ವಿಜಯ್-ರಶ್ಮಿಕಾ ಮದುವೆ ರೂಮರ್ಸ್ ಒಂದೆರಡಲ್ಲ! ಸಿಎಂ ಕೂಡಾ ಭಾಗಿ?
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆ ಸುದ್ದಿ ಜೋರಾಗಿದೆ. ಫೆಬ್ರವರಿ 26 ರಂದು ಇವರಿಬ್ಬರ ವಿವಾಹ ನಡೆಯಲಿದೆ ಎನ್ನಲಾಗ್ತಿದೆ. ಅಷ್ಟೇ ಅಲ್ಲ, ಅದಕ್ಕೂ ಮುನ್ನ ನಡೆಯುವ ಹಲ್ದಿ, ಸಂಗೀತ ಕಾರ್ಯಕ್ರಮಗಳ ದಿನಾಂಕ ಯಾವುದು ಗೊತ್ತಾ? ಈ ಜೋಡಿಯ ಮದುವೆ ಸಂಭ್ರಮ ಯಾವಾಗ ಶುರುವಾಗಲಿದೆ? ಇಲ್ಲಿದೆ ಮಾಹಿತಿ.

ವಿಜಯ್-ರಶ್ಮಿಕಾ ಮದುವೆ
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆ ಸುದ್ದಿ ಮತ್ತಷ್ಟು ಜೋರಾಗಿದೆ. ಫೆಬ್ರವರಿ 24ರಂದು ಹಲ್ದಿ, 25ರಂದು ಸಂಗೀತ ಕಾರ್ಯಕ್ರಮದೊಂದಿಗೆ ಮದುವೆ ಸಂಭ್ರಮ ಶುರುವಾಗಲಿದೆ ಎನ್ನಲಾಗಿದೆ.
ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ಮದುವೆ
ಫೆಬ್ರವರಿ 26ರಂದು ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ಇವರ ವಿವಾಹ ನಡೆಯಲಿದೆ. ಉದಯಪುರದ ಹೊರವಲಯದಲ್ಲಿರುವ 'ದಿ ಮೆಮೆಂಟೋಸ್ ಬೈ ಐಟಿಸಿ ಹೊಟೇಲ್ಸ್' ಈ ಮದುವೆಗೆ ವೇದಿಕೆಯಾಗಲಿದೆ ಎಂದು ಬಲವಾಗಿ ಹೇಳಲಾಗುತ್ತಿದೆ.
ಖಾಸಗಿಯಾಗಿ ಮದುವೆಯಾಗಲು ತಾರಾ ಜೋಡಿ ತೀರ್ಮಾನ
ವಿಜಯ್-ರಶ್ಮಿಕಾ ಮದುವೆ ಆರತಕ್ಷತೆಗೆ ತೆಲಂಗಾಣ ಸಿಎಂ ಭಾಗಿ?
ಈ ಆರತಕ್ಷತೆಗೆ ಟಾಲಿವುಡ್ ಮತ್ತು ಬಾಲಿವುಡ್‌ನ ಹಲವು ಗಣ್ಯರು ಹಾಜರಾಗುವ ಸಾಧ್ಯತೆಯಿದೆ. ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಕೂಡ ಈ ಕಾರ್ಯಕ್ರಮಕ್ಕೆ ಬರಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
ಈ ವರ್ಷದ ಅತಿದೊಡ್ಡ ಸೆಲಿಬ್ರಿಟಿ ಮದುವೆ
ಈ ಸುದ್ದಿ ನಿಜವಾದರೆ, ಇದು ಈ ವರ್ಷದ ಅತಿದೊಡ್ಡ ಸೆಲೆಬ್ರಿಟಿ ಮದುವೆ ಸಮಾರಂಭವಾಗಬಹುದು. ಈ ಜೋಡಿ ತಮ್ಮ ಖಾಸಗಿತನಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದು, ಮದುವೆಯ ಫೋಟೋ ಮತ್ತು ವಿಡಿಯೋಗಳು ಲೀಕ್ ಆಗದಂತೆ ಕಟ್ಟುನಿಟ್ಟಿನ 'ನೋ-ಫೋನ್' ಪಾಲಿಸಿಯನ್ನು ಜಾರಿಗೆ ತರಲಿದೆ ಎನ್ನಲಾಗಿದೆ.
ಭಾರೀ ದೊಡ್ಡ ಆಫರ್ ರಿಜೆಕ್ಟ್ ಮಾಡಿದ ವಿಜಯ್-ರಶ್ಮಿಕಾ ಜೋಡಿ
ವಿಜಯ್ ಮತ್ತು ರಶ್ಮಿಕಾ ಮದುವೆಯ ವಿಡಿಯೋ ಸ್ಟ್ರೀಮಿಂಗ್ ಹಕ್ಕುಗಳಿಗಾಗಿ ಒಂದು ಪ್ರಖ್ಯಾತ ಓಟಿಟಿ ಸಂಸ್ಥೆ ದೊಡ್ಡ ಆಫರ್ ನೀಡಿತ್ತಂತೆ. ಆದರೆ, ವಿಜಯ್ ದೇವರಕೊಂಡ ಈ ಆಫರ್ ಅನ್ನು ವಿನಯದಿಂದಲೇ ತಿರಸ್ಕರಿಸಿದ್ದಾರೆ. ತಮ್ಮ ಜೀವನದ ಈ ಪ್ರಮುಖ ಕ್ಷಣವನ್ನು ವ್ಯಾಪಾರೀಕರಣಗೊಳಿಸದೆ, ಸಂಪೂರ್ಣವಾಗಿ ವೈಯಕ್ತಿಕವಾಗಿ ಇಟ್ಟುಕೊಳ್ಳಲು ವಿಜಯ್ ಬಯಸಿದ್ದಾರೆ. ಅಭಿಮಾನಿಗಳಲ್ಲಿ ಎಷ್ಟೇ ಕುತೂಹಲವಿದ್ದರೂ, ಈ ಸಮಾರಂಭವನ್ನು ಖಾಸಗಿಯಾಗಿ ನಡೆಸುವ ಅವರ ನಿರ್ಧಾರ ಸ್ಪಷ್ಟವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

