್. ಅಶೋಕ, ದುಷ್ಕರ್ಮಿಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಕೃತ್ಯದ ಹಿಂದೆ ಪಾಕಿಸ್ತಾನದ ನಂಟಿರುವ ಶಂಕೆ ವ್ಯಕ್ತಪಡಿಸಿದ್ದಾರೆ.

Read Full Story
07:37 PM (IST) Feb 20

Karnataka News Live:ಕೋಟಿ ಕೋಟಿ ಆದಾಯವಿದ್ದರೂ ಬಯಲಲ್ಲೇ ಸ್ನಾನ, ಬಹಿರ್ದೆಸೆ!

ಕೊಪ್ಪಳದ ಪ್ರಸಿದ್ಧ ಹುಲಿಗೆಮ್ಮ ದೇವಸ್ಥಾನವು ಕೋಟ್ಯಂತರ ರೂಪಾಯಿ ಆದಾಯ ಹೊಂದಿದ್ದರೂ, ಇಲ್ಲಿಗೆ ಬರುವ ಲಕ್ಷಾಂತರ ಭಕ್ತರಿಗೆ ಶೌಚಾಲಯ ಮತ್ತು ಸ್ನಾನಘಟ್ಟಗಳಂತಹ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲ. ದಶಕಗಳಿಂದ ಅಭಿವೃದ್ಧಿ ಯೋಜನೆಗಳು ನನೆಗುದಿಗೆ ಬಿದ್ದಿದೆ.

Read Full Story
06:46 PM (IST) Feb 20

Karnataka News Live:ನಟೇಶ್ ಭ್ರಷ್ಟಾಚಾರ ಆರೋಪ - 6 ಸೆಕೆಂಡು ಆಡಿಯೋ ರಿಲೀಸ್‌ ಮಾಡಿದ ಸ್ನೇಹಮಯಿ ಮನೆಗೆ ಸಿಸಿಬಿ ರೈಡ್! ಏನೆಲ್ಲಾ ದಾಖಲೆ ಸಿಕ್ತು?

ಮುಡಾ ಮಾಜಿ ಆಯುಕ್ತ ನಟೇಶ್‌ಗೆ ಸಂಬಂಧಿಸಿದ ಭ್ರಷ್ಟಾಚಾರ ಆರೋಪದ ಆಡಿಯೋ ಕ್ಲಿಪ್‌ಗಾಗಿ ಸಿಸಿಬಿ ಅಧಿಕಾರಿಗಳು ಸ್ನೇಹಮಯಿ ಕೃಷ್ಣ ಅವರ ಮೈಸೂರಿನ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ,ಪೆನ್ ಡ್ರೈವ್, ಹಾರ್ಡ್ ಡಿಸ್ಕ್ ಸೇರಿದಂತೆ ಹಲವು ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದಾರೆ.

Read Full Story
05:48 PM (IST) Feb 20

Karnataka News Live:ನೀವ್​ ಏನ್​ ಹೆಡ್ಡಿಂಗ್​ ಕೊಡ್ತೀರಾ ಅಂತ ನಾನ್​ ಹೇಳ್ಲಾ? ಪಾಪರಾಜಿಗಳಿಗೆ Namratha Gowda ಶಾಕ್​!

'ಕರ್ಣ' ಧಾರಾವಾಹಿ ಖ್ಯಾತಿಯ ನಟಿ ನಮ್ರತಾ ಗೌಡ, ಕಾರ್ತಿಕ್ ಮಹೇಶ್ ಜೊತೆಗಿನ ಸಂಬಂಧದ ವದಂತಿಗಳಿಗೆ ಬೇಸತ್ತಿದ್ದಾರೆ. ಇತ್ತೀಚೆಗೆ 'ಆಲ್ಫಾ' ಸಿನಿಮಾ ವೀಕ್ಷಿಸಿ ಹೊರಬಂದಾಗ ಪಾಪರಾಜಿಗಳು ಸುತ್ತುವರೆದಿದ್ದು, ಈ ವೇಳೆ ನಟಿ ತಮ್ಮ ಎಂದಿನ ಹಾಸ್ಯ ಪ್ರವೃತ್ತಿಯಿಂದಲೇ ಅವರಿಗೆ ತಿರುಗೇಟು ನೀಡಿದ್ದಾರೆ.
Read Full Story
05:16 PM (IST) Feb 20

Karnataka News Live:ಸರ್ಕಾರದಿಂದ ಸ್ನೇಹಮಯಿ ಕೃಷ್ಣನ ಜೀವಕ್ಕೆ ಅಪಾಯ; ಸಿಸಿಬಿ ಅರೆಸ್ಟ್ ಮಾಡಿದರೂ ನಮ್ಮಪ್ಪನ ಸುಳಿವೇ ಸಿಗ್ತಿಲ್ಲ- ವಿವೇಕ್!

ಮುಡಾ ಹಗರಣದ ಪ್ರಮುಖ ದೂರುದಾರ ಸ್ನೇಹಮಯಿ ಕೃಷ್ಣ ಅವರನ್ನು ಸಿಸಿಬಿ ಪೊಲೀಸರು ನ್ಯಾಯಾಲಯದ ಆವರಣದಿಂದ ಬಲವಂತವಾಗಿ ಕರೆದೊಯ್ದಿದ್ದಾರೆ. ಅವರ ಪುತ್ರ ವಿವೇಕ್, ತಂದೆಯ ಜೀವಕ್ಕೆ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದ್ದು, ಪ್ರಭಾವಿಗಳನ್ನು ರಕ್ಷಿಸಲು ಸರ್ಕಾರ ಈ ರೀತಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

Read Full Story
05:03 PM (IST) Feb 20

Karnataka News Live:ರಾಜ್ಯದ ಜನಕ್ಕೆ ಸದ್ಯವೇ ಸಿಗಲಿದೆ ಶಾಕಿಂಗ್ ಸುದ್ದಿ, ಬೇಸಿಗೆ ಆರಂಭದಲ್ಲೇ ವಿದ್ಯುತ್ ದರ ಏರಿಕೆಗೆ ಸಿದ್ಧತೆ!

ರಾಜ್ಯದ ಎಸ್ಕಾಂಗಳು ನಷ್ಟದ ಕಾರಣ ನೀಡಿ ವಿದ್ಯುತ್ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿವೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು (KERC) ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿ ದರ ಪರಿಷ್ಕರಣೆ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಈ ಏರಿಕೆಯು ಗೃಹಜ್ಯೋತಿ ಯೋಜನೆಯ ನಡುವೆಯೂ ಜಾರಿಯಾಗುವ ಸಾಧ್ಯತೆಯಿದೆ.

Read Full Story
04:46 PM (IST) Feb 20

Karnataka News Live:ದಾಸನ ಬೇಲ್ ಭವಿಷ್ಯ - ದರ್ಶನ್ 2 ತಿಂಗಳಲ್ಲಿ ರಿಲೀಸ್ ಆಗೊದು ಪಕ್ಕಾನಾ? ಕಾನೂನು ಪಂಡಿತರು ಹೇಳೋದೇನು?

ನಟ ದರ್ಶನ್‌ಗೆ ಶೀಘ್ರದಲ್ಲೇ ಬೇಲ್ ಸಿಗಲಿದೆ ಎಂಬ ಚರ್ಚೆಗಳ ನಡುವೆ, 272 ಸಾಕ್ಷಿಗಳ ವಿಚಾರಣೆ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗುತ್ತಿದೆ. ಈವರೆಗೂ ಕೇವಲ ಇಬ್ಬರು ಸಾಕ್ಷಿಗಳ ವಿಚಾರಣೆ ಮುಗಿದಿದ್ದು, ದರ್ಶನ್ ಬಿಡುಗಡೆ ವರ್ಷಗಟ್ಟಲೆ ತೆಗೆದುಕೊಳ್ಳಬಹುದು ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Read Full Story
04:41 PM (IST) Feb 20

Karnataka News Live:ಚಿಕ್ಕಮಗಳೂರು - ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಸಾಕಾನೆ ಮಿಸ್ಸಿಂಗ್! ಅಧಿಕಾರಿಗಳಿಗೆ ಜ್ವರ ಬರೋದೊಂದೇ ಬಾಕಿ

ಚಿಕ್ಕಮಗಳೂರಿನಲ್ಲಿ ಕಾರ್ಮಿಕನನ್ನು ಕೊಂದ ಕಾಡಾನೆಯನ್ನು ಸೆರೆಹಿಡಿಯುವ ಕಾರ್ಯಾಚರಣೆ ವೇಳೆ, ಜೂನಿಯರ್ ಅರ್ಜುನ್ ಎಂಬ ಸಾಕಾನೆಯು ಕಾಡಿನಲ್ಲಿ ನಾಪತ್ತೆಯಾಗಿತ್ತು. ಒಂದು ಗಂಟೆಯ ಹುಡುಕಾಟದ ನಂತರ ಸಾಕಾನೆಯನ್ನು ಪತ್ತೆಹಚ್ಚಲಾಗಿದ್ದು, ಕಾಡಾನೆ ಸೆರೆ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
Read Full Story
04:41 PM (IST) Feb 20

Karnataka News Live:ಧರ್ಮಸ್ಥಳ ಕೇಸ್ ಮರು ತನಿಖೆಗೆ ಹೈಕೋರ್ಟ್ ಆದೇಶ; ರಾಜ್ಯ ಸರ್ಕಾರದಿಂದ ಐಜಿಪಿ ಲಭೂರಾಮ್ ನೇತೃತವದಲ್ಲಿ SIT ರಚನೆ!

ಧರ್ಮಸ್ಥಳದಲ್ಲಿ ನಡೆದ ಶ್ರೀಧರ್ ಎಂಬುವವರ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಹೈಕೋರ್ಟ್ ನಿರ್ದೇಶನದ ಮೇರೆಗೆ ರಾಜ್ಯ ಸರ್ಕಾರವು ಮರುತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (SIT) ರಚಿಸಿದೆ. ಐಜಿಪಿ ಲಭೂರಾಮ್ ನೇತೃತ್ವದ ಈ ತಂಡವು, ಕಳಪೆ ತನಿಖೆ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.

Read Full Story
04:39 PM (IST) Feb 20

Karnataka News Live:Gilli Nataನ ಒಂದೇ ಒಂದು ಫೋನ್​ ಕಾಲ್​, ಭವಿಷ್ಯವೇ ಬದಲಾಗತ್ತೆ - ನಿರ್ದೇಶಕ ತರುಣ್​ ಸುಧೀರ್​ ಬಿಗ್​ ಸರ್​ಪ್ರೈಸ್​

ಬಿಗ್​ಬಾಸ್​ ಗೆದ್ದ ಬಳಿಕ ಸತತ ಕಾರ್ಯಕ್ರಮಗಳಿಂದ ಸುಸ್ತಾಗಿರುವ ಗಿಲ್ಲಿ ನಟನಿಗೆ ಖ್ಯಾತ ನಿರ್ದೇಶಕ ತರುಣ್​ ಸುಧೀರ್​ ಭವಿಷ್ಯದ ಬಗ್ಗೆ ಸಲಹೆ ನೀಡಿದ್ದಾರೆ. ನಟನೆ, ನಿರ್ದೇಶನ ಅಥವಾ ಬರವಣಿಗೆಯಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಮುನ್ನ ಯೋಚಿಸಲು ಹೇಳಿದ್ದು, ತಮ್ಮ ಸಂಪೂರ್ಣ ಬೆಂಬಲದ ಭರವಸೆ ನೀಡಿದ್ದಾರೆ.
Read Full Story
04:01 PM (IST) Feb 20

Karnataka News Live:100 ರೂ ಕೊಟ್ಟು ಸಿನಿಮಾ ನೋಡ್ರಿ, ನಿಮ್‌ ಗಂಟು ಹೋಗಲ್ಲ - ರವಿಚಂದ್ರನ್‌ ಮಾತಿಗೆ ಪ್ರೇಕ್ಷಕರು ಬೇಸರ

ಮೊದಲು ಸಿನಿಮಾ ನೋಡಿ, ವಿಮರ್ಶೆ ಮಾಡಬೇಕು ಎಂದು ಹೋಗಬೇಡಿ. 100 ರೂಪಾಯಿ ಕೊಟ್ಟು ಸಿನಿಮಾ ನೋಡಿ, ನಿಮ್ಮ ಗಂಟು ಹೋಗಲ್ಲ, ಪ್ರೇಕ್ಷಕರು ಮೂರು ಗಂಟೆ ತಲ್ಲೀನವಾಗಿ ಸಿನಿಮಾ ನೋಡಬೇಕು, ಆ ಥರ ಸಿನಿಮಾ ಬೇಕು ಎಂದು ರವಿಚಂದ್ರನ್‌ ಅವರು ಹೇಳಿದ್ದರು. ಈ ಬಗ್ಗೆ ಬರಹಗಾರ ನಂದೀಶ್‌ ಅವರು ಪೋಸ್ಟ್‌ ಹಂಚಿಕೊಂಡಿದ್ದಾರೆ.

Read Full Story
03:43 PM (IST) Feb 20

Karnataka News Live:Byndoor - ಹರ್ಕೂರಿನ ಕೊರಗ ಸಮುದಾಯದ ಮನೆಯಲ್ಲಿ ಶಾಸಕ ಗುರುರಾಜ ಗಂಟಿಹೊಳೆ ಗ್ರಾಮ ವಾಸ್ತವ್ಯ!

ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅವರು ಹರ್ಕೂರು ಗ್ರಾಮದ ಹಿಂದುಳಿದ ಕೊರಗ ಸಮುದಾಯದ ಮನೆಯಲ್ಲಿ ರಾತ್ರಿ ವಾಸ್ತವ್ಯ ಹೂಡಿದ್ದಾರೆ. ಅವರೊಂದಿಗೆ ಭೋಜನ ಸವಿದು, ಸಮಸ್ಯೆಗಳನ್ನು ಆಲಿಸಿದ್ದಾರೆ.

Read Full Story
03:39 PM (IST) Feb 20

Karnataka News Live:Bhagyalakshmi Serial - ತಾಂಡವ್‌ ಮನೆಗೆ ಬಂದ್ರೂ ಭಾಗ್ಯ ನಂಗೆ ಬೇಕೇ ಬೇಕು; ಹಠ ಹಿಡಿದ ಆದಿ; ವೀಕ್ಷಕರ ಆಕ್ರೋಶ

Bhagyalakshmi Serial Episode: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ನಾನು ಬದಲಾಗಿದ್ದೀನಿ, ಭಾಗ್ಯ ಜೊತೆ ಸಂಸಾರ ಮಾಡ್ತೀನಿ ಎಂದು ತಾಂಡವ್‌ ಹಠ ಹಿಡಿದು ಕೂತಿದ್ದಾನೆ. ಅತ್ತ ಆದಿ, ಭಾಗ್ಯ ಜೊತೆ ಬದುಕ್ತೀನಿ ಎಂದು ಪಣ ತೊಟ್ಟಿದ್ದಾಳೆ. ಈಗ ಈ ಕಥೆ ತ್ರಿಕೋನ ಪ್ರೇಮಕಥೆಯ ತಿರುವು ಪಡೆದಿದೆ.

Read Full Story
03:33 PM (IST) Feb 20

Karnataka News Live:ಮುಡಾ ಹಗರಣದ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್ - ಭ್ರಷ್ಟಾಚಾರದ ಆರೋಪ ಹೊರಿಸಿ ಸಿಸಿಬಿ ಬಲೆಗೆ ಬಿದ್ದ ಹೋರಾಟಗಾರ!

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣದ ವಿರುದ್ಧ ಸತತವಾಗಿ ಧ್ವನಿ ಎತ್ತುತ್ತಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ಬೆಂಗಳೂರು ಸಿಸಿಬಿ (CCB) ಪೊಲೀಸರು ಬಂಧಿಸಿದ್ದಾರೆ. ಕೋರ್ಟ್ ಬಳಿ ಕೃಷ್ಣ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಕರೆದೊಯ್ದಿದ್ದಾರೆ.

Read Full Story
03:23 PM (IST) Feb 20

Karnataka News Live:ಬೆಂಗಳೂರು - ಮಗನಿಂದಲೇ ನಿವೃತ್ತ ನೇವಿ ಕ್ಯಾಪ್ಟನ್, ಪತ್ನಿ ಹತ್ಯೆ ಪ್ರಕರಣ, ಆರೋಪಿ ಮನೆಯಲ್ಲಿ ಕಾಂಡೋಮ್ ಪತ್ತೆ, ಅನೈತಿಕ ಸಂಬಂಧ ಶಂಕೆ!

ಬೆಂಗಳೂರಿನಲ್ಲಿ ನಿವೃತ್ತ ನೇವಿ ಕ್ಯಾಪ್ಟನ್ ಮತ್ತು ಅವರ ಪತ್ನಿಯನ್ನು ಹತ್ಯೆಗೈದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಹಣಕಾಸಿನ ವಿಚಾರಕ್ಕೆ ಕೊಲೆ ನಡೆದಿದೆ ಎನ್ನಲಾಗಿದ್ದರೂ, ಆರೋಪಿ ಮಗನ ಮನೆಯಲ್ಲಿ ಕಾಂಡೋಮ್ ಪತ್ತೆಯಾಗಿದ್ದು, ಅನೈತಿಕ ಸಂಬಂಧದ ಶಂಕೆ ಮೂಡಿದೆ. 

Read Full Story